ETV Bharat / state

ಶ್ರೀರಾಮನ ವಿಚಾರದಲ್ಲಿ ರಾಜಕಾರಣ ಮಾಡುವ ದರಿದ್ರ ಕಾಂಗ್ರೆಸ್​ಗೆ ಬಂದಿಲ್ಲ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ನನ್ನ ಕ್ಷೇತ್ರದಲ್ಲಿ ಐದಕ್ಕೂ ಹೆಚ್ಚು ರಾಮನ ದೇವಾಲಯಗಳನ್ನು ನಾನು ಜೀರ್ಣೋದ್ಧಾರ ಮಾಡಿದ್ದೇನೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ.

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್
author img

By ETV Bharat Karnataka Team

Published : Jan 23, 2024, 10:56 PM IST

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ದಾವಣಗೆರೆ : ಸಿಎಂ ಸಿದ್ದರಾಮಯ್ಯ ಹೆಸರಿ‌ನಲ್ಲೇ ರಾಮ ಇದ್ದಾನೆ. ಶ್ರೀ ರಾಮನ ವಿಚಾರದಲ್ಲಿ ರಾಜಕಾರಣ ಮಾಡುವ ದರಿದ್ರ ಕಾಂಗ್ರೆಸ್​ಗೆ ಬಂದಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದರು.‌

ಸಿಎಂ ಅವರಿಗೆ ರಾಮನ ಮೇಲೆ ಭಕ್ತಿ ಬಂದಿದೆ ಎಂಬ ಬಿಜೆಪಿಯವರ ಹೇಳಿಕೆಗೆ ದಾವಣಗೆರೆಯಲ್ಲಿ ಸಚಿವೆ ಆಕ್ರೋಶ ವ್ಯಕ್ತಪಡಿಸಿದರು. ಶ್ರೀರಾಮ ಮಂದಿರ ಉದ್ಘಾಟನೆಗೆ ರಜೆ ನೀಡಬಹುದಿತ್ತಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಕಾಯಕವೇ ಕೈಲಾಸ ಎಂದು ಬಸವಣ್ಣನವರು ಹೇಳಿದ್ದಾರೆ. ನಾವು ಎಲ್ಲ ಕಡೆ ರಾಮ ಇದ್ದಾನೆ, ಎಲ್ಲಾ ಕಡೆ ಭಗವಂತ ಇದ್ದಾನೆ ಎಂದು ತಿಳಿಯುತ್ತೇವೆ. ಕಾಯಕದಲ್ಲೇ ಭಗವಂತನನ್ನು ಕಾಣುತ್ತೇವೆ. ಆದರೆ ಇದರಲ್ಲೆಲ್ಲ ರಾಜಕಾರಣ ಮಾಡುವ ದರಿದ್ರ ಕಾಂಗ್ರೆಸ್​ಗೆ ಬಂದಿಲ್ಲ. ನನ್ನ ಕ್ಷೇತ್ರದಲ್ಲಿ ಐದಕ್ಕೂ ಹೆಚ್ಚು ರಾಮನ ದೇವಾಲಯಗಳನ್ನು ನಾನು ಜೀರ್ಣೋದ್ಧಾರ ಮಾಡಿದ್ದೇನೆ ಎಂದರು. ಇನ್ನು ಬೆಳಗಾವಿಗೆ ಮಾರಲು ಹೊರಟಿದ್ದಾರೆ ಎಂಬ ಬಿಜೆಪಿಯವರು ಹೇಳಿಕೆಗೆ ನೋ ಕಾಮೆಂಟ್ಸ್ ಎಂದ ಸಚಿವೆ, ಅಯೋಧ್ಯೆ ಶ್ರೀ ರಾಮ ಮಂದಿರಕ್ಕೆ ಹೋಗುತ್ತೇನೆ ಎಂದು ತಿಳಿಸಿದರು.

ಶಾಲೆಗಳಲ್ಲಿ ಗಾಂಧಿ ಕಂಡಂತೆ ರಾಮ ಕುರಿತ ಪ್ರಬಂಧಕ್ಕೆ ಟೀಕೆ: ಗಾಂಧೀಜಿ ಕಂಡಂತೆ ರಾಮ ಕುರಿತ ಪ್ರಬಂಧ ಬರೆಯಲು ಸರ್ಕಾರ ಆದೇಶ ನೀಡಿದ ಹಿನ್ನೆಲೆ ಬಿಜೆಪಿ ನಾಯಕರು ಟೀಕೆಗಳನ್ನ ಮಾಡ್ತಿದ್ದಾರೆ. ಗಾಂಧೀಜಿಯವರು ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟವರು. ಗಾಂಧೀಜಿ ಅವರನ್ನ ಅದಕ್ಕೂ ಬಿಜೆಪಿಯವರು ಟೀಕೆ ಮಾಡ್ತಾರೆ ಎಂದರೆ ಅದರಲ್ಲಿ ಅರ್ಥವಿಲ್ಲ, ಹುರುಳಿಲ್ಲ ಎಂದರು.‌

ನಮಗೆ ಗಾಂಧಿ ರಾಮ ಬೇಕು. ಮೋದಿ ರಾಮ ಬೇಡ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ರಘುಪತಿ ರಾಘವ ರಾಜಾ ರಾಮ್​ ಪತಿತಪಾವನ ಸೀತಾರಾಮ, ಈಶ್ವರ್ ಅಲ್ಲಾಹ ತೇರೆ ನಾಮ್, ಸಬ್ ಕೋ ಸಮ್ಮತಿ ದೇ ಭಗವಾನ್ ಎಂದು ಗಾಂಧೀಜಿಯವರು ಹೇಳಿದ್ದಾರೆ. ಗಾಂಧೀಜಿಯವರು ಗುಂಡು ಹೊಡಿಸಿಕೊಂಡು ಸಾಯುವ ವೇಳೆಯೂ ಹೇ ರಾಮ್ ಎಂದು ಪ್ರಾಣ ಬಿಟ್ರು ಎಂದರು.

ನಾನು ಕೂಡ ರಾಮ ಭಕ್ತಳು : ನಮಗೆ ಆ ರಾಮ ಈ ರಾಮ ಎಂದೇನಿಲ್ಲ. ನಾವು ಕೂಡ ರಾಮನ ಭಕ್ತರು ಎಂದು ಬಿಜೆಪಿಯವರಿಗೆ ಟಾಂಗ್ ಕೊಟ್ರು. ಇನ್ನು ರಾಮನಿಗೆ ಪೂಜಿಸುವ ಅರ್ಚಕರಿಗೆ ಸರ್ಕಾರ ನೋಟಿಸ್​​ ಕೊಟ್ಟಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅದರ ಬಗ್ಗೆ ನನಗೆ ಗೊತ್ತಿಲ್ಲ, ಇದರ ಬಗ್ಗೆ ರಾಮಲಿಂಗಾ ರೆಡ್ಡಿಯವರು ಗಮನಕ್ಕೆ ಬಂದ ತಕ್ಷಣ ಸರಿಪಡಿಸಿದ್ದಾರೆ. ನಾನು ಕೂಡ ರಾಮನ ಭಕ್ತಳು. ನನ್ನ ಇಡೀ ಬೆಳಗಾವಿ ಜಿಲ್ಲೆಯಲ್ಲಿ ರಾಮನ ಫೋಟೋ, ಬ್ಯಾನರ್ ಹಂಚಿದ್ದೇವೆ. ಅದಕ್ಕೆ ರಾಜಕೀಯ ಮಾಡಬಾರದು ಎಂದು ಹೇಳಿದರು.

ಇದನ್ನೂ ಓದಿ: ಶ್ರೀರಾಮ ಏನು ಬಿಜೆಪಿಯವರ ಮನೆ ಆಸ್ತಿನಾ : ಡಿಸಿಎಂ ಡಿಕೆಶಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.