ETV Bharat / state

ನಾಯಕತ್ವ ಬದಲಾವಣೆ ಬಗ್ಗೆ ಗೊಂದಲ ಮಾಡದಂತೆ ಹೈಕಮಾಂಡ್ ಹೇಳಿದೆ: ಸಚಿವ ಕೆ.ಎನ್.ರಾಜಣ್ಣ - Leadership Change In Karnataka - LEADERSHIP CHANGE IN KARNATAKA

ನಾಯಕತ್ವ ಬದಲಾವಣೆ ಕುರಿತಂತೆ ಯಾವುದೇ ಗೊಂದಲ ಮಾಡದಂತೆ ಸೂಚಿಸಲಾಗಿದೆ ಎಂದು ಸಚಿವ ಕೆ.ಎನ್.ರಾಜಣ್ಣ ಪ್ರತಿಕ್ರಿಯಿಸಿದ್ದಾರೆ.

minister k n rajanna
ಸಚಿವ ಕೆ.ಎನ್.ರಾಜಣ್ಣ (ETV Bharat)
author img

By ETV Bharat Karnataka Team

Published : Jul 8, 2024, 4:42 PM IST

Updated : Jul 8, 2024, 4:57 PM IST

ಸಚಿವ ಕೆ.ಎನ್.ರಾಜಣ್ಣ ಪ್ರತಿಕ್ರಿಯೆ (ETV Bharat)

ಬೆಂಗಳೂರು: ''ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಸಂಬಂಧ ಯಾವುದೇ ಗೊಂದಲ ಮಾಡಕೂಡದು ಅಂತ ಕಾಂಗ್ರೆಸ್ ಹೈಕಮಾಂಡ್ ಹೇಳಿದೆ'' ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಅವರು, ಸಿಎಂ ಹಾಗೂ ಡಿಸಿಎಂ ಬದಲಾವಣೆ ಹೇಳಿಕೆ ಸಂಬಂಧ ಕೈ ನಾಯಕರಿಗೆ ಹೈಕಮಾಂಡ್ ಎಚ್ಚರಿಕೆ ವಿಚಾರವಾಗಿ ಪ್ರತಿಕ್ರಿಯಿಸುತ್ತ, ''ನೋಡ್ರಿ.. ಆ ವಿಚಾರವಾಗಿ ಯಾರೂ ಮಾತನಾಡಬಾರದು. ನಾಯಕತ್ವ ಬದಲಾವಣೆ ಏನೇ ಇದ್ದರೂ ಹೈಕಮಾಂಡ್ ಮಾಡುತ್ತೆ'' ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: ರೈತರ ಆತ್ಮಹತ್ಯೆ ಪ್ರಕರಣಗಳಲ್ಲಿ ಪರಿಹಾರ ಒದಗಿಸುವಲ್ಲಿ ವಿಳಂಬ ಸಲ್ಲದು: ಸಿಎಂ - Farmer Suicide Cases

''ಹೈಕಮಾಂಡ್ ತೀರ್ಮಾನ ಎಲ್ಲರಿಗೂ ಬೈಂಡಿಂಗ್ ಇರುತ್ತೆ. ಈ ವಿಚಾರವಾಗಿ ಯಾವುದೇ ಗೊಂದಲ ಇರಬಾರದು ಅಂತ ನನಗೂ ಅನ್ನಿಸಿದೆ. ಹಾಗೆಯೇ ಹೈಕಮಾಂಡ್ ಕೂಡ ಹೇಳಿದೆ. ಯಾವೆಲ್ಲಾ ಬದಲಾವಣೆ ಇದೆಯೋ, ಅದನ್ನು ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಹೈಕಮಾಂಡ್ ತೀರ್ಮಾನ ಅದಕ್ಕೆ ಅನ್ವಯಿಸುತ್ತದೆ'' ಎಂದು ತಿಳಿಸಿದರು.

ಹುಬ್ಬಳ್ಳಿ ಸಿದ್ದರಾಮೋತ್ಸವ ಕಾರ್ಯಕ್ರಮ ವಿಚಾರವಾಗಿ ಮಾತನಾಡಿ, ''ಯಾವ ಸಮಾವೇಶವೂ ಇಲ್ಲ, ಏನೂ ಇಲ್ಲ. ಚಿಂತನೆ ಇದೆ, ಇಲ್ಲಂತ ಅಲ್ಲ. ಅದರ ಬಗ್ಗೆ ನಿಧಾನಕ್ಕೆ ಹೇಳುತ್ತೇನೆ'' ಎಂದು ಸೂಚ್ಯವಾಗಿ ಪ್ರತಿಕ್ರಿಯಿಸಿದರು.

ಇದನ್ನೂ ಓದಿ: 'ನಾವು ಯಾವುದನ್ನೂ ಮುಚ್ಚಿ ಹಾಕುವುದಿಲ್ಲ, ಎಲ್ಲ ಪ್ರಕರಣಗಳ ತನಿಖೆ ನಡೆಯುತ್ತದೆ' - G Parameshwar

Last Updated : Jul 8, 2024, 4:57 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.