ETV Bharat / state

ಮೋದಿ ಗ್ಯಾರಂಟಿ ಎನ್ನುವುದು ಸುಳ್ಳಿನ‌ ಗ್ಯಾರಂಟಿ ಅಷ್ಟೇ: ಸಚಿವ ಹೆಚ್ ಸಿ ಮಹದೇವಪ್ಪ - Lok Sabha Election 2024

ಮೋದಿ ಬೆಲೆ ಏರಿಕೆ ಕಡಿಮೆ ಮಾಡಿದ್ದಾರಾ? ₹ 15 ಲಕ್ಷವನ್ನು ಜನರ ಖಾತೆಗೆ ಹಾಕಿದ್ದಾರಾ? ಪ್ರತಿವರ್ಷ ಎರಡು ಕೋಟಿ ಉದ್ಯೋಗ ಕೊಟ್ಟಿದ್ದಾರಾ? ರೈತರ ಆದಾಯ ಡಬಲ್ ಮಾಡಿದ್ದಾರಾ? ಎಂದು ಪ್ರಶ್ನಿಸಿರುವ ಸಚಿವ ಹೆಚ್ ಸಿ ಮಹದೇವಪ್ಪ ಇವೆಲ್ಲ ಮೋದಿ ಸುಳ್ಳಿನ ಗ್ಯಾರಂಟಿಗಳೇ ಎಂದು ಆರೋಪಿಸಿದರು.

Minister H C Mahadevappa spoke to the media.
ಸಚಿವ ಎಚ್ ಸಿ ಮಹದೇವಪ್ಪ ಮಾಧ್ಯಮದವರೊಂದಿಗೆ ಮಾತನಾಡಿದರು.
author img

By ETV Bharat Karnataka Team

Published : Apr 18, 2024, 5:34 PM IST

Updated : Apr 18, 2024, 6:09 PM IST

ಸಚಿವ ಹೆಚ್ ಸಿ ಮಹದೇವಪ್ಪ ಮಾಧ್ಯಮದವರೊಂದಿಗೆ ಮಾತನಾಡಿದರು.

ಚಾಮರಾಜನಗರ: ಮೋದಿ ಗ್ಯಾರಂಟಿ ಎನ್ನುವುದು ಸುಳ್ಳಿನ ಗ್ಯಾರಂಟಿ ಎಂದು ಸಚಿವ ಹೆಚ್. ಸಿ. ಮಹದೇವಪ್ಪ ಆರೋಪಿಸಿದರು. ನಗರದಲ್ಲಿಂದು ಮಾಧ್ಯಮವರೊಂದಿಗೆ ಮಾತನಾಡಿದ ಅವರು, ಮೋದಿ ಗ್ಯಾರಂಟಿಗಳು ಸುಳ್ಳಿನ ಗ್ಯಾರಂಟಿಗಳು ಎಂದು ದೂರಿದರು.

ಮೋದಿ ಬೆಲೆ ಏರಿಕೆ ಕಡಿಮೆ ಮಾಡಿದ್ದಾರಾ.? ₹ 15 ಲಕ್ಷವನ್ನು ಜನರ ಖಾತೆಗೆ ಹಾಕಿದ್ದಾರಾ? ಪ್ರತಿವರ್ಷ ಎರಡು ಕೋಟಿ ಉದ್ಯೋಗವನ್ನು ಯುವಕರಿಗೆ ಕೊಟ್ಟಿದ್ದಾರಾ? ರೈತರ ಆದಾಯ ಡಬಲ್ ಮಾಡಿದ್ದಾರಾ? ಇವೆಲ್ಲ ಅವರೇ ಹೇಳಿದ್ದು, ಅವರೇ ಹೇಳಿದ್ದ ಮಾತಿಗೆ ವಿರುದ್ಧ ಆದ್ರೆ, ಇವೆಲ್ಲ ಸುಳ್ಳಿನ ಗ್ಯಾರಂಟಿಗಳೇ ಎಂದು ಬಿಜೆಪಿ ಪ್ರಣಾಳಿಕೆಯನ್ನು ಅವರು ಟೀಕಿಸಿದರು.

ಶ್ರೀರಾಮನ ಪರ ಘೋಷಣೆ ಕೂಗಿದ ಹಿಂದು ಯುವಕರ ಮೇಲೆ ಹಲ್ಲೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಇದರಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ಇಂಥಹ ರಾಜಕೀಯ ಬೇಳೆಯಿಂದ ಜನರನ್ನು ಒಡೆದು ಆಳುವಂತಹ ಬಿಜೆಪಿಯ ಆಟ ಬಹಳ ದಿನ ನಡೆಯಲ್ಲ. ಹಿಂದೂ ಯುವಕರ ಮೇಲಿನ ಹಲ್ಲೆ ಬಿಜೆಪಿ ಬೇಳೆಯಾಗಿದೆ, ಸಂವಿಧಾನದಲ್ಲಿ ಎಲ್ಲ ಧರ್ಮಗಳ ಆಚಾರ ವಿಚಾರಗಳಿಗೆ ಮುಕ್ತ ಅವಕಾಶ ಇದೆ. ಯಾರ್ಯಾರು ಈ ಕಾನೂನಿಗೆ ವಿರುದ್ಧವಾಗಿ ನಡೆಯುತ್ತಾರೋ ಅಂತವರಿಗೆ ಕಾನೂನು ತನ್ನ ಕ್ರಮ ಕೈಗೊಳ್ಳುತ್ತೆ ಎಂದರು.

ಸಂವಿಧಾನ ವಿರೋಧಿ ಯಾರು? ಸಂವಿಧಾನ ವಿಚಾರದಲ್ಲಿ ಕಾಂಗ್ರೆಸ್ ಪಕ್ಷವು ದಲಿತರನ್ನು ಟಾರ್ಗೆಟ್ ಮಾಡಿದೆ ಎನ್ನುವ ಮಾಜಿ ಸಚಿವ ಎನ್ ಮಹೇಶ್ ಆರೋಪಕ್ಕೆ ತಿರುಗೇಟು ನೀಡಿದ ಅವರು, ಎನ್ ಮಹೇಶ್ ನಮ್ಮ ಸ್ನೇಹಿತರು. ಮೊದಲು ಅವರು ಒಂದು ಪೆನ್ ಹಿಡಿದುಕೊಂಡು ರಿಷರ್ವೇಷನ್​ ಬಗ್ಗೆ ಮೇಲಿಂದ ಕೆಳಗೆ ಕೆಳಗಿಂದ ಮೇಲೆ ಅಂತ ವಿರೋಧ ಮಾಡುತ್ತಿದ್ದರು. ಮಂಡಲ್ ಕಮಿಷನ್ ವರದಿಯನ್ನು ವಿರೋಧ ಮಾಡಿದವರು ಯಾರು? ಆ ವರದಿ ಜಾರಿಯಾದಾಗ ಮಂಡಲ ಯಾಕೆ ಹೋಯ್ತು, ಯಾರಿಂದ ಆಯ್ತು ಎಂದು ಪ್ರಶ್ನಿಸಿದರು. ಸಂವಿಧಾನಕ್ಕೆ ವಿರುದ್ಧವಾಗಿರುವವರು ಬಿಜೆಪಿಯವರು. ಸಂವಿಧಾನ ಪರಾಮರ್ಶೆ ಮಾಡಿದವರು ವಾಜಪೇಯಿ ಅವರು. ಪರಾಮರ್ಶೆ ಅಂದ್ರೆ, ಸಂವಿಧಾನ ಬದಲಾವಣೆ ಅಂತ ಅರ್ಥ. ಈಗ ಧರ್ಮದ ಮೇಲೆ ದೇಶ ಕಟ್ಟಬೇಕು ಎನ್ನುತ್ತಾರೆ. ಸಂವಿಧಾನದಲ್ಲಿ ಧರ್ಮ, ದೇಶ ಅಂತ ಇದೆಯಾ.? ಎಲ್ಲರೂ ಒಂದೇ, ಧರ್ಮದ ಹೆಸರಿನಲ್ಲಿ ದೇಶ ಕಟ್ಟುವುದು ಸಂವಿಧಾನ ವಿರೋಧಿ ನಡೆ. ಧರ್ಮ ಆಧಾರಿತ ರಾಜಕೀಯ ಮಾಡುವುದೇ ಸಂವಿಧಾನ ವಿರೋಧಿ ನಡೆ. ಕಾಂಗ್ರೆಸ್ ಇದರ ತಂಟೆಗೆ ಹೋಗಲ್ಲ ಎಂದು ಸಚಿವ ಹೆಚ್​ ಸಿ ಮಹದೇವಪ್ಪ ಹೇಳಿದರು.

ಇದನ್ನೂ ಓದಿ: ಧಾರವಾಡ: ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ದಿಂಗಾಲೇಶ್ವರ‌ ಸ್ವಾಮೀಜಿ - Dingaleshwar Swamiji

Last Updated : Apr 18, 2024, 6:09 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.