ETV Bharat / state

ಬಾಲಗಂಗಾಧರನಾಥ ಶ್ರೀಗಳ ಮೇಲೆ ಎಫ್‌ಐಆರ್ ಹಾಕಿಸಿದ್ದು ಅಶೋಕ್ : ಸಚಿವ ಚಲುವರಾಯಸ್ವಾಮಿ - MINISTER CHELUVARAYASWAMY

ಸಚಿವ ಎನ್​ ಚಲುವರಾಯಸ್ವಾಮಿ ಅವರು ಚಂದ್ರಶೇಖರನಾಥ ಸ್ವಾಮೀಜಿ ಮೇಲೆ ಎಫ್‌ಐಆರ್ ಹಾಕಿರುವ ಕುರಿತು ಮಾತನಾಡಿದ್ದಾರೆ.

minister-cheluvarayaswamy
ಸಚಿವ ಎನ್​ ಚಲುವರಾಯಸ್ವಾಮಿ (ETV Bharat)
author img

By ETV Bharat Karnataka Team

Published : Nov 30, 2024, 6:00 PM IST

Updated : Nov 30, 2024, 8:38 PM IST

ಮಂಡ್ಯ : ಚಂದ್ರಶೇಖರನಾಥ ಸ್ವಾಮೀಜಿ ಮೇಲೆ ಎಫ್‌ಐಆರ್ ವಿಚಾರ ನನಗೆ ಗೊತ್ತಿಲ್ಲ, ಅದರ ಬಗ್ಗೆ ನೋಡುತ್ತೇನೆ. ಈ ಹಿಂದೆ ಬಾಲಗಂಗಾಧರ ಸ್ವಾಮೀಜಿ ಮೇಲೆಯೇ ಎಫ್​ಐಆರ್​ ಹಾಕಿದ್ದರು. ಆಗ ಸಿಎಂ, ಅರಣ್ಯ ಸಚಿವ ಯಾರು ಇದ್ರು?. ಯಾರ ಸರ್ಕಾರವಿತ್ತು?. ನಮ್ಮ ಸರ್ಕಾರ ಚಂದ್ರಶೇಖರನಾಥ ಸ್ವಾಮೀಜಿ ಮೇಲೆ ಎಫ್‌ಐಆರ್ ಹಾಕಿ ಅಂತ ಹೇಳಿಲ್ಲ. ಪೊಲೀಸ್ ಇಲಾಖೆಯವರು ಹಾಕಿದರೆ ಅದೇನು ಅಂತಾ ನೋಡ್ತೀವಿ. ಅದನ್ನು ಸರಿಪಡಿಸೋಣ ಎಂದು ಸಚಿವ ಎನ್​ ಚಲುವರಾಯಸ್ವಾಮಿ ಹೇಳಿದ್ದಾರೆ.

ಅಶೋಕ್ ಅವರು ಎಷ್ಟು ಬುದ್ದಿವಂತರು?: ಈ ಕುರಿತು ನಗರದಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು. ಈ ಬಗ್ಗೆ ಅಶೋಕ್ ಅವರು ಕೂಡಾ ಎಚ್ಚರಿಕೆ ಕೊಟ್ಟಿದ್ದಾರೆ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅಶೋಕ್ ಅವರೇ ಅರಣ್ಯ ಇಲಾಖೆಯಿಂದ ಬಾಲಗಂಗಾಧರನಾಥ ಶ್ರೀಗಳ ಮೇಲೆ ಎಫ್‌ಐಆರ್ ಹಾಕಿಸಿದ್ದು. ಅಶೋಕ್ ಹತ್ತಿರ ಕಲಿತು ಕಾಂಗ್ರೆಸ್ ಸರ್ಕಾರ ಮಾಡಬೇಕಿಲ್ಲ. ಅಶೋಕ್ ಅವರು ಎಷ್ಟು ಬುದ್ದಿವಂತರು, ಅವರು ಬಹಳ ಚೆನ್ನಾಗಿ ಮಾತನಾಡುತ್ತಾರೆ ಎಂದರು.

ಸಚಿವ ಎನ್​ ಚಲುವರಾಯಸ್ವಾಮಿ ಅವರು ಮಾತನಾಡಿದ್ದಾರೆ (ETV Bharat)

ಒಕ್ಕಲಿಗರನ್ನ ಟಾರ್ಗೆಟ್ ಮಾಡುತ್ತಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಆ ಪ್ರಶ್ನೆಯೇ ಇಲ್ಲ, ಈಗ ಪ್ರದೇಶ ಕಾಂಗ್ರೆಸ್​ ಅಧ್ಯಕ್ಷರು ಒಕ್ಕಲಿಗರು. ಎಲ್ಲ ಹಿಂದುಳಿದ ದಲಿತರ ಪರವಾಗಿರುವವರು ಸಿಎಂ ಸಿದ್ದರಾಮಯ್ಯನವರು. ನಮ್ಮಲ್ಲಿ ಎಲ್ಲಾ ಸಮಾಜಕ್ಕೂ ಒಂದೇ ನ್ಯಾಯ. ಸಾಮಾಜಿಕ ನ್ಯಾಯ ಏನಾದರೂ ಇದ್ರೆ, ಎಲ್ಲ ಸಮಾಜದವರು ರಕ್ಷಣೆ ಮಾಡುವುದಿದ್ದರೆ ಅದು ಕಾಂಗ್ರೆಸ್​ ಸರ್ಕಾರ ಮಾತ್ರ ಎಂದು ಹೇಳಿದ್ದಾರೆ.

ಸಚಿವ ತಿಮ್ಮಾಪುರ್ ಅವರು ಸಚಿವರ ಹಗರಣದ ಕುರಿತ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ತಿಮ್ಮಾಪುರ್ ಅವರು ಯಾಕೆ ಹೇಳಿದ್ದಾರೆ ಗೊತ್ತಿಲ್ಲ. ಎಲ್ಲಾ ಸಚಿವರ ಹೇಳಿಕೆಯ ಬಗ್ಗೆ ಪ್ರತಿಕ್ರಿಯಿಸಲು ನನಗೆ ಜವಾಬ್ದಾರಿ ಇಲ್ಲ. ಆ ರೀತಿ ಏನಾದ್ರು ಇದ್ದರೆ ಸಿಎಂ, ಡಿಸಿಎಂ ಮಾತಾಡುತ್ತಾರೆ ಎಂದು ತಿಳಿಸಿದ್ದಾರೆ.

ಕ್ರಮ ಆಗಬೇಕು ಅಂತ ಹೇಳಿದ್ದೇನೆ: ಮಂಡ್ಯದ ಅಬಕಾರಿ ಇಲಾಖೆಯಲ್ಲಿ ಲಂಚವಾತಾರ ವಿಚಾರವಾಗಿ ಮಾತನಾಡಿದ ಅವರು, ಈ ಬಗ್ಗೆ ನಾನು ಲೋಕಾಯುಕ್ತ ಎಸ್​ಪಿ ಜೊತೆ ಮಾತಾಡಿದ್ದೇನೆ. ಈ ಬಗ್ಗೆ ತನಿಖೆ ಮಾಡಿ ಅಂತಾ ಹೇಳಿದ್ದೇನೆ. ಮುಂದೆ ಈ ರೀತಿ ಆಗದಂತೆ ಕ್ರಮ ಆಗಬೇಕು ಅಂತಾನೂ ಹೇಳಿದ್ದೇನೆ. ಈಗಾಗಲೇ ಲೋಕಾಯುಕ್ತ ತನಿಖೆ ಮಾಡ್ತಾ ಇದ್ದಾರೆ. ಅಬಕಾರಿ ಡಿಸಿ ರಜೆ ಇದ್ದಾರಂತೆ. ಹೀಗಿದ್ದರೂ ಅವರನ್ನು ಕರೆಸಿ ತನಿಖೆ ಮಾಡಿ ಎಂದಿದ್ದೇನೆ. ಈ ಬಗ್ಗೆ ಕೂಡಲೇ ಕ್ರಮ ಆಗುತ್ತೆ ಎಂದು ಹೇಳಿದ್ದಾರೆ.

ಅವರ ಪಕ್ಷದಲ್ಲಿಯೇ ಇಷ್ಟು ದೊಡ್ಡ ಬಿರುಕು ಆಗಿದೆ: ಬಿಜೆಪಿಯಲ್ಲಿ ಎರಡು ಬಣಗಳ ಕಿತ್ತಾಟ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಇದನ್ನು ನೋಡಿದ್ರೆ ತಮಾಷೆ ಅನ್ನಿಸುತ್ತೆ. ಈಗ ವಿಜಯೇಂದ್ರ, ಅಶೋಕ್, ಸಿ. ಟಿ ರವಿ ಉತ್ತರ ಹೇಳಬೇಕು. ನಮ್ಮ ಬಗ್ಗೆ ಇವರು ಅನಾವಶ್ಯಕವಾಗಿ ಮಾತಾಡ್ತಾ ಇದ್ರು. ಅವರ ಪಕ್ಷದಲ್ಲಿಯೇ ಇಷ್ಟು ದೊಡ್ಡ ಬಿರುಕು ಆಗಿದೆ. ಇದನ್ನು ಯಾರು ಸಮಾಧಾನ ಮಾಡೋರು, ಸರಿಪಡಿಸೋರು ಯಾರು?. ಅದಕ್ಕೆ ಇನ್ನೊಬ್ಬರ ಬಗ್ಗೆ ಅನಾವಶ್ಯಕವಾಗಿ ಮಾತಾಡಿದ್ರೆ ಏನೆಲ್ಲಾ ಅನುಭವಿಸಬೇಕು ಎಂಬುದಕ್ಕೆ ಇದೇ ಸಾಕ್ಷಿ ಎಂದಿದ್ದಾರೆ.

ಬಸವಣ್ಣ ಅವರ ಬಗ್ಗೆ ಲಘುವಾಗಿ ಮಾತಾಡೋದು ತಪ್ಪು: ಬಸವಣ್ಣನವರ ಬಗ್ಗೆ ಯತ್ನಾಳ್ ಅವಹೇಳನಕಾರಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಯತ್ನಾಳ್ ಮಾತಾಡುವಾಗ ನೋಡಿ ಮಾತಾಡಬೇಕು. ಹಾಗಿದ್ದರೆ ಇವರ ಮಾತಿನ ಪ್ರಕಾರ ಬಸವಣ್ಣ ಅವರು ಹೇಡಿ ಅಂತಾನಾ?. ಬಸವಣ್ಣ ಅವರು ನದಿಗೆ ಹಾರಿದ್ರು ಅಂದ್ರೆ ಏನು ಅರ್ಥ?. ಬಸವಣ್ಣ ಅವರು ವಿಶ್ವಕ್ಕೆ ಸಂದೇಶ ಸಾರಿದ ಮಹನೀಯರು. ಬಸವಣ್ಣ ಅವರ ಬಗ್ಗೆ ಲಘುವಾಗಿ ಮಾತಾಡೋದು ತಪ್ಪು. ಬಸವಣ್ಣ ಅವರ ಸಂದೇಶ ಎಲ್ಲಾ ಸಮುದಾಯದ ಸ್ವಾಭಿಮಾನದ ಸಂದೇಶ. ಎಲ್ಲಾ ಸಮುದಾಯಗಳ ಒಗ್ಗೂಡಿಸಲು ಸಂದೇಶ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

ವಕ್ಫ್ ವಿಚಾರದಲ್ಲಿ 16 ಸಾವಿರ ನೋಟಿಸ್‌ನ್ನು ಬಿಜೆಪಿ ಕಾಲದಲ್ಲೇ ಕೊಟ್ಟಿದ್ದು. ಅದರ ನಂತರ ಸ್ವಲ್ಪ ಕಡಿಮೆಯಾಗಿದೆ. ವಕ್ಫ್ ಬಗ್ಗೆ ಯಾತ್ನಾಳ್ ಮಾತಾಡುತ್ತಾ ಇದ್ದಾರೆ. ಬಿಜೆಪಿ ಅವರು ನಮ್ಮ ಬಣ್ಣ ಬಯಲಾಗುತ್ತೆ ಬೇಡ ಅಂತಾ ಇದಾರೆ. ಅವರು ಯಾರು ತಪ್ಪು ಮಾಡಿದ್ರು ತಪ್ಪು ಅಂತ ಯತ್ನಾಳ್ ಬಯಲು ಮಾಡುತ್ತಿದ್ದಾರೆ, ಮಾಡಲಿ ಬಿಡಿ ಎಂದು ಹೇಳಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಮ್ಮಲ್ಲಿ ಇಬ್ಬರು ನಾಯಕರು ಇದ್ದಾರೆ. ನ್ಯಾಷನಲ್​ನಲ್ಲಿ ರಾಹುಲ್​, ಖರ್ಗೆ, ವೇಣುಗೋಪಾಲ್, ಸುರ್ಜೇವಾಲ್​ ಅವರು ಇದ್ದಾರೆ. ಮಂತ್ರಿ ಮಂಡಲ ಪುನರ್ ರಚನೆ, ಖಾತೆ ಬದಲಾವಣೆ, ಅಧ್ಯಕ್ಷರ ಬದಲಾವಣೆ ಎಲ್ಲಾ ಅವರಿಗೆ ಬಿಟ್ಟಿದ್ದು ಎಂದು ತಿಳಿಸಿದ್ದಾರೆ.

ಪಕ್ಷದ ಹೈಕಮಾಂಡ್ ಇದೆ, ತೀರ್ಮಾನ ಮಾಡುತ್ತೆ : ರಾಜಣ್ಣ ಅವರು ನನ್ನನ್ನು ಮಾಡಿದ್ರೆ ನಾನು ರೆಡಿ ಅಂದಿದ್ದಾರೆ. ಪಕ್ಷದಲ್ಲಿ ನನ್ನ ಮಾಡ್ತಾ ಇದಾರೆ ಅಂತ ಹೇಳಿಲ್ಲ. ಮಾಡಿದ್ರೆ ನಾನು ರೆಡಿ ಅಂದಿದ್ದಾರೆ. ನಾನಂತೂ ಅಧ್ಯಕ್ಷ ಸ್ಥಾನದ ರೇಸ್‌ನಲ್ಲಿ ಇಲ್ಲ. ರಾಜಣ್ಣ ಅವರು ಯಾವಾಗಲಾದರೂ ಅವಕಾಶ ಕೊಟ್ರೆ ಮಾಡ್ತೀವಿ ಅಂದಿದ್ದಾರೆ. ಪಕ್ಷದ ಹೈಕಮಾಂಡ್ ಇದೆ, ತೀರ್ಮಾನ ಮಾಡುತ್ತೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : ಸ್ವಾಮೀಜಿ ಮುಟ್ಟಲು ಬಂದರೆ ಒಕ್ಕಲಿಗ ಸಮುದಾಯ ತಿರುಗಿ ಬೀಳಲಿದೆ: ಆರ್.ಅಶೋಕ್

Last Updated : Nov 30, 2024, 8:38 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.