ETV Bharat / state

ಮೂವರು ಉದ್ಯಮಿಗಳಿಗೆ ಮಂಗಳೂರು ವಿವಿ ಗೌರವ ಡಾಕ್ಟರೇಟ್ ಘೋಷಣೆ: ನಾಳೆ ಘಟಿಕೋತ್ಸವ - Honorary Doctorate - HONORARY DOCTORATE

ಮಂಗಳೂರು ವಿಶ್ವವಿದ್ಯಾಲಯದ 42ನೇ ವಾರ್ಷಿಕ ಘಟಿಕೋತ್ಸವದಲ್ಲಿ ಕೆ.ಪ್ರಕಾಶ್ ಶೆಟ್ಟಿ, ಡಾ.ತುಂಬೆ ಮೊಯ್ದಿನ್ ಮತ್ತು ರೊನಾಲ್ಡೋ ಕೊಲಾಸೋ ಅವರಿಗೆ ಗೌರವ ಡಾಕ್ಟರೇಟ್ ನೀಡಲಾಗುವುದು.

Mangaluru University announces honorary doctorates to three businessmen
ಮೂವರು ಉದ್ಯಮಿಗಳಿಗೆ ಮಂಗಳೂರು ವಿವಿ ಗೌರವ ಡಾಕ್ಟರೇಟ್ ಘೋಷಣೆ (ETV Bharat)
author img

By ETV Bharat Karnataka Team

Published : Jun 14, 2024, 8:57 PM IST

ಮೂವರು ಉದ್ಯಮಿಗಳಿಗೆ ಮಂಗಳೂರು ವಿವಿ ಗೌರವ ಡಾಕ್ಟರೇಟ್ ಘೋಷಣೆ (ETV Bharat)

ಮಂಗಳೂರು: "ಮಂಗಳೂರು ವಿಶ್ವವಿದ್ಯಾಲಯದ 42ನೇ ವಾರ್ಷಿಕ ಘಟಿಕೋತ್ಸವ ಜೂನ್ 15ರಂದು ನಡೆಯಲಿದ್ದು, ಮೂವರು ಉದ್ಯಮಿಗಳಿಗೆ ಗೌರವ ಡಾಕ್ಟರೇಟ್ ಘೋಷಿಸಲಾಗಿದೆ. ಎಂಆರ್​ಜಿ ಗ್ರೂಪ್ ಮಾಲೀಕ ಕೆ.ಪ್ರಕಾಶ್ ಶೆಟ್ಟಿ, ಡಾ.ತುಂಬೆ ಮೊಯ್ದಿನ್ ಮತ್ತು ರೊನಾಲ್ಡೋ ಕೊಲಾಸೋ ಅವರಿಗೆ ಗೌರವ ಡಾಕ್ಟರೇಟ್ ನೀಡಲು ನಿರ್ಧರಿಸಲಾಗಿದೆ" ಎಂದು ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಡಾ.ಪಿ.ಎಲ್.ಧರ್ಮ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಘಟಿಕೋತ್ಸವದಲ್ಲಿ ಅಭಿವೃದ್ಧಿಶೀಲ ರಾಷ್ಟ್ರಗಳ ಸಂಶೋಧನೆ ಮತ್ತು ಮಾಹಿತಿ ವ್ಯವಸ್ಥೆ, ಮಹಾ ನಿರ್ದೇಶಕರು ಪ್ರೊ. ಸಚಿನ್ ಚತುರ್ವೇದಿ ಮುಖ್ಯ ಅತಿಥಿಯಾಗಿ ಭಾಷಣ ಮಾಡಲಿದ್ದಾರೆ. ಕರ್ನಾಟಕದ ರಾಜ್ಯಪಾಲರು ಹಾಗೂ ವಿಶ್ವವಿದ್ಯಾಲಯದ ಕುಲಾಧಿಪತಿ ಥಾವರ್ ಚಂದ್ ಗೆಹ್ಲೋಟ್ ಈ ಘಟಿಕೋತ್ಸವದ ಅಧ್ಯಕ್ಷತೆ ವಹಿಸಿ ಎಲ್ಲಾ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಿದ್ದಾರೆ. ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಭಾಗವಹಿಸಲಿದ್ದಾರೆ" ಎಂದರು.

"ಘಟಿಕೋತ್ಸವದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ 155 ಮಂದಿಗೆ ಪಿಹೆಚ್​ಡಿ ಡಾಕ್ಟರೇಟ್ ಪದವಿ (ಕಲೆ -51, ವಿಜ್ಞಾನ -73. ವಾಣಿಜ್ಯ-26, ಶಿಕ್ಷಣ -05) ಪ್ರದಾನ ಮಾಡಲಾಗುವುದು. ಇವರಲ್ಲಿ 60(38.70%) ಮಹಿಳೆಯರು ಮತ್ತು 95(61.29%) ಪುರುಷರು ಇದ್ದಾರೆ. ಈ ಬಾರಿ 18 ಅಂತರಾಷ್ಟ್ರೀಯ ಪುರುಷ ವಿದ್ಯಾರ್ಥಿಗಳು ಹಾಗೂ 4 ಅಂತಾರಾಷ್ಟ್ರೀಯ ಮಹಿಳಾ ವಿದ್ಯಾರ್ಥಿಗಳು ಪಿ.ಹೆಚ್.ಡಿ ಪದವಿ ಪಡೆಯಲಿದ್ದಾರೆ. ಅಪ್ಘಾನಿಸ್ತಾನದ 6, ತಾಂಜೇನಿಯಾದ 2, ನೈಜಿರಿಯಾದ 1, ಇಥಿಯೋಪಿಯದ 9, ಕ್ರುವೆಶಿಯದ 1, ಇರಾಕ್ ಮೂರು ವಿದ್ಯಾರ್ಥಿಗಳಿದ್ದಾರೆ" ಎಂದರು.

"58 ಚಿನ್ನದ ಪದಕ ಮತ್ತು 57 ನಗದು ಬಹುಮಾನಗಳಿದ್ದು, ವಿವಿಧ ಕೋರ್ಸ್​ಗಳ ಒಟ್ಟು 168 ರ್ಯಾಂಕ್‌ಗಳಲ್ಲಿ ಪ್ರಥಮ ರ್ಯಾಂಕ್ ಪಡೆದ 72 ಮಂದಿಗೆ ಪ್ರಮಾಣ ಪತ್ರ (ಸ್ನಾತಕೋತ್ತರ ಪದವಿ - 52 ಮತ್ತು ಪದವಿ - 20, ಕಲೆ - 31, ವಿಜ್ಞಾನ ಮತ್ತು ತಂತ್ರಜ್ಞಾನ -75, ವಾಣಿಜ್ಯ - 41, ಶಿಕ್ಷಣ 21) ನೀಡಲಾಗುವುದು" ಎಂದರು.

"ಮಂಗಳೂರು ವಿಶ್ವವಿದ್ಯಾನಿಲಯ 2022-23ನೇ ಸಾಲಿನಲ್ಲಿ ನಡೆಸಿದ ವಿವಿಧ ಪರೀಕ್ಷೆಗಳಲ್ಲಿ ಒಟ್ಟು 29,465 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 21,319 (72.35%) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಅದರಲ್ಲಿ ಸ್ನಾತಕೋತ್ತರ ಪದವಿ ಪರೀಕ್ಷೆಗೆ 3,277 ವಿದ್ಯಾರ್ಥಿಗಳು ಹಾಜರಾಗಿದ್ದು, 3,094 (94.42%) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಪದವಿ ಪರೀಕ್ಷೆಗೆ 26,188 ವಿದ್ಯಾರ್ಥಿಗಳು ಹಾಜರಾಗಿದ್ದು, 18,225 (69.59) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಸ್ನಾತಕೋತ್ತರ ಪದವಿಯಲ್ಲಿ ಉತ್ತೀರ್ಣರಾದ 3,094 ವಿದ್ಯಾರ್ಥಿಗಳಲ್ಲಿ 839(27.10%) ಹುಡುಗರು ಮತ್ತು 2255 (72.90%) ಹುಡುಗಿಯರು. ಪದವಿ ಪರೀಕ್ಷೆಯಲ್ಲಿ 18.225 ವಿದ್ಯಾರ್ಥಿಗಳಲ್ಲಿ 6,639(36.50%) ಹುಡುಗರು ಮತ್ತು 11,586(63.60%) ಹುಡುಗಿಯರು. ವಿವಿಧ ಪರೀಕ್ಷೆಗಳಲ್ಲಿ ಉತ್ತೀರ್ಣರಾದ 21,319 ವಿದ್ಯಾರ್ಥಿಗಳಲ್ಲಿ 8,097(382) ಹುಡುಗರು (ಶೇಕಡಾವಾರು ಉತ್ತೀರ್ಣರಾದ ಹುಡುಗರು 65.20%) ಮತ್ತು 13,841(65%) ಹುಡುಗಿಯರು (ಶೇಕಡಾವಾರು ಉತ್ತೀರ್ಣರಾದ ಹುಡುಗಿಯರು 81.30%) ಆಗಿದ್ದಾರೆ" ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: ಮಂಗಳೂರು ವಿವಿಯಲ್ಲಿ ಆರ್ಥಿಕ ಸಮಸ್ಯೆ, ಘಟಕ ಕಾಲೇಜು ಮುನ್ನಡೆಸಲು ತೊಂದರೆ: ಕುಲಪತಿ ಡಾ.ಪಿ.ಎಲ್.ಧರ್ಮ - Mangaluru University

ETV Bharat Logo

Copyright © 2025 Ushodaya Enterprises Pvt. Ltd., All Rights Reserved.