ETV Bharat / state

ಕೆತ್ತಿಕಲ್, ಕಣ್ಣೂರಿನ 16 ಕುಟುಂಬಗಳ ಸ್ಥಳಾಂತರಕ್ಕೆ ಮಂಗಳೂರು ಪಾಲಿಕೆ ಸೂಚನೆ - Relocation Of Families

author img

By ETV Bharat Karnataka Team

Published : Aug 6, 2024, 4:27 PM IST

ಗುಡ್ಡ ಕುಸಿತ ಭೀತಿಯಲ್ಲಿರುವ ಕೆತ್ತಿಕಲ್​ ಹಾಗೂ ಕಣ್ಣೂರಿನ 16 ಕುಟುಂಬಗಳು ಸ್ಥಳಾಂತರಗೊಳ್ಳುವಂತೆ ಮಂಗಳೂರು ಮಹಾನಗರ ಪಾಲಿಕೆ ಸೂಚನೆ ನೀಡಿದೆ.

Mayor Sudhir Shetty Kannur
ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು (ETV Bharat)

ಮಂಗಳೂರು: "ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮಳೆಯಿಂದಾಗಿ 16 ಮನೆಗಳು ಅಪಾಯಕ್ಕೆ ಸಿಲುಕಿವೆ. ಈ ಮನೆಯವರು ಬೇರೆಡೆ ಸ್ಥಳಾಂತರಗೊಳ್ಳುವಂತೆ ಪಾಲಿಕೆ ಸೂಚನೆ ನೀಡಿದೆ" ಎಂದು ಮಹಾನಗರ ಪಾಲಿಕೆ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ತಿಳಿಸಿದ್ದಾರೆ.

"ಕೆತ್ತಿಕಲ್‌ನಲ್ಲಿ ಗುಡ್ಡ ಕುಸಿತ ಭೀತಿಯಲ್ಲಿರುವ 12 ಮನೆಗಳು ಹಾಗೂ ಕಣ್ಣೂರಿನ ಬಳ್ಳೂರುಗುಡ್ಡೆಯಲ್ಲಿ 4 ಮನೆಗಳು ಅಪಾಯದಲ್ಲಿವೆ. ಈ 16 ಮನೆಯವರಿಗೆ ಬೇರೆಡೆ ಸ್ಥಳಾಂತರಗೊಳ್ಳುವಂತೆ ಸೂಚಿಸಲಾಗಿದೆ. ರಾಜ್ಯ ಸರ್ಕಾರ ಅನುದಾನ ಮಂಜೂರು ಮಾಡಿದರೆ, ಅವರಿಗೆ ಬಾಡಿಗೆ ನೀಡುತ್ತೇವೆ. ಪಾಲಿಕೆ ಬಳಿ ಹಣವಿಲ್ಲ. ಕೆತ್ತಿಕಲ್‌ನಲ್ಲಿ ಪಾಲಿಕೆ ನಿರ್ಮಿಸುತ್ತಿರುವ ವೆಟ್‌ವೆಲ್ ಅನ್ನು ಸುರತ್ಕಲ್‌ ಎನ್‌ಐಟಿಕೆ ತಜ್ಞರು ಪರಿಶೀಲನೆ ಮಾಡಲಿದ್ದಾರೆ. ಅವರು ಅಧ್ಯಯನ ನಡೆಸಿ ವರದಿ ನೀಡಿದ ಬಳಿಕ ಅಲ್ಲಿ ಕಾಮಗಾರಿ ಮುಂದುವರಿಸಬೇಕೋ ಬೇಡವೋ ಎಂದು ನಿರ್ಧರಿಸಲಾಗುವುದು" ಎಂದರು.

ಇದನ್ನೂ ಓದಿ: ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಸೈಕಲ್ ಪಾತ್ ಯೋಜನೆ ರದ್ದು - Mangaluru Cycle Path Project

ETV Bharat Logo

Copyright © 2024 Ushodaya Enterprises Pvt. Ltd., All Rights Reserved.