ETV Bharat / state

ಮಂಡ್ಯ: ಎಡಿಸಿ ಹುದ್ದೆ ತ್ಯಜಿಸಿ ಮತ್ತೆ ಸನ್ಯಾಸತ್ವ ಸ್ವೀಕರಿಸಲಿರುವ ಹೆಚ್.ಎಲ್.ನಾಗರಾಜು

ಈ ಹಿಂದೆ 2011 ರಲ್ಲಿ ಉಪವಿಭಾಗಾಧಿಕಾರಿಯಾಗಿದ್ದ ಸಮಯದಲ್ಲೇ ಡಾ. ಹೆಚ್. ಎಲ್. ನಾಗರಾಜು ಆದಿ ಚುಂಚನಗಿರಿ ಮಠದಲ್ಲಿ ಸನ್ಯಾಸ ದೀಕ್ಷೆ ಪಡೆದಿದ್ದರು.

Dr. H.L. Nagaraju
ಡಾ.ಹೆಚ್.ಎಲ್. ನಾಗರಾಜು (ETV Bharat)
author img

By ETV Bharat Karnataka Team

Published : 12 hours ago

ಮಂಡ್ಯ: ಮಂಡ್ಯದ ಕೆಎಎಸ್ ಅಧಿಕಾರಿ, ಅಪರ ಜಿಲ್ಲಾಧಿಕಾರಿ ಡಾ. ಹೆಚ್. ಎಲ್. ನಾಗರಾಜು ಅವರು ತಮ್ಮ ಸರ್ಕಾರಿ ಹುದ್ದೆಗೆ ರಾಜೀನಾಮೆ ಸಲ್ಲಿಸಲು ನಿರ್ಧರಿಸಿದ್ದಾರೆ. ಮಂಡ್ಯ ಜಿಲ್ಲೆಯ ಹೆಚ್ಚುವರಿ ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಇವರು ವಿಶ್ವ ಒಕ್ಕಲಿಗ ಮಠಕ್ಕೆ ಪೀಠಾಧ್ಯಕ್ಷರಾಗಿ ನೇಮಕಗೊಳ್ಳುವ ಸಾಧ್ಯತೆಯಿದೆ. 13 ವರ್ಷಗಳ ಬಳಿಕ ಇವರು ಮತ್ತೆ ಸನ್ಯಾಸ ದೀಕ್ಷೆ ತೆಗೆದುಕೊಳ್ಳುವತ್ತ ಮನಸ್ಸು ಮಾಡಿದ್ದಾರೆ.

ಅಧ್ಯಾತ್ಮದ ಕಡೆಗೆ ಹೆಚ್ಚಿನ ಒಲವು ಹೊಂದಿರುವ ಇವರು 2011ರಲ್ಲಿ ಉಪವಿಭಾಗಾಧಿಕಾರಿಯಾಗಿದ್ದ ಸಮಯದಲ್ಲೇ ಆದಿ ಚುಂಚನಗಿರಿ ಮಠದಲ್ಲಿ ಸನ್ಯಾಸ ದೀಕ್ಷೆ ಪಡೆದಿದ್ದರು. ಇದೀಗ ಮತ್ತೆ ಸನ್ಯಾಸದತ್ತ ಮುಖ ಮಾಡಿದ್ದಾರೆ. 2021ರಲ್ಲಿ ಇವರು ಸನ್ಯಾಸ ದೀಕ್ಷೆ ಪಡೆದ ಸಮಯದಲ್ಲಿ ನಿಶ್ಚಲಾನಂದನಾಥ ಎಂದು ಹೆಸರು ಬದಲಾಯಿಸಿಕೊಂಡಿದ್ದರು. ಬಳಿಕ ಸಾರ್ವಜನಿಕರು, ಆಪ್ತರು, ಕುಟುಂಬದವರ ಒತ್ತಡದಿಂದ ಮತ್ತೆ ಸರ್ಕಾರಿ ಹುದ್ದೆಗೆ ಮರಳಿದ್ದರು.

ಸಚಿವ ಚಲುವರಾಯಸ್ವಾಮಿ (ETV Bharat)

ವಿಶ್ವ ಒಕ್ಕಲಿಗ ಮಠದ ಶ್ರೀ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ ಅವರು ಅನಾರೋಗ್ಯ ಕಾರಣದಿಂದ ಪೀಠವನ್ನು ತ್ಯಜಿಸುತ್ತಿದ್ದಾರೆ. ಇವರ ಸ್ಥಾನವನ್ನು ಡಾ. ಹೆಚ್. ಎಲ್. ನಾಗರಾಜು ತುಂಬುವ ಸೂಚನೆ ಇದೆ. ಶ್ರೀ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ ಅವರೊಂದಿಗೆ ನಾಗರಾಜು ಅವರು ನಿರಂತರ ಸಂಪರ್ಕದಲ್ಲಿದ್ದಾರೆ. ತಮ್ಮ ಹುದ್ದೆಗೆ ರಾಜೀನಾಮೆ ನೀಡದೆ, ಸ್ವಯಂ ನಿವೃತ್ತಿ ಪಡೆಯುವ ಸೂಚನೆ ಇದೆ ಎಂದು ಹೇಳಲಾಗಿದೆ.

ಇನ್ನು ಈ ಕುರಿತು ಸಚಿವ ಎನ್‌. ಚಲುವರಾಯಸ್ವಾಮಿ ಮಾತನಾಡಿ, "ಅದು ಅವರ ವೈಯುಕ್ತಿಕ ವಿಚಾರ. ಅವರು ದೀಕ್ಷೆ ಪಡೆಯುತ್ತಿರುವ ಬಗ್ಗೆ ನನಗೆ ಮಾಹಿತಿ ಸಿಕ್ಕಿದೆ. ಅವರು ಹಿಂದೆಯೇ ದೀಕ್ಷೆ ಪಡೆಯಲು ಮುಂದಾಗಿದ್ದರು. ಅನುಯಾಯಿಗಳ ಒತ್ತಾಯದ ಮೇರೆಗೆ ವಾಪಸಾಗಿದ್ದರು. ಎರಡ್ಮೂರು ದಿನ ರಜೆ ಕೇಳಿದ್ದಾರೆ. ರಜೆ ಮುಗಿದ ಬಳಿಕ ಸ್ವಯಂ ನಿವೃತ್ತಿಗೆ ಅರ್ಜಿ ಹಾಕಬಹುದು ಎಂದು ಸಚಿವ ಎನ್. ಚಲುವರಾಯಸ್ವಾಮಿ ಹೇಳಿದ್ದಾರೆ.

ಇದನ್ನೂ ಓದಿ: ಕ್ಯಾನ್ಸರ್‌ನಿಂದ ಬಳಲುತ್ತಿದ್ದೇನೆ, ವಿಚಾರಣೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ: ಪೊಲೀಸರಿಗೆ ಚಂದ್ರಶೇಖರನಾಥ​ ಸ್ವಾಮೀಜಿ ಪತ್ರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.