ಹುಬ್ಬಳ್ಳಿ: ಹುಚ್ಚು ನಾಯಿಯೊಂದು ಕಂಡ ಕಂಡವರನ್ನು ಕಚ್ಚಿ ಗಾಯಗೊಳಿಸಿರುವ ಘಟನೆ ಗೋಕುಲ್ ರಸ್ತೆಯ ಅಕ್ಷಯ ಪಾರ್ಕ್ ಬಳಿ ಇಂದು ನಡೆದಿದೆ.
ಗೋಕುಲ ರೋಡ್ನಲ್ಲಿ 30ಕ್ಕೂ ಹೆಚ್ಚು ಜನರಿಗೆ ನಾಯಿ ಕಚ್ಚಿದೆ. ಗಾಯಗೊಂಡವರಲ್ಲಿ ಹೆಚ್ಚಿನವರು ಗೋಕುಲ ರೋಡ್ ನಿವಾಸಿಗಳಾಗಿದ್ದಾರೆ. ಇಲ್ಲಿಯವರೆಗೂ ಒಟ್ಟು 16 ಜನರು ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕೊರಳಲ್ಲಿ ಚೈನ್‌ಸಮೇತ ಬೀದಿಯಲ್ಲಿ ನಾಯಿ ತಿರುಗಾಡುತ್ತಿದ್ದ ನಾಯಿ, ಗೋಕುಲ್ ರಸ್ತೆಯಲ್ಲಿ ಮಕ್ಕಳು, ಹಿರಿಯರು, ಯುವಕರು, ಮಹಿಳೆಯರ ಮೇಲೆ ದಾಳಿ ಮಾಡಿ ಕಚ್ಚಿ ಗಾಯಗೊಳಿಸಿದೆ.