ಚಾಮರಾಜನಗರ: ಬೆಂಗಳೂರು-ದಿಂಡಿಗಲ್ ರಾಷ್ಟ್ರೀಯ ಹೆದ್ದಾರಿ ಹಾದುಹೋಗುವ ಚಾಮರಾಜನಗರ ಗಡಿಭಾಗದ ತಮಿಳುನಾಡಿನ ದಿಂಬಂ ಘಟ್ಟದಲ್ಲಿ ಲಾರಿಯೊಂದು ಅಂದಾಜು 30 ಅಡಿ ಆಳ ಕಂದಕಕ್ಕೆ ಬಿದ್ದಿದೆ.
ಮೈಸೂರಿನಿಂದ ಸತ್ಯಮಂಗಲಕ್ಕೆ ಎಲೆಕ್ರ್ಟಾನಿಕ್ ವಸ್ತುಗಳನ್ನು ಹೊತ್ತು ತೆರಳುತ್ತಿದ್ದ ಲಾರಿ ಇದಾಗಿದ್ದು, ಚಾಲಕ ಸಣ್ಣಪುಟ್ಟ ಗಾಯಗಳಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ದಿಂಬಂ ಘಟ್ಟ ಪ್ರದೇಶದಲ್ಲಿ ಒಟ್ಟು 27 ತೀವ್ರ ತಿರುವುಗಳಿವೆ. 17ನೇ ತಿರುವಿನಲ್ಲಿ ಲಾರಿ ತಡೆಗೋಡೆಗೆ ಗುದ್ದಿ ಆಳ ಕಂದಕಕ್ಕೆ ಉರುಳಿದೆ. ಲಾರಿ ಬೀಳುತ್ತಿದ್ದಂತೆ ಹೊರಕ್ಕೆ ಹಾರಿದ ಚಾಲಕನನ್ನು ಬೇರೆ ವಾಹನ ಸವಾರರು ಗಮನಿಸಿ ಆಸ್ಪತ್ರೆಗೆ ರವಾನಿಸಿದ್ದಾರೆ.
ತಮಿಳುನಾಡು ಪೊಲೀಸರು ಕ್ರೇನ್ ಮೂಲಕ ಲಾರಿಯನ್ನು ಮೇಲಕ್ಕೆತ್ತಿದ್ದಾರೆ. ಅಪಘಾತದಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಒಂದು ಗಂಟೆಗೂ ಹೆಚ್ಚು ಕಾಲ ಅಸ್ತವ್ಯಸ್ತವಾಗಿತ್ತು.
ಇದನ್ನೂ ಓದಿ: ಕಾಫಿನಾಡಲ್ಲಿ ಮಳೆ ಅಬ್ಬರ: ರಸ್ತೆ ಕುಸಿದು ಪ್ರಪಾತಕ್ಕೆ ಬಿದ್ದ ಲಾರಿ; ನೀರಿನಲ್ಲಿ ಕೊಚ್ಚಿಹೋದ ಕೋಣ - LORRY FALLS INTO ABYSS