ETV Bharat / state

ರಾಜ್ಯದಲ್ಲಿ ಬಿಜೆಪಿ 17, ಕಾಂಗ್ರೆಸ್​ 9, ಜೆಡಿಎಸ್​ 2ರಲ್ಲಿ ಗೆಲುವು: ಪಕ್ಷಗಳ ವೋಟ್​ ಶೇರ್​ ಎಷ್ಟು? - Karnataka Election Results - KARNATAKA ELECTION RESULTS

ರಾಜ್ಯದ 28 ಲೋಕಸಭೆ ಕ್ಷೇತ್ರಗಳ ಚುನಾವಣಾ ಫಲಿತಾಂಶ ಹೊರಬಿದ್ದಿದೆ. ಕ್ಷೇತ್ರಗಳಲ್ಲಿ ಗೆದ್ದವರು, ಸೋತವರು ಹಾಗೂ ಪಕ್ಷಗಳು ಗಳಿಸಿದ ಶೇಕಡಾವಾರು ಮತ ಪ್ರಮಾಣದ ಮಾಹಿತಿ ಇಲ್ಲಿದೆ.

Lok Sabha election
ಲೋಕಸಭೆ ಚುನಾವಣೆಯ ಫಲಿತಾಂಶ (ETV Bharat)
author img

By ETV Bharat Karnataka Team

Published : Jun 4, 2024, 10:33 AM IST

Updated : Jun 4, 2024, 6:16 PM IST

ಬೆಂಗಳೂರು: ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಚುನಾವಣಾ ಫಲಿತಾಂಶ ಪ್ರಕಟವಾಗಿದೆ. ಆಡಳಿತಾರೂಢ ಕಾಂಗ್ರೆಸ್​ 9, ಬಿಜೆಪಿ-ಜೆಡಿಎಸ್ ಮೈತ್ರಿಕೂಟ 19 ಸ್ಥಾನಗಳನ್ನು ಗೆದ್ದುಕೊಂಡಿದೆ. ಚುನಾವಣಾಪೂರ್ವ ಮೈತ್ರಿ ಮಾಡಿಕೊಂಡಿದ್ದ ಬಿಜೆಪಿ 25 ಕ್ಷೇತ್ರ ಹಾಗೂ ಜೆಡಿಎಸ್​ 3 ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತು. ಕಾಂಗ್ರೆಸ್​ ಎಲ್ಲ 28 ಕ್ಷೇತ್ರಗಳಲ್ಲೂ ಸ್ಪರ್ಧಿಸಿತ್ತು.

ಯಾವ ಕ್ಷೇತ್ರದಲ್ಲಿ ಯಾರಿಗೆ ಗೆಲುವು?: ಬಿಜೆಪಿ 17 ಕ್ಷೇತ್ರಗಳಲ್ಲಿ ಗೆಲುವು ಕಂಡಿದೆ. ಬೆಂಗಳೂರು ಭಾಗದಲ್ಲಿ ಪಕ್ಷ ಭಾರೀ ಮೇಲುಗೈ ಸಾಧಿಸಿದೆ. ರಾಜಧಾನಿಯ ಮೂರು ಕ್ಷೇತ್ರಗಳು ಹಾಗೂ ಕಾಂಗ್ರೆಸ್​ ವಶದಲ್ಲಿದ್ದ ಬೆಂಗಳೂರು ಗ್ರಾಮೀಣದಲ್ಲಿ ಕಮಲ ಅರಳಿದೆ. ಕರಾವಳಿ ಭಾಗ ಹಾಗೂ ಸಿಎಂ ಸಿದ್ದರಾಮಯ್ಯ ತವರು ಜಿಲ್ಲೆ ಮೈಸೂರು ಕ್ಷೇತ್ರದಲ್ಲೂ ಬಿಜೆಪಿ ಬಾವುಟ ಹಾರಿಸಿದೆ.

ಜೆಡಿಎಸ್ ಪಕ್ಷ​ ಹಾಸನ ಸೋತು ಮಂಡ್ಯ, ಕೋಲಾರದಲ್ಲಿ ಗೆಲುವು ಕಂಡಿದೆ. ಕಾಂಗ್ರೆಸ್ ಪಕ್ಷಕ್ಕೆ ಕಲ್ಯಾಣ ಕರ್ನಾಟಕದಲ್ಲಿ ಭರ್ಜರಿ ಗೆಲುವಾಗಿದೆ. ಕಲ್ಯಾಣದ ಐದು ಲೋಕಸಭಾ ಕ್ಷೇತ್ರಗಳಲ್ಲೂ ಕೈ ಅಭ್ಯರ್ಥಿಗಳು ಗೆದ್ದಿದ್ದಾರೆ. ಇದಲ್ಲದೇ ಚಿಕ್ಕೋಡಿ, ದಾವಣಗೆರೆ, ಹಾಸನ ಹಾಗೂ ಚಾಮರಾಜನಗರದಲ್ಲೂ ಗೆದ್ದಿದೆ.

ಪಕ್ಷಗಳ ಶೇಕಡಾವಾರು ಮತ ಪ್ರಮಾಣ: ಕಾಂಗ್ರೆಸ್​ ಒಟ್ಟು ಶೇ.45.44ರಷ್ಟು ಮತ ಪಡೆದಿದೆ. ಬಿಜೆಪಿ ಶೇ.46.04ರಷ್ಟು ಮತಗಳು ಸಿಕ್ಕಿವೆ. ಮೂರು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಜೆಡಿಎಸ್​ ಶೇ.5.61ರಷ್ಟು ಮತ ಗಳಿಸಿದೆ.

ಕ್ಷೇತ್ರವಾರು ಗೆಲುವಿನ ಮಾಹಿತಿ

  1. ಬೀದರ್ - ಸಾಗರ್ ಖಂಡ್ರೆ (ಕಾಂಗ್ರೆಸ್)
  2. ಕಲಬುರಗಿ - ರಾಧಾಕೃಷ್ಣ ದೊಡ್ಡಮನಿ (ಕಾಂಗ್ರೆಸ್​)
  3. ರಾಯಚೂರು - ಜಿ.ಕುಮಾರ ನಾಯಕ (ಕಾಂಗ್ರೆಸ್)
  4. ಕೊಪ್ಪಳ - ರಾಜಶೇಖರ್​ ಹಿಟ್ನಾಳ್ (ಕಾಂಗ್ರೆಸ್)
  5. ಬಳ್ಳಾರಿ - ಈ.ತುಕಾರಾಂ (ಕಾಂಗ್ರೆಸ್​)
  6. ದಾವಣಗೆರೆ - ಪ್ರಭಾ ಮಲ್ಲಿಕಾರ್ಜುನ (ಕಾಂಗ್ರೆಸ್​)
  7. ವಿಜಯಪುರ - ರಮೇಶ್ ಜಿಗಜಿಣಗಿ (ಬಿಜೆಪಿ)
  8. ಬಾಗಲಕೋಟೆ - ಪಿ.ಸಿ.ಗದ್ದಿಗೌಡರ್ (ಬಿಜೆಪಿ)
  9. ಚಿಕ್ಕೋಡಿ - ಪ್ರಿಯಾಂಕಾ ಜಾರಕಿಹೊಳಿ (ಕಾಂಗ್ರೆಸ್​)
  10. ಬೆಳಗಾವಿ - ಜಗದೀಶ್ ಶೆಟ್ಟರ್ (ಬಿಜೆಪಿ)
  11. ಹಾವೇರಿ - ಬವಸರಾಜ ಬೊಮ್ಮಾಯಿ (ಬಿಜೆಪಿ)
  12. ಧಾರವಾಡ - ಪ್ರಹ್ಲಾದ್ ಜೋಶಿ (ಬಿಜೆಪಿ)
  13. ಉತ್ತರ ಕನ್ನಡ - ವಿಶ್ವೇಶ್ವರ ಹೆಗಡೆ ಕಾಗೇರಿ (ಬಿಜೆಪಿ)
  14. ಶಿವಮೊಗ್ಗ - ಬಿ.ವೈ.ರಾಘವೇಂದ್ರ (ಬಿಜೆಪಿ)
  15. ಉಡುಪಿ - ಚಿಕ್ಕಮಗಳೂರು - ಕೋಟಾ ಶ್ರೀನಿವಾಸ ಪೂಜಾರಿ (ಬಿಜೆಪಿ)
  16. ಚಿತ್ರದುರ್ಗ - ಗೋವಿಂದ ಕಾರಜೋಳ (ಬಿಜೆಪಿ)
  17. ತುಮಕೂರು - ವಿ.ಸೋಮಣ್ಣ (ಬಿಜೆಪಿ)
  18. ಚಿಕ್ಕಬಳ್ಳಾಪುರ - ಡಾ.ಸುಧಾಕರ್ (ಬಿಜೆಪಿ)
  19. ದಕ್ಷಿಣ ಕನ್ನಡ - ಕ್ಯಾ.ಬ್ರಜೇಶ್ ಚೌಟಾ (ಬಿಜೆಪಿ)
  20. ಮೈಸೂರು - ಯದುವೀರ್ ಒಡೆಯರ್ (ಬಿಜೆಪಿ)
  21. ಹಾಸನ - ಶ್ರೇಯಶ್ ಪಟೇಲ್ (ಕಾಂಗ್ರೆಸ್​)
  22. ಮಂಡ್ಯ - ಹೆಚ್​.ಡಿ.ಕುಮಾರಸ್ವಾಮಿ (ಜೆಡಿಎಸ್​)
  23. ಕೋಲಾರ - ಮಲ್ಲೇಶ್ ಬಾಬು (ಜೆಡಿಎಸ್​)
  24. ಬೆಂಗಳೂರು ಗ್ರಾಮೀಣ - ಡಾ.ಸಿ.ಎನ್.ಮಂಜುನಾಥ್ (ಬಿಜೆಪಿ)
  25. ಬೆಂಗಳೂರು ದಕ್ಷಿಣ - ತೇಜಸ್ವಿ ಸೂರ್ಯ (ಬಿಜೆಪಿ)
  26. ಬೆಂಗಳೂರು ಉತ್ತರ - ಶೋಭಾ ಕರಂದ್ಲಾಜೆ (ಬಿಜೆಪಿ)
  27. ಬೆಂಗಳೂರು ಕೇಂದ್ರ - ಪಿ.ಸಿ.ಮೋಹನ್​ (ಬಿಜೆಪಿ)
  28. ಚಾಮರಾಜನಗರ - ಸುನೀಲ್ ಬೋಸ್ (ಕಾಂಗ್ರೆಸ್​)

Last Updated : Jun 4, 2024, 6:16 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.