ETV Bharat / state

ಮಂಗಳೂರು: ಮತ್ತೆ ನಾಲ್ವರು ರೌಡಿಗಳ ಮೇಲೆ ಗೂಂಡಾ ಕಾಯ್ದೆ, 13 ಮಂದಿ ಗಡಿಪಾರು - Rowdies Booked Under Goonda Act - ROWDIES BOOKED UNDER GOONDA ACT

ಲೋಕಸಭಾ ಚುನಾವಣೆಯಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಿರುವ ಮಂಗಳೂರು ನಗರ ಪೊಲೀಸ್​ ಕಮಿಷನರೇಟ್​ ಒಟ್ಟು 13 ಮಂದಿ ರೌಡಿಗಳನ್ನು ಜಿಲ್ಲೆಯಿಂದ ಗಡಿಪಾರು ಮಾಡಿದೆ.

Mangalore City Police Commissionerate
ಮಂಗಳೂರು ನಗರ ಪೊಲೀಸ್ ಕಮಿಷನರೇಟ್
author img

By ETV Bharat Karnataka Team

Published : Mar 27, 2024, 2:04 PM IST

ಮಂಗಳೂರು: ಲೋಕಸಭೆ ಚುನಾವಣೆಯನ್ನು ಶಾಂತಿಯುತವಾಗಿ ನಡೆಸುವ ಹಿನ್ನೆಲೆಯಲ್ಲಿ ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಮತ್ತೆ ನಾಲ್ವರು ರೌಡಿಗಳ ವಿರುದ್ಧ ಗೂಂಡಾ ಕಾಯ್ದೆ ಜಾರಿಗೊಳಿಸಲಾಗಿದ್ದು, 13 ಮಂದಿಯನ್ನು ದ.ಕ.ಜಿಲ್ಲೆಯಿಂದ ಗಡಿಪಾರು ಮಾಡಲಾಗಿದೆ.

ಉಳ್ಳಾಲ ಅಂಬ್ಲಮೊಗರು ನಿವಾಸಿ ಹೇಮಚಂದ್ರ ಅಲಿಯಾಸ್ ಪ್ರಜ್ವಲ್ ಪೂಜಾರಿ (29), ಉಳ್ಳಾಲ ಕೈರಂಗಳ ನಿವಾಸಿ ನವಾಜ್ (36), ಕುದ್ರೋಳಿ ನಿವಾಸಿ ಅನೀಸ್ ಅಶ್ರಫ್ (26), ಬೋಳೂರು ನಿವಾಸಿ ಚರಣ್ ಶೇಟ್ (39) ಎಂಬವರ ವಿರುದ್ಧ ಗೂಂಡಾ ಕಾಯ್ದೆ ಜಾರಿಗೊಳಿಸಲಾಗಿದೆ.

ಹೇಮಚಂದ್ರನ ವಿರುದ್ಧ ಕೊಲೆ, ಕೊಲೆ ಯತ್ನ, ಗಲಭೆ, ಕಿಡ್ನಾಪ್ ಸೇರಿದಂತೆ ಒಟ್ಟು 17 ಕೇಸುಗಳಿವೆ. ಅನೀಸ್ ಅಶ್ರಫ್ ವಿರುದ್ಧ ಕೊಲೆ ಯತ್ನ, ಡ್ರಗ್ಸ್, ಗಲಭೆ, ಕಳವು, ಹಲ್ಲೆ ಸೇರಿದಂತೆ 18 ಕೇಸುಗಳಿವೆ. ನವಾಜ್ ವಿರುದ್ಧ ಹಲ್ಲೆ, ಕೊಲೆ ಯತ್ನ, ಕಿಡ್ನಾಪ್ ಪ್ರಕರಣ ಸೇರಿ 13 ಕೇಸುಗಳಿವೆ. ಚರಣ್ ವಿರುದ್ಧ ಹಲ್ಲೆ, ಗಲಭೆ, ಕೊಲೆ ಯತ್ನ ಎರಡು ಕೊಲೆ, ಕಿಡ್ನಾಪ್, ರಾಬರಿ ಸೇರಿದಂತೆ 11 ಕೇಸುಗಳಿವೆ.

ಅಪರಾಧ ಹಿನ್ನೆಲೆಯಿರುವ ಮತ್ತೆ 13 ಮಂದಿಯನ್ನು ಜಿಲ್ಲೆಯಿಂದ ಬೇರೆಡೆಗೆ ಗಡಿಪಾರು ಮಾಡಲು ಪೊಲೀಸ್ ಕಮಿಷನ‌ರ್ ಆದೇಶಿಸಿದ್ದಾರೆ. ಬೋಳಾರ ನಿವಾಸಿ ಜ್ಞಾನೇಶ್ ನಾಯಕ್ (25), ಕುದ್ರೋಳಿ ನಿವಾಸಿ ಫಹಾದ್ (25), ಉಳ್ಳಾಲ ಮೊಗವೀರಪಟ್ನ ನಿವಾಸಿ ಧನುಷ್ (30), ಕಾವೂರು ಶಾಂತಿನಗರದ ಮೊಹಮ್ಮದ್ ಸಾಹೇಬ್ (28), ಮೂಡುಶೆಡ್ಡೆ ನಿವಾಸಿ ದೀಪಕ್ ಪೂಜಾರಿ (38), ಕೃಷ್ಣಾಪುರದ ಶಾಹಿಲ್ ಇಸ್ಮಾಯಿಲ್ (27), ಉಳ್ಳಾಲ ಬಸ್ತಿಪಡು ನಿವಾಸಿ ಮಹಮ್ಮದ್ ಶಕೀರ್ (30), ಉಳ್ಳಾಲ ಮೇಲಂಗಡಿಯ ಇಬ್ರಾಹೀಂ ಖಲೀಲ್ (22), ಕುದ್ರೋಳಿ ಧನುಷ್ (28), ಬಜಾಲಿನ ನೌಫಾಲ್ (35), ಮರೋಳಿಯ ಹವಿತ್ ಪೂಜಾರಿ (28), ಫರಂಗಿಪೇಟೆಯ ಕೌಶಿಕ್ ನಿಹಾಲ್ (24), ಬೆಳುವಾಯಿ ನಿವಾಸಿ ಸಂತೋಷ್ ಶೆಟ್ಟಿ (34) ವಿರುದ್ಧ ಗಡಿಪಾರು ಆದೇಶ ಮಾಡಲಾಗಿದೆ. ಈ ಹಿಂದೆ 48 ಮಂದಿಯ ವಿರುದ್ಧ ಗಡಿಪಾರು ಆದೇಶ ಹೊರಡಿಸಲಾಗಿತ್ತು.

ಇದನ್ನೂ ಓದಿ: ಹುಬ್ಬಳ್ಳಿ: ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿದ್ದ ರೌಡಿಶೀಟರ್‌ ಗಡಿಪಾರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.