ETV Bharat / state

ಪ್ರಜ್ವಲ್ ಪರಾರಿ ಆಗುವರೆಗೆ ರಾಜ್ಯ ಸರ್ಕಾರ ಮಲಗಿತ್ತಾ? ಈ ಪ್ರಕರಣ ಮುಚ್ಚಿಹಾಕುವ ಯತ್ನ ನಡೆದಿದೆ: ಬಸವನಗೌಡ ಯತ್ನಾಳ್ - Lok Sabha Election 2024 - LOK SABHA ELECTION 2024

ದಾವಣಗೆರೆ ನಗರದ ಬಂಟರ ಭವನದಲ್ಲಿ ಲಿಂಗಾಯತ ಪಂಚಮಸಾಲಿ ಸಮಾಜದ ಸಭೆ ನಡೆಯಿತು.

MLA Basavanagowda Yatnal
ಶಾಸಕ ಬಸವನಗೌಡ ಯತ್ನಾಳ್ ಪಂಚಮಸಾಲಿ ಸಮಾಜದ ಕಾರ್ಯಕ್ರಮದಲ್ಲಿ ಮಾತನಾಡಿದರು.
author img

By ETV Bharat Karnataka Team

Published : May 2, 2024, 10:17 AM IST

Updated : May 2, 2024, 12:43 PM IST

ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಮಾಧ್ಯಮದವರೊಂದಿಗೆ ಮಾತನಾಡಿದರು.

ದಾವಣಗೆರೆ: ಪ್ರಜ್ವಲ್ ವಿದೇಶಕ್ಕೆ ಪರಾರಿ ಆಗುವರೆಗೆ ರಾಜ್ಯ ಸರ್ಕಾರ ಮಲಗಿಕೊಂಡಿತ್ತಾ? ಇದನ್ನು ವ್ಯವಸ್ಥಿತವಾಗಿ ಈ ಪ್ರಕರಣ ಮುಚ್ಚಿಹಾಕಲು ಯತ್ನ ನಡೆದಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ರಾಜ್ಯ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದರು.

ದಾವಣಗೆರೆ ನಗರದ ಬಂಟರ ಭವನದಲ್ಲಿ ನಡೆದ ಲಿಂಗಾಯತ ಪಂಚಮಸಾಲಿ ಸಮಾಜದ ಸಭೆ ಬಳಿಕ ಮಾತನಾಡಿದ ಅವರು, ಪ್ರಜ್ವಲ್ ಸಂಸದನಾಗಿದ್ದು ಕಾಂಗ್ರೆಸ್ ಜೆಡಿಎಸ್ ಮೈತ್ರಿ ಅಧಿಕಾರದಲ್ಲಿ, ಆತ ಬಿಜೆಪಿಗೆ ಏನು ಸಂಬಂಧ? 2019ರಲ್ಲಿ ಯಾರ ಮೈತ್ರಿ ವೇಳೆ ಸಂಸದರಾಗಿದ್ದ ಪ್ರಜ್ವಲ್, ಈಗ ತನಿಖೆ ಮಾಡೋರು ಯಾರು, ಕರ್ನಾಟಕದಲ್ಲಿ ಇರುವ ಸರ್ಕಾರ ಯಾವುದು?, ಸಂಸದ ಪರಾರಿ ಆಗುವರೆಗೆ ವರೆಗೆ ರಾಜ್ಯ ಸರ್ಕಾರ ಮಲಗಿಕೊಂಡಿತ್ತಾ ಎಂದು ಪ್ರಶ್ನಿಸಿದರು.

ವ್ಯವಸ್ಥಿತವಾಗಿ ಈ ಪೆನ್​ಡ್ರೈವ್ ಪ್ರಕರಣ ಮುಚ್ಚಿ ಹಾಕಬೇಕು ಅಂತ ಕೆಲವೊಂದು ಅಡ್ಜಸ್ಟ್ಮೆಂಟ್ ರಾಜಕಾರಣಿಗಳ ಉದ್ದೇಶವಿದೆ. ಈ ರಾಜ್ಯದಲ್ಲಿ ಪಿಎಸ್ಐ ಹಗರಣ ಏನಾಯ್ತು, ಏನಾದರೂ ಹೊರಗೆ ಬಿತ್ತಾ, ಗಾಂಜಾ ಅಫೀಮ್ ಕೇಸ್ ಏನಾಯ್ತು, ಪೋಕ್ಸೋ ಎರಡು ಪ್ರಕರಣ ದಾಖಲಾದರೂ ಏನು ಆಗ್ತಿಲ್ಲ. ನೀವು ಅಡ್ಜಸ್ಟ್ಮೆಂಟ್ ರಾಜಕೀಯದಲ್ಲಿ ಇದ್ದೀರಾ, ನಿಮಗೆ ಆಗಲ್ಲಾ ಅಂದ್ರೆ ಸಿಬಿಐಗೆ ಕೊಡಿ, ನಾವು ಸಿಬಿಐಗೆ ಡಿಮಾಂಡ್ ಮಾಡ್ತಾ ಇದ್ದೇವಿ, ನೀವು ಕೊಡ್ತಾ ಇಲ್ಲ. ಚುನಾವಣೆ ಹಿನ್ನೆಲೆ ಈ ಕೆಲಸ ಆಗಿದೆ ಎಂದು ಆರೋಪಿಸಿದರು.

ರಾಜ್ಯದಲ್ಲಿ ಎರಡು ಫ್ಯಾಕ್ಟರಿ: ರಾಜ್ಯದಲ್ಲಿ ಎರಡು ಫ್ಯಾಕ್ಟರಿಗಳಿವೆ. ಅದರಲ್ಲೊಂದು ಕುಮಾರಸ್ವಾಮಿ ಹೇಳಿದ್ದಾರೆ. ಇನ್ನೊಂದು ಫ್ಯಾಕ್ಟರಿ ಹೆಸರು 8ನೇ ತಾರೀಖು ನಾನು ಹೇಳುತ್ತೇನೆ. ಆ ಎರಡು ಫ್ಯಾಕ್ಟರಿಗಳ ಕೆಲಸಾನೆ ಅದು. ಇಬ್ಬರು ಬೇರೆ ಬೇರೆ ಪಾರ್ಟಿಯಲ್ಲಿ ಇದ್ದಾರೆ. ಇಬ್ಬರದು ಸಿಡಿ ಬಿಸಿನೆಸ್ ಒಂದೇ ಇದೆ. ಇವರಿಬ್ಬರೂ ಅಲ್ಕಾ ರಾಜಕಾರಣ ಮಾಡ್ತಾ ಇದ್ದಾರೆ. ಎರಡು ಕುಟುಂಬಗಳು ರಾಜ್ಯದ ರಾಜಕಾರಣ ಹಾಳು ಮಾಡ್ತಿದ್ದಾರೆ. ತನಿಖೆಯಿಂದ ಪೆನ್ ಡ್ರೈವ್ ಯಾರು ಬಿಡುಗಡೆ ಮಾಡಿದ್ದು ಅಂತಾ ಗೊತ್ತಾಗಲಿದೆ.

ಮಹಿಳೆಯರ ಗೌರವ ದೃಷ್ಟಿಯಿಂದ ಗೌಪ್ಯವಾಗಬೇಕಿತ್ತು. ಉದ್ದೇಶಪೂರ್ವಕವಾಗಿ ಚುನಾವಣೆ ವೇಳೆ ಬ್ಲಾಕ್ ಮೇಲ್ ಮಾಡಲು ಬಳಕೆ ಮಾಡಿದ್ದಾರೆ. ಭಯ ಬೀಳಿಸಿ ಆ ಕುಟುಂಬ ಮರ್ಯಾದೆ ಕಳೆಯಲು ಮಾಡಿದ್ದಾರೆ. ಚುನಾವಣೆ ಮುಂಚಿತವಾಗಿಯೇ ಬಿಡುಗಡೆ ಮಾಡಬೇಕಿತ್ತು. ಕಾಂಗ್ರೆಸ್ ಜೆಡಿಎಸ್ ಮೈತ್ರಿ ಇದ್ದಾಗ ಬಿಡುಗಡೆ ಮಾಡಬೇಕಿತ್ತು. ಈಗ ಚುನಾವಣೆ ಉದ್ದೇಶದಿಂದ ಬಿಡುಗಡೆ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ವಚನಾನಂದ ಶ್ರೀ ವಿರುದ್ಧ ವಾಗ್ದಾಳಿ: ಸ್ವಾಮಿಗೆ ಕೆಲಸ ಏನಿದೆ, ಇಷ್ಟು ದಿನ ಕಾಂಗ್ರೆಸ್​​ಗೆ ಓಟ ಹಾಕಲು ಹೇಳಿದ್ದ, ಈಗ ಪ್ರಹ್ಲಾದ್ ಜೋಶಿಗೆ ಪೋನ್ ಮಾಡಿದ್ರಂತೆ, ಆಶೀರ್ವಾದ ಮಾಡ್ತೇನಿ ಬಾ ಅಂದ್ರಂತೆ, ಸಿದ್ದೇಶ್ವರಗೆ ನಾಳೆ ಭೇಟಿಗೆ ಹೇಳಿದ್ದಾರಂತೆ, ಇಲ್ಲಿಯ ವರೆಗೂ ಕೊಟ್ಟಿಲ್ಲ ಈಗ ಹೇಳಿದ್ದಾರಂತೆ ಎಂದು ವಾಗ್ದಾಳಿ ನಡೆಸಿದರು.

ಐದು ಸಲ ಕೇಳಿದ್ರು ಸಿದ್ದೇಶ್ವರ್​ಗೆ ಅವಕಾಶ ಕೊಟ್ಟಿಲ್ಲ, ಇವರೆಲ್ಲ ಹಗರಣದ ಸ್ವಾಮೀಜಿಗಳು, ತುಂಗಾರತಿ 30 ಕೋಟಿ, 10 ಕೋಟಿ ಬಿಎಸ್​​ವೈ, ಬೊಮ್ಮಾಯಿ ಕೊಟ್ಟಿದ್ದು ನಾಲ್ಕುವರೆ, ಈಶ್ವರಪ್ಪ ಕೊಟ್ಟಿದ್ದು, ಡುಪ್ಲಿಕೇಟ್ ಪಿಡಿಒ ಸಹಿ ಮಾಡಿಸಿ ರೊಕ್ಕ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಯಮೃತ್ಯುಂಜಯ ಸ್ವಾಮೀಜಿ ಪರ ಬ್ಯಾಟಿಂಗ್: ಪಂಚಮಸಾಲಿ ಸಮಾಜದವರು ಋಣ ಹೇಳಬೇಕಾಗಿದ್ದು ಕೂಡಲ ಸಂಗಮ ಜಯಮೃತ್ಯುಂಜಯ ಸ್ವಾಮೀಜಿಗೆ ಮಾತ್ರ, ಆದ್ರೆ ಬಿಜೆಪಿಗೆ ಮತ ಹಾಕಬೇಡಿ ಅನ್ನೋಕೆ ಇವರು ಯಾರು ಎಂದು ಪರೋಕ್ಷವಾಗಿ ಹರಿಹರದ ಪಂಚಮಸಾಲಿ ಪೀಠದ ವಚನಾನಂದ ಶ್ರೀಗಳ ವಿರುದ್ಧ ಹರಿಹಾಯ್ದರು.

ನನ್ನ ನಾಲಿಗೆ ಶುದ್ಧ ಇದ್ದಿದ್ರೆ ಮುಖ್ಯಮಂತ್ರಿ ಆಗುತ್ತಿದ್ದೇನು, ಎಲ್ಲಾದರೂ ಪಂಚಮಸಾಲಿ ಮಕ್ಕಳಿಗೆ ಹಾಸ್ಟೇಲ್ ಕಟ್ಟಿದ್ದಾರಾ?,
ಪಂಚಮ ಸಾಲಿ ಜನರಿಗೆ ಏನೂ ಮಾಡಿಲ್ಲ. ನನ್ನ ಹಿಂದೆ ಇಡೀ ಕರ್ನಾಟಕದ ಪಂಚಮಸಾಲಿ ಸಮಾಜದ ಶಕ್ತಿ ಇದೆ. ದಾವಣಗೆರೆ ಕ್ಷೇತ್ರದಲ್ಲಿ ಎರಡು ಲಕ್ಷ ಮತದಾರರು ಪಂಚಮಸಾಲಿಗಳು ಇದ್ದಾರೆ. ನಾವು ಹೋರಾಟ ಮಾಡಿದ್ರ ಫಲವಾಗಿ 2ಡಿ ಮೀಸಲಾತಿ ಸಿಕ್ಕಿದೆ 7% ಮೀಸಲಾತಿ ಸಿಕ್ಕಿದೆ ಎಂದರು.

ಇದನ್ನೂ ಓದಿ:ಹಾಸನ ಪೆನ್​ಡ್ರೈವ್ ಪ್ರಕರಣದ ತನಿಖೆಯಿಂದ ನಿಜ ಸಂಗತಿ ಬಯಲಾಗಲಿದೆ: ವಿನಯ್​ ಕುಲಕರ್ಣಿ - Hasan pen drive case

Last Updated : May 2, 2024, 12:43 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.