ETV Bharat / state

ರಾಜ್ಯದ ವಿದ್ಯುತ್ ಬರ ನೀಗಿಸುವ ಲಿಂಗನಮಕ್ಕಿ ಜಲಾಶಯ ಭರ್ತಿ; ನೀರು ಬಿಡುಗಡೆಗೆ ಕ್ಷಣಗಣನೆ - Linganamakki Reservoir filled

author img

By ETV Bharat Karnataka Team

Published : Jul 31, 2024, 8:58 PM IST

ಲಿಂಗನಮಕ್ಕಿ ಜಲಾಶಯ ಭರ್ತಿಯಾಗಿದೆ. ಮುಂದಿನ ಮೂರು ದಿನ ಭಾರಿ ಮಳೆ ಮುನ್ಸೂಚನೆ ನೀಡಿರುವ ಕಾರಣಕ್ಕೆ ಕೆಪಿಸಿ ಅಧಿಕಾರಿಗಳು ನದಿಗೆ ನೀರು ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ.

linganamakki-reservoir
ಲಿಂಗನಮಕ್ಕಿ ಜಲಾಶಯ (ETV Bharat)

ಶಿವಮೊಗ್ಗ : ರಾಜ್ಯದ ಜಲ ವಿದ್ಯುತ್ ಉತ್ಪಾದನೆಯ ಪ್ರಮುಖ ಜಲಾಶಯವಾದ ಲಿಂಗನಮಕ್ಕಿ ಜಲಾಶಯ ನಾಲ್ಕು ವರ್ಷದ ನಂತರ ಬಹುತೇಕ ಭರ್ತಿಯಾಗಿದೆ. ಇದರಿಂದ ನದಿಗೆ ನೀರು ಬಿಡುಗಡೆ ಮಾಡಲು ಕೆಪಿಸಿ ಅಧಿಕಾರಿಗಳು ಸಿದ್ದತೆ ನಡೆಸಿದ್ದಾರೆ.

ನಾಳೆ ಲಿಂಗನಮಕ್ಕಿ ಜಲಾಶಯದಿಂದ ನದಿಗೆ ನೀರು ಬಿಡುಗಡೆ ಮಾಡಲಾಗುತ್ತದೆ. 1819 ಅಡಿ ಎತ್ತರದ ಜಲಾಶಯದಲ್ಲಿ ಇಂದಿಗೆ 1813 ಅಡಿ ನೀರು ಸಂಗ್ರಹವಾಗಿದೆ. ಅಣೆಕಟ್ಟೆಗೆ 82 ಸಾವಿರ ಕ್ಯೂಸೆಕ್​ನಷ್ಟು ನೀರು ಒಳ ಹರಿವಿದೆ. ಅಲ್ಲದೆ ಜಿಲ್ಲೆಯಲ್ಲಿ ಮುಂದಿನ ಮೂರು ದಿನ ಭಾರಿ ಮಳೆ ಮುನ್ಸೂಚನೆ ನೀಡಿರುವ ಕಾರಣಕ್ಕೆ ಕೆಪಿಸಿ ಅಧಿಕಾರಿಗಳು ನದಿಗೆ ನೀರು ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ.

ಸಾಗರ ತಾಲೂಕು ಕಾರ್ಗಲ್ ಬಳಿ ಲಿಂಗನಮಕ್ಕಿಯಲ್ಲಿ ಶರಾವತಿ ನದಿಗೆ ಅಡ್ಡಲಾಗಿ ಜಲಾಶಯ ನಿರ್ಮಾಣ ಮಾಡಲಾಗಿದೆ. ಈ ಜಲಾಶಯದಲ್ಲಿ 1429.40 ಮೆಗಾ ಯೂನಿಟ್ ವಿದ್ಯುತ್ ಅನ್ನು ಪ್ರತಿ ವರ್ಷ ಉತ್ಪಾದನೆ ಮಾಡಲಾಗುತ್ತದೆ. ಏಷ್ಯಾದಲ್ಲಿಯೇ ಅತಿ ಕಡಿಮೆ ದರದ ಕೇವಲ 40 ಪೈಸೆಗೆ ಒಂದು ಯೂನಿಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ. ಜಲಾಶಯದಲ್ಲಿ ಒಟ್ಟು ನಾಲ್ಕು ಜಲ ವಿದ್ಯುತ್ ಘಟಕಗಳಿವೆ. ಶರಾವತಿ ಕಣಿವೆ ಕೆಳ ಭಾಗ ಹೊನ್ನಾವರದಲ್ಲಿ ಗೇರುಸೂಪ್ಪು ಎಂಬಲ್ಲಿಯು ಸಹ ಜಲ ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ.

ನಾಳೆ ಜಲಾಶಯದಿಂದ ನೀರು ಬಿಡುಗಡೆ ಮಾಡುವ ಕುರಿತು ಕೆಪಿಸಿಯಿಂದ ಶರಾವತಿ ನದಿ ಪಾತ್ರದ ಕಡೆ ಅಲರ್ಟ್ ಘೋಷಣೆ ಮಾಡಲಾಗುತ್ತಿದೆ. ಕೆಪಿಸಿ ತಮ್ಮ ವಾಹನದಲ್ಲಿ ನದಿಗೆ ನೀರು ಬಿಡುಗಡೆ ಮಾಡುವುದರಿಂದ ನದಿ ಬಳಿ ಮನುಷ್ಯರು, ಜಾನುವಾರುಗಳು ಹೋಗದಂತೆ ಎಚ್ಚರಿಕೆಯನ್ನು ನೀಡಲಾಗುತ್ತಿದೆ.

ಲಿಂಗನಮಕ್ಕಿ ಅಣೆಕಟ್ಟಿನ ರೇಡಿಯಲ್ ಗೇಟ್​ಗಳನ್ನು ಕಾರ್ಯಾಚರಣೆ ವಿಧಾನದ ಪ್ರಕಾರ, ದಿನಾಂಕ 01.08.2024 ರ ಬೆಳಿಗ್ಗೆ 10.00 ಗಂಟೆಗೆ ಪ್ರಾರಂಭಿಕವಾಗಿ 10000 ಕ್ಯೂಸೆಕ್ ನೀರನ್ನು ಹೊರಬಿಡಲು ಯೋಜಿಸಲಾಗಿದೆ.

ಒಳಹರಿವಿನ ಆಧಾರದ ಮೇಲೆ ನೀರಿನ ಬಿಡುಗಡೆಯನ್ನು ಹೆಚ್ಚಿಸಲಾಗುವುದು. ಗೇರುಸೊಪ್ಪ ಜಲಾಶಯವು ನೀರಿನ ಸಂಗ್ರಹವನ್ನು ಗರಿಷ್ಠ ಮಟ್ಟದಲ್ಲಿ ಕಾಪಾಡಿ ವಿದ್ಯುತ್ ಉತ್ಪಾದಿಸುವ ಜಲಾಶಯವಾದ್ದರಿಂದ ಹಾಗೂ ಸಂಗ್ರಹಣಾ ಸಾಮರ್ಥ್ಯವು ಕಡಿಮೆಯಿರುವುದರಿಂದ, ಲಿಂಗನಮಕ್ಕಿ ಜಲಾಶಯದಿಂದ ಹೆಚ್ಚುವರಿಯಾಗಿ ಹೊರಬಿಟ್ಟ ನೀರನ್ನು ಗೇರುಸೊಪ್ಪ ಜಲಾಶಯದಲ್ಲಿ ಸಂಗ್ರಹಿಸಲು ಅವಕಾಶವಿರುವುದಿಲ್ಲ. ಆದ್ದರಿಂದ ಅಣೆಕಟ್ಟೆಯ ಸುರಕ್ಷತೆಯ ದೃಷ್ಠಿಯಿಂದ ಹೆಚ್ಚುವರಿ ನೀರನ್ನು ಜಲಾಶಯದಿಂದ ಹೊರಬಿಡಲಾಗುವುದು. ಅಣೆಕಟ್ಟಿನ ಕೆಳಭಾಗದಲ್ಲಿ ವಾಸಿಸುವ ಸಾರ್ವಜನಿಕರಿಗೆ ಪ್ರವಾಹ ಎಚ್ಚರಿಕೆ ಕುರಿತು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ನಾಳೆ ಶರಾವತಿ ನದಿಯ ಲಿಂಗನಮಕ್ಕಿ ಜಲಾಶಯದಿಂದ ನೀರು ಬಿಡುಗಡೆಯ ಕುರಿತು ಸಾಗರ ಉಪವಿಭಾಗಾಧಿಕಾರಿ ಯತೀಶ್ ಆರ್ ಅವರು ಮಾಹಿತಿ ನೀಡಿದ್ದು, 'ತೀರ್ಥಹಳ್ಳಿ, ಹೊಸನಗರ ಹಾಗೂ ಸಾಗರ ಭಾಗದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಲಿಂಗನಮಕ್ಕಿ ಜಲಾಶಯಕ್ಕೆ ಹೆಚ್ಚಿನ ನೀರು ಹರಿದು ಬರುತ್ತಿದೆ‌. ಮುಂದೆ ಪ್ರವಾಹ ಪರಿಸ್ಥಿತಿ ಉಂಟಾಗಬಾರದೆಂದು ಮುಂಜಾಗ್ರತ ಕ್ರಮವಾಗಿ ನದಿಗೆ ನೀರು ಬಿಡಲಾಗುತ್ತಿದೆ.

ನಾಲ್ಕು ವರ್ಷದ ನಂತರ ಲಿಂಗನಮಕ್ಕಿ ಜಲಾಶಯ ತುಂಬಿದೆ. ಇದರಿಂದ ನಾಳೆ ಬೆಳಗ್ಗೆ 10 ಗಂಟೆಗೆ ನೀರು ಬಿಡುಗಡೆ ಮಾಡಲಾಗುತ್ತಿದೆ. ಇದರಿಂದ ನದಿ ಪಾತ್ರದಲ್ಲಿ ಜನ, ಜಾನುವಾರುಗಳನ್ನು ಬಿಡಬಾರದು. ಜನ ಸುರಕ್ಷಿತ ಸ್ಥಳದಲ್ಲಿ ಇರಬೇಕು' ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : 1804 ಅಡಿ ತಲುಪಿದ ಲಿಂಗನಮಕ್ಕಿ ಡ್ಯಾಂ ನೀರಿನಮಟ್ಟ: ಜಲಾಶಯದ ಗೇಟ್ ಪೂಜೆ ಸಲ್ಲಿಸಿದ ಅಧಿಕಾರಿಗಳು - Linganamakki Dam Water Level

ETV Bharat Logo

Copyright © 2024 Ushodaya Enterprises Pvt. Ltd., All Rights Reserved.