ETV Bharat / state

ಹೌಸಿಂಗ್ ಫೈನಾನ್ಸ್​ ಲೋನ್ ಮ್ಯಾನೇಜರ್​ ಮೇಲೆ ಹಲ್ಲೆ, ಕಿಡ್ನಾಪ್​: ಸಿಸಿಟಿವಿಯಲ್ಲಿ ದೃಶ್ಯ ಸೆರೆ, ಇಬ್ಬರು ಅರೆಸ್ಟ್​ - loan manager assaulted CCTV footage - LOAN MANAGER ASSAULTED CCTV FOOTAGE

ದಾವಣಗೆರೆ ನಗರದಲ್ಲಿ ಎಲ್​ಐಸಿ ಹೌಸಿಂಗ್ ಫೈನಾನ್ಸ್​ನ ಲೋನ್ ವಿಭಾಗದ ವ್ಯವಸ್ಥಾಪಕನ ಮೇಲೆ ಹಲ್ಲೆ ಮಾಡಿ, ಅಪಹರಿಸಿರುವ ಘಟನೆಯ ದೃಶ್ಯಗಳು ಸೆರೆಯಾಗಿವೆ.

LIC HOUSING FINANCE LOAN MANAGER ASSAULTED AND KIDNAPPED IN DAVANAGERE
ದಾವಣಗೆರೆ: ಲೋನ್ ಮ್ಯಾನೇಜರ್​ ಕಿಡ್ನಾಪ್​ ದೃಶ್ಯ ಸಿಸಿಟಿವಿಯಲ್ಲಿ ಸೆರೆ (ETV Bharat)
author img

By ETV Bharat Karnataka Team

Published : Jun 1, 2024, 6:22 PM IST

ದಾವಣಗೆರೆ: ಲೋನ್ ಮ್ಯಾನೇಜರ್​ ಕಿಡ್ನಾಪ್​ ದೃಶ್ಯ ಸಿಸಿಟಿವಿಯಲ್ಲಿ ಸೆರೆ (ETV Bharat)

ದಾವಣಗೆರೆ: ಗೃಹ ಸಾಲದ ವಿಚಾರಕ್ಕೆ ಸಂಬಂಧಿಸಿದಂತೆ ಎಲ್​ಐಸಿ ಹೌಸಿಂಗ್ ಫೈನಾನ್ಸ್​ನ ಲೋನ್ ವಿಭಾಗದ ವ್ಯವಸ್ಥಾಪಕನ ಮೇಲೆ ಹಲ್ಲೆ ಮಾಡಿ, ಅವರನ್ನು ಅಪಹರಿಸಿರುವ ಘಟನೆ ಜಿಲ್ಲೆಯಲ್ಲಿ ಮೇ 31ರಂದು ಸಂಜೆ ನಡೆದಿದೆ. ಈ ವಿಷಯ ತಿಳಿದು ತಕ್ಷಣವೇ ಕಾರ್ಯ ಪ್ರವೃತ್ತರಾದ ಪೊಲೀಸರು ವ್ಯವಸ್ಥಾಪಕನನ್ನು ರಕ್ಷಣೆ ಮಾಡಿದ್ದಾರೆ. ಅಲ್ಲದೇ, ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

ಶರಣ್ ಎಂಬುವರೇ ಹಲ್ಲೆಗೊಳಗಾಗಿ ಅಪಹರಣಕ್ಕೆ ಒಳಗಾದವರು. ಪೊಲೀಸರು ಹೊನ್ನಾಳಿಯ ವಡ್ಡಿನಕೆರೆ ಹಳ್ಳದ ಬಳಿ ರಕ್ಷಿಸಿದ್ದಾರೆ. ಇವರಿಗೆ ಕೆಲ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಹಲ್ಲೆ, ಅಪಹರಣ ಹಲ್ಲೆ ಸಂಬಂಧ ಶಿಕಾರಿಪುರ ಮೂಲದ ನಾಗರಾಜ, ನಾಸಿರ್ ಎಂಬುವರನ್ನು ಬಂಧಿಸಲಾಗಿದೆ. ಚಂದನ್ ಮತ್ತು ವಿಶ್ವನಾಥ್ ಎಂಬ ಮತ್ತಿಬ್ಬರು ತಲೆ ಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಿಸಿಟಿವಿಯಲ್ಲಿ ಘಟನೆಯ ಸೆರೆ: ದಾವಣಗೆರೆ ನಗರದ ಪಿಬಿ ರಸ್ತೆಯಲ್ಲಿ ಎಲ್​ಐಸಿ ಹೌಸಿಂಗ್ ಫೈನಾನ್ಸ್​ ಕಚೇರಿ ಇದೆ. ಹರಿಹರದಲ್ಲಿರುವ ಮನೆಯೊಂದರ ಮೇಲೆ ಸಾಲ 49.60 ಲಕ್ಷ ರೂ. ಸಾಲ ಮಂಜೂರಾಗಿತ್ತು. ಆದರೆ, ಕೊಟ್ಟ ದಾಖಲೆ ನಕಲಿ ಎಂದು ತಿಳಿದು ಬಂದಿತ್ತು. ಹೀಗಾಗಿ 49.60 ಲಕ್ಷದ ಚೆಕ್​ನ್ನು ವಿತರಣೆ ಮಾಡಿಲ್ಲ. ಇದರಿಂದ ಮೇ 31ರಂದು ಕಚೇರಿಗೆ ಬಂದು ಆರೋಪಿಗಳು ಗಲಾಟೆ ಮಾಡಿದ್ದಾರೆ. ಅಲ್ಲದೇ, ಕಚೇರಿಯಿಂದ ಕೆಳಗಡೆ ಕರೆದುಕೊಂಡು ಬಂದು ವ್ಯವಸ್ಥಾಪಕರಾದ ಶರಣ್ ಅವರ ಮೇಲೆ ಹಲ್ಲೆ ಮಾಡಿದ್ಧಾರೆ. ನಂತರ ಅವರು ಕಣ್ಣಿಗೆ ಬಟ್ಟೆ ಕಟ್ಟಿ ಕಾರಿನಲ್ಲಿ ಅಪಹರಿಸಿದ್ದಾರೆ. ಇದರ ದೃಶ್ಯಗಳು ಸಹ ಸಿಸಿಟಿವಿಯಲ್ಲಿ ಸೆರೆಯಾಗಿವೆ.

ಮತ್ತೊಂದೆಡೆ, ಈ ಬಗ್ಗೆ ಕಂಟ್ರೋಲ್​ ರೂಮ್​ಗೆ ಸಿಕ್ಕ ಮಾಹಿತಿ ಮೇರೆಗೆ ಪೊಲೀಸರು ಕೂಡಲೇ ಕಾರ್ಯ ಪ್ರವೃತ್ತರಾಗಿದ್ದಾರೆ. ಶರಣ್ ಅವರನ್ನು ಅಪಹರಣದ ಕಾರು ಹೊನ್ನಾಳಿ ಕಡೆಗೆ ಹೋಗುತ್ತಿರುವುದು ಅರಿತು ಹೊನ್ನಾಳಿ ಪೊಲೀಸರು ಇನ್ಸ್​ಪೆಕ್ಟರ್ ಮುದ್ದುರಾಜ್ ನೇತೃತ್ವದಲ್ಲಿ ವಡ್ಡಿನಕೆರೆ ಬಳಿ ಕಾರನ್ನು ಅಡ್ಡಗಟ್ಟಿದ್ದಾರೆ. ಶರಣ್ ಅವರನ್ನು ರಕ್ಷಣೆ ಮಾಡಿ, ಆರೋಪಿಗಳಾದ ನಾಗರಾಜ್ ಹಾಗೂ ನಾಸಿರ್​ನನ್ನು ಬಂಧಿಸಿದ್ದಾರೆ. ಈ ಸಂಬಂಧ ದಾವಣಗೆರೆಯ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಮಾತನಾಡಿ, ''ಹೌಸಿಂಗ್ ಲೋನ್ ವಿಚಾರವಾಗಿ ಕೆಲವರು ವ್ಯವಸ್ಥಾಪಕರಾದ ಶರಣ್ ಅವರೊಂದಿಗೆ ಗಲಾಟೆ ಮಾಡಿ ಹಲ್ಲೆ ಮಾಡಿ ಅಪಹರಣ ಮಾಡಿದ್ದರು. ಈ ಬಗ್ಗೆ ತಕ್ಷಣ ಎಚ್ಚೆತ್ತುಕೊಂಡ ಪೊಲೀಸ್​ ಸಿಬ್ಬಂದಿ ನಾಕಾ ಬಂಧಿ ಮಾಡಿ ಆರೋಪಿಗಳನ್ನು ಹಿಡಿದು, ಶರಣ್​ ಅವರನ್ನು ರಕ್ಷಣೆ ಮಾಡಿದ್ದಾರೆ. ಅವರಿಗೆ ಕೆಲ ಗಾಯಗಳಾಗಿವೆ. ಯಾವುದೇ ಚಾಕುವಿನಿಂದ ಹಲ್ಲೆ ಮಾಡಲಾಗಿಲ್ಲ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ'' ಎಂದು ವಿವರಿಸಿದರು.

ಇದನ್ನೂ ಓದಿ: ದಾವಣಗೆರೆ: ಡೆತ್ ನೋಟ್ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ; ಕೇಸ್​ ದಾಖಲು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.