ETV Bharat / state

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಲೆವೆಲ್ 3ರ ಮಾನ್ಯತೆ - International Airport

ವಿಮಾನ ನಿಲ್ದಾಣದ ಸೇವಾ ವಿನ್ಯಾಸ, ನಾವೀನ್ಯತೆ, ವಿಮಾನ ನಿಲ್ದಾಣ ಸಂಸ್ಕೃತಿ, ಆಡಳಿತ, ಕಾರ್ಯಾಚರಣೆ ಸುಧಾರಣೆ, ಮಾಪನ, ಗ್ರಾಹಕರ ತಿಳಿವಳಿಕೆ ಮತ್ತು ಕಾರ್ಯತಂತ್ರದ ಮೇಲೆ ಲೆವೆಲ್​ 3 ಮಾನ್ಯತೆ ನೀಡಲಾಗಿದೆ.

Mangalore International Airport
ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ
author img

By ETV Bharat Karnataka Team

Published : Feb 16, 2024, 9:42 AM IST

ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಏರ್ಪೋರ್ಟ್ ಕೌನ್ಸಿಲ್ ಇಂಟರ್ನ್ಯಾಷನಲ್ (ಎಸಿಐ) ನಿಂದ ಲೆವೆಲ್ 3 ಏರ್ಪೋರ್ಟ್ ಕಸ್ಟಮರ್ ಎಕ್ಸ್ಪೀರಿಯನ್ಸ್ ಮಾನ್ಯತೆ ಪಡೆದುಕೊಂಡಿದೆ. ಎಸಿಐ ಹೊರಡಿಸಿದ ಮಾನ್ಯತೆಯು ಒಂದು ವರ್ಷದವರೆಗೆ ಮಾನ್ಯವಾಗಿರುತ್ತದೆ. ವಿಮಾನ ನಿಲ್ದಾಣವು ಡಿಸೆಂಬರ್ 2022 ರಲ್ಲಿ ಲೆವೆಲ್ 2 ಮಾನ್ಯತೆ ಪಡೆದಿತ್ತು.

ಲೆವೆಲ್ 3 ಮಾನ್ಯತೆಯನ್ನು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸೇವಾ ವಿನ್ಯಾಸ, ನಾವೀನ್ಯತೆ, ವಿಮಾನ ನಿಲ್ದಾಣ ಸಂಸ್ಕೃತಿ, ಆಡಳಿತ, ಕಾರ್ಯಾಚರಣೆ ಸುಧಾರಣೆ, ಮಾಪನ, ಗ್ರಾಹಕರ ತಿಳಿವಳಿಕೆ ಮತ್ತು ಕಾರ್ಯತಂತ್ರದ ಮೇಲೆ ನೀಡಲಾಗಿದೆ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು 5 ಮಿಲಿಯನ್ ಪ್ರಯಾಣಿಕರ ವಿಭಾಗದಲ್ಲಿ ಈ ಮೈಲಿಗಲ್ಲು ತಲುಪಿದ ಭಾರತದ ಮೊದಲ ವಿಮಾನ ನಿಲ್ದಾಣವಾಗಿದೆ ಎಂದು ವಿಮಾನ ನಿಲ್ದಾಣದ ವಕ್ತಾರರು ತಿಳಿಸಿದ್ದಾರೆ.

2024 ರ ಸೆಪ್ಟೆಂಬರ್ 24 ರಿಂದ 26 ರವರೆಗೆ ಅಮೆರಿಕದ ಅಟ್ಲಾಂಟಾದಲ್ಲಿ ನಡೆಯಲಿರುವ ವಾರ್ಷಿಕ ಎಸಿಐ ಗ್ರಾಹಕ ಅನುಭವ ಜಾಗತಿಕ ಶೃಂಗಸಭೆಯಲ್ಲಿ ನೀಡಲಾಗುವ ಈ ಮಾನ್ಯತೆಯನ್ನು ಸಾಧಿಸಿದ್ದಕ್ಕಾಗಿ ಎಸಿಐ - ಎಸಿಐ ವರ್ಲ್ಡ್​ನ ಮಹಾನಿರ್ದೇಶಕ ಮತ್ತು ಸಿಇಒ ಲೂಯಿಸ್ ಫೆಲಿಪ್ ಡಿ ಒಲಿವೇರಾ ಅವರು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಅಭಿನಂದಿಸಿದ್ದಾರೆ. ವಿಮಾನ ನಿಲ್ದಾಣವು ಈಗ ಮಾನ್ಯತೆಯ ಹಂತ 4 ರ ಮೇಲೆ ಕಣ್ಣಿಟ್ಟಿದೆ ಎಂದು ಮಂಗಳೂರು ಅಂತಾರಾಷ್ಟ್ರೀಯ ವಿಮಾನ‌ ನಿಲ್ದಾಣದ ಪ್ರಕಟಣೆ ತಿಳಿಸಿದೆ.

ಇದನ್ನೂ ಓದಿ: ವರ್ಷಾಂತ್ಯಕ್ಕೆ ದಾಖಲೆಯ ಪ್ರಯಾಣ ಕಂಡ ಮಂಗಳೂರು ವಿಮಾನ ನಿಲ್ದಾಣ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.