ETV Bharat / state

ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ತನಿಖೆ ಎದುರಿಸಲಿ: ಸಿ.ಟಿ.ರವಿ - C T Ravi

ಮುಡಾ ಹಗರಣದ ನೈತಿಕ ಹೊಣೆಯನ್ನು ಮುಖ್ಯಮಂತ್ರಿಗಳೇ ಹೊರಬೇಕು ಎಂದು ಎಂಎಲ್​ಸಿ ಸಿ.ಟಿ.ರವಿ ಆಗ್ರಹಿಸಿದರು.

ಸಿ.ಟಿ. ರವಿ
ಸಿ.ಟಿ.ರವಿ (ETV Bharat)
author img

By ETV Bharat Karnataka Team

Published : Aug 7, 2024, 4:14 PM IST

Updated : Aug 7, 2024, 4:27 PM IST

ಸಿ.ಟಿ.ರವಿ (ETV Bharat)

ಮೈಸೂರು: ಮಾದರಿ ನಗರ ನಿರ್ಮಾಣಕ್ಕಾಗಿ ಮುಡಾ(ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ) ಸೃಷ್ಟಿಯಾಗಿತ್ತು. ಅಕ್ರಮ ನಡೆಸುವುದಕ್ಕೆ ಮುಡಾ ಅಲ್ಲ. ಹೀಗಾಗಿ ಮುಖ್ಯಮಂತ್ರಿಗಳೇ ನೀವು ನೈತಿಕ ಹೊಣೆ ಹೊರಬೇಕು. ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ತನಿಖೆ ಎದುರಿಸಿ ಎಂದು ವಿಧಾನ ಪರಿಷತ್​ ಸದಸ್ಯ ಸಿ.ಟಿ.ರವಿ ಆಗ್ರಹಿಸಿದ್ದಾರೆ.

ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಡಾ ಹಗರಣದಲ್ಲಿ ಬಗ್ಗೆ ಪ್ರತಿಕ್ರಿಯಿಸಿ, ನಿಮ್ಮ ಮೇಲೆ ಭ್ರಷ್ಟಾಚಾರದ ಆರೋಪ ಬಂದಾಗ, ನೀವೇ ನೇಮಕ ಮಾಡಿದ ಆಯೋಗ ಯಾವ ರೀತಿ ವರದಿ ಕೊಡಬಹುದು?. ಈಗ ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣದಲ್ಲಿ ಎಸ್​ಐಟಿ ಕೊಟ್ಟ ವರದಿ ರೀತಿಯಲ್ಲೇ ಇದನ್ನು ಕೊಡುತ್ತದೆ. ಅಲ್ಲಿ ನಾಗೇಂದ್ರ, ದದ್ದಲ್​ ಹೆಸರು ಇಲ್ಲ. ನಾಗೇಂದ್ರ ಮತ್ತು ದದ್ದಲ್​ ಜೀವ ಬೆದರಿಕೆ ಹಾಕುತ್ತಿದ್ದಾರೆ ಎಂದು ಸತ್ಯನಾರಾಯಣ ವರ್ಮ ನ್ಯಾಯಾಧೀಶರ ಮುಂದೆ ಹೇಳಿಕೆ ನೀಡಿದ್ದಾರೆ ಎಂದು ಹೇಳಿದರು.

ಮುಡಾ ಹಗರಣದ ತನಿಖೆ ‌ಹಾಲಿ ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್​ ನ್ಯಾಯಾಧೀಶರಿಂದ ಹಾಗೂ ಸಿಬಿಐನಿಂದ ಆಗಬೇಕು. ನೀವು ಬಚಾವ್ ಆಗಲು ಯಡಿಯೂರಪ್ಪನವರತ್ತ ಬೂಟ್ಟು ಮಾಡಬೇಡಿ. ಯಡಿಯೂರಪ್ಪ ತಪ್ಪು ಮಾಡಿದ್ದರೂ ಶಿಕ್ಷೆಯಾಗಲಿ. ಹೆಚ್.ಡಿ‌.ಕುಮಾರಸ್ವಾಮಿ ತಪ್ಪು ಮಾಡಿದ್ದರೂ ಶಿಕ್ಷೆ ಆಗಲಿ. ಈ ಹಗರಣದಲ್ಲಿ ನಿಷ್ಪಕ್ಷಪಾತ ತನಿಖೆ ಅಗಬೇಕು ಎಂದು ಒತ್ತಾಯಿಸಿದರು.

ರೀಡೂ ಪಿತಾಮಹ ಯಾರು?: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ನೀವು ಭ್ರಷ್ಟಾಚಾರದ ಪೋಷಕರು ಹಾಗೂ ಫಲಾನುಭವಿಗಳು ಹೌದು. ನಿಮಗೆ ಸತ್ಯ ಎದುರಿಸುವ ಧೈರ್ಯವಿಲ್ಲ, ಆದ್ದರಿಂದ ‌ನೀವು ಪಲಾಯನವಾದಿ ಆಗಿದ್ದೀರಿ. ಸಿಎಂ ಸಿದ್ದರಾಮಯ್ಯ ನನ್ನ ವಿರುದ್ಧ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲ ಅಂತಾರೆ. ಹಾಗಾದರೆ ರೀಡೂ ಪಿತಾಮಹ ಯಾರು?. ರೀಡೂ ಹೆಸರಿನಲ್ಲಿ 884 ಎಕರೆ ಡಿನೋಟಿಫಿಕೇಷನ್ ಮಾಡಲಾಯಿತು. ಇದು ಅಕ್ರಮ ಅಲ್ವಾ ಎಂದು ಪ್ರಶ್ನಿಸಿದರು.

ಇದನ್ನೂ ಓದಿ: 'ಸಿದ್ದರಾಮಯ್ಯನವರ ರಾಜೀನಾಮೆ ಕೇಳಲು ಬಿಜೆಪಿಯವರಿಗೆ ಯಾವುದೇ ಅಧಿಕಾರವಿಲ್ಲ' - Madhu Bangarappa

Last Updated : Aug 7, 2024, 4:27 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.