ETV Bharat / state

ಮಾಗಡಿ ಪಟ್ಟಣಕ್ಕೆ ಬಂದ ಚಿರತೆಗಳು - CCTV VIDEO: ರಾತ್ರಿ ಮನೆಯಿಂದ ಹೊರಬರದಂತೆ ಜನರಿಗೆ ಸೂಚನೆ - Leopard in Magadi

ಮಾಗಡಿಯಲ್ಲಿ ಮೂರು ಚಿರತೆಗಳು ಪ್ರತ್ಯಕ್ಷವಾಗಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅರಣ್ಯ ಇಲಾಖೆ ಬೋನ್ ಇಟ್ಟು ಚಿರತೆಗಳ ಸೆರೆಗೆ ಮುಂದಾಗಿದೆ. ಜೊತೆಗೆ ರಾತ್ರಿವೇಳೆ ಮನೆಯಿಂದ ಹೊರಬರದಂತೆ ಜನರಿಗೆ ಎಚ್ಚರಿಕೆ ನೀಡಿದೆ.

ಮಾಗಡಿ ಪಟ್ಟಣದಲ್ಲಿ ಚಿರತೆಗಳು ಪ್ರತ್ಯಕ್ಷ
ಮಾಗಡಿ ಪಟ್ಟಣದಲ್ಲಿ ಚಿರತೆಗಳು ಪ್ರತ್ಯಕ್ಷ (ETV Bharat)
author img

By ETV Bharat Karnataka Team

Published : Aug 31, 2024, 7:36 PM IST

ಮಾಗಡಿ ಪಟ್ಟಣದಲ್ಲಿ ಚಿರತೆಗಳು ಪ್ರತ್ಯಕ್ಷ (ETV Bharat)

ರಾಮನಗರ: ಮಾಗಡಿ ಪಟ್ಟಣದಲ್ಲೇ ಚಿರತೆಗಳು ಕಂಡುಬಂದಿವೆ. ಪಟ್ಟಣದಲ್ಲಿ ರಾತ್ರಿ ವೇಳೆ ಮೂರು ಚಿರತೆಗಳು ಸಂಚಾರ ಮಾಡಿರುವುದು ಸಿಸಿ‌ ಕ್ಯಾಮರಾದಲ್ಲಿ ಸೆರೆ ಸಿಕ್ಕಿದ್ದು, ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ.

ರಾಮನಗರ ಜಿಲ್ಲೆಯ ಮಾಗಡಿ ಪಟ್ಟಣದ 3ನೇ ವಾರ್ಡಿನಲ್ಲಿ ಒಂದೇ ಕಡೆ ಮೂರು ಚಿರತೆಗಳು ಸಾಕು ಕಂಡುಬಂದಿರುವುದು ಸಿಸಿಟಿವಿ ಕ್ಯಾಮರಾದಲ್ಲಿ ಕಂಡುಬಂದಿದೆ. ಆಗಸ್ಟ್ 30ರ ರಾತ್ರಿ 10 ಗಂಟೆ ಸುಮಾರಿಗೆ ಚಿರತೆಗಳು ಕ್ಯಾಮರಾದಲ್ಲಿ ಕಂಡಬಂದಿವೆ. ಇದರಿಂದ ಪಟ್ಟಣದ ಜನರು ಆತಂಕ ಪಡುವಂತಾಗಿದ್ದು, ಕೂಡಲೇ ಅರಣ್ಯ ಇಲಾಖೆ ಚಿರತೆಗಳನ್ನು ಸೆರೆ ಹಿಡಿಯುವ ಕೆಲಸ ಮಾಡಬೇಕೆಂದ ಅರಣ್ಯ ಇಲಾಖೆಗೆ ಮನವಿ ಮಾಡಿದ್ದಾರೆ.

ಚಿರತೆ ಕಂಡಲ್ಲಿ ಬೋನು ಇಟ್ಟ ಅರಣ್ಯಾಧಿಕಾರಿಗಳು: ಇನ್ನು ಚಿರತೆ ಪ್ರತ್ಯಕ್ಷಗೊಂಡ ಸ್ಥಳದಲ್ಲಿ ಬೋನು ಇಡಲಾಗಿದ್ದು, ಆದಷ್ಟು ಬೇಗ ಚಿರತೆ ಸೆರೆ ಹಿಡಿಯುವುದಾಗಿ ಅರಣ್ಯಾಧಿಕಾರಿಗಳು ಭರವಸೆ ನೀಡಿದ್ದಾರೆ.

ರಾತ್ರಿ ಮನೆಯಿಂದ ಹೊರಬರದಂತೆ ಜನರಿಗೆ ಸೂಚನೆ: ಚಿರತೆ ಕಂಡುಬಂದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆಯಾಗಿ ರಾತ್ರಿ ವೇಳೆಯಲ್ಲಿ ಮನೆಯಿಂದ ಹೊರ ಬರದಂತೆ ಈಗಾಗಲೇ ಅರಣ್ಯಾಧಿಕಾರಿಗಳು ಜನರಿಗೆ ಸೂಚಿಸಿದ್ದಾರೆ. ಜೊತೆಗೆ ಒಬ್ಬಂಟಿಯಾಗಿ ಮಕ್ಕಳನ್ನ ರಾತ್ರಿ ವೇಳೆ ಮನೆಯಿಂದ ಹೊರ ಕಳಿಸದಂತೆ ಮುನ್ನೆಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಮುಂಗಾರು ಆರ್ಭಟ: ಮೂರು ದಿನ ಭಾರೀ ಮಳೆ ಸಾಧ್ಯತೆ, ನಿಮ್ಮ ಜಿಲ್ಲೆಯ ಹವಾಮಾನ ವರದಿ ಹೀಗಿದೆ - Karnataka Rain Forecast

ಇದನ್ನೂ ಓದಿ: ಮಿಂಚು ಎಂದರೇನು?, ಮಳೆಗಾಲದಲ್ಲಿ ಭೂಮಿಗೆ ಅಪ್ಪಳಿಸುವುದೇಕೆ? - Information About Lightning

ETV Bharat Logo

Copyright © 2024 Ushodaya Enterprises Pvt. Ltd., All Rights Reserved.