ETV Bharat / state

ಬೆಳಗಾವಿ: ಜಮೀನು ವ್ಯಾಜ್ಯದ ಕಲಹ, ದೇವಸ್ಥಾನದಲ್ಲಿ ಮಲಗಿದ್ದ ವ್ಯಕ್ತಿಯ ಭೀಕರ ಕೊಲೆ - MURDER CASE - MURDER CASE

ಜಮೀನು ವ್ಯಾಜ್ಯ ಓರ್ವನ ಕೊಲೆಯಲ್ಲಿ ಅಂತ್ಯವಾದ ಘಟನೆ ಗೋಕಾಕ್​ ತಾಲೂಕಿನಲ್ಲಿ ನಡೆದಿದೆ. ದೇವಸ್ಥಾನದಲ್ಲಿ ಹಾಡಹಗಲೇ ನೆತ್ತರು ಹರಿದಿದ್ದು, ಗ್ರಾಮಸ್ಥರನ್ನು ಬೆಚ್ಚಿಬೀಳಿಸಿದೆ. ಕೊಲೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

MURDER CASE
ವ್ಯಕ್ತಿಯ ಭೀಕರ ಕೊಲೆ (ETV Bharat)
author img

By ETV Bharat Karnataka Team

Published : Sep 4, 2024, 3:16 PM IST

ಬೆಳಗಾವಿ: ಇಬ್ಬರ ನಡುವಿನ ಜಮೀನಿನ ಸೀಮೆ ಜಾಗದ ವ್ಯಾಜ್ಯ ಓರ್ವನ ಭೀಕರ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಗೋಕಾಕ್​ ತಾಲೂಕಿನ ಮಮದಾಪುರ ಗ್ರಾಮದಲ್ಲಿ ಇಂದು ನಡೆದಿದೆ.

ದೇವಸ್ಥಾನ ಕಟ್ಟೆಯ ಮೇಲೆ ಮಲಗಿದ್ದ ವ್ಯಕ್ತಿಯನ್ನು ಅಟ್ಟಾಡಿಸಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಮಡ್ಡೆಪ್ಪ ಯಲ್ಲಪ್ಪ ಬಾನಸಿ (47) ಕೊಲೆಯಾದ ವ್ಯಕ್ತಿ. ಭೀರಪ್ಪ ಸಿದ್ದಪ್ಪ ಸುಣಧೋಳಿ ಕೊಲೆ ಆರೋಪಿ.

ಮಮದಾಪುರ ಗ್ರಾಮದ ಭೀರಸಿದ್ದೇಶ್ವರ ದೇವಸ್ಥಾನದ ಕಟ್ಟೆಯ ಮೇಲೆ ಮಲಗಿದ್ದಾಗಲೆ ಮಡ್ಡೆಪ್ಪನನ್ನು ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ದೇವಸ್ಥಾನದ ಆವರಣದಲ್ಲಿರುವ ಸಿಸಿ ಕ್ಯಾಮರಾದಲ್ಲಿ ಭಯಾನಕ ಕೊಲೆ ದೃಶ್ಯ ಸೆರೆಯಾಗಿದೆ.

ಹಲವು ವರ್ಷಗಳಿಂದ ವ್ಯಾಜ್ಯ; ಜಮೀನಿನ ಸೀಮೆ ಜಾಗಕ್ಕಾಗಿ ಹಲವು ವರ್ಷಗಳಿಂದ ಮಡೆಪ್ಪ-ಭೀರಪ್ಪ ಮಧ್ಯೆ ಗಲಾಟೆ ಇತ್ತು. ಜಮೀನಿನ ಸೀಮೆಗೆ ಕಲ್ಲು ಇರಿಸಿದ್ದನ್ನು ಮಡ್ಡೆಪ್ಪ ತೆರವುಗೊಳಿಸಿದ್ದ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಭೀರಪ್ಪನಿಗೆ ಮಡ್ಡೆಪ್ಪ ಬೆದರಿಕೆ ಹಾಕಿದ್ದ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.

ಮಡ್ಡೆಪ್ಪ ದೇವಸ್ಥಾನ ಕಟ್ಟೆಯ ಮೇಲೆ ಮಲಗಿದ್ದಾಗ ಸಮಯ ಸಾಧಿಸಿ ಭೀರಪ್ಪ ಹತ್ಯೆಗೈದಿದ್ದಾನೆ‌. ಬಿಡಿಸಿಕೊಳ್ಳಲು ಸ್ಥಳೀಯರು ಧಾವಿಸಿ ಬಂದರೂ, ಅಟ್ಟಾಡಿಸಿಕೊಂಡು ಬಂದು ಮಡ್ಡೆಪ್ಪನನ್ನು ಭೀರಪ್ಪ ಹರಿತವಾದ ಆಯುಧದಿಂದ ಕೊಲೆ ಮಾಡಿದ್ದಾನೆ.

ತೀವ್ರ ರಕ್ತಸ್ರಾವದಿಂದ ಕುಸಿದು ಬಿದ್ದಿದ್ದ ಭೀರಪ್ಪನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಿಸದೇ ಮಡ್ಡೆಪ್ಪ ಉಸಿರು ಚೆಲ್ಲಿದ್ದಾನೆ. ಬಳಿಕ ಆರೋಪಿ ಭೀರಪ್ಪನನ್ನು ಗ್ರಾಮಸ್ಥರು ಕಂಬಕ್ಕೆ ಕಟ್ಟಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಗೋಕಾಕ್ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: ರೇಣುಕಾಸ್ವಾಮಿ ಹತ್ಯೆ ಪ್ರಕರಣ; ಕೋರ್ಟ್​ಗೆ 231 ಸಾಕ್ಷ್ಯಗಳನ್ನೊಳಗೊಂಡ 3,991 ಪುಟಗಳ ಚಾರ್ಜ್‌ಶೀಟ್ ಸಲ್ಲಿಕೆ - Renukaswamy Murder Case

ETV Bharat Logo

Copyright © 2025 Ushodaya Enterprises Pvt. Ltd., All Rights Reserved.