ETV Bharat / state

ಲಾಲ್ ಬಾಗ್ ಪುಷ್ಪ ಪ್ರದರ್ಶನ ಅಂತ್ಯ: 9 ಲಕ್ಷಕ್ಕೂ ಅಧಿಕ ಪ್ರವಾಸಿಗರ ಭೇಟಿ, ಬಂದ ಆದಾಯವೆಷ್ಟು? - Lalbagh flower show - LALBAGH FLOWER SHOW

ಆಗಸ್ಟ್​​​​ 8 ರಿಂದ ಆಗಸ್ಟ್​ 19 ರ ವರೆಗೆ ನಡೆದ ಲಾಲ್ ಬಾಗ್ ಪುಷ್ಪ ಪ್ರದರ್ಶನಕ್ಕೆ ಒಟ್ಟು 9 ಲಕ್ಷಕ್ಕೂ ಅಧಿಕ ಪ್ರವಾಸಿಗರ ಭೇಟಿ ನೀಡಿದ್ದು, 3 ಕೋಟಿಗೂ ಅಧಿಕ ಹಣ ಸಂಗ್ರಹವಾಗಿದೆ.

ಲಾಲ್ ಬಾಗ್ ಪುಷ್ಪ ಪ್ರದರ್ಶನ ಅಂತ್ಯ
ಲಾಲ್ ಬಾಗ್ ಪುಷ್ಪ ಪ್ರದರ್ಶನ ಅಂತ್ಯ (ETV Bharat)
author img

By ETV Bharat Karnataka Team

Published : Aug 20, 2024, 7:52 AM IST

ಬೆಂಗಳೂರು: ಆಗಸ್ಟ್​​​​ 8ರಿಂದ ಆಗಸ್ಟ್​​​​ 19ರ ವರೆಗೆ ಆಯೋಜಿಸಲಾಗಿದ್ದ ಪುಷ್ಪ ಪ್ರದರ್ಶನಕ್ಕೆ ಸೋಮವಾರ ತೆರೆ ಬಿದ್ದಿದೆ. ಈ ವೇಳೆ 9 ಲಕ್ಷ ಜನ ವೀಕ್ಷಕರಿಂದ 3 ಕೋಟಿಗೂ ಅಧಿಕ ಆದಾಯ ಸಂಗ್ರಹವಾಗಿದೆ.

78ನೇ ಸ್ವಾತಂತ್ರ್ಯೋತ್ಸವದ ಹಿನ್ನೆಲೆ ಆಯೋಜಿಸಲಾಗಿದ್ದ 216ನೇ ಪುಷ್ಪ ಪ್ರದರ್ಶನಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದ್ದು, ಬರೋಬ್ಬರಿ 9 ಲಕ್ಷಕ್ಕೂ ಹೆಚ್ಚು ಜನರು ಆಗಮಿಸಿದ್ದರು. ದೇಶ ವಿದೇಶಗಳಿಂದ ಆಗಮಿಸಿ ಪ್ರದರ್ಶನವನ್ನು ಕಣ್ತುಂಬಿಕೊಂಡರು. ಕೊನೆಯ ದಿನವೂ ಭಾರೀ ಪ್ರಮಾಣದಲ್ಲಿ ಜನರು ಆಗಮಿಸಿದ್ದು, ಸೋಮವಾರ 65 ಸಾವಿರ ಜನರು ಭೇಟಿ ನೀಡಿದ್ದರು.

ಸಾರ್ವಜನಿಕರ ಭೇಟಿಯಿಂದ 3 ಕೋಟಿಗೂ ಅಧಿಕ ಆದಾಯ ಬಂದಿದ್ದರೆ, ಸ್ಟಾಲ್ ಮತ್ತಿತರ ಮೂಲಗಳಿಂದ 40 ಲಕ್ಷದಷ್ಟು ಆದಾಯ ಸಂಗ್ರಹವಾಗಿದೆ. ಕಳೆದ ಬಾರಿ ಸ್ವಾತಂತ್ರ್ಯ ದಿನಾಚರಣೆಗೆ ಕೆಂಗಲ್​ ಹನುಮಂತಯ್ಯನವರ 4 ಅಡಿ ಎತ್ತರದ ಪೀಠದ ಮೇಲೆ 14 ಅಡಿ ಎತ್ತರದ ಬೃಹತ್​​ ಹೂವಿನ ಪುತ್ಥಳಿ, ಗಾಜಿನ ಮನೆಯ ಕೇಂದ್ರ ಭಾಗದಲ್ಲಿ ವಿಧಾನಸೌಧ ಮತ್ತು ಶಿವಪುರ ಸತ್ಯಾಗ್ರಹ ಸೌಧವನ್ನು ನಿರ್ಮಿಸಲಾಗಿತ್ತು. 8.26 ಲಕ್ಷ ಜನರಿಂದ 4 ಕೋಟಿ ರೂ. ಸಂಗ್ರಹವಾಗಿತ್ತು. ಆದರೆ ಈ ಬಾರಿ 3.49 ಕೋಟಿ ರೂಪಾಯಿ ಸಂಗ್ರಹವಾಗಿದೆ. ಈ ಮೂಲಕ ಕಳೆದ ಬಾರಿಗಿಂತ ಈ ಸಲ ಕಡಿಮೆ ಮೊತ್ತ ಸಂಗ್ರಹವಾದಂತಾಗಿದೆ.

"ಈ ಬಾರಿ ಆಯೋಜನೆಯ ಸಮಯದಲ್ಲಿ ಮಳೆ ಬೀಳುತ್ತಿತ್ತು. ಆದರೂ ಜನರು ಉತ್ಸಾಹದಿಂದ ಪುಷ್ಪ ಪ್ರದರ್ಶನವನ್ನು ವೀಕ್ಷಿಸಿದರು. ಅಂಬೇಡ್ಕರ್ ಅವರ ಜೀವನಾಧಾರಿತವಾಗಿ ಈ ಬಾರಿಯ ಪುಷ್ಪ ಪ್ರದರ್ಶನಕ್ಕೆ ಜನರು ಭಾಗವಹಿಸಿರುವುದು ಸಂತೋಷದ ವಿಷಯವಾಗಿದೆ. ನಮಗೆ ಪ್ರಮುಖವಾಗಿ ಹಣಕ್ಕಿಂತಲೂ ಮಕ್ಕಳು ಮತ್ತು ಜನರು ಭೇಟಿ ನೀಡಿ ಪ್ರದರ್ಶನವನ್ನು ಆನಂದಿಸುವುದು ಮುಖ್ಯವಾಗಿದೆ" ಎಂದು ಲಾಲ್​ ಬಾಗ್​ ಸಹ ನಿರ್ದೇಶಕಿ ಕುಸುಮಾ ಹೇಳಿದ್ದಾರೆ.

"ಐತಿಹಾಸಿಕ ಲಾಲ್ ಬಾಗ್ ಗಾಜಿನ ಮನೆಯಲ್ಲಿ ಆಗಸ್ಟ್ 8 ರಿಂದ 19ರ ವರೆಗೆ ಜರುಗಿದ ವಿಶ್ವ ಜ್ಞಾನಿ, ಸಂವಿಧಾನ ಶಿಲ್ಪಿ, ಡಾಕ್ಟರ್ ಬಿ. ಆರ್​. ಅಂಬೇಡ್ಕರ್​ ವಿಷಯಾಧಾರಿತ ಸ್ವಾತಂತ್ರ್ಯೋತ್ಸವ 216ನೇ ಫಲ ಪುಷ್ಪ ಪ್ರದರ್ಶನಕ್ಕೆ ಒಟ್ಟಾರೆ 9 ಲಕ್ಷಕ್ಕೂ ಹೆಚ್ಚು ಜನರು ಭೇಟಿ ನೀಡಿದ್ದಾರೆ" ಎಂದು ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಡಾ.ಎಂ. ಜಗದೀಶ್​​ ತಿಳಿಸಿದ್ದಾರೆ.

9,07,219 ಮಂದಿ ಭೇಟಿ:

ದಿನಾಂಕಜನಸಂಖ್ಯೆಆದಾಯ
  • ಆಗಸ್ಟ್ 8
21,0502.04 ಲಕ್ಷ
  • ಆಗಸ್ಟ್ 9
45,6005.75 ಲಕ್ಷ
  • ಆಗಸ್ಟ್ 10
55,00021.39 ಲಕ್ಷ
  • ಆಗಸ್ಟ್ 11
68,14842.32 ಲಕ್ಷ
  • ಆಗಸ್ಟ್ 12
49,910 9.02 ಲಕ್ಷ
  • ಆಗಸ್ಟ್ 13
50,480 11.35 ಲಕ್ಷ
  • ಆಗಸ್ಟ್ 14
49,44510.82 ಲಕ್ಷ
  • ಆಗಸ್ಟ್ 15
21,00093.20 ಲಕ್ಷ
  • ಆಗಸ್ಟ್ 16
87,42112.07 ಲಕ್ಷ
  • ಆಗಸ್ಟ್ 17
1,01,23537.65 ಲಕ್ಷ
  • ಆಗಸ್ಟ್ 18
1,03,50039.50 ಲಕ್ಷ
  • ಆಗಸ್ಟ್ 19
65,4308.21 ಲಕ್ಷ

ಇದನ್ನೂ ಓದಿ:ಬೆಂಗಳೂರು: ಲಾಲ್‌ಬಾಗ್ ಫ್ಲವರ್‌ಶೋಗೆ ಇಂದು ತೆರೆ; 8 ಲಕ್ಷಕ್ಕೂ ಅಧಿಕ ವೀಕ್ಷಕರ ಭೇಟಿ - Lalbagh Flower Show

ETV Bharat Logo

Copyright © 2024 Ushodaya Enterprises Pvt. Ltd., All Rights Reserved.