ETV Bharat / state

ಬುದ್ಧಿವಂತರ ನಾಡಿನಲ್ಲಿ ಸಾಲು ಸಾಲು ಆನ್​ಲೈನ್​ ವಂಚನೆ: 99 ಲಕ್ಷ ಕಳೆದುಕೊಂಡ ಮಂಗಳೂರ ನಿವಾಸಿಗಳು! ​

ದಕ್ಷಿಣ ಕನ್ನಡ ಜಿಲ್ಲೆಗೆ ಬುದ್ಧಿವಂತರ ನಾಡು ಕರೆಯಲಾಗುತ್ತದೆ. ಆದರೆ, ಇತ್ತೀಚಿಗೆ ಇಲ್ಲಿಯೇ ಅಧಿಕ ಮಂದಿ ಸೈಬರ್​ವಂಚನೆಗೆ ಬಲಿಯಾಗುತ್ತಿದ್ದಾರೆ. ಇಬ್ಬರು ಮಂಗಳೂರಿನ ನಿವಾಸಿಗಳು ಬೇರೆ ಬೇರೆ ಆನ್​ಲೈನ್​ ವಂಚನೆ ಪ್ರಕರಣದಲ್ಲಿ ಲಕ್ಷ-ಲಕ್ಷ ಹಣ ಕಳೆದುಕೊಂಡಿದ್ದಾರೆ.

ಮಂಗಳೂರು
ಮಂಗಳೂರು (ETV Bharat)
author img

By ETV Bharat Karnataka Team

Published : 3 hours ago

ಮಂಗಳೂರು: ಜಿಲ್ಲೆಯಲ್ಲಿ ಆನ್‌ಲೈನ್ ವಂಚನೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಮಂಗಳೂರಿನ ಇಬ್ಬರು ನಿವಾಸಿಗಳು ವಂಚಕರ ಮೋಸದ ಬಲೆಗೆ ಬಿದ್ದು 99,12,000 ರೂ. ಹಣ ಕಳೆದುಕೊಂಡಿದ್ದಾರೆ.

ಡೆಲ್ಲಿ ಸೈಬರ್ ಕ್ರೈಂ ಮತ್ತು ಸಿಬಿಐ ಹೆಸರಿನಲ್ಲಿ 68 ಲಕ್ಷ ವಂಚನೆ: ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿಈ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಡೆಲ್ಲಿ ಸೈಬರ್ ಕ್ರೈಂ ಮತ್ತು ಸಿಬಿಐ ಅಧಿಕಾರಿಗಳ ಹೆಸರಿನಲ್ಲಿ ವ್ಯಕ್ತಿಯೊಬ್ಬರು, ಕಾವೂರಿನ ನಿವಾಸಿಯಿಂದ ಹಂತ ಹಂತವಾಗಿ 68 ಲಕ್ಷ ರೂಪಾಯಿಗಳನ್ನು ವಂಚಿಸಿದ್ದಾರೆ.

ಹಂತ ಹಂತವಾಗಿ ವಂಚನೆ: ಅಕ್ಟೋಬರ್ 10 ರಂದು ಮಧ್ಯಾಹ್ನ 03:10ಕ್ಕೆ ದೂರುದಾರರಿಗೆ 1401870828 ಸಂಖ್ಯೆಯಿಂದ ಸ್ವಯಂಚಾಲಿತ ರೆಕಾರ್ಡ್ ಕರೆ ಬಂದಿತು. ಈ ಕರೆಯು, ಅವರ ಹೆಸರಿನಲ್ಲಿ ಪಾರ್ಸೆಲ್ ಇರುವುದಾಗಿ ಹೇಳಿ, ಮೊಬೈಲ್ ಕೀಪ್ಯಾಡ್‌ನಲ್ಲಿ ಎರಡು ಅಂಕಿಯ ಬಟನ್ ಒತ್ತುವಂತೆ ಸೂಚಿಸಿತು. ದೂರುದಾರರು ಬಟನ್ ಒತ್ತಿದ ಬಳಿಕ, ಕರೆ DHL ಕಸ್ಟಮರ್ ಕೇರ್‌ಗೆ ಸಂಪರ್ಕಗೊಂಡಿತು. ಮತ್ತು ಅಲ್ಲಿನ ವ್ಯಕ್ತಿಯು, ಡೆಲ್ಲಿಯಿಂದ ಕಳುಹಿಸಿದ ಪಾರ್ಸೆಲ್‌ನಲ್ಲಿ 3.1 ಕೆ.ಜಿ ಮಾದಕ ವಸ್ತು (MDMA), ಐಫೋನ್, ಮತ್ತು 3 ಕೆ.ಜಿ ಬಟ್ಟೆ ಇದ್ದು, ಕಸ್ಟಮ್ಸ್ ಅದನ್ನು ಸೀಜ್ ಮಾಡಿರುವುದಾಗಿ ತಿಳಿಸಿದರು.

ಅವರನ್ನು ಡೆಲ್ಲಿ ಸೈಬರ್ ಕ್ರೈಂ ಪೊಲೀಸರಿಗೆ ಕನೆಕ್ಟ್ ಮಾಡಿದ್ದು, ಮತ್ತೊಬ್ಬ ವ್ಯಕ್ತಿ "ಸೆಮಾದಾನ ಪವಾರ್" ಎಂಬ ಸಿಬಿಐ ಅಧಿಕಾರಿ ಎಂದು ಪರಿಚಯಿಸಿಕೊಂಡು, ದೂರುದಾರರ ಬ್ಯಾಂಕ್ ಖಾತೆಗಳನ್ನು ಯಾರೋ ದುರುಪಯೋಗ ಮಾಡಿದ್ದಾರೆಂದು ತಿಳಿಸಿದರು. ಈ ದುರುಪಯೋಗವನ್ನು ತಡೆಯಲು 24,68,392/- ರೂಪಾಯಿಗಳನ್ನು ಇಂಡಸ್ ಇಂದ್ ಬ್ಯಾಂಕ್ ಖಾತೆಗೆ ವರ್ಗಾಯಿಸಲು ವಂಚಕರು ಒತ್ತಾಯಿಸಿದರು.

ದೂರುದಾರರು ಇದನ್ನು ನಂಬಿ, ಅ.14 ರಂದು, ಹೆಚ್‌ಡಿಎಫ್‌ಸಿ ಖಾತೆಯಿಂದ 24,68,392/- ಹಣವನ್ನು ಕಳುಹಿಸಿದರು. ನಂತರ, ಆ ವ್ಯಕ್ತಿಯಿಂದ ಮತ್ತೊಂದು ನೋಟಿಸ್ ಬಂದಿದ್ದು, 27,54,163/- ರೂಪಾಯಿಗಳನ್ನು ವರ್ಗಾಯಿಸುವಂತೆ ಸೂಚನೆ ನೀಡಿದ್ದನು. ಹೀಗಾಗಿ, ಅ. 18 ರಂದು, ದೂರುದಾರರು ಐಸಿಐಸಿಐ ಖಾತೆಯಿಂದ ಹಣವನ್ನು ಮತ್ತೊಮ್ಮೆ ಕಳುಹಿಸಿದರು.

ಅಲ್ಲಿಯೂ ಬಿಟ್ಟೂ ಬಿಡದೇ, ಮತ್ತಷ್ಟು ಹಣ ಕಳಿಸಬೇಕೆಂದು ಒತ್ತಾಯಿಸಿದರು. ದೂರುದಾರರು ಮತ್ತೆ 15,77,445/- ಹಣವನ್ನು ಬಂಧನ್ ಬ್ಯಾಂಕ್ ಖಾತೆಗೆ ವರ್ಗಾಯಿಸಿದರು. ಈ ಎಲ್ಲಾ ಹಣವನ್ನು ಕಳೆದುಕೊಂಡ ಬಳಿಕ, ದೂರುದಾರರು ಶಂಕಿಸಿ ಅವರನ್ನು ಪ್ರಶ್ನಿಸಿದಾಗ, ಆ ವ್ಯಕ್ತಿಗಳು ಗದರಿಸುತ್ತ, ಇನ್ನೂ ಹೆಚ್ಚು ಹಣದ ಒತ್ತಡ ಹಾಕಿದರು.

ದೂರುದಾರರು ಅ.14 ರಿಂದ 21ರ ವರೆಗೆ, ಹಂತ ಹಂತವಾಗಿ ಒಟ್ಟು 68,00,000/- ರೂಪಾಯಿಗಳನ್ನು ಕಳೆದುಕೊಂಡಿದ್ದಾರೆ . ಮೋಸದ ಬಗ್ಗೆ ದೂರುದಾರರು ಕಾವೂರು ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ಸಿಬಿಐ ಅಧಿಕಾರಿಗಳ ಹೆಸರಿನಲ್ಲಿ 31 ಲಕ್ಷ ರೂ ವಂಚನೆ: ಇತ್ತೀಚೆಗೆ ಅತ್ತಾವರದ ನಿವಾಸಿಯೊಬ್ಬರು, ಸಿಬಿಐ ಅಧಿಕಾರಿಗಳ ಹೆಸರಿನಲ್ಲಿ ವಂಚಿತರಾಗಿ ತಮ್ಮ ಖಾತೆಯಿಂದ ಸುಮಾರು 31,12,000 ರೂಪಾಯಿಗಳನ್ನು ಕಳೆದುಕೊಂಡಿದ್ದಾರೆ.

ಘಟನೆ ವಿವರ: ದೂರುದಾರರು ಅಕ್ಟೋಬರ್ 7 ರಂದು ಮಧ್ಯಾಹ್ನ 2-15 ಗಂಟೆಗೆ ವೈಯಕ್ತಿಕ ಕೆಲಸದ ನಿಮಿತ್ತ ಅತ್ತಾವರಕ್ಕೆ ತೆರಳುವಾಗ, 9594173504 ನಂಬರಿನಿಂದ ಕರೆ ಬಂದಿದೆ. ಕರೆ ಮಾಡಿದ ವ್ಯಕ್ತಿ DOTC (Department of Telecommunication) ನಿಂದ ಮಾತನಾಡುತ್ತಿರುವುದಾಗಿ ಹೇಳಿ, ಅವರ ಮೊಬೈಲ್ ಸಂಖ್ಯೆಗಳನ್ನು ವಿಚಾರಿಸಿದ್ದಾರೆ. ಕಾಲ್ ಮಾಡುತ್ತಿದ್ದ ವ್ಯಕ್ತಿ, ದೂರುದಾರರ ಹೆಸರಲ್ಲಿ ಎರಡು ಸಿಮ್‌ಗಳು ಆಕ್ಟಿವ್ ಆಗಿದ್ದು, ಬಾಂಬೆಯ ಎಗ್ರಿಪಾಡ ಪೊಲೀಸ್ ಠಾಣೆಯಲ್ಲಿ ಅವರು ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ನಂಬಿಸಿದರು.

ಇದಾದ ಬಳಿಕ, "ಸಂಜನಾ" ಎಂಬ ಮಹಿಳಾ ಕರ್ತವ್ಯಾಧಿಕಾರಿಯಾಗಿ ಪರಿಚಯಿಸಿ, ಮುಂಬೈಗೆ 2 ಗಂಟೆಗಳ ಒಳಗೆ ತನಿಖೆಗೆ ಹಾಜರಾಗಬೇಕೆಂದು ಆದೇಶಿಸಿದರು. ನಂತರ "ಸಂದೀಪ್ ರಾವ್" ಎಂಬ ವ್ಯಕ್ತಿ, ದೂರುದಾರರ ವಿರುದ್ಧ ಭಾರಿ ಪ್ರಮಾಣದ ಅಕ್ರಮ ಹಣ ವರ್ಗಾವಣೆ ಮತ್ತು ವಂಚನೆಯ ಪ್ರಕರಣ ದಾಖಲಾಗಿರುವುದಾಗಿ ಹೇಳಿದ್ದಾರೆ.

ಅಕ್ಟೋಬರ್ 8 ರಂದು, "ನವೋಜೋತ್ ಸಿಮಿ" ಎಂಬ ಮತ್ತೊಬ್ಬ ವ್ಯಕ್ತಿ ದೂರುದಾರರೊಂದಿಗೆ ಸಂಪರ್ಕ ಮಾಡಿ, ಸಿಬಿಐ ತನಿಖೆ ನಡೆಸುತ್ತಿರುವುದಾಗಿ ನಂಬಿಸಿದರು. ಅವರು, ದೂರುದಾರರ ಬ್ಯಾಂಕ್ ಖಾತೆಗಳಿಗೆ ಸಂಬಂಧಿಸಿದ ಮಾಹಿತಿ ಪಡೆದು, ಮೊದಲು 3,01,000 ರೂಪಾಯಿಗಳನ್ನು ಬಾಂಧನ್ ಬ್ಯಾಂಕ್, ಮಧ್ಯ ಪ್ರದೇಶಕ್ಕೆ ವರ್ಗಾಯಿಸಿದರು. ನಂತರ, 2,01,000 ರೂಪಾಯಿಗಳನ್ನು ಪಶ್ಚಿಮ ಬಂಗಾಳದ ಎಸ್‌ಬಿಐ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಯಿತು.

ವಂಚಕರು ಮತ್ತೆ ದೂರುದಾರರ ಡಿಮ್ಯಾಟ್​ ಖಾತೆಯಲ್ಲಿ ಇರುವ ಷೇರುಗಳನ್ನು ಮಾರಾಟ ಮಾಡಿಸಿ, 26,10,000 ರೂಪಾಯಿಗಳನ್ನು ಇನ್ನೊಂದು ಐಸಿಐಸಿಐ ಬ್ಯಾಂಕ್ ಖಾತೆಗೆ ವರ್ಗಾಯಿಸಿದ್ದಾರೆ. ಅಂತಿಮವಾಗಿ ಅಕ್ಟೋಬರ್ 19 ರಂದು, 50 ಲಕ್ಷ ರೂಪಾಯಿಗಳನ್ನು ಭದ್ರತಾ ಠೇವಣಿ ಇಡಬೇಕೆಂದು ಬೇಡಿಕೆ ಇಟ್ಟರು, ಅಷ್ಟರಲ್ಲಿ ದೂರುದಾರರಿಗೆ ಅನುಮಾನ ಬಂದು, ಅವರು ಪೊಲೀಸರು ಮತ್ತು ತಮ್ಮ ಕುಟುಂಬಕ್ಕೆ ಈ ವಿಚಾರವನ್ನು ತಿಳಿಸಿದ್ದಾರೆ.

ಅಕ್ಟೋಬರ್ 21 ರಂದು, ದೂರುದಾರರು 1930ಗೆ ಕರೆ ಮಾಡಿ, ಸಂಪೂರ್ಣ ಘಟನೆ ಕುರಿತು ದೂರು ದಾಖಲಿಸಿದ್ದಾರೆ. ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಕೇರಳದಲ್ಲಿ ₹75 ಕೋಟಿ ಮೌಲ್ಯದ 104 ಕೆ.ಜಿ ಅಕ್ರಮ ಚಿನ್ನ ಜಪ್ತಿ

ಇದನ್ನೂ ಓದಿ: ಸೈಬರ್ ವಂಚನೆಯಿಂದ 2.8 ಕೋಟಿ ಲೂಟಿ: ಪೊಲೀಸರ ಸಹಾಯದಿಂದ 53 ಲಕ್ಷ ರೂ. ಮರಳಿ ಪಡೆದ ವ್ಯಕ್ತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.