ಹುಬ್ಬಳ್ಳಿ: "ನೇಹಾ ಹಿರೇಮಠ ಕೊಲೆಯನ್ನು ನಾನು ಖಂಡಿಸುತ್ತೇನೆ. ಈ ರೀತಿ ಘಟನೆ ಆಗಬಾರದು. ಹಲವು ಮುಖಂಡರು ಈ ಬಗ್ಗೆ ಮಾತನಾಡಿದ್ದಾರೆ. ಅದಕ್ಕೆ ನಾನು ಏನು ಹೇಳಲ್ಲ. ಆದರೆ ಮುಂದೆ ಇದಕ್ಕೆ ಒಂದು ಎನಕೌಂಟರ್ ಕಾನೂನು ಬರಲೇಬೇಕು" ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು.
ಕಿಮ್ಸ್ ಶವಾಗಾರಕ್ಕೆ ಭೇಟಿ ನೀಡಿ ಮಾತನಾಡಿದ ಅವರು, "ಇಂತಹ ಕೊಲೆಗಳಿಗೆ ಎನಕೌಂಟರ್ ಕಾನೂನು ಬರಲೇಬೇಕು. ಮುಂದೆ ಕಾನೂನು ಮಾಡಿದರೆ ಇದನ್ನು ಮಾಡುವವರನ್ನು ಹೊಡೆದು ಉರುಳಿಸಬಹುದು. ಆಗ ನಾನು ಬೇರೆಯವರು ಮಾಡಿದ ಆರೋಪಕ್ಕೆ ಲೆಕ್ಕ ಕೊಡಬಹುದು. ಕೆಲವರು ಇದನ್ನು ರಾಜಕೀಯ ಮಾಡಲು ಹೊರಟಿದ್ದಾರೆ. ಪ್ರಕರಣದ ತನಿಖೆ ಬಗ್ಗೆ ನಾನು ಈಗ ಮಾತನಾಡಲ್ಲ. ಕೊಲೆ ಮಾಡಿದವರಿಗೆ ಶಿಕ್ಷೆಯಾಗಬೇಕು. ರಾಜಕೀಯ ಉತ್ತರ ಕೊಡುವುದು ಈಗ ಸರಿಯಲ್ಲ" ಎಂದರು.
ಪಾರ್ಥಿವ ಶರೀರ ಸ್ಥಳಾಂತರ: ಕಿಮ್ಸ್ ಶವಾಗಾರದಿಂದ ನೇಹಾ ಪಾರ್ಥಿವ ಶರೀರವನ್ನು ಬಿಡ್ನಾಳ ಬಡಾವಣೆಯ ಮನೆಗೆ ತಗೆದುಕೊಂಡು ಹೋಗಲಾಯಿತು. ಬಳಿಕ ಅಲ್ಲಿಂದ ಬಿಡ್ನಾಳ ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರಕ್ಕೆ ಸಿದ್ದತೆ ಮಾಡಿಕೊಳ್ಳಲಾಗಿದೆ.
ಇದನ್ನೂ ಓದಿ: ಹುಬ್ಬಳ್ಳಿ ಕಾಲೇಜು ಕ್ಯಾಂಪಸ್ನಲ್ಲಿ ಯುವತಿಯ ಕೊಲೆ: ಪೊಲೀಸ್ ಕಮೀಷನರ್ ಹೇಳಿದ್ದೇನು? - College Girl Murder