ETV Bharat / state

ಕುಕ್ಕೆ ಸುಬ್ರಹ್ಮಣ್ಯದ ರಸ್ತೆ ಬದಿ ಅನಾಥವಾಗಿದ್ದ ತಮಿಳುನಾಡಿನ ಯುವಕ: ತಾಯಿ ಮಡಿಲು ಸೇರಿಸಲು ಪತ್ರಕರ್ತರ ಶ್ರಮ - Journalist Helps Tamil Nadu Youth - JOURNALIST HELPS TAMIL NADU YOUTH

ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಅನಾಥವಾಗಿದ್ದ ತಮಿಳುನಾಡಿನ ಕೊಯಮತ್ತೂರು ಮೂಲದ ಯುವಕನೋರ್ವನನ್ನು ಆತನ ಮನೆಗೆ ಸೇರಿಸುವ ಪ್ರಯತ್ನವನ್ನು ಸ್ಥಳೀಯ ಪತ್ರಕರ್ತ ಶಿವಭಟ್ ಹಾಗೂ ಕೊಯಮತ್ತೂರಿನ 'ಈಟಿವಿ ಭಾರತ್​' ವರದಿಗಾರ ಶ್ರೀನಿವಾಸನ್ ಮಾಡಿದ್ದಾರೆ.

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಅನಾಥವಾಗಿದ್ದ ತಮಿಳುನಾಡಿನ ಸತೀಶ್​ ಮತ್ತು ಆತನ ತಾಯಿ
ಕುಕ್ಕೆ ಸುಬ್ರಹ್ಮಣ್ಯದಲ್ಲಿ ಅನಾಥವಾಗಿದ್ದ ತಮಿಳುನಾಡಿನ ಸತೀಶ್​ ಮತ್ತು ಕೊಯಮತ್ತೂರಿನಲ್ಲಿರುವ ಆತನ ತಾಯಿ (ETV Bharat)
author img

By ETV Bharat Karnataka Team

Published : Jul 25, 2024, 10:27 AM IST

Updated : Jul 25, 2024, 11:43 AM IST

ಅನಾಥವಾಗಿದ್ದ ತಮಿಳುನಾಡಿನ ಯುವಕನಿಗೆ ನೆರವಾದ ಪತ್ರಕರ್ತರು (ETV Bharar)

ಕುಕ್ಕೆ ಸುಬ್ರಹ್ಮಣ್ಯ(ದಕ್ಷಿಣ ಕನ್ನಡ): ಪತ್ರಕರ್ತರು ಸುದ್ದಿಗಳಿಗೆ ಮಾತ್ರ ಸೀಮಿತವಾಗಿರದೆ ಸಾಮಾಜಿಕವಾಗಿಯೂ ತೊಡಗಿಕೊಂಡಿರುತ್ತಾರೆ. ಇದಕ್ಕೆ ಹೊಸ ನಿದರ್ಶನ ಸಿಕ್ಕಿದೆ. ಕಳೆದ ತಿಂಗಳಿನಿಂದ ಕುಕ್ಕೆ ಸುಬ್ರಹ್ಮಣ್ಯದ ಫುಟ್‌ಪಾತ್‌ನಲ್ಲಿ ಜೀವನ ಕಳೆಯುತ್ತಿದ್ದ ತಮಿಳುನಾಡಿನ ಯುವಕನನ್ನು ಆತನ ಮನೆಗೆ ಸೇರಿಸುವಲ್ಲಿ ವರದಿಗಾರರು ಸಾಕಷ್ಟು ಪ್ರಯತ್ನಿಸಿದ್ದಾರೆ.

ಕೊಯಮತ್ತೂರಿನ ಸತೀಶ್ ಎಂಬ ಯುವಕ ಸುಬ್ರಹ್ಮಣ್ಯದ ರಸ್ತೆಬದಿಯಲ್ಲಿ ಮಳೆ, ಬಿಸಿಲೆನ್ನದೆ ದಿನ ದೂಡುತ್ತಿದ್ದ. ಆತನಿಗೆ ತಮಿಳು ಬಿಟ್ಟು ಬೇರೆ ಭಾಷೆ ಗೊತ್ತಿಲ್ಲ. ಕೆಲ ದಿನಗಳ ಹಿಂದೆ ಕುಕ್ಕೆ ಸುಬ್ರಹ್ಮಣ್ಯಕ್ಕೆ ಕುಟುಂಬ ಸಮೇತ ಬಂದಿದ್ದಾಗ ಯುವಕ ಮನೆಯವರಿಂದ ತಪ್ಪಿಸಿಕೊಂಡಿದ್ದ ಎಂದು ತಿಳಿದುಬಂದಿದೆ.

ಯುವಕನನ್ನು ಗಮನಿಸಿದ ಸುಬ್ರಹ್ಮಣ್ಯದ ಪತ್ರಕರ್ತ ಶಿವಭಟ್ ಸಂಹವನ ಕೊರತೆಯ ನಡುವೆಯೂ ಮಾತನಾಡಿಸಿದ್ದರು. ತಮಿಳು ಭಾಷೆಯಲ್ಲಿ ಪ್ರತಿಕ್ರಿಯೆ ನೀಡಿದ ಯುವಕ ತಾನು ಒಂದು ತಿಂಗಳಿನಿಂದ ಇಲ್ಲಿರುವುದಾಗಿ ತಿಳಿಸಿದ್ದಾನೆ. ಈ ಬಗ್ಗೆ ಕೂಡಲೇ ಗ್ರಾ.ಪಂ ಪಿಡಿಒ ಮಹೇಶ್ ಅವರಿಗೆ ಮಾಹಿತಿ ನೀಡಲಾಗಿತ್ತು.

ಇದೇ ಸಮಯದಲ್ಲಿ ಸಾಮಾಜಿಕ ಕಾರ್ಯಕರ್ತ ರವಿ ಕಕ್ಕೆಪದವು ಮತ್ತು ಗ್ರಾ.ಪಂ ಸದಸ್ಯ ಹರೀಶ್ ಇಂಜಾಡಿ ಎಂಬವರು ಆಗಮಿಸಿ, ಇತರ ಕೆಲವರ ಸಹಕಾರದೊಂದಿಗೆ ಸತೀಶ್​ನನ್ನು ಕರೆದುಕೊಂಡು ಹೋಗಿ ಸ್ನಾನ ಮಾಡಿಸಿದ್ದರು. ಹೊಸ ಬಟ್ಟೆ ನೀಡಿ, ತಿಂಡಿ ತಿನ್ನಿಸಿ ಉಪಚರಿಸಿದ್ದರು. ನಂತರ ಮತ್ತಷ್ಟು ವಿಚಾರಿಸಿದಾಗ, ತನ್ನ ಹೆಸರು ತಿಳಿಸಿ, ಕೊಯಮತ್ತೂರಿನಲ್ಲಿ ತನಗೆ ತಾಯಿ ಮತ್ತು ಸಹೋದರಿಯರು ಇದ್ದಾರೆ ಎಂದು ವಿವರಿಸಿದ್ದಾನೆ. ಆಗ ಪತ್ರಕರ್ತ ಶಿವಭಟ್ ಕೊಯಮತ್ತೂರಿನ ಪೊಲೀಸರ ಸಹಾಯವಾಣಿ ಸಂಖ್ಯೆಗೆ ಸಂಪರ್ಕಿಸಿದ್ದರು. ಆದರೆ ಯಾವುದೇ ಪ್ರಯೋಜನ ಆಗಿರಲಿಲ್ಲ.

ನೆರವಿಗೆ ಬಂದ 'ಈಟಿವಿ ಭಾರತ'​ ವರದಿಗಾರ: ಪೊಲೀಸರಿಂದ ನಿರೀಕ್ಷಿತ ಸ್ಪಂದನೆ ಸಿಗದ ಕಾರಣ ಶಿವಭಟ್ ಕೊಯಮತ್ತೂರಿನ 'ಈಟಿವಿ ಭಾರತ್​' ವರದಿಗಾರ ಶ್ರೀನಿವಾಸನ್ ಅವರನ್ನು ಸಂಪರ್ಕಿಸಿದ್ದರು. ಇವರ ನೆರವಿನಿಂದ ಮಹೇಂದ್ರನ್ ಎಂಬವರು ನಡೆಸುವ ಎನ್‌ಜಿಒ ಸಂಸ್ಥೆಯ ಸಂಪರ್ಕ ಸಾಧಿಸಲಾಗಿತ್ತು. ಶ್ರೀನಿವಾಸನ್ ಹಾಗೂ ಮಹೇಂದ್ರನ್ ಮೂಲಕ ಯುವಕ ಹೇಳುವ ವಿಳಾಸವನ್ನು ತಾಳೆ ಮಾಡಿದಾಗ ಈತನ ಊರು ಕೊಯಮತ್ತೂರು ಎಂಬುದು ಸ್ಪಷ್ಟವಾಗಿತ್ತು.

ಅಷ್ಟೇ ಅಲ್ಲ, ಅಲ್ಲಿನ ಗಾಂಧಿನಗರದ ಆರ್.ಎಸ್. ಪುರಂ ನಿವಾಸಿ ಎಂಬುದೂ ಗೊತ್ತಾಗಿತ್ತು. ಅಂತೆಯೇ, ಮಹೇಂದ್ರನ್ ಅವರ ಎನ್‌ಜಿಒ ಮೂಲಕ ಯುವಕನ ತಾಯಿ ಸರಸ್ವತಿ ಮತ್ತು ಕುಟುಂಬಸ್ಥರನ್ನು ಪತ್ರಕರ್ತರು ಸಂಪರ್ಕಿಸಿದ್ದರು. ಈ ವೇಳೆ, ಮಗನ ವಿಷಯ ಕೇಳಿ ತಾಯಿ ಕಣ್ಣೀರು ಹಾಕಿದ್ದರು. ಮತ್ತೊಂದೆಡೆ, ಅಷ್ಟೊತ್ತಿಗಾಗಲೇ ಯುವಕ ಸತೀಶ್​ನನ್ನು ಬೆಂಗಳೂರಿನ ಜನಸ್ನೇಹಿ ಸೇವಾಶ್ರಮಕ್ಕೆ ಕಳುಹಿಸಲಾಗಿತ್ತು. ಅಲ್ಲಿಂದಲೇ ಆತನನ್ನು ಊರಿಗೆ ಕರೆದುಕೊಂಡು ಹೋಗುವ ಪ್ರಯತ್ನ ನಡೆದಿದೆ.

''ಈಗಾಗಲೇ ಇಲ್ಲಿನ ಈಟಿವಿ ವರದಿಗಾರರಾದ ಶ್ರೀನಿವಾಸನ್ ಅವರು ಇಲ್ಲಿನ ಜಿಲ್ಲಾಧಿಕಾರಿಗಳನ್ನು ಸಂಪರ್ಕಿಸಿದ್ದಾರೆ. ಒಂದೆರಡು ದಿನಗಳಲ್ಲಿ ಈ ಯುವಕನ ತಾಯಿ ಮತ್ತು ಕುಟುಂಬಸ್ಥರು ಪ್ರಸ್ತುತ ಬೆಂಗಳೂರಿನ ಸಾಂತ್ವನ ಕೇಂದ್ರದಲ್ಲಿ ಇರುವ ಯುವಕನನ್ನು ಕರೆದುಕೊಂಡು ಕೊಯಂಬತ್ತೂರಿಗೆ ಬರುತ್ತಾರೆ. ಆದರೆ, ಈಗ ಆತನನ್ನು ಮನೆಗೆ ಕರೆದುಕೊಂಡು ಬರಲ್ಲ. ಆತನಿಗೆ ಮಾನಸಿಕ ಆರೋಗ್ಯ ಚಿಕಿತ್ಸೆ ಅಗತ್ಯ ಇದೆ. ಅದನ್ನು ಮಾಡಿಸಿ, ನಂತರದಲ್ಲಿ ಮನೆಗೆ ಕರೆದುಕೊಂಡು ಬರಲಾಗುತ್ತದೆ. 'ಈಟಿವಿ ಭಾರತ'ಕ್ಕೆ ನಮ್ಮ ಕಡೆಯಿಂದ ತುಂಬಾ ಧನ್ಯವಾದಗಳು'' ಎಂದು ಎನ್‌ಜಿಒದ ಮಹೇಂದ್ರನ್ ಈರನೆಂಜಂ ತಿಳಿಸಿದ್ದಾರೆ.

ಈ ಕುರಿತು 'ಈಟಿವಿ ಭಾರತ' ವರದಿಗಾರ ಶ್ರೀನಿವಾಸನ್ ಮಾತನಾಡಿ, ''ಮಹೇಂದ್ರನ್ ಅವರ ಎನ್‌ಜಿಒ ಸಹಕಾರದೊಂದಿಗೆ ಕೊಯಮತ್ತೂರಿನ ಜಿಲ್ಲಾಧಿಕಾರಿಗಳ ಮೂಲಕ ಬೆಂಗಳೂರಿನ ಸೇವಾ ಕೇಂದ್ರದಿಂದ ಯುವಕನನ್ನು ಊರಿಗೆ ಕರೆದುಕೊಂಡು ಹೋಗಲಾಗುತ್ತಿದೆ. ಯುವಕನನ್ನು ಆತನ ತಾಯಿಯೊಂದಿಗೆ ಸೇರಿಸುವ ಪ್ರಯತ್ನ ಮಾಡಲಾಗುತ್ತಿದೆ'' ಎಂದರು.

ಯುವಕರನ್ನು ಬೆಂಗಳೂರಿಗೆ ಕಳುಹಿಸುವಲ್ಲಿ ಕುಕ್ಕೆ ಸುಬ್ರಹ್ಮಣ್ಯದ ಸ್ಥಳೀಯ ಅಧಿಕಾರಿಗಳು ನೆರವಿಗೆ ಬಂದಿದ್ದಾರೆ. ಆಡಳಿತಾಧಿಕಾರಿ ಮತ್ತು ಪುತ್ತೂರು ಉಪ ಆಯುಕ್ತ ಜುಬಿನ್ ಮಹಾಪಾತ್ರ ಸಹಕಾರದಿಂದ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಲಾಗಿತ್ತು. ಕುಕ್ಕೆ ಪೊಲೀಸ್ ಠಾಣೆ ಮತ್ತು ಗ್ರಾ.ಪಂನಿಂದ ಒಪ್ಪಿಗೆ ಪತ್ರ ಪಡೆದು ಬೆಂಗಳೂರಿನ ಸೇವಾಶ್ರಮಕ್ಕೆ ಯುವಕನನ್ನು ಕಳಿಸಲಾಗಿತ್ತು. ಇದರ ಜೊತೆಗೆ, ಈ ಸಮಯದಲ್ಲಿ ಇಲ್ಲೇ ರಸ್ತೆ ಬದಿ ಪತ್ತೆಯಾದ ಮತ್ತೋರ್ವ ಅಪರಿಚಿತ ವ್ಯಕ್ತಿಯನ್ನೂ ಇದೇ ವಾಹನದಲ್ಲಿ ಆಶ್ರಮಕ್ಕೆ ರವಾನಿಸಲಾಗಿದೆ. ಸುಬ್ರಹ್ಮಣ್ಯ ಪೊಲೀಸ್ ಠಾಣಾಧಿಕಾರಿ ಕಾರ್ತಿಕ್, ಪಿಡಿಒ ಹಾಗೂ ಸಮಾಜ ಸೇವಕರು ಈ ಕಾರ್ಯದಲ್ಲಿ ಕೈಜೋಡಿಸಿದ್ದಾರೆ.

ಇದನ್ನೂ ಓದಿ: Watch...ಭದ್ರಾ ನದಿ ಮಧ್ಯದಲ್ಲಿ ಸಿಲುಕಿದ್ದ 30ಕ್ಕೂ ಹೆಚ್ಚು ಜಾನುವಾರುಗಳ ರಕ್ಷಣೆ

Last Updated : Jul 25, 2024, 11:43 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.