ETV Bharat / state

ಕೆಎಸ್ಆರ್​ಟಿಸಿಯ ಅಶ್ವಮೇಧ ಸಕ್ಸಸ್: ವೇಗಧೂತಗಳನ್ನು ಮೀರಿದ ಕ್ಲಾಸಿಕ್ ಆದಾಯ ಗಳಿಕೆ! - KSRTC Ashwamedha Success

author img

By ETV Bharat Karnataka Team

Published : Jul 1, 2024, 7:44 PM IST

ಕೆಎಸ್ಆರ್​ಟಿಸಿಯ ಅಶ್ವಮೇಧ ಸಕ್ಸಸ್ ಆಗಿದ್ದು, ವೇಗಧೂತಗಳನ್ನು ಮೀರಿ ಆದಾಯ ಗಳಿಸುತ್ತಿವೆ. ಅಷ್ಟೇ ಅಲ್ಲ, ವೇಗಧೂತ ಬಸ್​ಗಳಿಗಿಂತಲೂ ಹೆಚ್ಚಿನ ಜನಮನ್ನಣೆ ಗಳಿಸುತ್ತಿವೆ. ಹೀಗಾಗಿ ಅಶ್ವಮೇಧ ಕ್ಲಾಸಿಕ್ ಬಸ್​ಗಳ ಸಂಖ್ಯೆ ಹೆಚ್ಚಿಸಲು ಸರ್ಕಾರ ಮುಂದಾಗಿದೆ.

CLASSIC INCOME EARNED  ASHWAMEDHA CLASSIC BUS  FREE BUS TRAVEL FOR WOMEN  BENGALURU
ವೇಗಧೂತಗಳನ್ನು ಮೀರಿದ ಕ್ಲಾಸಿಕ್ ಆದಾಯ ಗಳಿಕೆ (ETV Bharat)

ಬೆಂಗಳೂರು: ಇತ್ತೀಚೆಗಷ್ಟೇ ಕೆಎಸ್ಆರ್​ಟಿಸಿಗೆ ಸೇರ್ಪಡೆಯಾಗಿರುವ ಅಶ್ವಮೇಧ ಕ್ಲಾಸಿಕ್ ಬಸ್​ಗಳ ಸೇವೆ ಸಕ್ಸಸ್ ಆಗಿದ್ದು, ವೇಗಧೂತ ಬಸ್​ಗಳಿಗಿಂತಲೂ ಹೆಚ್ಚಿನ ಜನಮನ್ನಣೆ ಗಳಿಸುತ್ತಿವೆ. ಅಷ್ಟು ಮಾತ್ರವಲ್ಲದೆ ಗಳಿಕೆಯಲ್ಲಿಯೂ ವೇಗಧೂತವನ್ನು ಮೀರಿ ಸಾಗುತ್ತಿವೆ. ಇದರಿಂದಾಗಿ ಸಾರಿಗೆ ನಿಗಮ ಖುಷಿಯಾಗಿದ್ದು, ಮತ್ತಷ್ಟು ಅಶ್ವಮೇಧ ಕ್ಲಾಸಿಕ್ ಬಸ್​ಗಳ ಸೇರ್ಪಡೆಗೆ ಮುಂದಾಗಿದೆ.

classic income earned  Ashwamedha Classic Bus  Free bus travel for women  Bengaluru
ಕೆಎಸ್ಆರ್​ಟಿಸಿಯ ಅಶ್ವಮೇಧ ಬಸ್​ಗಳ ದೃಶ್ಯ (ETV Bharat)

ರಾಜ್ಯದಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಯೋಜನೆಯಾದ ಶಕ್ತಿ ಯೋಜನೆ ಜಾರಿಯಾದ ನಂತರ ಕೆಎಸ್ಆರ್​ಟಿಸಿ ಕೆಂಪು ಬಣ್ಣದ ಬಸ್​ಗಳಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಯಿತು. ಇದರ ಬೆನ್ನಲ್ಲೇ ಅದನ್ನು ಮೀರಿದ ಬೇಡಿಕೆ ಕೆಎಸ್ಆರ್​ಟಿಸಿಯ ಅಶ್ವಮೇಧ ಕ್ಲಾಸಿಕ್ ಬಸ್​ಗಳಿಗೆ ಬಂದಿದೆ. ನಾಲ್ಕು ತಿಂಗಳ ಹಿಂದಷ್ಟೇ ರಸ್ತೆಗಳಿಸಿದ ಅಶ್ವಮೇಧ ಬಸ್​ಗಳು ಪ್ರಯಾಣಿಕರ ಸೆಳೆಯುವಲ್ಲಿ ಸಫಲವಾಗಿದ್ದು, ಕೆಂಪು ಬಣ್ಣದ ಸಾಮಾನ್ಯ ವೇಗಧೂತ ಬಸ್​ಗಳಿಗಿಂತ ಹೆಚ್ಚಾಗಿ ಕ್ಲಾಸಿಕ್ ಅನುಭವ ನೀಡುವ ಅಶ್ವಮೇಧ ಬಸ್​ಗಳ ಕಡೆ ಮುಖ ಮಾಡುವಂತೆ ಮಾಡಿದೆ. ಇದಕ್ಕೆ ಈ ಬಸ್​ಗಳ ಗಳಿಕೆಯಲ್ಲಿನ ಅಂಕಿ ಅಂಶಗಳೇ ನಿದರ್ಶನವಾಗಿದೆ.

ಕೆಎಸ್ಆರ್​ಟಿಸಿಯ ಅಶ್ವಮೇಧ ಬಸ್​ಗಳು (ETV Bharat)

ಸದ್ಯ ಬೆಂಗಳೂರು ಕೇಂದ್ರ, ರಾಮನಗರ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಮೈಸೂರು, ಮೈಸೂರು ನಗರ, ಮಂಡ್ಯ, ಚಾಮರಾಜನಗರ, ಹಾಸನ, ಚಿಕ್ಕಮಗಳೂರು, ಮಂಗಳೂರು, ಪುತ್ತೂರು, ದಾವಣಗೆರೆ, ಶಿವಮೊಗ್ಗ, ಚಿತ್ರದುರ್ಗ ವಿಭಾಗಗಳಿಂದ ಅಶ್ವಮೇಧ ಕ್ಲಾಸಿಕ್ ಬಸ್​ಗಳನ್ನು ಕಾರ್ಯಾಚರಣೆ ಮಾಡಲಾಗುತ್ತಿದೆ.

ಕೆಎಸ್ಆರ್​ಟಿಸಿಯ ಅಶ್ವಮೇಧ ಬಸ್​ಗೆ ಸಿಎಂ ಸಿದ್ದರಾಮಯ್ಯ ಪೂಜೆ (ETV Bharat)

ಒಟ್ಟು 507 ಬಸ್​ಗಳನ್ನು ರಸ್ತೆಗಳಿಸಿದ್ದು, ಇದರಲ್ಲಿ 400 ಬಸ್​ಗಳು ಪಾಯಿಂಟ್ ಟು ಪಾಯಿಂಟ್ ಸೇವೆ ಒದಗಿಸುತ್ತಿವೆ. ಈ ಬಸ್​ಗಳು ಕೆಂಪು ಬಣ್ಣದ ವೇಗಧೂತ ಬಸ್​ಗಳಿಗಿಂತ ಹೆಚ್ಚಾಗಿ ಪ್ರಯಾಣಿಕರನ್ನು ಆಕರ್ಷಿಸುತ್ತಿವೆ. ಬಸ್​ಗಳ ಗಾತ್ರ, ವಿನ್ಯಾಸ, ಆಸನಗಳ ವಿನ್ಯಾಸ, ಸ್ಥಳಾವಕಾಶ, ದೊಡ್ಡ ಕಿಟಕಿ ಗಾಜುಗಳು ಮತ್ತು ವೇಗಕ್ಕೆ ಮನಸೋತಿರುವ ಪ್ರಯಾಣಿಕರು ಮೊದಲ ಆದ್ಯತೆಯನ್ನು ಅಶ್ವಮೇಧ ಕ್ಲಾಸಿಕ್ ಬಸ್​ಗಳಿಗೆ ನೀಡುತ್ತಿದ್ದಾರೆ.

ಅಶ್ವಮೇಧ ಬಸ್​ ಒಳಗೆ ಸಿಎಂ ಬರುತ್ತಿರುವ ದೃಶ್ಯ (ETV Bharat)

ಇಲಾಖೆಗೆ ಉತ್ತಮ ಆದಾಯ; 16 ವಿಭಾಗಳ 382 ಶೆಡ್ಯೂಲ್​ಗಳಲ್ಲಿ ಸಂಚರಿಸುತ್ತಿರುವ ಅಶ್ವಮೇಧ ಕ್ಲಾಸಿಕ್ ಬಸ್​ಗಳು 74,72,204 ಕಿಲೋಮೀಟರ್ ಸಂಚರಿಸಿದ್ದು, ₹ 41 ಕೋಟಿ 90 ಲಕ್ಷ, 44 ಸಾವಿರದ 47 ರೂಪಾಯಿ (41,90,44,047 ರೂ.)ಗಳ ಆದಾಯ ಗಳಿಸಿದೆ. ಪ್ರತಿ ಕಿಲೋಮೀಟರ್ ಗೆ 43 ರೂ.ಗಳಿಂದ 68 ರೂ.ಗಳವರೆಗೆ ಒಂದೊಂದು ವಿಭಾಗದಲ್ಲಿ ಒಂದೊಂದು ರೀತಿಯ ಗಳಿಕೆಯನ್ನು ಮಾಡುತ್ತಿರುವ ಬಸ್​ಗಳು ಸರಾಸರಿ 56.08 ರೂ. ಗಳಿಕೆ ಮಾಡುತ್ತಿವೆ. ಇದೇ ಸಾಮಾನ್ಯ ಸಾರಿಗೆಯಾದ ವೇಗಧೂತ ಬಸ್​ಗಳಲ್ಲಿ 42 ರೂ.ಗಳಿಂದ 68 ರೂ.ಗಳ ವರೆಗೆ ಆದಾಯ ಸಂಗ್ರಹ ಮಾಡುತ್ತಿದ್ದರೂ ಸರಾಸರಿ ಗಳಿಕೆ 45 ರೂ.ಗಳ ಆಸು ಪಾಸಿನಲ್ಲಿದೆ. ಸಾಮಾನ್ಯ ಬಸ್​ಗಳಿಗಿಂತಲೂ ಗಳಿಕೆಯಲ್ಲಿ ಸರಾಸರಿ 10 ರೂ.ಗಳ ಹೆಚ್ಚಿನ ಹಣವನ್ನು ಅಶ್ವಮೇಧ ಕ್ಲಾಸಿಕ್ ಬಸ್​ಗಳು ಗಳಿಸುತ್ತಿವೆ.

ಅಶ್ವಮೇಧ ಬಸ್​ನಲ್ಲಿ ಕುಳಿತುಕೊಂಡಿರುವ ಸಿಎಂ ಸಿದ್ದರಾಮಯ್ಯ (ETV Bharat)

ನಿರ್ವಹಣಾ ವೆಚ್ಚ ಕಡಿತ: ಸಾಮಾನ್ಯ ಸಾರಿಗೆ ಬಸ್​ಗಳಾದ ವೇಗಧೂತ ಬಸ್​ಗಳಲ್ಲಿ ಚಾಲಕ ಮತ್ತು ನಿರ್ವಾಹಕ ಇಬ್ಬರು ಕಾರ್ಯನಿರ್ವಹಣೆ ಮಾಡುತ್ತಾರೆ. ಆದರೆ ಪಾಯಿಂಟ್ ಟು ಪಾಯಿಂಟ್ ಸೇವೆ ಒದಗಿಸುತ್ತಿರುವ ಅಶ್ವಮೇಧ ಕ್ಲಾಸಿಕ್ ಬಸ್​ಗಳಲ್ಲಿ ಚಾಲಕ ಕಂ ಕಂಡಕ್ಟರ್ ಒಬ್ಬರೇ ಇರಲಿದ್ದಾರೆ. ಚಾಲಕರೇ ಟಿಕೆಟ್ ನೀಡುತ್ತಾರೆ. ಹಾಗಾಗಿ ಒಬ್ಬರು ಸಿಬ್ಬಂದಿಯಲ್ಲಿಯೇ ಬಸ್ ನಿರ್ವಹಣೆಯಾಗಲಿದೆ. ಇದರಿಂದ ನಿಗಮಕ್ಕೂ ಉಳಿತಾಯವಾಗಲಿದೆ.

ಅಶ್ವಮೇಧ ಬಸ್​ಗಳಿಗೆ ಪ್ರಯಾಣಿಕರಿಂದ ಉತ್ತಮ ಸ್ಪಂದನೆ ಸಿಕ್ಕಿದೆ. ಸದ್ಯ 500 ಅಶ್ವಮೇಧ ಕ್ಲಾಸಿಕ್ ಬಸ್​ಗಳು ಸಂಚರಿಸುತ್ತಿದ್ದು, ಮತ್ತಷ್ಟು ಬಸ್​ಗಳಿಗೆ ಬೇಡಿಕೆ ಇದೆ. ಇತರ ಭಾಗಗಳಿಂದಲೂ ಬೇಡಿಕೆ ಬರುತ್ತಿದೆ. ಹಾಗಾಗಿ ಮತ್ತಷ್ಟು ಬಸ್​ಗಳ ಖರೀದಿಗೆ ಕ್ರಮ ಕೈಗೊಳ್ಳಲಾಗಿದೆ. ಆದಷ್ಟು ಬೇಗ ಮತ್ತಷ್ಟ ಅಶ್ವಮೇಧ ಕ್ಲಾಸಿಕ್ ಬಸ್​ಗಳು ಕೆಎಸ್ಆರ್​ಟಿಸಿಗೆ ಸೇರ್ಪಡೆಯಾಗಲಿವೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾಹಿತಿ ನೀಡಿದ್ದಾರೆ.

ಅಶ್ವಮೇಧ ಬಸ್​ಗಳ ವಿಶೇಷತೆ: ವಾಹನದ ಎತ್ತರ 3.4 ಮೀಟರ್ (ಈ ಹಿಂದೆ 3.2 ಮೀಟರ್ ಇತ್ತು). ಉತ್ತಮ ಗುಣಮಟ್ಟದ ಕುಷನ್ ಮತ್ತು ರೆಕ್ಸಿನ್ ಒಳಗೊಂಡಂತೆ ಪ್ರತಿ ಆಸನದ ಹಿಂಬದಿಯಲ್ಲಿ ಮ್ಯಾಗಜಿನ್ ಹಾಗೂ ವಾಟರ್ ಬಾಟಲ್ ಪೌಚ್‌ನ ಸೌಲಭ್ಯ ಇದೆ.

ವಾಹನದ ಮುಂದಿನ ಹಾಗೂ ಹಿಂದಿನ ಗಾಜು ವಿಶಾಲವಾಗಿದೆ. ಪ್ರಯಾಣಿಕರ ಕಿಟಕಿ ಫೋಮ್ ಹಾಗೂ ಮೇಲಿನ ಗಾಜು ಕೂಡ ಹೆಚ್ಚು ಅಗಲವಾಗಿವೆ. ಮೇಲ್ಛಾವಣಿಯಲ್ಲಿ 2 ಸಾಲು ಗ್ರಾಬ್ ರೈಲ್, ಬಸ್​​​ನ ಹಿಂದೆ ಹಾಗೂ ಮುಂದೆ ಎಲ್.ಇ.ಡಿ ಮಾರ್ಗ ಫಲಕ ಅಳವಡಿಸಲಾಗಿದೆ.

ಜಾಹೀರಾತು ಮಾದರಿಯ ಹ್ಯಾಂಡ್ ಗ್ರಿಪ್, ಎಫ್.ಆರ್.ಪಿ ಡ್ಯಾಶ್ ಬೋರ್ಡ್, ಪ್ರವೇಶದ ಫುಟ್ ಸ್ಟೆಪ್ ಮೇಲೆ ಸ್ಕ್ರಿಪ್ ಮಾದರಿಯ ಎಲ್​.ಇ.ಡಿ ಬಲ್ಬ್​​ಗಳು ಮತ್ತು ಮುಂಬದಿ ಹಾಗೂ ಹಿಂಬದಿಯಲ್ಲಿ ತಲಾ 1 ಕ್ಯಾಮೆರಾ ಅಳವಡಿಸಲಾಗಿದೆ. ಎಲೆಕ್ಟ್ರಾನಿಕ್ ವಾಹನ ಸ್ಥಿರತೆ ನಿಯಂತ್ರಣ ಉಪಕರಣವೂ ಇದೆ. ಟ್ರ್ಯಾಕಿಂಗ್ ಉಪಕರಣ, ಪ್ಯಾನಿಕ್ ಬಟನ್‌ಗಳು ಮತ್ತು ಬಸ್ ನಿಲ್ದಾಣಗಳ ಮಾಹಿತಿ ನೀಡುವ ಧ್ವನಿವರ್ಧಕ ಯಂತ್ರಗಳು ಸೇರಿದಂತೆ ಹೀಗೆ ಹತ್ತಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಓದಿ: ಮಂಡ್ಯ: ಹಳ್ಳಕ್ಕೆ ಬಿದ್ದ ಕೆಎಸ್​ಆರ್​ಟಿಸಿ ಬಸ್, ಹಲವರಿಗೆ ಗಾಯ - KSRTC Bus Accident

ETV Bharat Logo

Copyright © 2024 Ushodaya Enterprises Pvt. Ltd., All Rights Reserved.