ETV Bharat / state

ಕೆಪಿಎಸ್​ಸಿ ನೇಮಕಾತಿ ಪಟ್ಟಿ ಕಳವು, ಉನ್ನತ ಮಟ್ಟದ ತನಿಖೆಗೆ ಎಚ್ ವಿಶ್ವನಾಥ್ ಆಗ್ರಹ - KPSC - KPSC

2016 ರ ಅಧಿಕಾರಿಗಳ ಆಯ್ಕೆಗೆ ಸಂಬಂಧಿಸಿದ ಪಟ್ಟಿ ಕಳವು ಆಗಿರುವ ಕುರಿತ ವಿಧಾನಸೌಧದ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಆಯ್ಕೆ ಪಟ್ಟಿ ಕಂಪ್ಯೂಟರ್‌ನಲ್ಲಿ ಸೇವ್​ ಆಗಿರಬಹುದು. ನೋಡುವ ಬದಲು ಕಳವಾಗಿದೆ ಎಂದು ದೂರು ನೀಡಿದ್ದು, ಈ ರೀತಿ ಜನರನ್ನು ಮರುಳು ಮಾಡಲು ಯತ್ನಿಸಿರುವುದು ಸರಿಯಲ್ಲ ಎಂದು ವಿಧಾನ ಪರಿಷತ್ ಸದಸ್ಯ ಎಚ್ ವಿಶ್ವನಾಥ್ ಟೀಕಿಸಿದರು.

Legislative Council member H Vishwanath spoke at the press conference.
ವಿಧಾನ ಪರಿಷತ್ ಸದಸ್ಯ ಎಚ್ ವಿಶ್ವನಾಥ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
author img

By ETV Bharat Karnataka Team

Published : Mar 31, 2024, 7:59 PM IST

Updated : Mar 31, 2024, 8:31 PM IST

ವಿಧಾನ ಪರಿಷತ್ ಸದಸ್ಯ ಎಚ್ ವಿಶ್ವನಾಥ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಮೈಸೂರು: ಕೆಪಿಎಸ್‌ಸಿ ನೇಮಕಾತಿ ಪರಿಷ್ಕೃತ ಪಟ್ಟಿ ಕಳವು ಪ್ರಕರಣದಲ್ಲಿ ದೊಡ್ಡ ಅಧಿಕಾರಿಗಳು ಹಾಗೂ ರಾಜಕಾರಣಿಗಳು ಭಾಗಿಯಾಗಿರುವ ಸಾಧ್ಯತೆ ಇದೆ. ಈ ಕುರಿತು ಉನ್ನತ ಮಟ್ಟದ ತನಿಖೆ ಆಗಬೇಕೆಂದು ವಿಧಾನ ಪರಿಷತ್ ಸದಸ್ಯ ಎಚ್ ವಿಶ್ವನಾಥ್ ಆಗ್ರಹಿಸಿದರು.

ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಪಿಎಸ್‌ಸಿ ಮುಖ್ಯಮಂತ್ರಿಗಳ ನೇರ ವ್ಯಾಪ್ತಿಯಲ್ಲಿ ಬರುತ್ತದೆ. ಹೀಗಿದ್ದರೂ 2016 ರ ಅಧಿಕಾರಿಗಳ ಆಯ್ಕೆಗೆ ಸಂಬಂಧಿಸಿದ ಪಟ್ಟಿ ಕಳವು ಆಗಿದೆ ಎಂದು ವಿಧಾನಸೌಧದ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಪಟ್ಟಿ ಕಂಪ್ಯೂಟರ್‌ನಲ್ಲಿ ಸೇವ್ ಆಗಿರಬಹುದು. ಅದನ್ನು ನೋಡುವ ಬದಲು ಕಳ್ಳತನವಾಗಿದೆ ಎಂದು ದೂರು ನೀಡಿದ್ದು, ಈ ರೀತಿ ಜನರನ್ನು ಮರುಳು ಮಾಡಲು ಯತ್ನಿಸಿರುವುದು ಸರಿಯಲ್ಲ ಎಂದರು.

ಕರ್ನಾಟಕ ಲೋಕಸೇವಾ ಆಯೋಗ ಒಂದು ಹಿರಿಯ ನಾಗರಿಕ ಸಂಸ್ಥೆ ಇದು, ನಾಡಿನ ಆಡಳಿತ ಚುಕ್ಕಾಣಿ ಹಿಡಿದು ನಾಡ ಅಭಿವೃದ್ಧಿಗೆ ಶ್ರಮಿಸುವಂತಹ ಅಧಿಕಾರಿಗಳನ್ನು ಆಯ್ಕೆ ಮಾಡುವಂತಹ ಸಂಸ್ಥೆ, ಉದ್ಯೋಗ ಕೊಡುವಂತ, ಸರ್ಕಾರಿ ಉದ್ಯೋಗಿಗಳನ್ನು ಆಯ್ಕೆ ಮಾಡುವಂತ ನಾಡಜನರ ಸಂಸ್ಥೆ, ವಿವಾದದ ಆರಾಜಕತೆಯ, ಭ್ರಷ್ಟಾಚಾರ ಗೊಂದಲದ ಗೂಡಾಗಿರುವದು ಶೂಚನೀಯವಾದುದು ಎಂದು ಖೇದ ವ್ಯಕ್ತಪಡಿಸಿದರು.

ಈ ಹಿಂದೆ ಭ್ರಷ್ಟಾಚಾರದ ಮೂಲಕ ಆಯ್ಕೆಯಾಗಿರುವವರೇ ಈ ಕಳವು ಪ್ರಕರಣದಲ್ಲಿ ಭಾಗಿಯಾಗಿರುವ ಶಂಕೆಯಿದೆ. ಹೀಗಾಗಿ ಈ ಪ್ರಕರಣದ ತನಿಖೆ ಪೊಲೀಸರಿಂದ ಸಾಧ್ಯವಿಲ್ಲ. ಆದ್ದರಿಂದಾಗಿ ಉನ್ನತ ಮಟ್ಟದ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕೆಂದು ಅವರು ಒತ್ತಾಯಿಸಿದರು.

ಇದೇ ವೇಳೆ, ಪಟ್ಟಿ ಕಳವು ಕುರಿತು ಸಿಎಂ ಮೌನವಾಗಿರುವುದು ಸರಿಯಲ್ಲ. ವಿರೋಧ ಪಕ್ಷಗಳು, ಶಾಸಕರು, ಸಂಘ ಸಂಸ್ಥೆಗಳೂ ಮಾತನಾಡದಿರುವುದು ಬೇಸರ ತರಿಸುತ್ತದೆ ಎಂದರು. ಈ ಬಾರಿಯ ಚುನಾವಣೆ ಕುರಿತ ಸುದ್ದಿಗಾರರ ಪ್ರಶ್ನೆಗೆ, ಕೆಲ ದಿನಗಳ ನಂತರ ಈ ಬಗ್ಗೆ ಮಾತನಾಡುವುದಾಗಿ ವಿಶ್ವನಾಥ್ ಉತ್ತರಿಸಿದರು.

ಇದನ್ನೂ ಓದಿ: ಕೆಪಿಎಸ್​ಸಿ ನೇಮಕಾತಿ ಆಯ್ಕೆ ಪಟ್ಟಿಯ ಕಡತವೇ ಮಿಸ್! ವಿಧಾನಸೌಧ ಠಾಣೆಯಲ್ಲಿ ಎಫ್​ಐಆರ್ - KPSC recruitment

Last Updated : Mar 31, 2024, 8:31 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.