ETV Bharat / state

ಇತಿಹಾಸ ಪ್ರಸಿದ್ಧ ಪುತ್ತೂರಿನ ಕಂಬಳ ಆರಂಭ: ಕಂಬಳ ಕ್ಷೇತ್ರದ ಸಾಧಕರಿಗೆ ಸನ್ಮಾನ - ಕೋಟಿ ಚೆನ್ನಯ ಜೋಡುಕರೆ ಕಂಬಳ

ಕೋಟಿ ಚೆನ್ನಯ ಜೋಡುಕರೆ ಕಂಬಳ ಆರಂಭಗೊಂಡಿದ್ದು, ಕಂಬಳ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು.

ಇತಿಹಾಸ ಪ್ರಸಿದ್ಧ ಪುತ್ತೂರಿನ ಕಂಬಳ ಆರಂಭ
ಇತಿಹಾಸ ಪ್ರಸಿದ್ಧ ಪುತ್ತೂರಿನ ಕಂಬಳ ಆರಂಭ
author img

By ETV Bharat Karnataka Team

Published : Jan 28, 2024, 6:43 PM IST

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರಿನ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರು ದೇವರಮಾರು ಗದ್ದೆಯಲ್ಲಿ 31ನೇ ವರ್ಷದ ಐತಿಹಾಸಿಕ ಕೋಟಿ ಚೆನ್ನಯ ಜೋಡುಕರೆ ಕಂಬಳ ಜ.27ರಂದು ಬೆಳಗ್ಗೆ ಆರಂಭಗೊಂಡಿದೆ. ವರ್ಷದಿಂದ ವರ್ಷಕ್ಕೆ ಒಂದೊಂದು ಹೊಸತನದೊಂದಿಗೆ ಅದ್ಧೂರಿಯಾಗಿ ನಡೆಯುತ್ತಿರುವ ಕಂಬಳ ಕೂಟ ಈ ಬಾರಿ ಪುತ್ತೂರಿನ ಪೇಟೆಯಾದ್ಯಂತ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದೆ.

ಇದರ ಜೊತೆಗೆ ಕಂಬಳದ ಕೋಣದ ಓಟಗಾರರಿಗೆ, ಕೋಣದ ಮಾಲೀಕರಿಗೆ ಗೌರವಿಸುವ ವಿಶೇಷ ವಿಜಯ ವೇದಿಕೆ ನಿರ್ಮಾಣ ಮಾಡಲಾಗಿದೆ. ಸಹಸ್ರ ಸಂಖ್ಯೆಯಲ್ಲಿ ಕಂಬಳಾಭಿಮಾನಿಗಳು ವೀಕ್ಷಣೆಗೆ ಆಗಮಿಸಿದ್ದಾರೆ. ಶಾಸಕ ಅಶೋಕ್ ಕುಮಾರ್ ರೈ ಅವರು ಮಾತನಾಡಿ, ಇವತ್ತು ಕಂಬಳವನ್ನು ರಾಷ್ಟ್ರವ್ಯಾಪಿಗೆ ಪಸರಿಸುವ ಕೆಲಸ ಆಗಿದೆ. ಇದು ನಮ್ಮ ದೈವ ದೇವರ ಅನುಗ್ರಹದಿಂದ ಆಗಿರುವುದು. ಕಂಬಳಕ್ಕೆ ಪೇಟದವರು ಸುಮಾರು 15 ವರ್ಷದಿಂದ ನಿರಂತರ ತೊಂದರೆ ಕೊಟ್ಟಿದ್ದಾರೆ. ಆದರೆ ನಾವು ಯಾವತ್ತೂ ಜಗ್ಗಲಿಲ್ಲ.

ಕಂಬಳ ಸಮಿತಿ ಮತ್ತು ನಾವು ಸೇರಿಕೊಂಡು ನಿರಂತರ ಹೋರಾಟ ಮಾಡಿಕೊಂಡು ಇವತ್ತು ಸುಪ್ರಿಂ ಕೋರ್ಟ್​ನಲ್ಲಿ ಐವರು ನ್ಯಾಯಾಧೀಶರ ಪೀಠ ನಮ್ಮ ಕಂಬಳದ ಪರವಾಗಿ ತೀರ್ಪು ಕೊಟ್ಟಿದೆ. ಇತ್ತೀಚಿಗೆ ಬೆಂಗಳೂರಿನಲ್ಲಿ ಕಂಬಳ ಮಾಡಿ ವಿಶ್ವದಲ್ಲಿ ಗುರುತಿಸಿಕೊಂಡಿದ್ದೇವೆ. ಮುಂಬೈಯಲ್ಲಿ ಕಂಬಳ ಮಾಡುವ ಆಶಯ ವ್ಯಕ್ತವಾಗಿದೆ. ಮುಂದಿನ ದಿನ ದುಬೈಯಲ್ಲಿ ಕಂಬಳ ಮಾಡುತ್ತೇವೆ. ದೆಹಲಿಯಲ್ಲೂ ಕಂಬಳ ಮಾಡುತ್ತೇವೆ, ಇಡೀ ವಿಶ್ವಕ್ಕೆ ಕಂಬಳ ತೋರಿಸಲಿದ್ದೇವೆ ಎಂದರು.

ಕಂಬಳ ಕ್ಷೇತ್ರದ ಸಾಧಕರಿಗೆ ಸನ್ಮಾನ
ಕಂಬಳ ಕ್ಷೇತ್ರದ ಸಾಧಕರಿಗೆ ಸನ್ಮಾನ

ಮಾಜಿ ನಗರಾಭಿವೃದ್ಧಿ ಸಚಿವರಾಗಿರುವ ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿ ಗೌರವಾಧ್ಯಕ್ಷ ವಿನಯ ಕುಮಾರ್ ಸೊರಕೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಕಂಬಳ ಒಂದು ಜನಪದ ವೀರ ಕ್ರೀಡೆಯಾಗಿದೆ. ಕೃಷಿ ಜಾನಪದ ಕ್ರೀಡೆ ನಿಲ್ಲಿಸಬಾರದು ಎಂದು 36 ವರ್ಷದಿಂದ ನಿಂತಿದ್ದ ಕಂಬಳವನ್ನು ದಿ.ಜಯಂತ ರೈ ನೇತೃತ್ವದಲ್ಲಿ ಕರೆ ನಿರ್ಮಾಣ ಮಾಡಿ ಪುನರಾಂಭಿಸಿದರು. ಇದಕ್ಕೆ ಸಂಪೂರ್ಣ ಸಹಕಾರ ನೀಡಿದವರು ಕಂಬಳದ ಕೋಣಗಳ ಮಾಲೀಕರು ಎಂದು ಹೇಳಿದರು.

ಚಲನಚಿತ್ರ ನಟಿ ಸೋನು ಗೌಡ ಅವರು ಮಾತನಾಡಿ, 2021ಕ್ಕೆ ಮುಲ್ಕಿ ಕಂಬಳಕ್ಕೆ ಬಂದಿದ್ದೆ. ಇವತ್ತು ಪುತ್ತೂರು ಕಂಬಳದಲ್ಲಿ ವೇದಿಕೆಯೆ ಸಿಕ್ಕಿದೆ. ವಿಶ್ವಕ್ಕೆ ಕಾಂತಾರ ಮೂಲಕ ಕಂಬಳದ ಪರಿಚಯ ಮಾಡಿಕೊಟ್ಟ ರಿಷಬ್ ಶೆಟ್ಟಿಯವರಿಗೆ ಧನ್ಯವಾದ ಎಂದ ಅವರು ನನಗೆ ಡಯಲಾಗ್ ಗೊತ್ತಿಲ್ಲ. ಹಾಡು ಹಾಡುತ್ತೇನೆ ಎಂದು ಹಾಡನ್ನು ಹಾಡಿ ಪ್ರೇಕ್ಷಕರನ್ನು ಮನರಂಜಿಸಿದರು. ನಟಿ ನೇಹ ಗೌಡ ಮಾತನಾಡಿ ನಾನು ಪ್ರಥಮ ಬಾರಿಗೆ ಕಂಬಳಕ್ಕೆ ಬಂದಿರುವುದು. ಆದರೆ ನನ್ನ ಗಂಡ ಇಲ್ಲೇ ಓದಿರುವುದು ಎಂದ ಅವರು ಕಂಬಳಕ್ಕೆ ಜೈಕಾರ ಹಾಕುವ ಮೂಲಕ ವಂದಿಸಿದರು.

ಇದೇ ವೇಳೆ ಕಂಬಳ ಕ್ಷೇತ್ರದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಾಣಿಸಾಗು ಉಮೇಶ್ ಶೆಟ್ಟಿ, ಉದ್ಯಮ ಕ್ಷೇತ್ರದಲ್ಲಿ ಎಸ್.ಆರ್.ಕೆ ಲ್ಯಾಡರ್ಸ್​ನ ಮಾಲಕ ಕೇಶವ ಗೌಡ ಅಮೈ, ಧಾರ್ಮಿಕ ಕ್ಷೇತ್ರದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರವೀಂದ್ರ ಶೆಟ್ಟಿ ನುಳಿಯಾಲು, ಹೈನುಗಾರಿಕೆ ಕ್ಷೇತ್ರಕ್ಕೆ ಸಂಬಂಧಿಸಿದ ಜೈಗುರು ಆಚಾರ್ ಹಿಂದಾರ್, ಯಕ್ಷಗಾನ ಕಲಾವಿದ ಕಡಬ ಶ್ರೀನಿವಾಸ ರೈ ಅವರನ್ನು ಕೋಟಿಚೆನ್ನಯ ಕಂಬಳ ಸಮಿತಿಯಿಂದ ಸನ್ಮಾನಿಸಲಾಯಿತು.

ಇದನ್ನೂ ಓದಿ: ಕೊಪ್ಪಳದ ಗವಿಸಿದ್ಧೇಶ್ವರ ಜಾತ್ರೆಯಲ್ಲಿ ಭಕ್ತರನ್ನು ಸೆಳೆಯುತ್ತಿದೆ ಮಿರ್ಚಿ ಘಮಲು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.