ETV Bharat / state

ಬಿಜೆಪಿಗೆ ರಾಜೀನಾಮೆ ನೀಡಿದ ಕೊಪ್ಪಳ ಸಂಸದ ಸಂಗಣ್ಣ ಕರಡಿ: ನಾಳೆ ಕಾಂಗ್ರೆಸ್​ ಸೇರ್ಪಡೆ - Sanganna Karadi - SANGANNA KARADI

ಕೊಪ್ಪಳ ಸಂಸದ ಸಂಗಣ್ಣ ಕರಡಿ ಅವರು ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದು, ನಾಳೆ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ.

Koppal MP Sanganna Kardi resigns to BJP
ಸಂಗಣ್ಣ ಕರಡಿ
author img

By ETV Bharat Karnataka Team

Published : Apr 16, 2024, 8:22 PM IST

Updated : Apr 16, 2024, 9:48 PM IST

ಕೊಪ್ಪಳ: ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್​ ಸಿಗದೆ ಮುನಿಸಿಕೊಂಡಿದ್ದ ಕೊಪ್ಪಳ ಸಂಸದ ಸಂಗಣ್ಣ ಕರಡಿ ಇಂದು ಬಿಜೆಪಿಗೆ ರಾಜೀನಾಮೆ ನೀಡಿದರು. ''ನಾನು ಭಾರತೀಯ ಜನತಾ ಪಾರ್ಟಿಯ ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ನನ್ನ ರಾಜೀನಾಮೆಯನ್ನು ಅಂಗೀಕಾರ ಮಾಡಬೇಕು'' ಎಂದು ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ಪತ್ರ ಬರೆದಿದ್ಧಾರೆ.

ಹಾಲಿ ಸಂಸದ ಸಂಗಣ್ಣ ಕರಡಿ ಅವರಿಗೆ ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್​ ನೀಡಿಲ್ಲ. ಇವರ ಬದಲಿಗೆ ಬಸವರಾಜ ಕ್ಯಾವಟರ್​​ ಅವರಿಗೆ ಟಿಕೆಟ್​ ಕೊಡಲಾಗಿದೆ. ಇದರಿಂದ ಆರಂಭದಿಂದಲೂ ಸಂಗಣ್ಣ ಅಸಮಾಧಾನಗೊಂಡಿದ್ದರು. ಈ ಹಿಂದೆ ಬಿಜೆಪಿ ನಾಯಕರು ಸಂಧಾನ ಪ್ರಯತ್ನ ಮಾಡಿದ್ದರು. ಆಗ ಪಕ್ಷದ ಅಭ್ಯರ್ಥಿ ಪರವಾಗಿ ಪ್ರಚಾರ ಮಾಡುವ ಸುಳಿವು ನೀಡಿದ್ದರು.

ಆದರೆ, ಇಂದು ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಕೆ.ರಾಜಶೇಖರ ಹಿಟ್ನಾಳ ತಮ್ಮ ನಾಮಪತ್ರ ಸಲ್ಲಿಕೆಗೆ ಮೊದಲು ಸಂಗಣ್ಣ ಕರಡಿ ಅವರನ್ನು ಭೇಟಿ ಮಾಡಿದರು. ನೇರವಾಗಿ ಸಂಗಣ್ಣ ಮನೆಗೆ ಆಗಮಿಸಿ, ಆಶೀರ್ವಾದ ಪಡೆದರು. ಈ ವೇಳೆ, ಮಾತನಾಡಿದ್ದ ಸಂಗಣ್ಣ ಕರಡಿ, ''ರಾಜಶೇಖರ ನಾಮಪತ್ರ ಸಲ್ಲಿಸುವ ಮೊದಲು ನಮ್ಮ ಮನೆಗೆ ಆಶೀರ್ವಾದ ಪಡೆಯಲು ಬಂದಿದ್ದರು, ಅವರಿಗೆ ಶುಭವಾಗಲಿ ಎಂದು ಹಾರೈಸಿದ್ದೇನೆ'' ಎಂದರು.

ಅಷ್ಟೇ ಅಲ್ಲ, ''ಕಾಂಗ್ರೆಸ್​ ಶಾಸಕರಾದ ಲಕ್ಷ್ಮಣ ಸವದಿ, ಅಮರೇಗೌಡ ಪಾಟೀಲ್ ಅವರು ಈಗಾಗಲೇ ಮಾತನಾಡಿದ್ದಾರೆ. ನಾನು ಇಂದು ಬೆಂಗಳೂರಿಗೆ ತೆರಳಿ ಸಿಎಂ, ಡಿಸಿಎಂ ಭೇಟಿಯಾಗುವೆ. ಆಮೇಲೆ ಮುಂದಿನ ನಿರ್ಧಾರ ಮಾಡುತ್ತೇನೆ. ಇಲ್ಲಿಯವರೆಗೂ ನನ್ನೊಂದಿಗೆ ಬಿಜೆಪಿ ನಾಯಕರು ಯಾರೂ ಮಾತನಾಡಿಲ್ಲ. ಸಮಾಜದ ಶ್ರೀಗಳು ಮತ್ತು ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಬಿಟ್ಟರೆ ಬಿಜೆಪಿಯ ಮತ್ಯಾರೂ ಮಾತನಾಡಿಲ್ಲ. ನಾನು ಬೆಂಗಳೂರಿಗೆ ಹೋಗಿ ಬಂದಮೇಲೆ ಎಲ್ಲವನ್ನೂ ಮಾತನಾಡುತ್ತೇನೆ'' ಎಂದು ಸಂಗಣ್ಣ ಕರಡಿ ಹೇಳಿದರು.

ಮತ್ತೊಂದೆಡೆ, ಸೋಮವಾರ ಸಂಜೆ ಲಕ್ಷ್ಮಣ ಸವದಿ ಸಹ ಸಂಗಣ್ಣ ಅವರ ಮನೆಗೆ ಭೇಟಿ ನೀಡಿ, ಮಾತುಕತೆ ನಡೆಸಿದ್ದರು. ಈ ಹಿಂದೆ ಸಂಗಣ್ಣ ಜೆಡಿಎಸ್‌ನಲ್ಲಿದ್ದಾಗ ಸವದಿ ಅವರೇ ಅವರನ್ನು ಬಿಜೆಪಿಗೆ ಕರೆ ತಂದಿದ್ದರು. ಈಗ ಕಾಂಗ್ರೆಸ್‌ನಲ್ಲಿರುವ ಸವದಿ, ತಾವು ಇರುವ ಪಕ್ಷಕ್ಕೆ ಸಳೆಯುವ ಪ್ರಯತ್ನ ಮಾಡಿದ್ದಾರೆ. ಈ ಬೆಳವಣಿಗೆಗಳ ನಡುವೆ ಅಧಿಕೃತವಾಗಿ ಬಿಜೆಪಿ ತೊರೆದಿರುವ ಸಂಗಣ್ಣ ಕರಡಿ ನಾಳೆ ಬೆಂಗಳೂರಲ್ಲಿ ಕೆಪಿಸಿಸಿ ಅಧ್ಯಕ್ಷ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ.

ಇದನ್ನೂ ಓದಿ: ಕೊಪ್ಪಳ ಅಸಮಾಧಾನ ಶಮನ: ಕರಡಿ ಸಂಗಣ್ಣ ಮನವೊಲಿಕೆ ಮಾಡುವಲ್ಲಿ ರಾಜ್ಯ ನಾಯಕರು ಸಕ್ಸಸ್

Last Updated : Apr 16, 2024, 9:48 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.