ETV Bharat / state

ಹೆಚ್ಚುವರಿ ತೆರಿಗೆ ವಿಧಿಸುವ 'ಮೋಟಾರು ವಾಹನಗಳ ತೆರಿಗೆ ನಿರ್ಧರಣೆ ತಿದ್ದುಪಡಿ' ವಿಧೇಯಕ ಅಂಗೀಕಾರ - MOTOR VEHICLES TAX BILL

ಮೋಟಾರು ವಾಹನಗಳ ತೆರಿಗೆ ನಿರ್ಧರಣೆ ಎರಡನೇ ತಿದ್ದುಪಡಿ ವಿಧೇಯಕ ವಿಧಾನಸಭೆಯಲ್ಲಿ ಇಂದು ಅಂಗೀಕಾರವಾಯಿತು.

assembly
ವಿಧಾನಸಭೆ (ETV Bharat)
author img

By ETV Bharat Karnataka Team

Published : 2 hours ago

ಬೆಳಗಾವಿ: ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ ಎರಡನೇ ತಿದ್ದುಪಡಿ ವಿಧೇಯಕ ವಿಧಾನಸಭೆಯಲ್ಲಿ ಅಂಗೀಕಾರವಾಯಿತು.

ದ್ವಿಚಕ್ರ ವಾಹನಗಳಿಗೆ 500 ರೂ. ಸಾರಿಗೆಯೇತರ ಮೋಟಾರು ಕಾರುಗಳ ಮೇಲೆ 1 ಸಾವಿರ ರೂ. ತೆರಿಗೆ ವಿಧಿಸಲು ಅವಕಾಶವಿರುವ ವಿಧೇಯಕ ಇದಾಗಿದೆ. ಈ ಹೆಚ್ಚುವರಿ ತೆರಿಗೆಯನ್ನು ವಾಹನ ಖರೀದಿ ವೇಳೆ 'ಒನ್ ಟೈಮ್' ವಿಧಿಸಲಾಗುತ್ತದೆ.

ಈ ವಿಧೇಯಕಕ್ಕೆ ವಿಪಕ್ಷ ನಾಯಕ ಆರ್.ಅಶೋಕ್ ಆಕ್ಷೇಪ ವ್ಯಕ್ತಪಡಿಸಿದರು. ಈಗಾಗಲೇ ಬೇರೆ ಬೇರೆ ತೆರಿಗೆಗಳನ್ನು ಹೆಚ್ಚಿಸಿದ್ದೀರಿ. ಈಗ ಮತ್ತೆ ಬೈಕು, ಕಾರುಗಳ ಮೇಲ್ಯಾಕೆ ಹೆಚ್ಚುವರಿ ತೆರಿಗೆ ಹಾಕ್ತಿದ್ದೀರಿ?. ಈಗಾಗಲೇ ದ್ವಿಚಕ್ರ, ಕಾರುಗಳ ಮಾಲೀಕರ ಮೇಲೆ ಬರೆ, ಹೊರೆ ಎರಡು ಹಾಕಿದ್ದೀರಿ. ಈ ವಿಧೇಯಕವನ್ನು ವಾಪಸ್ ಪಡೆಯಿರಿ ಎಂದು ಆಗ್ರಹಿಸಿದರು.

ಅಶ್ವತ್ಥ್​ನಾರಾಯಣ್ ಕೂಡಾ ಆಕ್ಷೇಪಿಸಿ, ಮೋಟಾರ್ ಟ್ಯಾಕ್ಸ್, ರೋಡ್ ಟ್ಯಾಕ್ಸ್ ಈಗಾಗಲೇ ಹೆಚ್ಚಿಸಿದ್ದೀರಿ. ಈಗ ಮತ್ತೆ ಸೆಸ್ ಹಾಕೋದು ಸರಿಯಲ್ಲ ಎಂದರು.

ಆನ್‌ಲೈನ್ ಗೇಮಿಂಗ್ ನಿಷೇಧಿಸಲು ಒತ್ತಾಯ: ಆನ್​ಲೈನ್ ಗೇಮಿಂಗ್ ನಿಷೇಧಿಸುವಂತೆ ಸದಸ್ಯರು ಒಕ್ಕೊರಲಿನಿಂದ ಒತ್ತಾಯಿಸಿದರು.‌ ಪ್ರಶ್ನೋತ್ತರ ಅವಧಿಯಲ್ಲಿ ಪ್ರಸ್ತಾಪವಾದ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಗೃಹ ಸಚಿವ ಜಿ.ಪರಮೇಶ್ವರ್, ಆನ್‌ಲೈನ್ ರಮ್ಮಿ, ಬೆಟ್ಟಿಂಗ್ ಆ್ಯಪ್​ಗಳಿಗೆ ಯಾವುದಕ್ಕೂ ಲೈಸೆನ್ಸ್ ಇಲ್ಲ. ಲೈಸೆನ್ಸ್ ಇಲ್ಲದೇ ಕಾರ್ಯನಿರ್ವಹಣೆ ಮಾಡ್ತಿವೆ. ಬೆಂಗಳೂರಿನಲ್ಲಿ 5, ವಿಜಯನಗರದಲ್ಲಿ ಒಬ್ಬರು ಆತ್ಮಹತ್ಯೆಗೆ ಬಲಿಯಾಗಿದ್ದಾರೆ. ಆನ್‌ಲೈನ್ ರಮ್ಮಿ ಆ್ಯಪ್​ಗಳ ಮೇಲೆ ಕ್ರಮಗಳು ಆಗ್ತಿವೆ. ಕೇಸ್‌ಗಳು ದಾಖಲಾಗ್ತಿವೆ. ಕೋರ್ಟ್ ಸ್ಟೇ ಇದೆ. ಅದನ್ನು ತೆರವು ಮಾಡಿಸ್ತೇವೆ. ಮುಂದಿನ ದಿನಗಳಲ್ಲಿ ಇದಕ್ಕೆ ಪೂರಕ ಕಾನೂನು ತರುತ್ತೇವೆ. ದುಡ್ಡಿರೋರು, ಟೆಕ್ಕಿಗಳೇ ಹೆಚ್ಚಾಗಿ ಆನ್‌ಲೈನ್ ಬೆಟ್ಟಿಂಗ್ ಆ್ಯಪ್‌ಗಳಿಗೆ ಬಲಿಯಾಗ್ತಾರೆ ಎಂದು ತಿಳಿಸಿದರು.

ಇದನ್ನೂ ಓದಿ: ವಿಪಕ್ಷ ಬಿಜೆಪಿ ಸಭಾತ್ಯಾಗದ ಮಧ್ಯೆ ರಾಜ್ಯಪಾಲರ ಅಧಿಕಾರ ಮೊಟಕುಗೊಳಿಸುವ ವಿಧೇಯಕ ಅಂಗೀಕಾರ - PANCHAYAT RAJ VV AMENDMENT BILL

ETV Bharat Logo

Copyright © 2024 Ushodaya Enterprises Pvt. Ltd., All Rights Reserved.