ETV Bharat / state

ರಾಜ್ಯದ ಆರ್ಥಿಕತೆ ಏರಿಕೆ; 1,03,683 ಕೋಟಿ ರೂ. ಆದಾಯ ಸಂಗ್ರಹ, ಮೂಲಸೌಕರ್ಯ ಕ್ಷೇತ್ರದಲ್ಲಿ ಹೆಚ್ಚಿನ ಹೂಡಿಕೆ

ಎಲ್ಲ ಪ್ರಮುಖ ಆದಾಯ ಸಂಗ್ರಹ ವಲಯಗಳಲ್ಲಿ ಕರ್ನಾಟಕ ಈ ಅವಧಿಯಲ್ಲಿ ಉತ್ತಮ ಸಾಧನೆ ಮಾಡಿದೆ. ಸರ್ಕಾರದ ಇತ್ತೀಚಿನ ಕೆಲವು ಸುಧಾರಣಾ ಕ್ರಮಗಳಿಂದಾಗಿ ಮುದ್ರಾಂಕ ಮತ್ತು ಅಬಕಾರಿ ತೆರಿಗೆ ಸಂಗ್ರಹ ಹೆಚ್ಚಳವಾಗಿದೆ.

ECONOMIC GROWTH
ಸಂಗ್ರಹ ಚಿತ್ರ (ETV Bharat)
author img

By ETV Bharat Karnataka Team

Published : Oct 31, 2024, 8:08 AM IST

ಬೆಂಗಳೂರು: ಪ್ರಸ್ತುತ ಹಣಕಾಸು ಸಾಲಿನ ಆರಂಭಿಕ ಏಳು ತಿಂಗಳ ಅವಧಿಯಲ್ಲಿ ಕರ್ನಾಟಕವು ಗಣನೀಯ ಆರ್ಥಿಕ ಪ್ರಗತಿ ಸಾಧಿಸಿದ್ದು, 1,03,683 ಕೋಟಿ ರೂ. ಆದಾಯ ಸಂಗ್ರಹ ಮಾಡಿದೆ.

ಪ್ರಸ್ತುತ ಹಣಕಾಸು ವರ್ಷದಲ್ಲಿ 1,95,525 ಕೋಟಿ ರೂ. ಆದಾಯ ಸಂಗ್ರಹ ಗುರಿ ಹೊಂದಲಾಗಿದ್ದು, ಈಗಾಗಲೇ ಶೇ.53 ರಷ್ಟು ಗುರಿ ಸಾಧಿಸಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ರಾಜ್ಯ ಆದಾಯ ಸಂಗ್ರಹದಲ್ಲಿ ಶೇ.11.2ರಷ್ಟು ಪ್ರಗತಿ ದಾಖಲಿಸಿದ್ದು, ಗ್ರಾಹಕರ ಬೇಡಿಕೆ ಹೆಚ್ಚಳ ಮತ್ತು ಆರ್ಥಿಕ ಚಟುವಟಿಕೆಗಳು ಚುರುಕುಗೊಂಡಿರುವುದನ್ನು ರಾಜ್ಯ ಸರ್ಕಾರ ಸ್ಪಷ್ಟಪಡಿಸಿದೆ.

ಎಲ್ಲಾ ವಲಯಗಳಲ್ಲಿ ಆದಾಯ ಸಂಗ್ರಹದಲ್ಲಿ ಹೆಚ್ಚಳ :

ಆದಾಯ ತೆರಿಗೆ : 2023-24ನೇ ಸಾಲಿನ ಗುರಿ 98,650 ಕೋಟಿ ರೂ., 2023-24ನೇ ಸಾಲಿನ ಸಂಗ್ರಹ 52,768 ಕೋಟಿ ರೂ. (ಅಕ್ಟೋಬರ್ ವರೆಗೆ), 2024-25 ಸಾಲಿನ ಗುರಿ 1,10,000 ಕೋಟಿ ರೂ., 2024-25 ಸಾಲಿನ ಸಂಗ್ರಹ (ಸೆಪ್ಟೆಂಬರ್) 58,537 ಕೋಟಿ ರೂ., ಅಭಿವೃದ್ಧಿ ದರ 10.9%.

ಅಬಕಾರಿ ತೆರಿಗೆ : 2023-24ನೇ ಸಾಲಿನ ಗುರಿ 36,000 ಕೋಟಿ ರೂ., 2023-24 (ಅಕ್ಟೋಬರ್ ವರೆಗೆ) 19,302 ಕೋಟಿ ರೂ., 2024-25 ಸಾಲಿನ ಗುರಿ 38,525 ಕೋಟಿ ರೂ., 2024-25 (ಸೆಪ್ಟೆಂಬರ್ ವರೆಗೆ) 20,502 ಕೋಟಿ ರೂ., ಅಭಿವೃದ್ಧಿ ದರ 6.2%.

ನೋಂದಣಿ ಮತ್ತು ಮುದ್ರಾಂಕ : 2023-24ನೇ ಸಾಲಿನ ಗುರಿ 25,000 ಕೋಟಿ ರೂ., 2023-24 (ಅಕ್ಟೋಬರ್ ವರೆಗೆ) 10,940 ಕೋಟಿ ರೂ., 2024-25 ಸಾಲಿನ ಗುರಿ 26,000 ಕೋಟಿ ರೂ., 2024-25 (ಸೆಪ್ಟೆಂಬರ್ ವರೆಗೆ) 13,870 ಕೋಟಿ ರೂ., ಅಭಿವೃದ್ಧಿ ದರ 26.8%.

ಮೋಟಾರು ವಾಹನಗಳ ತೆರಿಗೆ : 2023-24ನೇ ಸಾಲಿನ ಗುರಿ 11,500 ಕೋಟಿ ರೂ., 2023-24 (ಅಕ್ಟೋಬರ್ ವರೆಗೆ) 6,301 ಕೋಟಿ ರೂ., 2024-25 ಸಾಲಿನ ಗುರಿ 13,000 ಕೋಟಿ ರೂ., 2024-25 (ಸೆಪ್ಟೆಂಬರ್ ವರೆಗೆ) 6,640 ಕೋಟಿ ರೂ., ಅಭಿವೃದ್ಧಿ ದರ 5.4%.

ಗಣಿಗಾರಿಕೆ ಆದಾಯ : 2023-24 ನೇ ಸಾಲಿನ ಗುರಿ 9,000 ಕೋಟಿ ರೂ., 2023-24 (ಅಕ್ಟೋಬರ್ ವರೆಗೆ) 3,939 ಕೋಟಿ ರೂ., 2024-25 ಸಾಲಿನ ಗುರಿ 9,000 ಕೋಟಿ ರೂ., 2024-25 (ಸೆಪ್ಟೆಂಬರ್ ವರೆಗೆ) 4,138 ಕೋಟಿ ರೂ., ಅಭಿವೃದ್ಧಿ ದರ 5.1%.

ಎಲ್ಲಾ ಪ್ರಮುಖ ಆದಾಯ ಸಂಗ್ರಹ ವಲಯಗಳಲ್ಲಿ ಕರ್ನಾಟಕ ಈ ಅವಧಿಯಲ್ಲಿ ಉತ್ತಮ ಸಾಧನೆ ಮಾಡಿದೆ. ಸರ್ಕಾರದ ಇತ್ತೀಚಿನ ಕೆಲವು ಸುಧಾರಣಾ ಕ್ರಮಗಳಿಂದಾಗಿ ಮುದ್ರಾಂಕ ಮತ್ತು ಅಬಕಾರಿ ತೆರಿಗೆ ಸಂಗ್ರಹ ಹೆಚ್ಚಳವಾಗಿದೆ. ಗಣಿಗಾರಿಕೆ ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ಮುಂದುವರೆದಿದ್ದ ತೊಡಕುಗಳನ್ನು ನಿವಾರಿಸುವ ಮೂಲಕ ಈ ವಲಯದಲ್ಲಿ ನಿರೀಕ್ಷೆಗೂ ಹೆಚ್ಚಿನ ಸಾಧನೆ ಸಾಧ್ಯವಾಗಿದೆ.

ವಿದೇಶಿ ಬಂಡವಾಳ ಹೂಡಿಕೆಯಲ್ಲಿ ಎರಡನೇ ಸ್ಥಾನ : ಕರ್ನಾಟಕ ಸರ್ಕಾರದ ಉದ್ಯಮ ಸ್ನೇಹಿ ನೀತಿಗಳು ಹಾಗೂ ಉತ್ತಮ ಆರ್ಥಿಕ ನೀತಿಗಳಿಂದಾಗಿ ವಿದೇಶಿ ಬಂಡವಾಳ ಹೂಡಿಕೆಯಲ್ಲೂ ಹೆಚ್ಚಿನ ಪ್ರಗತಿ ಸಾಧ್ಯವಾಗಿದೆ. 2024-25ರ ಪ್ರಥಮ ತ್ರೈಮಾಸಿಕದಲ್ಲಿ ರಾಜ್ಯ 2.2 ಬಿಲಿಯನ್‌ ರೂ. ನೇರ ವಿದೇಶಿ ಬಂಡವಾಳ ಆಕರ್ಷಿಸಿದ್ದು, ರಾಷ್ಟ್ರ ಮಟ್ಟದಲ್ಲಿ ಗುಜರಾತ್‌ ರಾಜ್ಯವನ್ನು ಹಿಂದಿಕ್ಕಿ ಎರಡನೇ ಸ್ಥಾನಕ್ಕೆ ಏರಿದೆ.

ಬಜೆಟ್‌ ಅನುದಾನ ವೆಚ್ಚ ಸಾಧನೆ : ರಾಜ್ಯ ಅಕ್ಟೋಬರ್‌ ಅಂತ್ಯದ ವೇಳೆಗೆ ಬಜೆಟ್‌ ಅನುದಾನದ ಶೇ.46 ರಷ್ಟು ವೆಚ್ಚ ಮಾಡಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ ಶೇ.42 ರಷ್ಟು ವೆಚ್ಚ ದಾಖಲಾಗಿತ್ತು. ಬಜೆಟ್‌ ಅಂದಾಜಿಗಿಂತ ಬಂಡವಾಳ ವೆಚ್ಚ ಸಹ ಶೇ.24.7ರಿಂದ ಶೇ.29 ಕ್ಕೆ ಏರಿಕೆಯಾಗಿದೆ. ಮೂಲಸೌಕರ್ಯ ಅಭಿವೃದ್ಧಿಯಲ್ಲಿ ರಾಜ್ಯದ ಬದ್ಧತೆಯನ್ನು ಇದು ತೋರಿಸುತ್ತದೆ.

ಧೀರ್ಘಕಾಲೀನ ಅಭಿವೃದ್ಧಿಗೆ ಮೂಲಸೌಕರ್ಯಗಳ ಮೇಲೆ ಹೂಡಿಕೆ : ಬಂಡವಾಳ ಹೂಡಿಕೆಗಳ ಮೇಲೆ ಹೆಚ್ಚಿನ ಒತ್ತು ನೀಡುವ ಮೂಲಕ ರಾಜ್ಯ ಜಿಎಸ್‌ಡಿಪಿ ಅಭಿವೃದ್ದಿ ದರವನ್ನು ಶೇ.14 ರಷ್ಟು ಸಾಧಿಸುವ ಗುರಿಯನ್ನು ಹೊಂದಿದೆ. ಪ್ರಮುಖ ಯೋಜನೆಗಳಿಗೆ 16,750 ಕೋಟಿ ರೂ. ಸಹಾಯ ಪಡೆಯುವ ನಿಟ್ಟಿನಲ್ಲಿ ವಿಶ್ವಬ್ಯಾಂಕ್‌ ಮತ್ತು ಏಷ್ಯನ್‌ ಡೆವಲಪ್‌ಮೆಂಟ್‌ ಬ್ಯಾಂಕ್‌ ಜತೆ ಮಾತುಕತೆ ನಡೆಸುತ್ತಿದೆ. ಇದರಲ್ಲಿ ಬೆಂಗಳೂರು ವಿಪತ್ತು ನಿರ್ವಹಣೆಗೆ 3500 ಕೋಟಿ ರೂ., ನಗರ ನೀರು ಸರಬರಾಜು ಆಧುನೀಕರಣಕ್ಕೆ 1200 ಕೋಟಿ ರೂ., ಕರಾವಳಿ ಕರ್ನಾಟಕದಲ್ಲಿ ಸಾಗರ ಸಂಬಂಧಿ ಆರ್ಥಿಕತೆ ಅಭಿವೃದ್ಧಿಗೆ 600 ಕೋಟಿ ರೂ., ರಾಜ್ಯ ಹೆದ್ದಾರಿಗಳ ಅಭಿವೃದ್ಧಿಗೆ 3650 ಕೋಟಿ ರೂ., ಹವಾಮಾನ ಪೂರಕ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ 3600 ರೂ., ಸರ್ಕಾರಿ ಶಾಲೆಗಳ ಮೂಲಸೌಕರ್ಯಕ್ಕಾಗಿ 2800 ಕೋಟಿ ರೂ., ಸಾರ್ವಜನಿಕ ಸಾರಿಗೆಗೆ ಇಲೆಕ್ಟ್ರಿಕ್‌ ಬಸ್‌ಗಳಿಗಾಗಿ 1400 ರೂ. ಸೇರಿದೆ.

ಬೆಂಗಳೂರು ನಗರದಲ್ಲಿ 1,31,500 ಕೋಟಿ ರೂ. ಮೊತ್ತದ ಮೂಲಸೌಕರ್ಯ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ನಗರದ ಚಿತ್ರಣ ಬದಲಾಗಲಿದೆ. ಇವುಗಳಲ್ಲಿ 12 ಸಾವಿರ ಕೋಟಿ ರೂ. ವೆಚ್ಚದಲ್ಲಿ 100 ಕಿಮೀ ಎತ್ತರಿಸಿದ ಕಾರಿಡಾರ್‌, 40 ಸಾವಿರ ಕೋಟಿ ರೂ. ವೆಚ್ಚದಲ್ಲಿ ಮೆಟ್ರೋ ಮೂರನೆ ಹಂತದ ವಿಸ್ತರಣೆ (80ಕಿಮಿ), 9 ಸಾವಿರ ಕೋಟಿ ರೂ. ವೆಚ್ಚದಲ್ಲಿ ಡಬಲ್ ಡೆಕ್ಕರ್‌ ಮೆಟ್ರೋ ಹಳಿಗಳು, 40 ಸಾವಿರ ಕೋಟಿ ರೂ. ವೆಚ್ಚದಲ್ಲಿ 40 ಕಿಮೀ ಉದ್ದದ ಸುರಂಗ ಮಾರ್ಗ ನಿರ್ಮಾಣ, 3 ಸಾವಿರ ಕೋಟಿ ರೂ. ವೆಚ್ಚದಲ್ಲಿ ಪೆರಿಪೆರಲ್‌ ರಸ್ತೆ ಜಾಲ, 500 ಕೋಟಿ ರೂ. ವೆಚ್ಚದಲ್ಲಿ ಸ್ಕೈಡೆಕ್‌ ಯೋಜನೆ ಮತ್ತು 27 ಸಾವಿರ ಕೋಟಿ ರೂ. ವೆಚ್ಚದಲ್ಲಿ ಬೆಂಗಳೂರು ಬ್ಯುಸಿನೆಸ್‌ ಕಾರಿಡಾರ್‌ ನಿರ್ಮಾಣ ಯೋಜನೆ ಸೇರಿವೆ.

ಕಲ್ಯಾಣ ಕಾರ್ಯಕ್ರಮಗಳಿಗೆ ಅನುದಾನ : ಪ್ರಸ್ತುತ ಸಾಲಿನಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕಾಗಿ ಬಜೆಟ್‌ನಲ್ಲಿ ಘೋಷಿಸಿರುವ 52,009 ಕೋಟಿ ರೂ. ಪೈಕಿ ಈಗಾಗಲೇ 24,235 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ. ಫಲಾನುಭವಿಗಳಿಗೆ ನಿಗದಿತ ಅವಧಿಯ ಒಳಗಾಗಿ ಯೋಜನೆಗಳ ಲಾಭ ತಲುಪುವಂತಾಗಲು ಇ ಆಡಳಿತ ವ್ಯವಸ್ಥೆಯನ್ನು ಸಮರ್ಪಕವಾಗಿ ಬಳಸಲಾಗುತ್ತಿದೆ.

ಕಲ್ಯಾಣ ಕಾರ್ಯಕ್ರಮಗಳು ಮತ್ತು ಅಭಿವೃದ್ಧಿ ನಡುವೆ ಸಮತೋಲನ : ಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನ ಮತ್ತು ಬಂಡವಾಳ ಹೂಡಿಕೆಗಳ ನಡುವೆ ಸಮತೋಲನ ಸಾಧಿಸುವ ಮೂಲಕ ಕರ್ನಾಟಕ ರಾಜ್ಯ ಸುಸ್ಥಿರ ಅಭಿವೃದ್ಧಿಯ ಹೊಸ ಮಾದರಿಯನ್ನು ಪರಿಚಯಿಸಿದೆ. ಮೂಲಸೌಕರ್ಯ ಅಭಿವೃದ್ದಿ, ಆರ್ಥಿಕ ಸುಧಾರಣೆಗಳು, ಎಲ್ಲರನ್ನು ಒಳಗೊಂಡ ಅಭಿವೃದ್ಧಿಯನ್ನು ಸಾಧಿಸುವ ಗುರಿಯನ್ನು ಹೊಂದುವ ಮೂಲಕ ರಾಜ್ಯ ದೂರಗಾಮಿ ಆರ್ಥಿಕ ಅಭಿವೃದ್ಧಿ ಮತ್ತು ಹಣಕಾಸು ನಿರ್ವಹಣೆಯಲ್ಲಿ ಮುಂಚೂಣಿಗೆ ಬರಲು ಸಾಧ್ಯವಾಗಿದೆ.

ಈ ಸಮತೋಲಿತ ಅಭಿವೃದ್ದಿ ಮಾದರಿಯಿಂದಾಗಿ ಜನರ ಜೀವನ ಗುಣಮಟ್ಟ ಸುಧಾರಿಸಲು ಸಾಧ್ಯವಾಗಿದೆ ಮಾತ್ರವಲ್ಲ, ಜಾಗತಿಕ ಮಟ್ಟದಲ್ಲಿ ಕರ್ನಾಟಕ ವಾಣಿಜ್ಯ ಮತ್ತು ಆವಿಷ್ಕಾರ ಕ್ಷೇತ್ರದಲ್ಲಿ ತನ್ನ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು ಸಾಧ್ಯವಾಗಿದೆ.

ಇದನ್ನೂ ಓದಿ: ಮುಂದಿನ ಮಾರ್ಚ್ ವರೆಗೆ ಪ್ರತಿ ತಿಂಗಳು ರೂ. 2400 ಕೋಟಿ ರಾಜಸ್ವ ಸಂಗ್ರಹ ಗುರಿ ಸಾಧಿಸಲೇಬೇಕು: ಸಿಎಂ ಸೂಚನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.