ETV Bharat / state

ರೇಣುಕಾಸ್ವಾಮಿ ಕುಟುಂಬಕ್ಕೆ ಸಾಂತ್ವನ ಹೇಳಲು ತೆರಳಿದ ಚಲನಚಿತ್ರ ಮಂಡಳಿ ನಿಯೋಗ - Renukaswamy Murder Case

ಕೊಲೆಯಾದ ಚಿತ್ರದುರ್ಗ ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ನಿರ್ಮಾಪಕರ ಸಂಘದ ನಿಯೋಗವು ಸಾಂತ್ವನ ಹೇಳಲಿದೆ.

renukaswamy murder
ರೇಣುಕಾಸ್ವಾಮಿ, ಚಲನಚಿತ್ರ ಮಂಡಳಿ ನಿಯೋಗ (ETV Bharat)
author img

By ETV Bharat Karnataka Team

Published : Jun 15, 2024, 1:34 PM IST

ನಟ ದರ್ಶನ್​ ಹಾಗೂ ಇತರರಿಂದ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಆರೋಪ ಪ್ರಕರಣ ಸಂಬಂಧ ತನಿಖೆ ಮುಂದುವರೆದಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ನಿರ್ಮಾಪಕರ ಸಂಘದ ನಿಯೋಗ ಚಿತ್ರದುರ್ಗದತ್ತ ಪಯಣ ಬೆಳೆಸಿದ್ದು, ರೇಣುಕಾಸ್ವಾಮಿ ಮನೆಗೆ ಭೇಟಿ‌ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಲಿದ್ದಾರೆ.

renukaswamy murder
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ನಿರ್ಮಾಪಕರ ಸಂಘದ ನಿಯೋಗ (ETV Bharat)

ಫಿಲಂ ಚೇಂಬರ್ ಅಧ್ಯಕ್ಷ ಎನ್.ಎಂ. ಸುರೇಶ್, ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್, ಮಾಜಿ ಅಧ್ಯಕ್ಷರುಗಳಾದ ಚಿನ್ನೇಗೌಡ, ಸಾರಾ ಗೋವಿಂದು, ಕೆ.ವಿ. ಚಂದ್ರಶೇಖರ್ ಸೇರಿದಂತೆ ಹಲವರು ಚಿತ್ರದುರ್ಗಕ್ಕೆ ತೆರಳಿದ್ದಾರೆ.‌ ರೇಣುಕಾಸ್ವಾಮಿ ಮನೆಯವರಿಗೆ ಧೈರ್ಯ ತುಂಬುವ ಕಾರ್ಯಕ್ಕೆ ಮುಂದಾಗಿದ್ದಾರೆ. ಜೊತೆಗೆ, ಫಿಲಂ ಚೇಂಬರ್ ಕಡೆಯಿಂದ 3ರಿಂದ 5 ಲಕ್ಷ ರೂಪಾಯಿ ಹಣ ಸಹಾಯ ಮಾಡುವ ಸಾಧ್ಯತೆ ಇದೆ‌.

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ನಟ ದರ್ಶನ್​, ಅವರ ಗೆಳತಿ ಪವಿತ್ರಾ ಗೌಡ ಸೇರಿದಂತೆ 18 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ದರ್ಶನ್​ ಅವರನ್ನು ಕೋರ್ಟ್​ಗೆ ಹಾಜರುಪಡಿಸಿ ಜೂನ್ 17ರವರೆಗೆ ಆರು ದಿನಗಳ ಕಾಲ ಪೊಲೀಸ್ ಕಸ್ಟಡಿಗೂ ಪಡೆಯಲಾಗಿದೆ. ಪೊಲೀಸರು ಆರೋಪಿಗಳ ಮಹಜರು ಕಾರ್ಯ ನಡೆಸಿ ತನಿಖೆ ನಡೆಸುತ್ತಿದ್ದಾರೆ.

ಚಿತ್ರದುರ್ಗದ ಫಾರ್ಮಸಿಯೊಂದರಲ್ಲಿ ಕೆಲಸ ಮಾಡುತ್ತಿದ್ದ 35ರ ಹರೆಯದ ರೇಣುಕಾಸ್ವಾಮಿಯನ್ನು ಬೆಂಗಳೂರಿಗೆ ಕರೆಯಿಸಿ ಹತ್ಯೆ ಮಾಡಲಾಗಿತ್ತು. ಪವಿತ್ರಾ ಗೌಡ ಅಶ್ಲೀಲ ಮೆಸೇಜ್​ ಕಳಿಸಿದ್ದಕ್ಕೆ ಈ ಕೊಲೆ ನಡೆದಿರುವ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಜೂನ್​ 9 ರಂದು ಬೆಂಗಳೂರಿನ ಸುಮ್ಮನಹಳ್ಳಿಯ ಅಪಾರ್ಟ್​ಮೆಂಟ್​​ವೊಂದರ ಮೋರಿ ಪಕ್ಕದ ರಸ್ತೆಯಲ್ಲಿ ಮೃತದೇಹ ಪತ್ತೆಯಾಗಿತ್ತು. ಈ ಬಗ್ಗೆ ಕಾಮಾಕ್ಷಿಪಾಳ್ಯ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿತ್ತು.

ರೇಣುಕಾಸ್ವಾಮಿಗೆ ಒಂದು ವರ್ಷದ ಹಿಂದೆಯಷ್ಟೇ ಮದುವೆಯಾಗಿದ್ದು, ಪತ್ನಿ ಗರ್ಭಿಣಿಯಾಗಿದ್ದಾರೆ. ಕೆಲಸಕ್ಕೆ ಹೋಗುವುದಾಗಿ ಮನೆ ಬಿಟ್ಟಿದ್ದ ರೇಣುಕಾಸ್ವಾಮಿ ಸಂಜೆಯಾದರೂ ಮನೆಗೆ ಬಂದಿರಲಿಲ್ಲ. ಹಂತಕರಿಗೆ ಶಿಕ್ಷೆಯಾಗಬೇಕು. ಮಗನ ಕೊಲೆಗೆ ನ್ಯಾಯಸಿಗಬೇಕು ಎಂದು ಮೃತನ ಕುಟುಂಬಸ್ಥರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ನಟ ದರ್ಶನ್ ವಿರುದ್ಧ ರೌಡಿಶೀಟ್?: ಈ ಕ್ರಮಕ್ಕೆ ಪರಿಗಣಿಸಲಾಗುವ ಮಾನದಂಡಗಳಿವು! - Criteria to open a rowdy sheet

ETV Bharat Logo

Copyright © 2024 Ushodaya Enterprises Pvt. Ltd., All Rights Reserved.