ETV Bharat / state

‘ಚಲೋ ದೆಹಲಿ’: ಜಂತರ್​ ಮಂತರ್​ನಲ್ಲಿ ಇಂದು ಕರ್ನಾಟಕ ಕಾಂಗ್ರೆಸ್​ ಪ್ರತಿಭಟನೆ - ಚಲೋ ದೆಹಲಿ

ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಸರ್ಕಾರದ ವಿರುದ್ಧ ದನಿ ಎತ್ತಲಿದ್ದಾರೆ. ‘ಚಲೋ ದೆಹಲಿ’ ಎಂದು ಶಾಸಕರು, ಸಂಸದರಿಗೆ ಮನವಿ ಮಾಡಿದ್ದಾರೆ. ಇಂದು ದೆಹಲಿಯ ಜಂತರ್ ಮಂತರ್​ನಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಕರ್ನಾಟಕ ಕಾಂಗ್ರೆಸ್​ ಪ್ರತಿಭಟನೆ ನಡೆಸಲಿದೆ.

Karnataka Congress  Chalo Delhi  protest in national capital  ಚಲೋ ದೆಹಲಿ  ಕರ್ನಾಟಕ ಕಾಂಗ್ರೆಸ್​ ಪ್ರತಿಭಟನೆ
ಕರ್ನಾಟಕ ಕಾಂಗ್ರೆಸ್​ ಪ್ರತಿಭಟನೆ
author img

By ETV Bharat Karnataka Team

Published : Feb 7, 2024, 7:39 AM IST

Updated : Feb 7, 2024, 11:44 AM IST

ಬೆಂಗಳೂರು/ನವದೆಹಲಿ: ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ರಾಜ್ಯ ಕಾಂಗ್ರೆಸ್​ ಪಕ್ಷವು ಇಂದು ದೆಹಲಿಯ ಜಂತರ್ ಮಂತರ್​ನಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲು ಸಜ್ಜಾಗಿದೆ. ಸರ್ಕಾರ ತೆರಿಗೆಯನ್ನು ವರ್ಗಾಯಿಸುತ್ತಿಲ್ಲ ಮತ್ತು ರಾಜ್ಯಕ್ಕೆ ಹಣಕಾಸಿನ ನೆರವು ನೀಡುತ್ತಿಲ್ಲ ಎಂದು ಅವರು ಆರೋಪಿಸಿದ್ದಾರೆ. ಈ ಪ್ರದರ್ಶನಕ್ಕೆ ‘ಚಲೋ ದೆಹಲಿ’ ಎಂದು ಹೆಸರಿಡಲಾಗಿದೆ. ಕರ್ನಾಟಕವಲ್ಲದೇ ಕೇರಳ, ತಮಿಳುನಾಡು, ತೆಲಂಗಾಣ ಕೂಡ ಕೇಂದ್ರ ಸರ್ಕಾರ ಹಣ ಹಂಚಿಕೆಯಲ್ಲಿ ತಾರತಮ್ಯ ಎಸಗುತ್ತಿದೆ ಎಂದು ಆರೋಪಿಸಿದ್ದಾರೆ.

ಕೇಂದ್ರ ಸರ್ಕಾರದ 15ನೇ ಹಣಕಾಸು ಆಯೋಗದಿಂದ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ಫೆ.7ರಂದು ಉಭಯ ಸದನಗಳ ಎಲ್ಲ ಸಚಿವರು, ಶಾಸಕರು, ಸಂಸದರು ಸೇರಿ ಪ್ರತಿಭಟನೆ ನಡೆಸಲಾಗುವುದು ಎಂದು ಸಿದ್ದರಾಮಯ್ಯ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಇದಲ್ಲದೇ ಕೇಂದ್ರ ಸರಕಾರದಿಂದ ಕರ್ನಾಟಕಕ್ಕೆ ಸಮರ್ಪಕವಾಗಿ ಹಣ ನೀಡುತ್ತಿಲ್ಲ ಎಂಬ ಹಲವು ವಿಷಯಗಳ ವಿರುದ್ಧ ಕರ್ನಾಟಕ ಸರಕಾರ ಪ್ರತಿಭಟನೆ ನಡೆಸಲಿದೆ. ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಲ್ಲಾ ಕೇಂದ್ರ ಸಚಿವರು, ಸಂಸದರು ಮತ್ತು ರಾಜ್ಯಸಭಾ ಸದಸ್ಯರಿಗೆ ಪತ್ರ ಬರೆದಿದ್ದಾರೆ.

ನಾನು ಈ ಪತ್ರವನ್ನು ವಿಶೇಷ ಸಂದರ್ಭಗಳಲ್ಲಿ ಬರೆಯುತ್ತಿದ್ದೇನೆ. ಕೇಂದ್ರ ಸರ್ಕಾರ ಕರ್ನಾಟಕದ ಮಲತಾಯಿ ಧೋರಣೆ ನಿಮಗೆ ತಿಳಿದಿದೆ. ದೆಹಲಿಯಲ್ಲಿ ಪ್ರತಿಭಟನೆ ನಡೆಸಿ ಇಡೀ ರಾಷ್ಟ್ರದ ಗಮನ ಸೆಳೆಯಲು ನಿರ್ಧರಿಸಿದ್ದೇವೆ. ಜವಾಬ್ದಾರಿಯುತ ಜನಪ್ರತಿನಿಧಿಯಾಗಿ ನೀವೂ ಪ್ರತಿಭಟನೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು. ಕರ್ನಾಟಕದ ಜನತೆಯ ಪರವಾಗಿ ನಾನು ಈ ವಿನಂತಿ ಮಾಡುತ್ತಿದ್ದೇನೆ ಎಂದು ಸಿದ್ದರಾಮಯ್ಯ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

“ನಾವು ದೆಹಲಿಗೆ ಹೋಗೋಣ. ನಮ್ಮ ಆರ್ಥಿಕ ಅನ್ಯಾಯದ ವಿರುದ್ಧ ಹೋರಾಡೋಣ. 2017 ರಿಂದ 18 ರವರೆಗೆ ಕರ್ನಾಟಕಕ್ಕೆ ಕೇಂದ್ರ ಸರ್ಕಾರದಿಂದ 1,87,000 ಕೋಟಿ ನಷ್ಟವಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಪ್ರತಿಭಟನೆ ಹಿನ್ನೆಲೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಂಗ್ರೆಸ್ ಸಚಿವರು, ಶಾಸಕರು, ಎಂಎಲ್‌ಸಿಗಳು ನಿನ್ನೆ ಸಂಜೆ ಬೆಂಗಳೂರಿನಿಂದ ರಾಷ್ಟ್ರ ರಾಜಧಾನಿಗೆ ತೆರಳಿದ್ದಾರೆ.

ಕಾಂಗ್ರೆಸ್ ಆರೋಪಗಳಿಗೆ ಪ್ರತಿಯಾಗಿ ಬಿಜೆಪಿ ಕರ್ನಾಟಕ ಘಟಕವು ಮಂಗಳವಾರದಿಂದ ರಾಜ್ಯಕ್ಕೆ ಪ್ರಧಾನಿ ಮೋದಿ ಸರ್ಕಾರದ ಕೊಡುಗೆಗಳನ್ನು ಪಟ್ಟಿ ಮಾಡುವ ಸಾಮಾಜಿಕ ಮಾಧ್ಯಮ ಅಭಿಯಾನವನ್ನು ಪ್ರಾರಂಭಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಶತಮಾನದ ಸುಳ್ಳುಗಾರ. ರಾಜ್ಯದಲ್ಲಿ ಇದುವರೆಗೆ ಬಡವರಿಗೆ ನಲ್ಲಿ ಅಳವಡಿಸುವಲ್ಲಿ ವಿಫಲರಾಗಿದ್ದಾರೆ. ಸದಾ ಸುಳ್ಳು ಹೇಳುವುದು ಅವರಿಗೆ ಅಭ್ಯಾಸವಾಗಿ ಹೋಗಿದೆ ಎಂದು ಬಿಜೆಪಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದೆ. ಅಷ್ಟೇ ಅಲ್ಲ ‘ತುಘಲಕ್’ ಕಾಂಗ್ರೆಸ್ ಸರ್ಕಾರವು ಕರ್ನಾಟಕದಲ್ಲಿ ‘ತಾಲಿಬಾನ್’ ಆಡಳಿತವನ್ನು ತರುವ ಗುರಿ ಹೊಂದಿದೆ ಎಂದು ಬಿಜೆಪಿ ಆರೋಪಿಸಿದೆ.

"ಅರಾಜಕತೆ, ಮಹಿಳೆಯರು ಮತ್ತು ದಲಿತರಿಗೆ ಶಾಶ್ವತ ಅಭದ್ರತೆ, ರೈತರ ಸರಣಿ ಆತ್ಮಹತ್ಯೆ, ವರ್ಗಾವಣೆಗಾಗಿ ವಸೂಲಾತಿ ಮಾಫಿಯಾ, ಅಭಿವೃದ್ಧಿಗೆ ಹಣವಿಲ್ಲ ಮತ್ತು ಖಜಾನೆ ಖಾಲಿಯಾಗಿರುವುದು ಕಾಂಗ್ರೆಸ್ ಸರ್ಕಾರದ ಕೆಲವು ಸಾಧನೆಗಳು" ಎಂದು ಬಿಜೆಪಿ ಹೇಳಿದೆ. ರಾಜ್ಯಕ್ಕೆ ಮೊದಲ ಐಐಟಿ, 3,265 ಕಿಲೋಮೀಟರ್ ರೈಲ್ವೆ ಹಳಿ ವಿದ್ಯುದೀಕರಣ, 73 ಕಿಲೋಮೀಟರ್ ಮೆಟ್ರೊ ಮಾರ್ಗ ನಿರ್ಮಾಣ, ಕರ್ನಾಟಕಕ್ಕೆ ಮೊದಲ ಏಮ್ಸ್, ತುಮಕೂರಿನ ವಿಶ್ವ ದರ್ಜೆಯ ಏರೋಸ್ಪೇಸ್ ಪಾರ್ಕ್, ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ, ಕರ್ನಾಟಕದಲ್ಲಿ 14 ಹೊಸ ವಿಮಾನ ನಿಲ್ದಾಣಗಳು ಮತ್ತು ವಂದೇ ಭಾರತ್ ರೈಲುಗಳು ಸೇರಿದಂತೆ ರಾಜ್ಯಕ್ಕೆ ಪ್ರಧಾನಿ ಮೋದಿಯವರ ಅನೇಕ ಕೊಡುಗೆಗಳಾಗಿವೆ ಎಂದು ಬಿಜೆಪಿ ಹೇಳಿದೆ.

ಯಡಿಯೂರಪ್ಪ ಹೇಳಿದ್ದು ಹೀಗೆ: ದೆಹಲಿಯಲ್ಲಿ ಕರ್ನಾಟಕ ಕಾಂಗ್ರೆಸ್ ಪ್ರತಿಭಟನೆ ಕುರಿತು ಬಿಜೆಪಿ ನಾಯಕ ಬಿಎಸ್ ಯಡಿಯೂರಪ್ಪ ಮಾತನಾಡಿ, "ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಲು ಯಾವುದೇ ಕಾರಣವಿಲ್ಲ, ಕಾಂಗ್ರೆಸ್ ವಿಶ್ವಾಸ ಕಳೆದುಕೊಂಡಿದೆ ಮತ್ತು ಮುಂದಿನ ಚುನಾವಣೆಯಲ್ಲಿ ಅವರು ದಯನೀಯವಾಗಿ ಸೋಲಲಿದ್ದಾರೆ ಎಂದು ಹೇಳಿದರು.

ಓದಿ: ಅಜಿತ್ ಪವಾರ್​ ಬಣವೇ ನಿಜವಾದ ಎನ್​ಸಿಪಿ-ಚುನಾವಣಾ ಆಯೋಗ; ಶರದ್​ ಪವಾರ್‌ಗೆ ಹಿನ್ನಡೆ

Last Updated : Feb 7, 2024, 11:44 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.