ETV Bharat / state

ಅರುಣ್ ಯೋಗಿರಾಜ್, ಹುಲಿಕಲ್​ ನಟರಾಜ್​ ಸೇರಿ 69 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ

2024ರ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿಜೇತರ ಪಟ್ಟಿಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬಿಡುಗಡೆ ಮಾಡಿದೆ.

Rajyotsava Award announced
ಅರುಣ್ ಯೋಗಿರಾಜ್, ಹುಲಿಕಲ್​ ನಟರಾಜ್, ಲಲಿತಾ ನಾಯಕ್ ಮತ್ತು ವೀರಪ್ಪ ಮೊಯ್ಲಿ (ETV Bharat)
author img

By ETV Bharat Karnataka Team

Published : 2 hours ago

Updated : 31 minutes ago

ಬೆಂಗಳೂರು: ಮಾಜಿ ಸಿಎಂ ಎಂ. ವೀರಪ್ಪ ಮೊಯ್ಲಿ, ಮಾಜಿ ಸಚಿವೆ ಬಿ. ಟಿ. ಲಲಿತಾನಾಯಕ್, ಹಿರಿಯ ನಟಿ ಹೇಮಾ ಚೌದರಿ, ಎಂ.ಎಸ್. ನರಸಿಂಹಮೂರ್ತಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ 69 ಮಂದಿ ಗಣ್ಯ ವ್ಯಕ್ತಿಗಳಿಗೆ 2024ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಿಸಲಾಗಿದೆ.

ವಿಕಾಸಸೌಧದಲ್ಲಿ ಇಂದು ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದ ಹೆಸರುಗಳ ಪಟ್ಟಿ ಪ್ರಕಟಿಸಿ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ‌ಇಲಾಖೆ‌ ಸಚಿವ ಶಿವರಾಜ್ ಎಸ್. ತಂಗಡಗಿ, ಈ ಬಾರಿ ರಾಜ್ಯೋತ್ಸವ ಪ್ರಶಸ್ತಿಗಾಗಿ ಒಟ್ಟು 1,575 ಭೌತಿಕ ಅರ್ಜಿಗಳು ಬಂದಿದ್ದವು. ಇದಲ್ಲದೇ ಸೇವಾ ಸಿಂಧು ಮೂಲಕ 1,309 ಜನರಿಗಾಗಿ 7,438 ನಾಮನಿರ್ದೇಶನಗಳು ಸಲ್ಲಿಕೆಯಾಗಿದ್ದವು. ಎಲ್ಲವನ್ನು ಕೂಲಂಕಷವಾಗಿ ಪರಿಶೀಲನೆ ಮಾಡಿ ಈ ಬಾರಿ 69 ಸಾಧಕರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಪ್ರತಿಯೊಂದು ಜಿಲ್ಲೆಗೂ ಪ್ರಾತಿನಿಧ್ಯ ನೀಡಲಾಗಿದೆ ಹಾಗೂ ಸಾಮಾಜಿಕ ನ್ಯಾಯವನ್ನು ಕಾಪಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

ಈ ಬಾರಿ ಕರ್ನಾಟಕ ನಾಮಕರಣದ ಸುವರ್ಣ ಮಹೋತ್ಸವ ವರ್ಷ ಆಗಿರುವುದರಿಂದ ಇದನ್ನು ವಿಶೇಷ ಸಂದರ್ಭ ಎಂದು ಪರಿಗಣಿಸಿ ಸುವರ್ಣ ಸಂಭ್ರಮ-50ರ ಸುವರ್ಣ ಮಹೋತ್ಸವ ಎಂಬ ವಿಶೇಷ ಪ್ರಶಸ್ತಿಯನ್ನು 50 ಸಾಧಕ ಮಹಿಳೆಯರಿಗೆ ಮತ್ತು 50 ಸಾಧಕ ಪುರುಷರಿಗೆ ನೀಡಲಾಗುತ್ತಿದೆ. ಇದರಿಂದ 69 + 100 ಒಟ್ಟು 169 ಪ್ರಶಸ್ತಿಗಳನ್ನು ನೀಡಲಾಗುತ್ತಿದೆ.
ಅರ್ಜಿಯನ್ನು ಹಾಕದ ಎಲೆಮರೆಯ ಕಾಯಿಯಂತೆ ಸೇವೆ ಸಲ್ಲಿಸಿರುವ 20ಕ್ಕೂ ಹೆಚ್ಚು ಮಂದಿಯನ್ನು ಸಹ ಗುರುತಿಸಿ, ಪ್ರಶಸ್ತಿ ನೀಡಲಾಗುತ್ತಿದೆ ಎಂದರು.

ಬಯಲಾಟ ಕ್ಷೇತ್ರದಲ್ಲಿ ಹೆಸರು ಮಾಡಿರುವ ವಿಜಯನಗರ ಜಿಲ್ಲೆಯ 92 ವರ್ಷದ ನಾರಾಯಣಪ್ಪ ಶಿಳ್ಳೇಕ್ಯಾತ ಅವರ ಹೆಸರನ್ನು ಸಹ ಪರಿಗಣಿಸಲಾಗಿದೆ. ಜಾನಪದ ಕ್ಷೇತ್ರದಲ್ಲಿ ಬೀದರ್ ಜಿಲ್ಲೆಯ ಅಂಧಕಲಾವಿದರಾದ ನರಸಿಂಹಲು ಅವರನ್ನು ಸಹ ಪರಿಗಣಿಸಲಾಗಿದೆ. ಇದರಲ್ಲಿ 13 ಮಹಿಳೆಯರನ್ನು ಪ್ರಶಸ್ತಿಗೆ ಪರಿಗಣಿಸಲಾಗಿದೆ. ನವೆಂಬರ್ 1 ಕನ್ನಡ ರಾಜ್ಯೋತ್ಸವ ದಿನದಂದು ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಗಣ್ಯರಿಗೆ ಸಿಎಂ ಸಿದ್ದರಾಮಯ್ಯ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಸಚಿವರು ಮಾಹಿತಿ ನೀಡಿದರು.

ರಾಜ್ಯೋತ್ಸವ ಪ್ರಶಸ್ತಿಯ ಮೊತ್ತ 5 ಲಕ್ಷ ಹಾಗೂ 25 ಗ್ರಾಂ ಚಿನ್ನದ ಪದಕ, ಸುವರ್ಣ ಸಂಭ್ರಮ ಪ್ರಶಸ್ತಿಯ ಮೊತ್ತ ₹ 50,000 ಹಾಗೂ ಪ್ರಶಸ್ತಿ ಫಲಕ ನೀಡಿ ಗೌರವಿಸಲಾಗುತ್ತದೆ.

ಜಾನಪದ ಕ್ಷೇತ್ರ: ಇಮಾಮಸಾಬ ಎಂ. ವಲ್ಲೆಪನವರ - ಧಾರವಾಡ, ಅಶ್ವರಾಮಣ್ಣ- ಬಳ್ಳಾರಿ, ಕುಮಾರಯ್ಯ- ಹಾಸನ, ವೀರಭದ್ರಯ್ಯ- ಚಿಕ್ಕಬಳ್ಳಾಪುರ, ನರಸಿಂಹಲು (ಅಂಧ ಕಲಾವಿದ)- ಬೀದರ್, ಬಸವರಾಜ ಸಂಗಪ್ಪ ಹಾರಿವಾಳ-ವಿಜಯಪುರ, ಎಸ್.ಜಿ. ಲಕ್ಷ್ಮೀದೇವಮ್ಮ- ಚಿಕ್ಕಮಗಳೂರು, ಪಿಚ್ಚಳ್ಳಿ ಶ್ರೀನಿವಾಸ- ಕೋಲಾರ, ಲೋಕಯ್ಯ ಶೇರ (ಭೂತಾರಾಧನೆ)- ದಕ್ಷಿಣ ಕನ್ನಡ.

ಚಲನಚಿತ್ರ /ಕಿರುತೆರೆ ಕ್ಷೇತ್ರ: ಹಿರಿಯ ನಟಿ ಹೇಮಾ ಚೌದರಿ - ಬೆಂಗಳೂರು ನಗರ, ಎಂ.ಎಸ್. ನರಸಿಂಹಮೂರ್ತಿ - ಬೆಂಗಳೂರು ನಗರ

ಸಂಗೀತ ಕ್ಷೇತ್ರ: ಪಿ. ರಾಜಗೋಪಾಲ- ಮಂಡ್ಯ, ಎ.ಎನ್. ಸದಾಶಿವಪ್ಪ- ರಾಯಚೂರು

ನೃತ್ಯ ಕ್ಷೇತ್ರ: ಶ್ರೀಮತಿ ವಿದುಷಿ ಲಲಿತಾ ರಾವ್ - ಮೈಸೂರು

ಆಡಳಿತ ಕ್ಷೇತ್ರ: ಎಸ್.‌ ವಿ. ರಂಗನಾಥ್‌ ಭಾ.ಆ.ಸೇ (ನಿ) - ಬೆಂಗಳೂರು ನಗರ

ವೈದ್ಯಕೀಯ ಕ್ಷೇತ್ರ: ಡಾ. ಜಿ. ಬಿ. ಬಿಡಿನಹಾಳ - ಗದಗ, ಡಾ. ಮೈಸೂರು ಸತ್ಯನಾರಾಯಣ - ಮೈಸೂರು, ಡಾ ಲಕ್ಷ್ಮಣ್ ಹನುಮಪ್ಪ ಬಿದರಿ - ವಿಜಯಪುರ

ಶಿಕ್ಷಣ ಕ್ಷೇತ್ರ: ಡಾ. ವಿ.ಕಮಲಮ್ಮ- ಬೆಂಗಳೂರು ನಗರ, ಪ್ರೊ. ರಾಜೇಂದ್ರ ಶೆಟ್ಟಿ - ದಕ್ಷಿಣ ಕನ್ನಡ, ಡಾ. ಪದ್ಮಾಶೇಖರ್ - ಕೊಡಗು

ಕ್ರೀಡಾ ಕ್ಷೇತ್ರ: ಜೂಡ್ ಫೆಲಿಕ್ಸ್ ಸೆಬಾಸ್ಟೀಯನ್ (ಹಾಕಿ)- ಬೆಂಗಳೂರು ನಗರ, ಗೌತಮ್ ವರ್ಮ- ರಾಮನಗರ, ಆರ್. ಉಮಾದೇವಿ (ಬಿಲಿಯಾರ್ಡ್ಸ್)- ಬೆಂಗಳೂರು ನಗರ

ನ್ಯಾಯಾಂಗ ಕ್ಷೇತ್ರ: ಬಾಲನ್- ಕೋಲಾರ

ಶಿಲ್ಪಕಲೆ ಕ್ಷೇತ್ರ: ಬಸವರಾಜ್ ಬಡಿಗೇರ- ಬೆಂಗಳೂರು ನಗರ, ಅರುಣ್ ಯೋಗಿರಾಜ್- ಮೈಸೂರು

ಚಿತ್ರಕಲೆ ಕ್ಷೇತ್ರ: ಪ್ರಭು ಹರಸೂರು - ತುಮಕೂರು

ಕರಕುಶಲ ಕ್ಷೇತ್ರ: ಚಂದ್ರಶೇಖರ ಸಿರಿವಂತೆ (ಹಸೆಚಿತ್ತಾರ)- ಶಿವಮೊಗ್ಗ

ವಿಜ್ಞಾನ-ತಂತ್ರಜ್ಞಾನ ಕ್ಷೇತ್ರ: ಪ್ರೊ.ಟಿ.ವಿ. ರಾಮಚಂದ್ರ - ಬೆಂಗಳೂರು ನಗರ, ಸುಬ್ಬಯ್ಯ ಅರುಣನ್ - ಬೆಂಗಳೂರು ನಗರ.

ಸಹಕಾರ ಕ್ಷೇತ್ರ: ವಿರೂಪಾಕ್ಷಪ್ಪ ನೇಕಾರ - ಬಳ್ಳಾರಿ

ಬಯಲಾಟ ಕ್ಷೇತ್ರ: ಸಿದ್ದಪ್ಪ ಕರಿಯಪ್ಪ ಕುರಿ (ಅಂಧ ಕಲಾವಿದರು)- ಬಾಲಕೋಟೆ, ನಾರಾಯಣಪ್ಪ ಶಿಳ್ಳೇಕ್ಯಾತ- ವಿಜಯನಗರ

ಯಕ್ಷಗಾನ ಕ್ಷೇತ್ರ : ಕೇಶವ್ ಹೆಗಡೆ, ಸೀತಾರಾಮ ತೋಳ್ಪಾಡಿ

ರಂಗಭೂಮಿ ಕ್ಷೇತ್ರ : ಸರಸ್ವತಿ ಜುಲೈಕಬೇಗಂ - ಯಾದಗಿರಿ, ಓಬಳೇಶ್ ಹೆಚ್.ವಿ.- ಚಿತ್ರದುರ್ಗ, ಭಾಗ್ಯಶ್ರೀ ರವಿ- ಕೋಲಾರ, ಡಿ.ರಾಮು-ಮೈಸೂರು, ಜನಾರ್ಧನ್ ಹೆಚ್. (ಜನ್ನಿ)- ಮೈಸೂರು, ಹನುಮಾನದಾಸ ವ.ಪವಾರ (ಢಗಳಚಂದ)- ಬಾಗಲಕೋಟೆ.

ಸಾಹಿತ್ಯ ಕ್ಷೇತ್ರ: ಬಿ.ಟಿ. ಲಲಿತಾ ನಾಯಕ್-ಚಿಕ್ಕಮಗಳೂರು, ಅಲ್ಲಮಪ್ರಭು ಬೆಟ್ಟದೂರು-ಕೊಪ್ಪಳ, ಡಾ. ಎಂ. ವೀರಪ್ಪ ಮೊಯ್ಲಿ- ಉಡುಪಿ, ಹನುಮಂತರಾವ್ ದೊಡ್ಡಮನಿ- ಕಲಬುರಗಿ, ಡಾ. ಬಾಳಾಸಾಹೇಬ್ ಲೋಕಾಪುರ-ಬೆಳಗಾವಿ, ಬೈರಮಂಗಲ ರಾಮೇಗೌಡ-ರಾಮನಗರ, ಡಾ. ಪ್ರಶಾಂತ್ ಮಾಡ್ತಾ- ದಕ್ಷಣ ಕನ್ನಡ

ಸಮಾಜಸೇವೆ ಕ್ಷೇತ್ರ: ವೀರಸಂಗಯ್ಯ- ವಿಜಯನಗರ, ಹೀರಾಚಂದ್‍ ವಾಗ್ಮಾರೆ- ಬೀದರ್, ಮಲ್ಲಮ್ಮ ಸೂಲಗಿತ್ತಿ- ರಾಯಚೂರು, ದಿಲೀಪ್ ಕುಮಾರ್- ಚಿತ್ರದುರ್ಗ.

ಸಂಕೀರ್ಣ ಕ್ಷೇತ್ರ: ಹುಲಿಕಲ್ ನಟರಾಜ- ತುಮಕೂರು, ಡಾ.ಹೆಚ್.ಆರ್.ಸ್ವಾಮಿ- ಚಿತ್ರದುರ್ಗ, ಅ.ನ.ಪ್ರಹ್ಲಾದ ರಾವ್-ಕೋಲಾರ, ಕೆ.ಅಜೀತ್ ಕುಮಾರ್ ರೈ- ಬೆಂಗಳೂರು ನಗರ, ಇರ್ಫಾನ್ ರಜಾಕ್ (ವಾಸ್ತುಶಿಲ್ಪ)- ಬೆಂಗಳೂರು ನಗರ, ವಿರೂಪಾಕ್ಷ ರಾಮಚಂದ್ರಪ್ಪ ಹಾವನೂರ- ಹಾವೇರಿ.

ಹೊರದೇಶ-ಹೊರನಾಡು: ಕನ್ನಯ್ಯ ನಾಯ್ಡು, ಡಾ. ತುಂಬೆ ಮೂಹಿಯುದ್ದೀನ್- ತುಂಬೆ ಗ್ರೂಪ್ ಯು.ಎ.ಇ, ಚಂದ್ರಶೇಖರ್ ನಾಯಕ್- ಅಮೆರಿಕ.

ಪರಿಸರ ಕ್ಷೇತ್ರ: ಆಲ್ಮಿತ್ರಾ ಪಟೇಲ್- ಬೆಂಗಳೂರು ನಗರ

ಕೃಷಿ ಕ್ಷೇತ್ರ: ಶಿವನಾಪುರ ರಮೇಶ್- ಬೆಂಗಳೂರು ಗ್ರಾಮಾಂತರ, ಪುಟ್ಟೇರಮ್ಮ- ಚಾಮರಾಜನಗರ.

ಮಾಧ್ಯಮ ಕ್ಷೇತ್ರ: ಎನ್. ಎಸ್. ಶಂಕರ್- ದಾವಣಗೆರೆ, ಸನತ್ ಕುಮಾರ್ ಬೆಳಗಲಿ- ಬಾಗಲಕೋಟೆ, ಎ.ಜಿ.ಕಾರಟಗಿ (ಅಮರ ಗುಂಡಪ್ಪ ಕಾರಟಗಿ)- ಕೊಪ್ಪಳ, ರಾಮಕೃಷ್ಣ ಬಡಶೇಶಿ- ಕಲಬುರಗಿ.

ಇದನ್ನೂ ಓದಿ: ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿ ಹಾಕಿರಲಿಲ್ಲ, ಅದರೂ ಪ್ರಶಸ್ತಿ ಬಂದಿರುವುದು ಖುಷಿ ತಂದಿದೆ‌: ಅರುಣ್​ ಯೋಗಿರಾಜ್​

Last Updated : 31 minutes ago
ETV Bharat Logo

Copyright © 2024 Ushodaya Enterprises Pvt. Ltd., All Rights Reserved.