ETV Bharat / state

ಕಲಬುರಗಿ: ಬೆತ್ತಲೆಗೊಳಿಸಿ ಮರ್ಮಾಂಗಕ್ಕೆ ಕರೆಂಟ್ ಶಾಕ್ ಕೊಟ್ಟ ಗ್ಯಾಂಗ್ ಅರೆಸ್ಟ್ - Kalaburagi Torture Case

ಕಲಬುರಗಿಯಲ್ಲಿ ಹಣಕ್ಕಾಗಿ ಬೇಡಿಕೆಯಿಟ್ಟು ಸೆಕೆಂಡ್ ಹ್ಯಾಂಡ್ ಕಾರು ವ್ಯಾಪಾರಿ ಮತ್ತು ಇತರ ಇಬ್ಬರನ್ನು ವಿವಸ್ತ್ರಗೊಳಿಸಿ ಚಿತ್ರಹಿಂಸೆ ನೀಡಿದ ಗ್ಯಾಂಗ್‌ನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಕಲಬುರಗಿ ಚಿತ್ರ ಹಿಂಸೆ ಪ್ರಕರಣ
ಕಲಬುರಗಿ ಚಿತ್ರ ಹಿಂಸೆ ಪ್ರಕರಣ (ETV Bharat)
author img

By ETV Bharat Karnataka Team

Published : May 12, 2024, 9:43 AM IST

Updated : May 12, 2024, 11:28 AM IST

ಕಲಬುರಗಿ: ನಗರದಲ್ಲಿ ಅಮಾನವೀಯ ಕೃತ್ಯ ನಡೆದಿದೆ. ಸೆಕೆಂಡ್ ಹ್ಯಾಂಡ್ ಕಾರು ಮಾರಾಟ ವ್ಯಾಪಾರಿ ಮತ್ತು ಆತನ ಜೊತೆಗಿದ್ದ ಇಬ್ಬರನ್ನು ಕೊಠಡಿಯಲ್ಲಿ ಕೂಡಿ ಹಾಕಿ, ಮರ್ಮಾಂಗಕ್ಕೆ ಕರೆಂಟ್ ಶಾಕ್ ಕೊಟ್ಟು ಚಿತ್ರಹಿಂಸೆ ನೀಡಿದ ವಸೂಲಿ ಗ್ಯಾಂಗ್​ನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಕಲಬುರಗಿ ನಗರದ ಹಾಗರಗಾ ಕ್ರಾಸ್ ಸಮೀಪದ ಇನಾಮದಾರ್ ಕಾಲೇಜು ಸಮೀಪದ ಮನೆಯೊಂದರಲ್ಲಿ ಸೇಡಂ ತಾಲೂಕಿನ ದೇವನೂರ ಗ್ರಾಮದ ಕಾರು ವ್ಯಾಪಾರಿ ಅರ್ಜುನ್ ಮಡಿವಾಳ ಮತ್ತು ಆತನ ಜೊತೆಗೆ ಬಂದಿದ್ದ ರಹೇಮಾನ್ ಹಾಗೂ ಸಮೀರುದ್ದಿನ್ ಎಂಬವರನ್ನು ಕೂಡಿ ಹಾಕಿ, ವಿವಸ್ತ್ರಗೊಳಿಸಿ ಮರ್ಮಾಂಗಕ್ಕೆ ಕರೆಂಟ್ ಶಾಕ್ ಕೊಡಲಾಗಿದೆ. ಇಮ್ರಾನ್, ಮತೀನ್ ಪಟೇಲ್, ಜೀಯಾವುಲ್ಲಾ ಹುಸೇನಿ, ಮಹ್ಮದ್ ಅಫ್ಜಲ್, ರಮೇಶ್ ಸೇರಿದಂತೆ 10-12 ಜನರ ಗ್ಯಾಂಗ್ ಈ ದುಷ್ಕೃತ್ಯ ಎಸಗಿದೆ.

ಇದೇ ತಿಂಗಳು 4ರಂದು ಕಾರು ಮಾರುವುದಿದೆ, ನೋಡಲು ಬನ್ನಿ ಎಂದು ಗ್ಯಾಂಗ್​​ನ ರಮೇಶ್ ಎಂಬಾತ ಅರ್ಜುನ್​​ನನ್ನು ಕರೆಸಿಕೊಂಡು ರೂಂನಲ್ಲಿ ಲಾಕ್ ಮಾಡಿ ದುಡ್ಡಿಗೆ ಬೇಡಿಕೆಯಿಟ್ಟು ನಿರಂತರವಾಗಿ ಮಾರನೇ ದಿನದವರೆಗೂ ಕರೆಂಟ್ ಶಾಕ್ ಕೊಟ್ಟಿದ್ದರು. ಅರ್ಜುನ್ ಮಡಿವಾಳ್​​ಗೆ ಕರೆಂಟ್ ಟಾರ್ಚರ್ ಕೊಟ್ಟು 50 ಸಾವಿರ ಹಣ ಆನ್‌ಲೈನ್ ಮೂಲಕ ಪಡೆದಿದ್ದಾರಂತೆ. ಅಲ್ಲದೆ ಇನ್ನೂ ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟಿದ್ದರು.

ವ್ಯಾಪಾರಿಯ ರಕ್ಷಣೆ: ವ್ಯಾಪಾರಿಗೆ ಟಾರ್ಚರ್ ನೀಡುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದ್ದಂತೆ ಅಲರ್ಟ್ ಆದ ಗುಲ್ಬರ್ಗ ವಿವಿ ಠಾಣೆ ಪೊಲೀಸರು, ಮನೆ ಮೇಲೆ ದಾಳಿ ನಡೆಸಿ, ಕಾರು ವ್ಯಾಪಾರಿ ಅರ್ಜುನ್ ಮಡಿವಾಳ ಸೇರಿ ಮೂವರನ್ನು ರಕ್ಷಿಸಿದ್ದಾರೆ. ಆರೋಪಿಗಳಾದ ಇಮ್ರಾನ್, ಮತೀನ್ ಪಟೇಲ್, ಜೀಯಾವುಲ್ಲಾ ಹುಸ್ಸೇನಿ, ಮಹ್ಮದ್ ಅಫ್ಹಲ್, ರಮೇಶ್ ಸೇರಿ 7 ಜನರನ್ನು ಬಂಧಿಸಲಾಗಿದೆ. ಪೊಲೀಸ್ ದಾಳಿ ವೇಳೆ ಉಳಿದ ಆರೋಪಿಗಳು ಪರಾರಿಯಾಗಿದ್ದು, ಬಂಧನಕ್ಕೆ ಖಾಕಿ ಬಲೆ ಬೀಸಿದೆ. ಗುಲ್ಬರ್ಗ ವಿವಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಆರೋಪಿಗಳಳು ಕಾರುಗಳನ್ನು ಕಳ್ಳತನ ಮಾಡಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಮಾರಾಟ ಮಾಡುತ್ತಾರಂತೆ. ಬಳಿಕ ಖರೀದಿ ಮಾಡಿದ ವ್ಯಕ್ತಿಯನ್ನು ಕಳ್ಳತನ ಕಾರು ಖರೀದಿ ಮಾಡಿದ್ದಿಯಾ ಅಂತಾ ಹೆದರಿಸಿ ಬ್ಲಾಕ್‌ಮೇಲ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟು ಬೆದರಿಸುತ್ತಾರಂತೆ. ದುಡ್ಡು ಕೊಡದಿದ್ದಾಗ ಕ್ರೂರವಾಗಿ ಟಾರ್ಚರ್ ಕೊಟ್ಟು ಹಣ ವಸೂಲಿ ಮಾಡುವುದು ಈ ಗ್ಯಾಂಗ್​ನ ದಂಧೆ ಎಂದು ಹೇಳಲಾಗುತ್ತಿದೆ. ಈ ಹಿಂದೆಯೂ ಈ ರೀತಿ ಕಿರುಕುಳ ನೀಡಿ ಹಣ ವಸೂಲಿ ಮಾಡಿದ್ದರಂತೆ. ಆರೋಪಿ ಇಮ್ರಾನ್ ಪಟೇಲ್, ಮತೀನ್ ಪಟೇಲ್ ಮೇಲೆ ಹಲವು ಪೊಲೀಸ್ ಠಾಣೆಗಳಲ್ಲಿ ಎಫ್‌ಐಆರ್‌ಗಳು ದಾಖಲಾಗಿವೆ.

ಇದನ್ನೂ ಓದಿ: ಕೊಡಗು: ನಿಶ್ಚಿತಾರ್ಥ ಮುಂದೂಡಿಕೆಯಾಗಿದ್ದಕ್ಕೆ ಬಾಲಕಿಯ ಹತ್ಯೆಗೈದು ರುಂಡದೊಂದಿಗೆ ಆರೋಪಿ ಪರಾರಿ - Kodagu Girl Murder

ಇದನ್ನೂ ಓದಿ: ಕಿಡ್ನಾಪ್​​ ​- ಬರ್ಬರ ಕೊಲೆ, ಸತ್ತರೂ ಕಲ್ಲು ಎತ್ತಿ ಹಾಕುತ್ತಲೇ ಇದ್ದ ಆರೋಪಿ: ವಿಡಿಯೋ - Murder

Last Updated : May 12, 2024, 11:28 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.