ETV Bharat / state

ಜೆಡಿಎಸ್​ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ: ಮಂಡ್ಯದಿಂದ ಹೆಚ್​ಡಿಕೆ, ಹಾಸನದಿಂದ ಪ್ರಜ್ವಲ್​, ಕೋಲಾರದಿಂದ ಮಲ್ಲೇಶ್​ ಬಾಬು ಸ್ಪರ್ಧೆ - JDS Candaidate list - JDS CANDAIDATE LIST

ಜೆಡಿಎಸ್ ಇಂದು ಅಧಿಕೃತ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಆದರೆ ನಿನ್ನೆಯೇ ಹಾಸನ ಅಭ್ಯರ್ಥಿ ಪ್ರಜ್ವಲ್​ ರೇವಣ್ಣ ಅವರು ನಾಮಪತ್ರ ಸಲ್ಲಿಸಿದ್ದಾರೆ.

Former CM H D Kumarswamy
ಮಾಜಿ ಸಿಎಂ ಹೆಚ್​ ಡಿ ಕುಮಾರಸ್ವಾಮಿ
author img

By ETV Bharat Karnataka Team

Published : Mar 29, 2024, 5:03 PM IST

ಬೆಂಗಳೂರು: ಬಿಜೆಪಿ ಹಾಗೂ ಜೆಡಿಎಸ್​ ಮೈತ್ರಿಕೂಟದಲ್ಲಿ ಜೆಡಿಎಸ್​ ಪಾಲಿಗೆ ಮೂರು ಲೋಕಸಭಾ ಕ್ಷೇತ್ರಗಳು ದೊರೆತಿದ್ದು, ಇಂದು ಮೂರೂ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಘೋಷಣೆಯಾಗಿದೆ. ಮಂಡ್ಯ ಕ್ಷೇತ್ರಕ್ಕೆ ಮಾಜಿ ಸಿಎಂ ಹೆಚ್​.ಡಿ.ಕುಮಾರಸ್ವಾಮಿ ಅವರ ಹೆಸರನ್ನು ಪ್ರಕಟಿಸಲಾಗಿದ್ದು, ಏಪ್ರಿಲ್​ 4 ರಂದು ಅವರು ನಾಮಪತ್ರ ಸಲ್ಲಿಸಲಿದ್ದಾರೆ.

ಇನ್ನು ಹಾಸನ ಲೋಕಸಭಾ ಕ್ಷೇತ್ರಕ್ಕೆ ಪ್ರಜ್ವಲ್​ ರೇವಣ್ಣ ಅವರ ಹೆಸರು ಘೋಷಣೆಯಾಗಿದೆ. ಆದರೆ ಹಾಸನ ಲೋಕಸಭಾ ಕ್ಷೇತ್ರದಿಂದ ಪ್ರಜ್ವಲ್ ರೇವಣ್ಣ ಅವರು ನಿನ್ನೆಯೇ ನಾಮಪತ್ರ ಸಲ್ಲಿಸಿದ್ದಾರೆ.

ಕೋಲಾರ ಕ್ಷೇತ್ರಕ್ಕೆ ಕೊನೇ ಕ್ಷಣದಲ್ಲಿ ಗೊಂದಲ ಮೂಡಿದ್ದ ಕಾರಣ ಆ ಕ್ಷೇತ್ರದ ಮುಖಂಡರ ಜೊತೆ ಕುಮಾರಸ್ವಾಮಿ ಚರ್ಚೆ ನಡೆಸಿದ್ದರು. ನಂತರ ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೆಗೌಡ ಅವರ ಬಳಿ ಸಮಾಲೋಚನೆ ನಡೆಸಿದ ಹೆಚ್​ಡಿಕೆ ಮೂರು ಹೆಸರುಗಳ ಪೈಕಿ ಕೆಜಿಎಫ್​ನ ಮಲ್ಲೇಶ್ ಬಾಬು ಹೆಸರನ್ನು ಅಂತಿಮಗೊಳಿಸಿದ್ದಾರೆ.

ಆದರೆ, ಮೂರು ಕ್ಷೇತ್ರಗಳ ಹೆಸರುಗಳನ್ನು ಅಧಿಕೃತವಾಗಿ ಘೋಷಣೆ ಮಾಡದಿದ್ದರೂ, ಜೆಡಿಎಸ್​ನ ಸಾಮಾಜಿಕ ಜಾಲತಾಣ ಎಕ್ಸ್​ ನಲ್ಲಿ "ಮಂಡ್ಯ, ಕೋಲಾರ ಹಾಗೂ ಹಾಸನ ಲೋಕಸಭಾ ಕ್ಷೇತ್ರಗಳಿಗೆ ಎನ್​​ಡಿಎ ಮೈತ್ರಿ ಅಭ್ಯರ್ಥಿಗಳಾಗಿ ಆಯ್ಕೆಯಾದ ಹೆಚ್.ಡಿ ಕುಮಾರಸ್ವಾಮಿ (ಮಂಡ್ಯ), ಮಲ್ಲೇಶ್ ಬಾಬು (ಕೋಲಾರ) ಹಾಗೂ ಪ್ರಜ್ವಲ್ ರೇವಣ್ಣ (ಹಾಸನ) ಅವರಿಗೆ ಅಭಿನಂದನೆಗಳು" ಎಂದು ಬರೆದುಕೊಂಡು ಪೋಸ್ಟರ್​ ಹಂಚಿಕೊಳ್ಳಲಾಗಿದೆ.

ಇದನ್ನೂ ಓದಿ: ಹಳೆಯ ಕಹಿ ಘಟನೆಗಳನ್ನ ಮರೆತು ಒಗ್ಗಟ್ಟಾಗಿ ಕೆಲಸ ಮಾಡಿ: ಕಾರ್ಯಕರ್ತರಿಗೆ ಹೆಚ್.ಡಿ.ದೇವೇಗೌಡ ಕರೆ - BJP JDS Meeting

ETV Bharat Logo

Copyright © 2025 Ushodaya Enterprises Pvt. Ltd., All Rights Reserved.