ETV Bharat / state

ಕಲಾವಿದರ ಬದುಕು, ಬರಹ ಒಂದೇ ಆಗಿರಬೇಕು : ಜಯಮೃತ್ಯುಂಜಯ ಸ್ವಾಮೀಜಿ - Jaya Mruthyunjaya Swamiji

ಪಂಚಮಸಾಲಿ ಸಮಾಜದ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರು ನಟ ದರ್ಶನ್ ಮತ್ತು ಅವರ ಸಹಚರರ ವಿರುದ್ಧ ಕೇಳಿಬಂದಿರುವ ಕೊಲೆ ಆರೋಪ ಪ್ರಕರಣದ ಬಗ್ಗೆ ಮಾತನಾಡಿದರು.

Basava Jaya Mruthyunjaya Swamiji
ಬಸವ ಜಯಮೃತ್ಯುಂಜಯ ಸ್ವಾಮೀಜಿ (ETV Bharat)
author img

By ETV Bharat Karnataka Team

Published : Jun 16, 2024, 5:49 PM IST

ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ (ETV Bharat)

ಚಿಕ್ಕೋಡಿ (ಬೆಳಗಾವಿ) : ಯಾವುದೇ ಕಲಾವಿದರು ಆಗಿರಬಹುದು. ಅವರ ಬದುಕು ಮತ್ತು ಬರಹ ಒಂದೇ ಆಗಿರಬೇಕು. ಪರದೆ ಮೇಲೆ ನಟಿಸುವಂತ ನಟನೆಗೂ ಬದುಕಿಗೂ ಸಾಮೀಪ್ಯವಾಗುವಂತೆ ಬದುಕುವ ಪ್ರಯತ್ನ ಮಾಡಬೇಕು. ಪರದೆ ಮೇಲೆ ಒಂದು ನಟನೆ, ಪರದೆ ಹಿಂಭಾಗ ಒಂದು ನಟನೆ ಮಾಡಿದಾಗ ಇಂತಹ ಅವಘಡ ಆಗುತ್ತವೆ ಎಂದು ನಟ ದರ್ಶನ್​ ಮತ್ತು ಅವರ ಸಹಚರರಿಂದ ನಡೆದಿರುವ ಕೊಲೆ ಆರೋಪ ಪ್ರಕರಣದ ಕುರಿತು ಪಂಚಮಸಾಲಿ ಸಮಾಜದ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿ ಪ್ರತಿಕ್ರಿಯಿಸಿದರು.

ಅವರು ಭಾನುವಾರ ಅಥಣಿ ಪಟ್ಟಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡುತ್ತ, ನಾವು ಚಿತ್ರ ನಟ ಡಾಕ್ಟರ್ ರಾಜ್​ಕುಮಾರ್, ವಿಷ್ಣುವರ್ಧನ್ ಅವರಂತ ನಟರನ್ನು ಆದರ್ಶವಾಗಿ ತೆಗೆದುಕೊಳ್ಳಬೇಕು. ಸದ್ಯಕ್ಕೆ ನಡೆಯುತ್ತಿರುವ ಇಂತಹ ಅವಘಡಗಳಿಗೆ ಅವಕಾಶ ಕೊಡದೆ ಪ್ರತಿಯೊಬ್ಬ ನಟರು ತಮ್ಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದು ಕಲಾವಿದರಿಗೆ ಶ್ರೀಗಳು ಕಿವಿಮಾತು ಹೇಳಿದರು. ಯಾವುದೇ ವ್ಯಕ್ತಿ ತಪ್ಪು ಮಾಡಿದರೆ ಕಾನೂನು ಕ್ರಮ ಕೈಗೊಳ್ಳಬೇಕು. ಕಾನೂನಿಗೆ ಎಲ್ಲರೂ ಸಮಾನರು ಎಂದು ಹೇಳಿದರು.

ಪಂಚಮಸಾಲಿ ಸಮಾಜದ 2ಎ ಮೀಸಲಾತಿ ವಿಚಾರ : ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಗೆ ಬರುವ ಮುನ್ನವೇ ಕಲಬುರಗಿಯಲ್ಲಿ ಪಂಚಮಸಾಲಿ ಸಮಾಜದ 2ಎ ಮೀಸಲಾತಿಗೋಸ್ಕರ ಸರ್ಕಾರದ ಮೇಲೆ ಒತ್ತಡ ತರುವುದಕ್ಕೆ ಬೃಹತ್ ಸಮಾವೇಶ ಏರ್ಪಡಿಸಲಾಗಿತ್ತು. ಚುನಾವಣೆ ಮುಗಿದಿದೆ, ಮತ್ತೆ ನಮ್ಮ ಹೋರಾಟವನ್ನು ಪ್ರಾರಂಭಿಸಲಾಗುವುದು. ಮುಂದಿನ ಹೋರಾಟದ ಕುರಿತು ಕಾರವಾರ ಜಿಲ್ಲೆಯ ಉಳವಿ ಕ್ಷೇತ್ರದಲ್ಲಿ ಎರಡು ದಿನಗಳ ಸಂಕಲ್ಪ ಸಭೆ ಮಾಡಿ ನಮ್ಮ ಸಮುದಾಯದ 20 ಜನ ಶಾಸಕರ ಮನೆಯಲ್ಲಿ ಮೀಸಲಾತಿ ಹೋರಾಟ ಮಾಡುತ್ತೇವೆ. ನಂತರ ಅವರು ವಿಧಾನಸಭೆಯಲ್ಲಿ ಮಾತನಾಡಬೇಕು. ಅಲ್ಲಿಗೂ ಸರ್ಕಾರ ಸ್ಪಂದನೆ ಮಾಡದೇ ಹೋದರೆ, ಡಿಸೆಂಬರ್ ತಿಂಗಳಲ್ಲಿ ನಡೆಯುವ ಅಧಿವೇಶನದಲ್ಲಿ ಮುತ್ತಿಗೆ ಹಾಕುವ ಆಲೋಚನೆ ಮಾಡಲಾಗಿದೆ ಎಂದು ತಿಳಿಸಿದರು.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಹೋರಾಟ ಸದ್ಯಕ್ಕೆ ಕಾಣುತ್ತಿಲ್ಲ ಆರೋಪ ವಿಚಾರ: ಕಾಂಗ್ರೆಸ್ ಸರ್ಕಾರ ಬಂದು ಒಂದು ವರ್ಷವಾಗಿದೆ. ಮೀಸಲಾತಿ ವಿಚಾರದಲ್ಲಿ ಸರ್ಕಾರ ನಮಗೆ ಯಾವುದೇ ಸಹಕಾರ ಕೊಟ್ಟಿಲ್ಲ. ಇದರಿಂದ ನಮಗೂ ಕೂಡ ನೋವಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಯಡಿಯೂರಪ್ಪನವರು ಮಾತು ತಪ್ಪಿದ್ದರಿಂದ ಪಾದಯಾತ್ರೆ ಮಾಡ್ಬೇಕಾಯಿತು. ನಾವು ನಮ್ಮ ಮೀಸಲಾತಿ ಪಡೆದುಕೊಳ್ಳುವುದಕ್ಕೆ ಈ ಸರ್ಕಾರದ ವಿರುದ್ಧ ಉಗ್ರ ಹೋರಾಟವನ್ನು ಮಾಡುತ್ತೇವೆ ಎಂದು ಸ್ವಾಮೀಜಿ ಹೇಳಿದರು.

ಇದನ್ನೂ ಓದಿ : ಪಂಚಮಸಾಲಿ ಮೀಸಲಾತಿ ವಿಚಾರ; ನಮ್ಮ ಧ್ವನಿ ಸರ್ಕಾರಕ್ಕೆ ಮುಟ್ಟುವವರೆಗೂ ಹೋರಾಟ: ಬಸವ ಜಯಮೃತ್ಯುಂಜಯ ಶ್ರೀ - PANCHAMASALI

ETV Bharat Logo

Copyright © 2024 Ushodaya Enterprises Pvt. Ltd., All Rights Reserved.