ETV Bharat / state

ಹುಬ್ಬಳ್ಳಿ ಗಲಭೆ ಪ್ರಕರಣ ಹಿಂಪಡೆದ ಸರ್ಕಾರ: ಸಿಎಂ ಸಮರ್ಥನೆ, ಬಿಜೆಪಿ ನಾಯಕರ ಖಂಡನೆ - HUBBALLI RIOT CASE

ಹುಬ್ಬಳ್ಳಿಯ ಗಲಭೆ ಪ್ರಕರಣವನ್ನು ರಾಜ್ಯ ಸರ್ಕಾರ ಹಿಂಪಡೆದಿರುವುದನ್ನು ಬಿಜೆಪಿ ನಾಯಕರು ಖಂಡಿಸಿದ್ದಾರೆ. ಸರ್ಕಾರದ ನಿರ್ಧಾರದ ವಿರುದ್ಧ ಕಾನೂನು ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಜಗದೀಶ್ ಶೆಟ್ಟರ್, ಸಿದ್ದರಾಮಯ್ಯ, ಪ್ರಲ್ಹಾದ್ ಜೋಶಿ
ಜಗದೀಶ್ ಶೆಟ್ಟರ್, ಸಿದ್ದರಾಮಯ್ಯ, ಪ್ರಲ್ಹಾದ್ ಜೋಶಿ (ETV Bharat)
author img

By ETV Bharat Karnataka Team

Published : Oct 11, 2024, 3:35 PM IST

Updated : Oct 11, 2024, 5:02 PM IST

ಧಾರವಾಡ: ಹಳೆ ಹುಬ್ಬಳ್ಳಿ ಗಲಭೆ ಪ್ರಕರಣ ಹಿಂಪಡೆದ ರಾಜ್ಯ ಸರ್ಕಾರದ ನಿರ್ಧಾರವನ್ನು ಸಿಎಂ ಸಿದ್ದರಾಮಯ್ಯ ಸಮರ್ಥಿಸಿಕೊಂಡಿದ್ದಾರೆ. ಆದರೆ ಸರ್ಕಾರ ಕ್ರಮವನ್ನು ಬಿಜೆಪಿ ನಾಯಕರು ತೀವ್ರವಾಗಿ ಖಂಡಿಸಿ, ಹೋರಾಟದ ಎಚ್ಚರಿಕೆ ನೀಡಿದ್ದಾರೆ.

"ಕೆಲವು ಮೊಕದ್ದಮೆಗಳ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಸಚಿವ ಸಂಪುಟದ ಉಪಸಮಿತಿಗಿರುತ್ತದೆ. ಗೃಹ ಸಚಿವರು ಈ ಉಪಸಮಿತಿಯ ನೇತೃತ್ವ ವಹಿಸಿದ್ದು, ಸಮಿತಿ ವಿವೇಚನೆಯಂತೆ ಪ್ರಕರಣದ ದೂರು ಹಿಂದಕ್ಕೆ ಪಡೆದಿದೆ. ಆದರೂ ಕೂಡ ಈ ವಿಚಾರವಾಗಿ ಹೆಚ್ಚಿನ ಮಾಹಿತಿ ಪಡೆಯುತ್ತೇನೆ" ಎಂದು ಮೈಸೂರಲ್ಲಿ ಸಿಎಂ ಪ್ರತಿಕ್ರಿಯೆ ನೀಡಿದರು.

ಸಂಸದ ಜಗದೀಶ ಶೆಟ್ಟರ್ (ETV Bharat)

ಬಿಜೆಪಿ ನಾಯಕರಿಂದ ಹೋರಾಟದ ಎಚ್ಚರಿಕೆ: ಧಾರವಾಡದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಂಸದ ಜಗದೀಶ ಶೆಟ್ಟರ್, "ಕೇವಲ ಒಂದು ಸಮುದಾಯವನ್ನು ಓಲೈಕೆ ಮಾಡಿಕೊಳ್ಳಲು ಸರ್ಕಾರ ಈ ರೀತಿಯ ನಿರ್ಧಾರ ತೆಗೆದುಕೊಂಡಿರುವುದು ಸರಿಯಲ್ಲ. ಯಾವ ಕೇಸು ಮರಳಿ ಪಡೆಯಬೇಕು, ಯಾವ ಕೇಸು ವಾಪಸ್ ಪಡೆಯಬಾರದು ಅನ್ನೋದು ತಿಳಿಯಬೇಕಿತ್ತು. ಎಲ್ಲ ಸರ್ಕಾರದಲ್ಲಿ ಕೆಲ ಕೇಸ್‌ಗಳನ್ನು ಮರಳಿ ಪಡೆಯೋದು ಸಾಮಾನ್ಯ. ರೈತ ಹೋರಾಟ, ಮಹದಾಯಿ ಹೊರಾಟದ ಕೇಸು ಹಿಂಪಡೆದರೆ ಸರಿ. ಆದರೆ ಪೊಲೀಸ್ ಠಾಣೆ ಮೇಲೆ ದಾಳಿ, ಪೊಲೀಸರ ಮೇಲೆ ದಾಳಿ ಮಾಡಿದ ಕೇಸು ಮರಳಿ ಪಡೆದಿದ್ದು ಸರಿಯಲ್ಲ. ಇದು ಕಾನೂನು ಸುವ್ಯವಸ್ಥೆ ಹದಗೆಡಲು ಬೆಂಬಲ ನೀಡಲು ಅವಕಾಶ ನೀಡುತ್ತದೆ" ಎಂದು ಹೇಳಿದರು.

"ಇಡೀ ಸಮಾಜವನ್ನು ಒಂದಾಗಿ ನೋಡಬೇಕು. ವ್ಯವಸ್ಥೆ ಹದಗೆಡುವ ರೀತಿಗೆ ಪ್ರೋತ್ಸಾಹ ಕೊಡಬಾರದು. ಈ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ರಾಜಕೀಯ ಲಾಭಕ್ಕಾಗಿ ಈ ರೀತಿ ಮಾಡಲಾಗುತ್ತಿದೆ. ಇದರಿಂದ ಒಳ್ಳೆಯದು ಆಗಲ್ಲ. ಎಷ್ಟೋ ವರ್ಷಗಳಿಂದ ರೌಡಿಶೀಟರ್ ಇದ್ದಾರೆ. ಅವರ ಮೇಲೆ ರೌಡಿಶೀಟ್ ಹಾಗೆಯೇ ಮುಂದುವರೆದಿದೆ. ಇದರಿಂದ ಕೆಲ ಅಮಾಯಕರು ತೊಂದರೆಯಲ್ಲಿದ್ದಾರೆ. ಅಂಥವರ ರೌಡಿಶೀಟ್ ತೆಗೆಯಲಿ, ಆ ಮೂಲಕ ಅವರನ್ನು ಒಳ್ಳೆಯವರನ್ನಾಗಿ ಮಾಡಲಿ. ಆದರೆ ಗೂಂಡಾಗಿರಿ ಮಾಡಿದವರ ಕೇಸ್ ಮರಳಿ ಪಡೆದಿರುವುದು ಅಕ್ಷಮ್ಯ ಅಪರಾಧ" ಎಂದು ತಿಳಿಸಿದರು.

ಕೇಂದ್ರ ಸಚಿವ ಪ್ರಲ್ಹಾದ್ ‌ಜೋಶಿ‌ (ETV Bharat)

ಯಾವ ರಾಜ್ಯವೂ ಕೂಡ ಎನ್​ಐಎ ಕೇಸ್ ವಾಪಸ್ ಪಡೆದಿಲ್ಲ- ಜೋಶಿ: ಹಳೆ ಹುಬ್ಬಳ್ಳಿಯ ಗಲಭೆ ಪ್ರಕರಣ ಸಂಘಟಿತ ಭಯೋತ್ಪಾದಕ ಕೃತ್ಯ ಎಂದು ಎನ್​ಐಎ ಚಾರ್ಜ್‌ಶೀಟ್​​ನಲ್ಲಿದೆ‌. ಆದರೆ ಈ ಪ್ರಕರಣವನ್ನು ರಾಜ್ಯ ಸರ್ಕಾರ ತೆಗೆದು ಹಾಕಿರುವುದು ಅತ್ಯಂತ ಖಂಡಿನೀಯ‌ ಎಂದು ಕೇಂದ್ರ ಸಚಿವ ಪ್ರಲ್ಹಾದ್ ‌ಜೋಶಿ‌ ಆಕ್ರೋಶ ವ್ಯಕ್ತಪಡಿಸಿದರು.

ಹುಬ್ಬಳ್ಳಿಯಲ್ಲಿಂದು ಮಾತನಾಡಿದ ಅವರು, "ನನ್ನ ಬಳಿ ಸದ್ಯ ಆರ್ಡರ್ ಕಾಪಿ‌ ಇಲ್ಲ. ಆದರೆ, ನಾನು ಮಾಹಿತಿ ಆಧರಿಸಿ ಮಾತಾಡುತ್ತಿದ್ದೇನೆ. ಕೇಸ್ ವಾಪಸ್ ಪಡೆದು ಬಹುದೊಡ್ಡ ಕಂಟಕ ತಂದಿದ್ದಾರೆ" ಎಂದು ಆರೋಪಿಸಿದರು.

"ಭಾರತ ಸರ್ಕಾರದ ಬಿಗಿಯಾದ ಕ್ರಮದಿಂದ ದೇಶದಲ್ಲಿ 95 ಪರ್ಸೆಂಟ್ ನಕ್ಸಲ್ ಚಟುವಟಿಕೆ ಕಡಿಮೆ ಆಗಿದೆ. ಕಾಂಗ್ರೆಸ್ ಸರ್ಕಾರ ಭಯೋತ್ಪಾದಕ ಕೃತ್ಯವನ್ನು ಮಾಡಲು ಪ್ರಯತ್ನಪಟ್ಟವರ ಕೇಸ್ ವಾಪಸ್ ಪಡೆಯುತ್ತಿರುವುದನ್ನು ನಾನು ಖಂಡಿಸುತ್ತೇನೆ. ಇದರ ವಿರುದ್ಧ ನಾವು ಕಾನೂನು ಹೋರಾಟ ಮಾಡುತ್ತೇವೆ. ಮೊದಲ ಹಂತದಲ್ಲಿ ಸೋಮವಾರ ಹೋರಾಟ ನಡೆಸಲಾಗುವುದು. ನನಗಿರುವ ಮಾಹಿತಿ ಪ್ರಕಾರ ಯಾವ ರಾಜ್ಯದವರೂ ಎನ್​ಐಎ ಕೇಸ್ ವಾಪಸ್ ಪಡೆದಿಲ್ಲ" ಎಂದು ಪ್ರತಿಕ್ರಿಯೆ ನೀಡಿದರು.

ಇದನ್ನೂ ಓದಿ: ಪ್ರತ್ಯೇಕ ದಕ್ಷಿಣ ಭಾರತ ನನ್ನ ಕೂಗಲ್ಲ, ಈಗ ಮತ್ತೆ ಅನ್ಯಾಯ ಮಾಡಿ ಕೂಗು ಏಳಿಸಬೇಡಿ: ಡಿ.ಕೆ.ಸುರೇಶ್

Last Updated : Oct 11, 2024, 5:02 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.