ETV Bharat / state

2028ರೊಳಗೆ ಭಾರತ ವಿಶ್ವದ 3ನೇ ಬಲಿಷ್ಠ ರಾಷ್ಟ್ರ: ಬೆಳಗಾವಿಯಲ್ಲಿ ಜೆ.ಪಿ.ನಡ್ಡಾ ಹೇಳಿಕೆ

ಬೆಳಗಾವಿಯಲ್ಲಿ ಮಂಗಳವಾರ ಆಯೋಜಿಸಿದ ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಪಾಲ್ಗೊಂಡು ಭಾಷಣ ಮಾಡಿದರು.

belgavi
ಪ್ರಬುದ್ಧರೊಂದಿಗಿನ ಸಂವಾದ ಕಾರ್ಯಕ್ರಮ
author img

By ETV Bharat Karnataka Team

Published : Mar 6, 2024, 11:00 AM IST

Updated : Mar 6, 2024, 1:05 PM IST

ಜೆ.ಪಿ.ನಡ್ಡಾ ಭಾಷಣ

ಬೆಳಗಾವಿ: "ಕಳೆದ ಒಂಬತ್ತು ವರ್ಷಗಳಲ್ಲಿ ಇಡೀ ವಿಶ್ವವೇ ಭಾರತದತ್ತ ತಿರುಗಿ ನೋಡುವಂತೆ ಪ್ರಧಾನಿ ಮೋದಿ ಮಾಡಿದ್ದಾರೆ. ಸರ್ವ ಜನಾಂಗದ ಅಭಿವೃದ್ಧಿಯನ್ನೇ ಮೂಲ ಮಂತ್ರ ಮಾಡಿಕೊಂಡಿದ್ದು, ಪ್ರತಿಯೊಂದು ಕ್ಷೇತ್ರದಲ್ಲೂ ಅಭಿವೃದ್ಧಿಯಲ್ಲಿ ದೇಶ ದಾಪುಗಾಲಿಡುತ್ತಿದೆ. ಹೀಗಾಗಿ ಭಾರತ 2028ರ ವೇಳೆಗೆ ವಿಶ್ವದ ಬಲಿಷ್ಠ ರಾಷ್ಟ್ರಗಳಲ್ಲಿ 3ನೇ ಸ್ಥಾನ ಹೊಂದಲಿದೆ" ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ವಿಶ್ವಾಸ ವ್ಯಕ್ತಪಡಿಸಿದರು.

ಬೆಳಗಾವಿ ಕೆ.ಎಲ್.ಇ ಸಂಸ್ಥೆಯ ಜೀರಗೆ ಸಭಾಭವನದಲ್ಲಿ ಮಂಗಳವಾರ ಆಯೋಜಿಸಿದ್ಧ ಪ್ರಬುದ್ಧರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಡ್ಡಾ, "ದೇಶದ ಲಕ್ಷಗಟ್ಟಲೆ ಹಳ್ಳಿಗಳಿಗೆ ನೀರು, ವಿದ್ಯುತ್​ ಮತ್ತು ಮನೆಗಳ ವ್ಯವಸ್ಥೆಯನ್ನು ಮೋದೀಜಿ ಮಾಡಿಕೊಟ್ಟಿದ್ದಾರೆ. ಹಿಂದೆ ಈ ಮೂಲಸೌಕರ್ಯಗಳು ಕೇವಲ ಕನಸಾಗಿದ್ದವು. 2014ರಲ್ಲಿ ಬಿಜೆಪಿ ದೇಶದ ಅಧಿಕಾರವಹಿಸಿಕೊಂಡಾಗ 18 ಸಾವಿರ ಹಳ್ಳಿಗಳಿಗೆ ವಿದ್ಯುತ್​ ಸೌಲಭ್ಯ ಇರಲಿಲ್ಲ. ಕೇವಲ ಒಂದು ಸಾವಿರ ದಿನಗಳಲ್ಲಿ ಈ ಸೌಕರ್ಯ ನೀಡುವುದಾಗಿ ತಿಳಿಸಿದ ಮೋದಿ, ಅದನ್ನು ಸಕಾಲದಲ್ಲಿ ಈಡೇರಿಸಿದರು" ಎಂದರು.

Belgavi
ಬೆಳಗಾವಿಯಲ್ಲಿ ನಡೆದ ಕಾರ್ಯಕ್ರಮ

"ಇಂದು ಲಕ್ಷಾಂತರ ಮನೆಗಳಿಗೆ ವಿದ್ಯುತ್ ಸೌಲಭ್ಯ ನೀಡಲಾಗಿದೆ. ಜಲ್ ಜೀವನ್ ಯೋಜನೆಯಡಿ 11 ಕೋಟಿ ನಳ್ಳಿ ನೀರಿನ ಸಂಪರ್ಕ ನೀಡಲಾಗಿದೆ. ಗ್ರಾಮೀಣ ಭಾಗದ ಮಹಿಳೆಯರ ಸಂಕಷ್ಟಕ್ಕೆ ಸ್ಪಂದಿಸಿ ಗ್ಯಾಸ್ ಸಿಲಿಂಡರ್ ಸೌಲಭ್ಯ ಒದಗಿಸಲಾಗಿದೆ" ಎಂದು ನಡ್ಡಾ ವಿವರಿಸಿದರು.

"ಇಂಡಿಯಾ ಒಕ್ಕೂಟದಲ್ಲಿರುವ ನಾಯಕರಲ್ಲಿ ಹಲವರು ಜೈಲಿನಲ್ಲಿದ್ದಾರೆ ಅಥವಾ ಜಾಮೀನು​ ಮೇಲಿದ್ದಾರೆ. ಅಖಿಲೇಶ್​ ಯಾದವ್​, ಅಬ್ದುಲ್ಲಾ ಮೊಹಮ್ಮದ್​ ಮಫ್ತಿ, ಲಾಲೂಪ್ರಸಾದ್​, ತೇಜಪ್ರತಾಪ್, ಎಂ.ಕೆ.ಸ್ಟಾಲಿನ್‌, ಷರದ್‌ ಪವಾರ್, ರಾಹುಲ್‌ ಗಾಂಧಿ, ಕೇಜ್ರಿವಾಲ್‌ ಈ ನಾಯಕರ ಪಟ್ಟಿಯನ್ನು ಗಮನಿಸಿ. ಎಲ್ಲರೂ ತಮ್ಮ ಒಂದಿಲ್ಲೊಂದು ಪ್ರಕರಣದಲ್ಲಿ ಸಿಕ್ಕಿಕೊಂಡಿದ್ದಾರೆ" ಎಂದು ಹೇಳಿದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ, "ಸೂರ್ಯ-ಚಂದ್ರರು ಹುಟ್ಟುವುದು ಎಷ್ಟು ಸತ್ಯವೋ ಕೇಂದ್ರದಲ್ಲಿ ಮೂರನೇ ಬಾರಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದು ಅಷ್ಟೇ ಸತ್ಯ" ಎಂದರು.

ಕಾರ್ಯಕ್ರಮದಲ್ಲಿ ಪ್ರಬುದ್ಧರ ಜೊತೆಗೆ ಸಂವಾದದಲ್ಲಿ ಪಾಲ್ಗೊಳ್ಳಬೇಕಿದ್ದ ಜೆ.ಪಿ.ನಡ್ಡಾ ಕೇವಲ ಭಾಷಣ ಮಾಡಿದ್ದು, ಚರ್ಚೆಗೆ ಗ್ರಾಸವಾಯಿತು. ತಮ್ಮ ಸಲಹೆಗಳನ್ನು ನೀಡಲು ಆಗಮಿಸಿದ್ದ ಪ್ರಬುದ್ಧರು ಭಾಷಣ ಕೇಳಿ ವಾಪಸಾದರು.

ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಚುನಾವಣಾ ಉಸ್ತುವಾರಿ ರಾಧಾಮೋಹನದಾಸ ಅಗರವಾಲ್​, ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ, ರಾಜ್ಯಸಭಾ ಮಾಜಿ ಸದಸ್ಯ ಡಾ.ಪ್ರಭಾಕರ ಕೋರೆ, ಮಹಾನಗರ ಜಿಲ್ಲಾಧ್ಯಕ್ಷೆ ಗೀತಾ ಸುತಾರ, ಗ್ರಾಮಾಂತರ ಜಿಲ್ಲಾಧ್ಯಕ್ಷ ಸುಭಾಷ ಪಾಟೀಲ ಮತ್ತಿತರರು ವೇದಿಕೆ ಮೇಲಿದ್ದರು.

ಸಂಸದರಾದ ಮಂಗಲಾ ಅಂಗಡಿ, ಈರಣ್ಣಾ ಕಡಾಡಿ, ನಾರಾಯಣಸಾ ಭಾಂಡಗೆ, ಶಾಸಕರಾದ ಅಭಯ ಪಾಟೀಲ, ಬಸನಗೌಡ ಪಾಟೀಲ ಯತ್ನಾಳ್, ಮಾಜಿ ಶಾಸಕರಾದ ಸಂಜಯ ಪಾಟೀಲ, ಅನಿಲ ಬೆನಕೆ, ಮಹಾಂತೇಶ ಕವಟಗಿಮಠ, ಮಹಾಪೌರ ಸುನಿತಾ ಕಾಂಬಳೆ, ಉಪಮಹಾಪೌರ ಆನಂದ ಚವ್ಹಾಣ ಸೇರಿದಂತೆ ವಿವಿಧ ಕ್ಷೇತ್ರಗಳ‌ ಪ್ರಬುದ್ಧರು ಸಭೆಯಲ್ಲಿ ಭಾಗವಹಿಸಿದ್ದರು.

JP Nadda visited to MP Mangala Angadi
ಸಂಸದೆ ಮಂಗಲ ಅಂಗಡಿ ಮನೆಗೆ ಜೆ.ಪಿ.ನಡ್ಡಾ ಭೇಟಿ

ಮಂಗಲ ಅಂಗಡಿ ಮನೆಗೆ ಜೆ.ಪಿ.ನಡ್ಡಾ ಭೇಟಿ: ಬೆಳಗಾವಿ ಸಂಸದೆ ಮಂಗಲ ಅಂಗಡಿ ನಿವಾಸಕ್ಕೆ ಜೆ.ಪಿ. ನಡ್ಡಾ ಭೇಟಿ ನೀಡಿದ್ದು, ಕುತೂಹಲ ಕೆರಳಿಸಿತು. ವಿಶ್ವೇಶ್ವರಯ್ಯ ನಗರದಲ್ಲಿರುವ ಸಂಸದೆಯ ನಿವಾಸಕ್ಕೆ ಆಗಮಿಸಿದ ನಡ್ಡಾರಿಗೆ ಬಿ.ವೈ ವಿಜಯೇಂದ್ರ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ, ರಾಜ್ಯ ಚುನಾವಣೆ ಉಸ್ತುವಾರಿ ರಾಧಾ ಮೋಹನದಾಸ್ ಅಗರವಾಲ್ ಸಾಥ್ ಕೊಟ್ಟರು.

ನಡ್ಡಾರನ್ನು ಸಂಸದೆ ಮಂಗಳಾ ಅಂಗಡಿ, ಪುತ್ರಿಯರಾದ ಸ್ಫೂರ್ತಿ ಪಾಟೀಲ್, ಶ್ರದ್ಧಾ ಶೆಟ್ಟರ್, ಅಳಿಯ ಸಂಕಲ್ಪ ಶೆಟ್ಟರ್ ಸ್ವಾಗತಿಸಿದರು. ಈ ವೇಳೆ ಅಂಗಡಿ ಕುಟುಂಬದ ಯೋಗಕ್ಷೇಮವನ್ನು ನಡ್ಡಾ ವಿಚಾರಿಸಿದರು.

ನಡ್ಡಾ ಭೇಟಿ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಮಂಗಲ ಅಂಗಡಿ, "ಅಂಗಡಿ ಕುಟುಂಬಕ್ಕೆ ಲೋಕಸಭೆ ಟಿಕೆಟ್​​ ನೀಡುವಂತೆ ಮನವಿ ಮಾಡಿಕೊಂಡಿದ್ದೇವೆ. ಕಾರ್ಯಕರ್ತರ ಅಭಿಪ್ರಾಯ ಕೂಡ ಅದೇ ಆಗಿದೆ" ಎಂದರು. ಇದೇ ವೇಳೆ, "ಜಗದೀಶ್ ಶೆಟ್ಟರ್​ ಬೆಳಗಾವಿಯಿಂದ ಸ್ಪರ್ಧಿಸಿದರೆ ಬೆಂಬಲಿಸುತ್ತಿರಾ? ಎಂಬ ವಿಚಾರಕ್ಕೆ, "ನಮ್ಮ ಕುಟುಂಬಕ್ಕೆ ಟಿಕೆಟ್​ ಕೇಳಿದ್ದೇವೆ. ಮುಂದೆ ಏನಾಗುತ್ತೆ ನೋಡೋಣ" ಎಂದರು.

ಇದನ್ನೂ ಓದಿ: ಸೋಮಶೇಖರ್, ಹೆಬ್ಬಾರ್ ಮಾತ್ರವಲ್ಲದೆ ಹಲವರು ಕಾಂಗ್ರೆಸ್​ಗೆ?: ಡಿಕೆಶಿ ಹೇಳಿದ್ದೇನು?

Last Updated : Mar 6, 2024, 1:05 PM IST

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.