ETV Bharat / state

ಹುಬ್ಬಳ್ಳಿಯ ಹಲವೆಡೆ 116 ಐಟಿ ಅಧಿಕಾರಿಗಳಿಂದ ಏಕಕಾಲಕ್ಕೆ ದಾಳಿ - 116 ಐಟಿ ಅಧಿಕಾರಿಗಳು

116 ಐಟಿ ಅಧಿಕಾರಿಗಳು ಏಕಕಾಲಕ್ಕೆ ಉದ್ಯಮಿಯೊಬ್ಬರ ಮನೆ, ಕಚೇರಿ, ಅಂಗಡಿ, ಹೋಟೆಲ್​ಗಳ ಮೇಲೆ ದಾಳಿ ನಡೆಸಿದ್ದು, ಕಳೆದ 10 ಗಂಟೆಗಳಿಂದ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.

it raid
ಐಟಿ ದಾಳಿ
author img

By ETV Bharat Karnataka Team

Published : Jan 24, 2024, 12:16 PM IST

Updated : Jan 24, 2024, 8:33 PM IST

ಹುಬ್ಬಳ್ಳಿ: ಉದ್ಯಮಿ ಹಾಗೂ ಬಂಗಾರದ ವ್ಯಾಪಾರಿ ಗಣೇಶ ಶೇಟ್ ಅವರ ಮನೆ, ಕಚೇರಿ, ಅಂಗಡಿ ಹಾಗೂ ಒಡೆತನದ ಹೋಟೆಲ್​ಗಳ‌ ಮೇಲೆ ಏಕಕಾಲಕ್ಕೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸುಮಾರು 116 ಕ್ಕೂ ಹೆಚ್ಚು ಐಟಿ ಅಧಿಕಾರಿಗಳು ಈಗಾಗಲೇ ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ.

ಹುಬ್ಬಳ್ಳಿಯ ಅಶೋಕ ನಗರದ ನಿವಾಸ, ಆಭರಣ ಮಳಿಗೆ, ಅಮರಗೋಳದ ರೆಸಾರ್ಟ್, ಸೇರಿದಂತೆ ಇನ್ನಿತರ ಅವರ ಒಡೆತನದ ವ್ಯಾಪಾರ ಸ್ಥಳಗಳ ಮೇಲೆ ದಾಳಿ ನಡೆಸಲಾಗಿದೆ. ಈ ವೇಳೆ ಮಹತ್ವದ ದಾಖಲೆ ಪತ್ರಗಳನ್ನು ವಶಕ್ಕೆ ಪಡೆದು ಐಟಿ ಅಧಿಕಾರಿಗಳು ಪರಿಶೀಲನೆ ಕಾರ್ಯ ಕೈಗೊಂಡಿದ್ದಾರೆ.

ಇನ್ನು ಕಳೆದ 10 ಗಂಟೆಗಳಿಂದ ಪರಿಶೀಲನೆ ಕಾರ್ಯ ನಡೆಯುತ್ತಿದ್ದು, ಆಸ್ತಿಗೂ, ಮೌಲ್ಯಕ್ಕೂ ವ್ಯತ್ಯಾಸ ಹಾಗೂ ತೆರಿಗೆ ಆದಾಯದಲ್ಲಿನ ವ್ಯತ್ಯಾಸದ ಬಗ್ಗೆ ಐಟಿ ಅಧಿಕಾರಿಗಳು ಲೆಕ್ಕ ಹಾಕುತ್ತಿದ್ದಾರೆ.

ಇದನ್ನೂ ಓದಿ: ಬೆಂಗಳೂರು ತಾಲೂಕು ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ ದಾಖಲೆ ಪರಿಶೀಲನೆ

Last Updated : Jan 24, 2024, 8:33 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.