ETV Bharat / state

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಹಣದ ಅವ್ಯವಹಾರ ನಡೆದಿರುವುದು ಸತ್ಯ: ಸಚಿವ ರಾಜಣ್ಣ - Valmiki Corporation Case

ಮುಡಾ ಮತ್ತು ವಾಲ್ಮೀಕಿ ನಿಗಮ ಹಗರಣದ ವಿಚಾರವಾಗಿ ಪ್ರತಿಪಕ್ಷಗಳು ಮಾಡುತ್ತಿರುವ ಆರೋಪಗಳಿಗೆ ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

KN RAJANNA REACT ON SCAM
ಸಹಕಾರ ಸಚಿವ ಕೆ.ಎನ್. ರಾಜಣ್ಣ (ETV Bharat)
author img

By ETV Bharat Karnataka Team

Published : Jul 27, 2024, 2:51 PM IST

ಸಹಕಾರ ಸಚಿವ ಕೆ.ಎನ್. ರಾಜಣ್ಣ (ETV Bharat)

ತುಮಕೂರು: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಹಣದ ವಹಿವಾಟು ದುರುಪಯೋಗ ಮಾಡಿರೊದು ಸತ್ಯ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ತಿಳಿಸಿದ್ದಾರೆ. ತುಮಕೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ವಾಲ್ಮೀಕಿ ನಿಗಮದಲ್ಲಿ ಲೋಪ ಇದೆ. ಸಾರ್ವಜನಿಕ ಹಣ ದುರುಪಯೋಗ ಸತ್ಯವೇ ಇದೆ. ಆರೋಪ ಕೇಳಿ ಬರುತ್ತಿದ್ದಂತೆ ರಾಜ್ಯ ಸರ್ಕಾರ ಎಸ್​ಐಟಿ ತನಿಖೆಗೆ ಆದೇಶ ಮಾಡಿದೆ. ಮತ್ತೊಂದೆಡೆ ಕೇಂದ್ರ ಸರ್ಕಾರ ಕೂಡ ಇಡಿ ತನಿಖೆ ನಡೆಸುತ್ತಿದೆ. ಸಿಬಿಐ ಕೂಡ ತನಿಖೆಗೆ ಇಳಿದಿದೆ. ಮೂರು ತನಿಖಾ ಸಂಸ್ಥೆಗಳು ತನಿಖೆ ನಡೆಸ್ತಾ ಇವೆ. ಯಾರು ತಪ್ಪಿತಸ್ಥರಿದ್ದಾರೋ ಅವರನ್ನ ಪತ್ತೆ ಹಚ್ಚಿ ಶಿಕ್ಷೆ ಕೊಡಿಸುವ ಪ್ರಯತ್ನ ಆಗಬೇಕಿದೆ ಎಂದು ಹೇಳಿದರು.

ಮೈಸೂರು ಅಭಿವೃದ್ಧಿ ಪ್ರಾಧಿಕಾರ (ಮುಡಾ)ದ ನಿವೇಶನ ಹಂಚಿಕೆಯಲ್ಲಿ ಅಕ್ರಮವಾಗಿದೆ ಎಂಬ ಪ್ರತಿಪಕ್ಷಗಳ ಆರೋಪದ ಕುರಿತು ಪ್ರತಿಕ್ರಿಯಿಸಿದ ಸಚಿವರು, ಇದನ್ನೇ ಮುಂದಿಟ್ಟುಕೊಂಡು ಬಿಜೆಪಿ ಪಾದಯಾತ್ರೆ ಮಾಡುವ ಬಗ್ಗೆ ಚಿಂತನೆ ಮಾಡ್ತಿದೆ ಎಂಬುದನ್ನು ನಾನು ಮಾಧ್ಯಮಗಳಲ್ಲಿ ನೋಡಿದ್ದೇನೆ.

ತಾ ಕಳ್ಳ ಪರರನ್ನು ನಂಬ ಎಂಬ ಗಾದೆ ಅಂತೆ. ನನ್ನ ಬಳಿ ವಿವರಗಳಿವೆ. ಯಾರು ಮುಡಾದಾಲ್ಲಿ ನಿವೇಶನ ತಗೊಂಡಿದ್ದಾರೋ ಅವರು ವಾಪಸ್ ನೀಡಿ ಆಮೇಲೆ ಮಾತಾಡಲಿ. ವಿಧಾನ ಪರಿಷತ್​​ನಲ್ಲಿ 2011 ರಲ್ಲಿ ಮಾರ್ಚ್​ 17ರಲ್ಲಿ ನಡವಳಿಕೆಯಲ್ಲಿ ಆಗ ಮುಖ್ಯಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪ ಅವರು ಹೇಳಿದ್ದಾರೆ. ಅದರ ಪ್ರಕಾರ ಯಾರೆಲ್ಲಾ ಇನ್ವಾಲ್ ಆಗಿದ್ದಾರೆ ಎಂದು ಕೂಡ ಮಾಹಿತಿ ನೀಡಿರುವುದಕ್ಕೆ ಇದೊಂದು ಸೇರಿಸುತ್ತೇನೆ. ಅದರಲ್ಲಿ ಏನೆಲ್ಲಾ ಆಗಿದೆ ಅಂತಲೂ ಯಡಿಯೂರಪ್ಪ ಅವತ್ತು ಮಾಹಿತಿ ನೀಡಿದ್ದಾರೆ. ಯಾವ ಕಾಲದಲ್ಲಿ ಎಷ್ಟು ಸೈಟ್, ಯಾವ ಕುಟುಂಬ ತೆಗೆದುಕೊಂಡಿದ್ದಾರೆ ಅಂತಾ ತಿಳಿಸಿದ್ದಾರೆ. ಈಗ ಪ್ರಶ್ನೆ ಮಾಡುತ್ತಿದ್ದಾರೆ. ಆರೋಪ ಮಾಡೊರು ಇವರೇ, ಹೆಚ್ಚು ಫಲಾನುಭವಿಗಳು ಇವರೇ. ಬೆಂಗಳೂರಿನಲ್ಲಿ ಇದ್ದುಕೊಂಡು ನಾನು ಮಂಡ್ಯ, ಶ್ರೀರಂಗಪಟ್ಟಣ, ಮೈಸೂರಲ್ಲಿದ್ದೀವಿ ಅಂತಾ ಹೇಳಿ ಮುಡಾದ ನಿವೇಶನ ಪಡೆದಿದ್ದಾರೆ ಎಂದರು.

ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕ್ಲೀನ್ ಇಮೇಜ್​ಗೆ ಮಸಿ ಬೆಳೆಯುವ ಪ್ರಯತ್ನ. ಪಾದಯಾತ್ರೆ ಮಾಡುವ ಮೂಲಕ ಪ್ರತಿಪಕ್ಷಗಳು ಅಹಿಂದ ವರ್ಗದ ವಿರುದ್ಧ ಸಂಚು ಮತ್ತು ಪಿತೂರಿ ನಡೆಸುತ್ತಿವೆ. ಯಾರು ವಿರೋಧ ಪಕ್ಷದಲ್ಲಿದ್ದಾರೋ ಅವರಿಂದಲೇ ಧಕ್ಕೆ ತರುವ ಪ್ರಯತ್ನ ಇದಾಗಿದೆ. ಸಿದ್ದರಾಮಯ್ಯ ಅಹಿಂದ ವರ್ಗದ ನಾಯಕ. ಪ್ರತಿಪಕ್ಷಗಳು ಪಾದಯಾತ್ರೆ ಮಾಡೋಕೆ ಹೋದರೆ ನಾವು ಸತ್ಯವನ್ನು ಜನಕ್ಕೆ ತಿಳಿಸಲು ನಮ್ಮಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ಮಾಡುತ್ತೇವೆ. ಸಿದ್ದರಾಮಯ್ಯ ಅವರ ಅವಹೇಳನ, ಮಸಿ ಬಳಿಯುವ ಕೆಲಸ ಮಾಡಿದರೆ ಅಹಿಂದ ವರ್ಗ ಖಂಡಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಇದನ್ನೂ ಓದಿ: ವಾಲ್ಮೀಕಿ ನಿಗಮದ ಅಕ್ರಮ ಪ್ರಕರಣ: ಆರೋಪಿ ಮನೆಯಲ್ಲಿದ್ದ 10 ಕೆಜಿ ಚಿನ್ನದ ಬಿಸ್ಕೆಟ್ ಜಪ್ತಿ - Valmiki Corporation Scam

ETV Bharat Logo

Copyright © 2024 Ushodaya Enterprises Pvt. Ltd., All Rights Reserved.