ETV Bharat / state

ಶಿವಮೊಗ್ಗ: ದಸರಾದಲ್ಲಿ ಹೆಣ್ಣಾನೆಗಳಿಲ್ಲದೆ ಸಾಗರ ಅಂಬಾರಿ ಹೊರುವುದು ಅನುಮಾನ! - Shivamogga Dasara - SHIVAMOGGA DASARA

ಪ್ರತಿ ವರ್ಷ ಸಾಗರ ಆನೆಗೆ ಸಾಥ್​ ನೀಡುತ್ತಿದ್ದ ಆನೆಗಳು ಈ ಬಾರಿ ಬಾಣಂತನದಲ್ಲಿದ್ದು, ಈ ದಸರಾದಲ್ಲಿ ಸಾಗರ ಅಂಬಾರಿ ಹೊರುವುದು ಇನ್ನೂ ಅನಿಶ್ಚಿತತೆಯಾಗಿದೆ.

Elephant Sagara
ಸಾಗರ ಆನೆ (ETV Bharat)
author img

By ETV Bharat Karnataka Team

Published : Sep 21, 2024, 12:23 PM IST

ಶಿವಮೊಗ್ಗ: ಮೈಸೂರು ದಸರಾ ನೋಡಲು ಎಷ್ಟು ಚೆಂದವೊ ಅದೇ ರೀತಿ ಶಿವಮೊಗ್ಗದ ದಸರಾ ಸಹ ಸುಂದರವಾಗಿರುತ್ತದೆ. ಮೈಸೂರಿನಂತೆ ಶಿವಮೊಗ್ಗದಲ್ಲಿ ತಾಯಿ ಚಾಮುಂಡೇಶ್ವರಿಯನ್ನು ಆನೆ ಮೇಲೆ ಅಂಬಾರಿಯಲ್ಲಿ ಮೆರವಣಿಗೆ ಮಾಡುತ್ತಾರೆ. ಇದಕ್ಕಾಗಿ ಶಿವಮೊಗ್ಗ ತಾಲೂಕು ಸಕ್ರೆಬೈಲು ಆನೆ ಬಿಡಾರದಿಂದ ಆನೆಗಳನ್ನು ತಂದು ಅವುಗಳಿಗೆ ತರಬೇತಿ ನೀಡಲಾಗುತ್ತದೆ. ಆದರೆ, ಈ ಬಾರಿ ದಸರಾದಲ್ಲಿ ಆನೆ ಅಂಬಾರಿ ಹೊರುವುದು ಅನುಮಾನವಾಗಿದೆ.

ಕಳೆದ 10 ವರ್ಷಗಳಿಂದ ಸಾಗರ ಎಂಬ ಗಂಡಾನೆ ಸಾಗರ ಹೊರುತ್ತಿದೆ. ಸಾಗರನಿಗೆ ಸಾಥ್ ನೀಡಲು ಎರಡು ಹೆಣ್ಣಾನೆಗಳನ್ನು ತರಲಾಗುತ್ತದೆ. ಗಂಡಾನೆಯನ್ನು ನಿಯಂತ್ರಿಸಲು ಹೆಣ್ಣಾನೆಗಳು ಬೇಕೇ ಬೇಕು. ಮೆರವಣಿಗೆ ಸರಾಗವಾಗಿ ನಡೆಯುತ್ತದೆ. ಗಂಡಾನೆ ಒಂದೇ ಅದರೆ ಅದನ್ನು ನಿಯಂತ್ರಿಸಲು ಅಸಾಧ್ಯ ಎಂದು ಹೆಸರು ಹೇಳಲು ಇಚ್ಛಿಸದ ಮಾವುತರು ಹೇಳುತ್ತಾರೆ.

ಬಾಣಂತನದಲ್ಲಿರುವ ಸಕ್ರೆಬೈಲಿನ ಹೆಣ್ಣಾನೆಗಳು: ಪ್ರತಿ ವರ್ಷ ಸಾಗರನಿಗೆ ಸಾಥ್ ನೀಡಲು ನೇತ್ರಾವತಿ ಹಾಗೂ ಭಾನುಮತಿ ಎಂಬ ಹೆಣ್ಣಾನೆಗಳು ಬರುತ್ತಿದ್ದವು. ಆದರೆ ಈ ಬಾರಿ ಇವರೆಡು ಆನೆಗಳು ಮರಿಗೆ ಜನ್ಮ ನೀಡಿದ್ದು, ಬಾಣಂತನದಲ್ಲಿವೆ. ಹಿರಿಯ ಆನೆ ಕುಂತಿ ಸಹ ಮರಿ ಹಾಕಿದೆ. ಹೆಣ್ಣಾನೆಗಳು ಬರುವುದು ಅನುಮಾನವಾಗಿವೆ. ಹಾಗಾಗಿ ದಸರಾದಲ್ಲಿ ಸಾಗರ ಆನೆ ಅಂಬಾರಿ ಹೊರುವುದು ಇನ್ನೂ ಅನಿಶ್ಚಿತತೆಯಿಂದ ಕೊಡಿದೆ.

Elephant Sagara
ಸಾಗರ ಆನೆ (ETV Bharat)

ಪ್ರತಿ ಬಾರಿ ದಸರಾವು ಅಂಬಾರಿಯಿಂದ ಕಳೆ ಕಟ್ಟುತ್ತಿತ್ತು. ಸಾಗರ ಆನೆಗೆ ಸಕ್ರೆಬೈಲಿನಲ್ಲಿ ವಾಕಿಂಗ್ ಹಾಗೂ ಅಂಬಾರಿಯಷ್ಟೇ ಭಾರದ ಮರಳಿನ ಚೀಲ ಹಾಕಿ ತರಬೇತಿ ನೀಡಲಾಗುತ್ತಿತ್ತು. ಅಲ್ಲದೆ ಶಿವಮೊಗ್ಗಕ್ಕೆ ಮೂರು ದಿನ ಮುಂಚೆಯೇ ಕರೆತಂದು ನಗರದಲ್ಲಿ ವಾಕಿಂಗ್ ಹಾಗೂ ಭಾರದ ತರಬೇತಿ ನೀಡಲಾಗುತ್ತಿತ್ತು.

ಮಹಾನಗರ ಪಾಲಿಕೆಯಿಂದ ಆನೆಗೆ ಬೇಡಿಕೆ: ದಸರಾವನ್ನು ಪ್ರತಿ ವರ್ಷ ಶಿವಮೊಗ್ಗ ಮಹಾನಗರ ಪಾಲಿಕೆಯ ವತಿಯಿಂದ ಆಚರಣೆ ಮಾಡಲಾಗುತ್ತದೆ. ಇದಕ್ಕಾಗಿ ಪಾಲಿಕೆಯಲ್ಲಿ ಬಜೆಟ್ ಸಹ ಇಡಲಾಗುತ್ತದೆ. ಈ ಬಾರಿ ಪಾಲಿಕೆಯಲ್ಲಿ ಆಡಳಿತ ಮಂಡಳಿ ಇಲ್ಲದ ಕಾರಣ ಪಾಲಿಕೆಯಿಂದ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿರುವ ರಾಜ್ಯ ಸರ್ಕಾರ 1.50 ಕೋಟಿ ರೂ. ಬಿಡುಗಡೆಗೆ ಸಮ್ಮತಿ ಸೂಚಿಸಿದೆ. ಇದರ ಜೊತೆಗೆ ಆನೆಗಳಿಗೂ ಸಹ ಪಾಲಿಕೆ ಬೇಡಿಕೆ ಇಟ್ಟಿದೆ. ಈ ಕುರಿತು ಅರಣ್ಯ ಸಚಿವರ ಕಚೇರಿಯಿಂದ ಜಿಲ್ಲೆಯ ಸಿಸಿಎಫ್​ಗೆ ಪತ್ರ ಬರೆದಿದ್ದು, ಅವರು ವನ್ಯಜೀವಿ ವಿಭಾಗದ ಡಿಎಫ್​ಒ ಪ್ರಸನ್ನ ಪಟಗಾರ್ ಅವರಿಗೆ ಪತ್ರ ಬರೆದು ಆನೆಗಳ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.

ಮೂರು ಗಂಡಾನೆಗಳ ಆಗಮನ: ಈ ಬಾರಿ ದಸರಾದಲ್ಲಿ ಭಾಗವಹಿಸಲು ಮೂರು ಗಂಡಾನೆಗಳು ಆಗಮಿಸಲಿವೆ. ಪ್ರತಿ ವರ್ಷದಂತೆ ಸಾಗರ ಆನೆ ಅಗಮಿಸುತ್ತಿದೆ. ಸಾಗರ ಆನೆ ಜೊತೆಗೆ ಬರುವ ಗಂಡಾನೆಗಳು ಯಾವುವು ಎಂಬುದು ಇನ್ನೂ ತಿಳಿದಿಲ್ಲ. ಈ ಕುರಿತು ಸಕ್ರೆಬೈಲು ಆನೆ ಬಿಡಾರದಲ್ಲಿ ಚರ್ಚೆ ನಡೆಸಲಾಗುತ್ತಿದೆ.

ಡಿಎಫ್​ಒ ಪ್ರಸನ್ನ ಪಟಗಾರ್ ಮಾತನಾಡಿ, "ಈಗಾಗಲೇ ನಮಗೆ ಅರಣ್ಯ ಸಚಿವರ ಕಚೇರಿಯಿಂದ ಪತ್ರ ಬಂದಿದೆ. ಆದರೆ ಹೆಣ್ಣಾನೆಗಳು ದಸರಾದಲ್ಲಿ ಭಾಗವಹಿಸುವ ಸಾಧ್ಯತೆ ಇಲ್ಲ ಎಂಬುದಾಗಿ ತಿಳಿಸಲಾಗಿದೆ. ಒಂದು ವೇಳೆ ಆನೆ ಮೇಲಿನ ಅಂಬಾರಿ ಜಾರಿದರೆ, ಒಂದು ಕಡೆ ವಾಲಿಕೊಂಡರೆ, ಅದನ್ನು ಪಕ್ಕದಲ್ಲಿ ನಿಂತು ಕಟ್ಟಲು ಬೇರೆ ಆನೆಗಳ ಸಹಾಯ ಬೇಕಾಗುತ್ತದೆ ಎಂದು ಎರಡು ಆನೆಗಳನ್ನು ಬಳಸಲಾಗುತ್ತದೆ. ಈ ಬಾರಿ ಯಾವುದೇ ಹೆಣ್ಣಾನೆಗಳು ಭಾಗಿಯಾಗಲ್ಲ" ಎಂದು ತಿಳಿಸಿದರು.

ಮಹಾನಗರ ಪಾಲಿಕೆ ಆಯುಕ್ತೆ ಕವಿತಾ ಯೋಗಪ್ಪನವರ್ ಮಾತನಾಡಿ, "ನಮ್ಮ‌ ಪಾಲಿಕೆಯಿಂದ ದಸರಾ ಆಚರಣೆಗೆ ರಾಜ್ಯ ಸರ್ಕಾರಕ್ಕೆ ಹಣದ ಬೇಡಿಕೆ ಇಡಲಾಗಿತ್ತು. ಇದಕ್ಕೆ ಸರ್ಕಾರ ಉತ್ತಮವಾಗಿ ಸ್ಪಂದಿಸಿದೆ. ಆನೆಗಳಿಗಾಗಿ ಮನವಿ ಮಾಡಲಾಗಿತ್ತು. ಇದಕ್ಕೂ ಸಹ ಸ್ಪಂದಿಸಿದ್ದು, ದಸರಾ ಮೆರವಣಿಗೆಯಲ್ಲಿ ಭಾಗಿಯಾಗಲು ಮೂರು ಗಂಡಾನೆಗಳು ಆಗಮಿಸಲಿವೆ. ತಾಯಿ ಚಾಮುಂಡೇಶ್ವರಿಯನ್ನು ಆನೆಗಳು ಹೊರದೆ ಹೋದರೆ, ನಾವು ನಮ್ಮ ವಾಹನದಲ್ಲಿಯೇ ಚಾಮುಂಡೇಶ್ವರಿ ದೇವಿಯನ್ನು ಮೆರವಣಿಗೆಯಲ್ಲಿ ತೆಗೆದುಕೊಂಡು ಹೋಗುತ್ತೇವೆ. ಈ ಬಾರಿ ದಸರಾವನ್ನು ವಿಶೇಷವಾಗಿ ಅಚರಿಸಲು ತೀರ್ಮಾನಿಸಲಾಗಿದೆ" ಎಂದು ಹೇಳಿದರು.

ಅನೇಕ ಸಲ ಅಂಬಾರಿ ಹೊರದ ಆನೆಗಳು: ಹಿಂದೆ ಹಲವು ಸಲ ಆನೆಗಳು ಸಕ್ರೆಬೈಲಿನಿಂದ ಶಿವಮೊಗ್ಗಕ್ಕೆ ಬಂದು ಇಲ್ಲಿನ ವಾತಾವರಣಕ್ಕೆ ಹೊಂದಿಕೆ ಆಗದೆ ಅನಾರೋಗ್ಯ ಉಂಟಾಗಿ, ಸಾಗರ ಆನೆ ಅಂಬಾರಿ ಹೂತ್ತಿಲ್ಲ. ಮಳೆಯ ಕಾರಣದಿಂದ ಕಳೆದ ವರ್ಷ ಆಯುಧ ಪೂಜೆಯ ದಿನ ದಸರಾಗೆ ಬಂದಿದ್ದ, ಭಾನುಮತಿ ಆನೆ ಮರಿಗೆ ಜನ್ಮ ನೀಡಿದ ಕಾರಣ ಸಾಗರ ಆನೆಗೆ ಸಾಥ್ ಸಿಗದೆ ಅಂಬಾರಿ ಹೊತ್ತಿರಲಿಲ್ಲ. ಸಾಗರ ಆನೆ ಶಾಂತ ಸ್ವಭಾವದವನಾಗಿದ್ದು, ಇದುವರೆಗೂ ಯಾವುದೇ ಅನಾಹುತ ಮಾಡಿಲ್ಲ ಅನ್ನೋದು ವಿಶೇಷ.

ಇದನ್ನೂ ಓದಿ: VIDEO: ಶ್ರೀರಂಗಪಟ್ಟಣ ದಸರಾದಲ್ಲಿ 3ನೇ ಬಾರಿಗೆ ಅಂಬಾರಿ ಹೊರಲು ಸಜ್ಜಾಗುತ್ತಿರುವ ಮಹೇಂದ್ರ - Mahendra elephant

ETV Bharat Logo

Copyright © 2024 Ushodaya Enterprises Pvt. Ltd., All Rights Reserved.