ETV Bharat / state

ಜಲಯೋಗದಲ್ಲಿ ಗಮನ ಸೆಳೆದ 6ರ ಬಾಲಕಿ: ದೇಶಪ್ರೇಮ ಮೆರೆದ ಯೋಗಪಟುಗಳು - Belagavi Yoga Day celebration - BELAGAVI YOGA DAY CELEBRATION

ಬೆಳಗಾವಿಯ ಕೆಎಲ್‌ಇ ಸಂಸ್ಥೆಯ ಸುವರ್ಣ ಜೆಎನ್‌ಎಂಸಿ ಈಜುಕೊಳದಲ್ಲಿ ಯೋಗ ದಿನವನ್ನು ಅದ್ಧೂರಿಯಾಗಿ ಆಚರಿಸಲಾಯಿತು.

Belagavi Yoga Day celebration
ಬೆಳಗಾವಿ ಯೋಗ ದಿನಾಚರಣೆ 2024 (ETV Bharat)
author img

By ETV Bharat Karnataka Team

Published : Jun 22, 2024, 9:28 AM IST

ಬೆಳಗಾವಿ ಯೋಗ ದಿನಾಚರಣೆ 2024 (ETV Bharat)

ಬೆಳಗಾವಿ: ನೆಲದ ಮೇಲೆ ಯೋಗಾಸನ ಮಾಡುವುದು ಸಾಮಾನ್ಯ. ಆದರೆ, ನೀರಿನಲ್ಲಿ ಯೋಗದ ವಿವಿಧ ಭಂಗಿಗಳನ್ನು ನೋಡುವುದೇ ಒಂದು ರೋಮಾಂಚಕ ಅನುಭವ. ಅದರಲ್ಲೂ ದಿವ್ಯಾಂಗರು, ಚಿಕ್ಕಮಕ್ಕಳ ಜಲಯೋಗ ನೋಡುಗರನ್ನು ಸೂಜಿಗಲ್ಲಿನಂತೆ ಆಕರ್ಷಿತು.

ಕಳೆದ ದಿನ ವಿಶ್ವದ ಹಲವೆಡೆ 10ನೇ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಯಿತು. ಪಿಎಂ ಮೋದಿ ಅವರಿಂದ ಹಿಡಿದು ಜನಸಾಮಾನ್ಯವರವರೆಗೂ ಹೆಚ್ಚಿನವರು ಯೋಗದ ಮಹತ್ವವನ್ನು ಒಪ್ಪಿಕೊಂಡು, ಇತರರಿಗೆ ತಿಳಿ ಹೇಳುವ ಪ್ರಯತ್ನ ಮಾಡಿದರು. ಅದರಂತೆ, ಬೆಳಗಾವಿಯಲ್ಲೂ ಯೋಗ ದಿನ ಆಚರಿಸಲಾಯಿತು.

ನೀರಿನಲ್ಲಿ ರಾಷ್ಟ್ರಧ್ವಜ ಹಿಡಿದು ಲೀಲಾಜಾಲವಾಗಿ ಈಜುತ್ತಿರುವ ಮಕ್ಕಳು, ಹಣೆ ಮೇಲೆ ಗ್ಲಾಸ್ ಇಟ್ಟುಕೊಂಡು ಈಜುತ್ತಿರುವುದು, ನೀರಿನಲ್ಲಿ‌ ಯೋಗದ ವಿವಿಧ ಅಸನಗಳ ಪ್ರದರ್ಶನ, ನಿರ್ಭಯವಾಗಿ ಆಸನಗಳನ್ನು ಹಾಕಿ ಗಮನ ಸೆಳೆದ 6ರ ಪುಟ್ಟ ಮಗು. ಈ ಎಲ್ಲ ದೃಶ್ಯಗಳು ಕಂಡು ಬಂದಿದ್ದು ಬೆಳಗಾವಿಯ ಕೆಎಲ್‌ಇ ಸಂಸ್ಥೆಯ ಸುವರ್ಣ ಜೆಎನ್‌ಎಂಸಿ ಈಜುಕೊಳದಲ್ಲಿ. ಅಂತಾರಾಷ್ಟ್ರೀಯ ಯೋಗ ದಿನದ ನಿಮಿತ್ತ ಶುಕ್ರವಾರ ಸಂಜೆ ಹಮ್ಮಿಕೊಂಡಿದ್ದ ನಡೆದ ಜಲಯೋಗದಲ್ಲಿ ಯೋಗಪಟುಗಳು ಗಮನ ಸೆಳೆದಿದ್ದಾರೆ.

ತುಂತುರು ಮಳೆಹನಿಗಳ ನಡುವೆಯೇ ಮಕ್ಕಳು, ಯುವಕ ಯುವತಿಯರು ಈಜುಕೊಳಕ್ಕೆ ಜಿಗಿದರು. ವಿಶೇಷಚೇತನರು ನೀರಿನಲ್ಲೇ ವೀರಭದ್ರಾಸನ, ಪದ್ಮಾಸನ, ನಿದ್ರಾಸನ, ಹನುಮಾನಾಸಾನ, ತ್ರಿಕೋನಾಸನ, ವೃಕ್ಷಾಸನ, ಪರ್ವತಾಸನ, ಮೂದ್ರಾಸನ ಸೇರಿ ಮತ್ತಿತರೆ ಆಸನಗಳನ್ನು ಪ್ರದರ್ಶಿಸಿದರು. ಕೈಯಲ್ಲಿ ರಾಷ್ಟ್ರಧ್ವಜ ಹಿಡಿದು ಈಜುತ್ತಾ ದೇಶಪ್ರೇಮ ಮೆರೆದ ದೃಶ್ಯವಂತೂ ಎಲ್ಲರಲ್ಲೂ ದೇಶಪ್ರಮೇಮವನ್ನು ಬಡಿದೆಚ್ಚರಿಸಿತು. ಇನ್ನು ಮಾರ್ಚಿಂಗ್ ಫಾರ್ಮೇಶನ್, ಅಂಡರ್‌ವಾಟರ್‌ ಸ್ವಿಮ್ಮಿಂಗ್‌, ಟ್ರೇನ್‌ ಫಾರ್ಮೇಷನ್‌, ಗ್ಲಾಸ್‌ ಹೋಲ್ಡಿಂಗ್‌, ಸರ್ಕಲ್‌ ಫಾರ್ಮೇಷನ್‌ ಸೇರಿ ಮತ್ತಿತರ ವಿಭಾಗಗಳಲ್ಲಿ ಯೋಗದ ವಿವಿಧ ಭಂಗಿಗಳನ್ನು ಪ್ರದರ್ಶಿಸಿದ್ದು ವಿಶೇಷವಾಗಿತ್ತು.

ಇದನ್ನೂ ಓದಿ: ನಟ ಸಾರ್ವಭೌಮ ಡಾ. ರಾಜ್​ಕುಮಾರ್ ಯೋಗ ಕಲಿಯಲು ಕಾರಣ ಏನೆಂಬುದು ನಿಮಗೆ ಗೊತ್ತೇ? - Rajkumar Yoga

ಗಮನ ಸೆಳೆದ 6 ವರ್ಷದ ಬಾಲಕಿ: 6 ವರ್ಷದ ಪುಟ್ಟ ಬಾಲಕಿ ಜೇನು ಹೊಂಜಡಕಟ್ಟಿ ನೀರಿನಲ್ಲಿ ನಿರಾತಂಕವಾಗಿ ಯೋಗದ ಆಸನಗಳನ್ನು ಪ್ರದರ್ಶಿಸಿದ್ದು ಎಲ್ಲರ ಗಮನ ಸೆಳೆಯಿತು. ಮೂರ್ತಿ ಸಣ್ಣದಾದ್ರೂ ಕೀರ್ತಿ ದೊಡ್ಡದು ಎಂಬಂತೆ, ನಾನು ಯಾರಿಗೂ ಕಮ್ಮಿ ಇಲ್ಲ ಎಂಬುದನ್ನು ಮಗು ಸಾಬೀತುಪಡಿಸಿತು.

ಇದನ್ನೂ ಓದಿ: ಶ್ರೀನಗರದ ದಾಲ್ ಸರೋವರದ ದಡದಲ್ಲಿ ಪ್ರಧಾನಿ ಮೋದಿ ಯೋಗ ಸಂಭ್ರಮ - International Day of Yoga 2024

ವಿಧಾನಪರಿಷತ್ ಮಾಜಿ ಸದಸ್ಯ ಮತ್ತು ಕೆಎಲ್ಇ ನಿರ್ದೇಶಕ ಮಹಾಂತೇಶ ಕವಟಗಿಮಠ ಈಟಿವಿ ಭಾರತದ ಜೊತೆ ಮಾತನಾಡಿ, ಯಾವುದೇ ಮಕ್ಕಳು ಜನ್ಮತಃ ಅಂಗವಿಕಲರಾಗಿರಬಹುದು. ಆದರೆ, ಸಾಧಿಸುವ ಛಲ, ನಿರಂತರ ಪರಿಶ್ರಮ ಮತ್ತು ಶ್ರದ್ಧೆ ಇದ್ದರೆ ಎನನ್ನೂ ಸಾಧಿಸಬಹುದು ಎಂಬುದನ್ನು ಬೆಳಗಾವಿಯ ವಿಶೇಷಚೇತನ ಮಕ್ಕಳು ತೋರಿಸಿಕೊಟ್ಟಿದ್ದಾರೆ. ಭವಿಷ್ಯದಲ್ಲಿ ಇವರು ಮತ್ತಷ್ಟು ಸಾಧನೆ ಮೆರೆಯಲಿ ಎಂದು ಆಶಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.