ETV Bharat / state

ಬೆಂಗಳೂರು: ಹೊಯ್ಸಳ, ಪೊಲೀಸ್ ಜೀಪ್​ಗಳಿಗೂ ಡ್ಯಾಶ್ ಕ್ಯಾಮರಾ ಅಳವಡಿಕೆ - Dash camera for Hoysala - DASH CAMERA FOR HOYSALA

ನಗರದಲ್ಲಿರುವ 241 ಹೊಯ್ಸಳ ಹಾಗೂ ಎಸಿಪಿ ಹಾಗೂ ಇನ್ಸ್​ಪೆಕ್ಟರ್​ಗಳು ಬಳಸುವ ಪೊಲೀಸ್ ಜೀಪ್​ಗಳಲ್ಲಿ ಒಟ್ಟು 500 ಡ್ಯಾಷ್​ ಕ್ಯಾಮರಾ ಅಳವಡಿಸಲಾಗುತ್ತಿದೆ.‌

Installation of dash camera for Hoysala and police jeeps in Bengaluru
ಬೆಂಗಳೂರು: ಹೊಯ್ಸಳ, ಪೊಲೀಸ್ ಜೀಪ್​ಗಳಿಗೂ ಡ್ಯಾಶ್ ಕ್ಯಾಮರಾ ಅಳವಡಿಕೆ
author img

By ETV Bharat Karnataka Team

Published : Apr 5, 2024, 1:51 PM IST

ಬೆಂಗಳೂರು: ನಗರ ಪೊಲೀಸ್ ಇಲಾಖೆಯಲ್ಲಿ ಪಾರದರ್ಶಕತೆ ತರಲು ಹಾಗೂ ಪೊಲೀಸರಲ್ಲಿ ಕಾರ್ಯದಕ್ಷತೆ ಹೆಚ್ಚಿಸಲು ನಗರ ಪೊಲೀಸರಿಗೆ ಬಾಡಿವೋರ್ನ್ ಕ್ಯಾಮೆರಾದಂತೆ ಹೊಯ್ಸಳ ವಾಹನ ಹಾಗೂ ಪೊಲೀಸ್ ಜೀಪ್​ಗಳಲ್ಲಿ ಡ್ಯಾಷ್ ಕ್ಯಾಮರಾ ಅಳವಡಿಸಲು ಮುಂದಾಗಿದೆ.

"ನಗರದಲ್ಲಿರುವ 241 ಹೊಯ್ಸಳ ಹಾಗೂ ಎಸಿಪಿ ಹಾಗೂ ಇನ್ಸ್​ಪೆಕ್ಟರ್​​​​​​​ಗಳು ಬಳಸುವ ಪೊಲೀಸ್ ಜೀಪ್​ಗಳಲ್ಲಿ ಒಟ್ಟು 500 ಡ್ಯಾಷ್​ ಕ್ಯಾಮರಾ ಅಳವಡಿಸಲಾಗುತ್ತಿದೆ.‌ ಚಾಲಕ ಸೀಟಿನ ಒಳಗೆ ಹಾಗೂ ಹೊರಗೆ ಎರಡು ಕ್ಯಾಮರಾಗಳನ್ನು ಅಳವಡಿಸಲಾಗುತ್ತಿದೆ. ಸೇಫ್ ಸಿಟಿ ಯೋಜನೆ ಅನುದಾನದಡಿ 241 ಹೊಯ್ಸಳ ವಾಹನಗಳಿಗೆ ಹಾಗೂ ರಾಜ್ಯ ಸರ್ಕಾರದ ಅನುದಾನಡಿ ಪೊಲೀಸ್ ಜೀಪ್​ಗಳಲ್ಲಿ ಕ್ಯಾಮೆರಾ ಅಳವಡಿಸಲಾಗುತ್ತಿದೆ.‌ ಇದರಿಂದ ಪೊಲೀಸ್ ಇಲಾಖೆಯಲ್ಲಿ ಪಾರದರ್ಶಕತೆ ಕಾಪಾಡಬಹುದಾಗಿದೆ" ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್​ ತಿಳಿಸಿದ್ದಾರೆ.

ಇತ್ತೀಚೆಗೆ ನಗರದಲ್ಲಿ ರೋಡ್ ರೇಜ್ ಪ್ರಕರಣಗಳು ಹೆಚ್ಚಾಗುತ್ತಿವೆ. ಕ್ಷುಲ್ಲಕ ಕಾರಣಗಳಿಗಾಗಿ ಹಲ್ಲೆ ಘಟನೆಗಳು ವರದಿಯಾಗುತ್ತಿವೆ. ಹೊಯ್ಸಳಕ್ಕೆ ಡ್ಯಾಷ್​ ಕ್ಯಾಮರಾ ಅಳವಡಿಕೆಯಿಂದ ಸಿಬ್ಬಂದಿ ಕಾರ್ಯದಕ್ಷತೆ ಜೊತೆಗೆ ಅಪರಾಧವಾಗದಂತೆ ತಡೆಯಲು ಸಹಕಾರಿಯಾಗಲಿದೆ. ಹಾಗೆಯೇ ತುರ್ತು ಅಪರಾಧ ಸಂದರ್ಭಗಳಲ್ಲಿ ತ್ವರಿತಗತಿಯಲ್ಲಿ ಸ್ಥಳಕ್ಕೆ ತಲುಪಲು ಪೂರಕವಾಗುತ್ತದೆ‌‌. ಪೊಲೀಸ್ ಸಿಬ್ಬಂದಿ ಸಾರ್ವಜನಿಕರೊಂದಿಗೆ ವರ್ತಿಸುವ ನಡವಳಿಕೆಯನ್ನು ಸುಧಾರಿಸಬಹುದಾಗಿದೆ.

ಇದನ್ನೂ ಓದಿ: ಜೀವದ ಹಂಗು ತೊರೆದು ಅರ್ಧ ಗಂಟೆ ಚೇಸ್ ಮಾಡಿ ಮೊಬೈಲ್‌ ಸುಲಿಗೆಕೋರರ ಹಿಡಿದ ಹೊಯ್ಸಳ ಸಿಬ್ಬಂದಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.