ETV Bharat / state

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸುಧಾರಿತ ಉಪಕರಣಗಳೊಂದಿಗೆ ಭದ್ರತೆ ಹೆಚ್ಚಳ - Mangaluru Airport

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸುಧಾರಿತ ಉಪಕರಣಗಳಿಂದ ಭದ್ರತೆ ಹೆಚ್ಚಿಸಲಾಗಿದೆ. ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್)ಗೆ ಈ ಉಪಕರಣಗಳನ್ನು ಹಸ್ತಾಂತರಿಸಲಾಯಿತು.

Mangaluru Airport  Dakshina Kannada  advanced equipment  Central Industrial Security Force
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸುಧಾರಿತ ಉಪಕರಣಗಳಿಂದ ಭದ್ರತೆ ಹೆಚ್ಚಳ (ETV Bharat)
author img

By ETV Bharat Karnataka Team

Published : Jul 31, 2024, 5:24 PM IST

ಮಂಗಳೂರು: ಅದಾನಿ ಸಮೂಹದ ಅಂಗ ಸಂಸ್ಥೆಯಾದ ಅದಾನಿ ಏರ್​ಪೋರ್ಟ್ ಹೋಲ್ಡಿಂಗ್ಸ್ ಲಿಮಿಟೆಡ್ (ಎಎಹೆಚ್ಎಲ್) ನಿರ್ವಹಿಸುತ್ತಿರುವ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಸೋಮವಾರ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್)ಗೆ ಒದಗಿಸಲಾದ ಸುಧಾರಿತ ಉಪಕರಣಗಳನ್ನು ಹಸ್ತಾಂತರಿಸುವ ಮೂಲಕ ವಿಮಾನ ನಿಲ್ದಾಣದ ಭದ್ರತಾ ಮೂಲಸೌಕರ್ಯವನ್ನು ಮತ್ತಷ್ಟು ಬಲಪಡಿಸಿದೆ.

ಹೊಸ ಉಪಕರಣಗಳಲ್ಲಿ ತ್ವರಿತ ಪ್ರತಿಕ್ರಿಯೆ ತಂಡ (ಕ್ಯೂಆರ್​ಟಿ)ಗಾಗಿ ಎರಡನೇ ಗುಂಡು ನಿರೋಧಕ ವಾಹನ (ಬಿಆರ್​ವಿ) ಮತ್ತು ಅತ್ಯಾಧುನಿಕ ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳ (ಬಿಡಿಡಿಎಸ್) ಉಪಕರಣಗಳು ಸೇರಿವೆ. ವಿಮಾನ ನಿಲ್ದಾಣವು ಶಂಕಿತ ಲಗೇಜ್ ಕಂಟೇನ್ಮೆಂಟ್ ವಾಹನ, ಮಿನಿಯೇಚರ್ ರಿಮೋಟ್ ಆಪರೇಟೆಡ್ ವೆಹಿಕಲ್, ಐಆರ್ ಇಲ್ಯುಮಿನೇಟರ್ ಮತ್ತು ರೇಂಜ್ ಫೈಂಡರ್ ಹೊಂದಿರುವ ನೈಟ್ ವಿಷನ್ ಬೈನಾಕ್ಯುಲರ್​ ಗಳನ್ನು ಸಿಐಎಸ್ಎಫ್​​ಗೆ ಹಸ್ತಾಂತರಿಸಿತು. ಇದಲ್ಲದೆ, ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಲ್ಯಾಂಡ್​ಸೈಡ್ ಸೆಕ್ಯುರಿಟಿ ತಂಡವು ಎರಡು ಎಲೆಕ್ಟ್ರಿಕ್ ಸ್ಕೂಟರ್​​ಗಳನ್ನು ಸ್ವೀಕರಿಸಿದೆ. ಇದನ್ನು ವಿಮಾನ ನಿಲ್ದಾಣದ ಪ್ರವೇಶ ಮತ್ತು ನಿರ್ಗಮನ ರಸ್ತೆಗಳಲ್ಲಿ ಗಸ್ತು ತಿರುಗಲು ಬಳಸಲಾಗುತ್ತದೆ.

Mangaluru Airport Dakshina Kannada  advanced equipment  Central Industrial Security Force
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸುಧಾರಿತ ಉಪಕರಣಗಳೊಂದಿಗೆ ಭದ್ರತೆ ಹೆಚ್ಚಳ (ETV Bharat)

ಈ ಕ್ರಮವು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಬ್ಯೂರೋ ಆಫ್ ಸಿವಿಲ್ ಏವಿಯೇಷನ್ ಸೆಕ್ಯುರಿಟಿ (ಬಿಸಿಎಎಸ್) ಕಡ್ಡಾಯಗೊಳಿಸಿದ ಎಲ್ಲಾ ಬಿಡಿಡಿಎಸ್ ಉಪಕರಣಗಳ ಅವಶ್ಯಕತೆಗಳಿಗೆ ಸಂಪೂರ್ಣವಾಗಿ ಅನುಗುಣವಾಗಿದೆ. ವಿಮಾನ ನಿಲ್ದಾಣದ ಭದ್ರತೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಸಿಐಎಸ್ಎಫ್​ಗೆ ಅಗತ್ಯವಿರುವ ಎಲ್ಲಾ ಸಾಧನಗಳನ್ನು ಒದಗಿಸಲಾಗಿದೆ.

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮುಖ್ಯ ವಿಮಾನ ನಿಲ್ದಾಣ ಅಧಿಕಾರಿ ಮುಖೇಶ್ ನಂಕಣಿ ಅವರು ಸಿಐಎಸ್ಎಫ್​ನ ಹಿರಿಯ ಕಮಾಂಡೆಂಟ್ ಮತ್ತು ಮುಖ್ಯ ವಿಮಾನ ನಿಲ್ದಾಣದ ಭದ್ರತಾ ಅಧಿಕಾರಿ ವೀರೇಂದ್ರ ಮೋಹನ್ ಜೋಶಿ ಅವರಿಗೆ ಎಎಹೆಚ್ಎಲ್​ನ ಮುಖ್ಯ ಭದ್ರತಾ ಅಧಿಕಾರಿ ವಿಜಿತ್ ಜುಯಾಲ್ ಮತ್ತು ವಿಮಾನ ನಿಲ್ದಾಣದ ನಾಯಕತ್ವ ತಂಡದ ಉಪಸ್ಥಿತಿಯಲ್ಲಿ ಬಿಆರ್​ವಿಯ ಸಾಂಕೇತಿಕ ಕೀಲಿಯನ್ನು ಹಸ್ತಾಂತರಿಸಿದರು.

ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್)ಗೆ ಸುಧಾರಿತ ಉಪಕರಣಗಳ ಹಸ್ತಾಂತರ (ETV Bharat)

"ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅತ್ಯುನ್ನತ ಮಟ್ಟದ ಸುರಕ್ಷತೆ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ನಾವು ಬದ್ಧರಾಗಿದ್ದೇವೆ. ಈ ಸುಧಾರಿತ ಭದ್ರತಾ ಕ್ರಮಗಳ ನಿಯೋಜನೆಯು ಪ್ರಯಾಣಿಕರ ಸುರಕ್ಷತೆ ಮತ್ತು ಕಾರ್ಯಾಚರಣೆಯ ದಕ್ಷತೆಯನ್ನು ಹೆಚ್ಚಿಸುವ ನಮ್ಮ ನಿರಂತರ ಸಮರ್ಪಣೆಯನ್ನು ಪ್ರತಿಬಿಂಬಿಸುತ್ತದೆ" ಎಂದು ನಂಕನಿ ಹೇಳಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಇದನ್ನೂ ಓದಿ: ರಾಜ್ಯದಲ್ಲಿ ಸನ್ಸೇರಾದಿಂದ 2,100 ಕೋಟಿ ಹೂಡಿಕೆ, ಸಾವಿರಾರು ಉದ್ಯೋಗ ಸೃಷ್ಟಿಯ ಗುರಿ: ಒಡಂಬಡಿಕೆಗೆ ಸಹಿ - Sansera Investment in Karnataka

ETV Bharat Logo

Copyright © 2024 Ushodaya Enterprises Pvt. Ltd., All Rights Reserved.