ETV Bharat / state

ರಾಜ್ಯದಲ್ಲಿ 437 ಮಂದಿಗೆ ಡೆಂಗ್ಯೂ ಪತ್ತೆ: ಸಕ್ರಿಯ ಪ್ರಕರಣಗಳ ಸಂಖ್ಯೆ 91 - Dengue Alert

ರಾಜ್ಯದಲ್ಲಿ ದಿನೇ ದಿನೆ ಡೆಂಗ್ಯೂ ಜ್ವರ ಪ್ರಕರಣಗಳ ಸಂಖ್ಯೆ ಅಧಿಕವಾಗುತ್ತಿದ್ದು, ಕಳೆದ 24 ಗಂಟೆಗಳಲ್ಲಿ 437 ಮಂದಿಯಲ್ಲಿ ಪತ್ತೆಯಾಗಿದೆ.

DENGUE ALERT
ಸಂಗ್ರಹ ಚಿತ್ರ (ETV Bharat)
author img

By ETV Bharat Karnataka Team

Published : Jul 12, 2024, 10:51 PM IST

ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 437 ಮಂದಿಯಲ್ಲಿ ಡೆಂಗ್ಯೂ ಪತ್ತೆಯಾಗಿದೆ. ಇದರಿಂದ ಒಟ್ಟು 91 ಸಕ್ರಿಯ ಪ್ರಕರಣಗಳು ದಾಖಲಾಗಿವೆ. ಕಳೆದ 24 ಗಂಟೆಯಲ್ಲಿ 2704 ಮಂದಿ ಪರೀಕ್ಷೆ ನಡೆಸಲಾಗಿದ್ದು, ಈ ಪೈಕಿ 437 ಜನರಿಗೆ ಡೆಂಗ್ಯೂ ದೃಢಪಟ್ಟಿದೆ.

ಇದರಲ್ಲಿ 1 ವರ್ಷದೊಳಗಿನ 07, 1 ರಿಂದ 18 ವರ್ಷದೊಳಗಿನ 154, 18 ವರ್ಷ ಮೇಲ್ಪಟ್ಟವರು 276 ಮಂದಿ ಇದ್ದಾರೆ. ರಾಜ್ಯದಲ್ಲಿ ಡೆಂಗ್ಯೂ ಸಾವಿನ ಪ್ರಮಾಣ ಶೇ.0.07 ಇದೆ. ರಾಜ್ಯದಲ್ಲಿ ಜನವರಿಯಿಂದ ಇಲ್ಲಿಯವರೆಗೆ ಒಟ್ಟು 8,658 ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ. ಇದರಲ್ಲಿ ಒಟ್ಟು 7 ಮಂದಿ ಡೆಂಗ್ಯೂನಿಂದ ಮೃತಪಟ್ಟಿದ್ದಾರೆ.

ಇದನ್ನೂ ಓದಿ: ಡೆಂಗ್ಯೂ ರೀತಿಯ ಅನಾರೋಗ್ಯ ಲಕ್ಷಣಗಳ ಪ್ರಮಾಣದಲ್ಲೂ ಗಣನೀಯ ಏರಿಕೆ: ಡಾ.ನಸೀರ್​ - Dengue Like Symptoms

ETV Bharat Logo

Copyright © 2024 Ushodaya Enterprises Pvt. Ltd., All Rights Reserved.