ETV Bharat / state

ಮನಸ್ಸಿನ ರಹಸ್ಯ ಬಿಚ್ಚಿಡುವುದು ಅಸಾಧ್ಯ, ಆತ್ಮಹತ್ಯೆ ಮಾಡಿಕೊಂಡಲ್ಲಿ ಮತ್ತೊಬ್ಬರ ಪ್ರಚೋದನೆ ಎನ್ನಲಾಗದು: ಹೈಕೋರ್ಟ್ - High Court - HIGH COURT

ಮನುಷ್ಯನ ಮನಸ್ಸಿನಲ್ಲಿನ ರಹಸ್ಯ ಬಿಚ್ಚಿಡುವುದು ಅಸಾಧ್ಯ. ಆತ್ಮಹತ್ಯೆ ಮಾಡಿಕೊಂಡಲ್ಲಿ ಮತ್ತೊಬ್ಬರ ಪ್ರಚೋದನೆ ಎನ್ನಲಾಗದು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

HIGH COURT  INSTIGATION  CASE OF SUICIDE  BENGALURU
ಆತ್ಮಹತ್ಯೆ ಮಾಡಿಕೊಂಡಲ್ಲಿ ಮತ್ತೊಬ್ಬರ ಪ್ರಚೋದನೆ ಎನ್ನಲಾಗದು : ಹೈಕೋರ್ಟ್
author img

By ETV Bharat Karnataka Team

Published : May 1, 2024, 10:10 PM IST

ಬೆಂಗಳೂರು: ಮನುಷ್ಯನ ಮನಸ್ಸು ಅತ್ಯಂತ ನಿಗೂಢ ಹಾಗೂ ಮನಸ್ಸಿನ ರಹಸ್ಯ ಬಿಚ್ಚಿಡುವುದು ಅಸಾಧ್ಯ ಎಂದು ತಿಳಿಸಿರುವ ಹೈಕೋರ್ಟ್, ಪತ್ನಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಚರ್ಚ್ ಪಾದ್ರಿಯೊಬ್ಬರು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ವ್ಯಕ್ತಿಯೊಬ್ಬರ ವಿರುದ್ಧ ದಾಖಲಾಗಿದ್ದ ಆರೋಪ ಪಟ್ಟಿ ರದ್ದುಗೊಳಿಸಿದೆ.

ತಮ್ಮ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣ ರದ್ದುಗೊಳಿಸುವಂತೆ ಕೋರಿ ಉಡುಪಿಯ ಡೇವಿಡ್ ಡಿಸೋಜಾ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಈ ಆದೇಶ ನೀಡಿದೆ. ಅಲ್ಲದೆ, ಪತ್ನಿಯ ಜತೆಗೆ ಮೃತರು ಸಂಬಂಧ ಹೊಂದಿದ್ದರು. ಈ ವಿಚಾರ ಅವರ ಗಮನಕ್ಕೆ ಬಂದಾಗ ಕೋಪದಲ್ಲಿ ಹೋಗಿ ನೇಣಿಗೆ ಶರಣಾಗಿದ್ದಾರೆ. ಇದು ಆತ್ಮಹತ್ಯೆಗೆ ಪ್ರಚೋದನೆ ನೀಡದಂತಾಗುವುದಿಲ್ಲ. ಅಲ್ಲದೆ, ಪಾದ್ರಿಯೂ 2019ರ ಅಕ್ಟೋಬರ್ 11 ರಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ 2020ರ ಫೆಬ್ರವರಿ 26ರಂದು ಅರ್ಜಿದಾರರ ವಿರುದ್ಧ ಎಫ್ಐಆರ್ ದಾಖಲಿಸಲಾಗಿತ್ತು. ದೂರಿನಲ್ಲಿ ಆರೋಪಿ ಡೇವಿಡ್ ಡಿಸೋಜಾ ಹಾಗೂ ಮೃತ ಪಾದ್ರಿ ಮಹೇಶ್ ಡಿಸೋಜಾ ದೂರವಾಣೆಯ ಮೂಲಕ ಸಂಭಾಷಣೆ ನಡೆಸಿದ ಬಳಿಕ ಕೆಲವೇ ಹೊತ್ತಿನಲ್ಲಿ ಪಾದ್ರಿಯೂ ಆತ್ಮಹತ್ಯೆಗೆ ಶರಣಾಗಿದ್ದರು ಎಂದು ತಿಳಿಸಲಾಗಿದೆ.

ಆರೋಪಿಯೂ ಆತ್ಮಹತ್ಯೆ ಮಾಡಿಕೊಳ್ಳಲು ಅಸಂಖ್ಯಾತ ಕಾರಣಗಳು ಇರಬಹುದು. ಅದರಲ್ಲಿ ಒಂದು ಚರ್ಚ್‌ನ ಪಾದ್ರಿಯಾಗಿ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿರುವುದು ಆಗಿರಬಹುದು. ಮನುಷ್ಯನ ಮನಸ್ಸು ಅತ್ಯಂತ ನಿಗೂಢವಾಗಿದೆ. ಆತನ ಮನಸ್ಸಿನ ರಹಸ್ಯ ಬಿಚ್ಚಿಡುವುದು ಅಸಾಧ್ಯವಾಗಿದೆ. ಆದ್ದರಿಂದ ಅರ್ಜಿದಾರರ ವಿರುದ್ಧ ಆರೋಪ ಪಟ್ಟಿ ಸಲ್ಲಿಸಲಾಗಿದ್ದರೂ ಮುಂದಿನ ಪ್ರಕ್ರಿಯೆಗಳಿಗೆ ಅನುಮತಿ ನೀಡುವುದು ಕಾನೂನು ಪ್ರಕ್ರಿಯೆಯ ದುರ್ಬಳಕೆ ಆಗಲಿದೆ ಎಂದು ತಿಳಿಸಿದ ನ್ಯಾಯಪೀಠ, ಪ್ರಕರಣವನ್ನು ರದ್ದುಪಡಿಸಿ ಆದೇಶಿಸಿದೆ.

ಪ್ರಕರಣದ ಹಿನ್ನೆಲೆ: ಉಡುಪಿ ಜಿಲ್ಲೆಯ ಶಿರ್ವಾ ಚರ್ಚ್​ನ ಸಹಾಯಕ ಧರ್ಮಗುರು ಹಾಗೂ ಶಿರ್ವಾ ಡಾನ್ ಬಾಸ್ಕೋ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರಾಗಿರುವ ಫಾದರ್ ಮಹೇಶ್ ಡಿಸೋಜ ಅವರು 2019ರ ಅಕ್ಟೋಬರ್ 11 ರಂದು ರಾತ್ರಿ ಶಾಲೆಯ ಮುಖ್ಯೋಪಾಧ್ಯಾಯರ ಕೊಠಡಿಯ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಘಟನೆ ಕುರಿತು ಹಲವು ಸಂಶಯಕ್ಕೆ ಕಾರಣವಾಗಿತ್ತು.

ಈ ಸಂಬಂಧ ದಾಖಲಾಗಿದ್ದ ಪ್ರಕರಣದ ತನಿಖಾ ಹಂತದಲ್ಲಿ ಆತ್ಮಹತ್ಯೆಗೆ ಶರಣಾಗುವ ಕೆಲವು ಹೊತ್ತಿಗೆ ಮುನ್ನ ಮೃತರ ಮೊಬೈಲ್ ಸಂಖ್ಯೆಗೆ ಮೂರು ಕರೆಗಳು ಬಂದಿರುವುದು ಸಿಡಿಆರ್​ನಿಂದ ಗೊತ್ತಾಗಿತ್ತು. ಆ ಕರೆಯ ಕಾಲ್ ರೆಕಾರ್ಡಿಂಗ್​ನಲ್ಲಿ ಅರ್ಜಿದಾರರು ಮತ್ತು ಮೃತರು ಕೊಂಕಣಿ ಭಾಷೆಯಲ್ಲಿ ಸಂಭಾಷಣೆ ನಡೆಸಿದ್ದು ಪಾದ್ರಿಗೆ ಬೈದಿದ್ದಾರೆ. ನೀನು ನನ್ನ ಪತ್ನಿಗೆ ಏನೆಂದು ಮೆಸೇಜ್ ಮಾಡುತ್ತೀಯಾ, ಚರ್ಚಗೆ ಬಂದು ನಿನ್ನ ಸೊಂಟ ಮುರಿಯುತ್ತೇನೆ, ಆಕೆಯನ್ನು ಕತ್ತರಿಸುತ್ತೇನೆ. ನಿಮ್ಮ ಈ ಸಂಬಂಧದ ಕುರಿತು ಬಹಿರಂಗಪಡಿಸುತ್ತೇನೆ. ನೀನು ಆತ್ಮಹತ್ಯೆ ಮಾಡಿಕೋ, ಆಕೆಯೂ ಆತ್ಮಹತ್ಯೆಗೆ ಶರಣಾಗುತ್ತಾಳೆ ಎಂದು ಮಾತನಾಡಿರುವ ಹೇಳಿಕೆ ದಾಖಲಾಗಿತ್ತು.

ಇದಾದ ಬಳಿಕ ಮಹೇಶ್ ಡಿಸೋಜ ಶಾಲೆಗೆ ತೆರಳಿ ಆತ್ಮಹತ್ಯೆ ಮಾಡಿಕೊಂಡಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಅಲ್ಲದೆ ಆರೋಪಿಯ ಕರೆ ಬಂದ ಬಳಿಕ 30 ನಿಮಿಷದೊಳಗೆ ಆತ ಸಾವಿಗೀಡಾಗಿರುವುದು ಮರಣೋತ್ತರ ಪರೀಕ್ಷೆಯಲ್ಲಿ ಗೊತ್ತಾಗಿತ್ತು. ಈ ಸಂಬಂಧ ಆರೋಪಿ ಆತ್ಮ ಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ನಡೆಸಿ 2021ರ ಸೆಪ್ಟಂಬರ್ 9 ರಂದು ಆರೋಪ ಪಟ್ಟಿ ದಾಖಲಿಸಿದ್ದರು. ಇದನ್ನು ಪ್ರಸ್ನಿಸಿ ಅರ್ಜಿದಾರರು ಹೈಕೋರ್ಟ್ ಮೇಟ್ಟಿಲೇರಿದರು.

ಪ್ರಕರಣದ ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಅರ್ಜಿದಾರರು ಮೃತ ಪಾದ್ರಿ ತನ್ನ ಪತ್ನಿಯ ಜತೆಗೆ ಅಕ್ರಮ ಸಂಬಂಧ ಹೊಂದಿರುವುದನ್ನು ತಿಳಿದ ಕೂಡಲೇ ಪಾದ್ರಿಗೆ ಕರೆಮಾಡಿ ವಿಚಾರದ ಕುರಿತು ತನ್ನ ಸಮಸ್ಯೆ ಚರ್ಚೆ ನಡೆಸಿದ್ದರು. ಇದೇ ಸಂದರ್ಭದಲ್ಲಿ ನೇಣು ಹಾಕಿಕೊಳ್ಳಿ ಎಂದು ಹೇಳಿದ್ದರು. ಇದು ಆತ್ಮಹತ್ಯೆಗೆ ಪ್ರಚೋದನೆ ನೀಡದಂತಾಗದು. ಅಲ್ಲದೆ, ಪ್ರಕರಣದಲ್ಲಿ ಪಾದ್ರಿಯೂ ತನ್ನ ಅಕ್ರಮ ಸಂಬಂಧ ವಿಷಯ ಮೂರನೇಯವರಿಗೆ (ಬೇರೆಯವರಿಗೆ) ತಿಳಿದಿದೆ ಎಂದು ಗಾಬರಿಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಾಗಾಗಿ ಅರ್ಜಿದಾರರು ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆಂದು ಆರೋಪಿಸಲಾಗದು. ಅವರ ಪ್ರಕರಣ ರದ್ದುಗೊಳಿಸಬೇಕು ಎಂದು ಮನವಿ ಮಾಡಿದರು.

ಸರ್ಕಾರದ ಪರ ವಾದ ಮಂಡಿಸಿದ್ದ ವಕೀಲರು, ಅರ್ಜಿದಾರರು ಪಾದ್ರಿಗೆ ಕರೆ ಮಾಡಿ ತನ್ನ ಪತ್ನಿಯ ಜತೆಗೆ ಅಕ್ರಮ ಸಂಬಂಧ ಹೊಂದಿರುವು ಬಗ್ಗೆ ಪ್ರಶ್ನಿಸಿ ಅವರನ್ನು ತೀವ್ರವಾಗಿ ನಿಂದಿಸಿದ್ದಾರೆ. ಜತೆಗೆ ಈ ವಿಷಯವನ್ನು ಬಹಿರಂಗಪಡಿಸುತ್ತೇನೆ ಬೆದರಿಕೆಯೊಡ್ಡಿದ್ದರು. ಇದೇ ಕಾರಣದಿಂದ ಪಾದ್ರಿಯೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವಾದಿಸಿದ್ದರು.

ಇದನ್ನೂ ಓದಿ: ಭ್ರೂಣ ಹತ್ಯೆ ಆರೋಪ: ವೈದ್ಯರ ವಿರುದ್ಧದ ಪ್ರಕರಣ ರದ್ದುಗೊಳಿಸಲು ಹೈಕೋರ್ಟ್ ನಕಾರ - Fetus Killing

ETV Bharat Logo

Copyright © 2025 Ushodaya Enterprises Pvt. Ltd., All Rights Reserved.