ETV Bharat / state

ಐಎಂಎ ವಂಚನೆ ಕೇಸ್: ಪರಿಹಾರ ನೀಡಿರುವ ಕುರಿತು ಸಮಗ್ರ ವರದಿ ಸಲ್ಲಿಸಲು ಹೈಕೋರ್ಟ್ ಸೂಚನೆ - High Court

ಐಎಂಎ ವಂಚನೆ ಪ್ರಕರಣಕ್ಕೆ ಸಂಬಂಧಿಸಿದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್​.ವಿ.ಅಂಜಾರಿಯಾ, ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

High Court
ಹೈಕೋರ್ಟ್
author img

By ETV Bharat Karnataka Team

Published : Apr 15, 2024, 10:48 PM IST

ಬೆಂಗಳೂರು: ಐಎಂಎ ಸೇರಿದಂತೆ ಹಲವು ಕಂಪನಿಗಳಿಂದ ವಂಚನೆ ಪ್ರಕರಣಗಳಲ್ಲಿ ಸಕ್ಷಮ ಪ್ರಾಧಿಕಾರಗಳಿಂದ ವಶಪಡಿಸಿಕೊಂಡಿರುವ ಆಸ್ತಿ, ಹರಾಜು, ಎಷ್ಟು ಜನಕ್ಕೆ ಪರಿಹಾರ ನೀಡಲಾಗಿದೆ ಎಂಬ ವಿವರ ಸಲ್ಲಿಸಲು ಹೈಕೋರ್ಟ್ ಸೂಚನೆ ನೀಡಿದೆ.

ಠೇವಣಿದಾರರಿಗೆ ಆದಷ್ಟು ಬೇಗ ಪರಿಹಾರ ನೀಡುವಂತೆ ಕೋರಿ ನರೇಂದ್ರ ಕುಮಾರ್‌ ಎಂಬವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್‌ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಅಲ್ಲದೆ, ಎಷ್ಟು ಆಸ್ತಿ ವಶಪಡಿಸಿಕೊಳ್ಳಲಾಗಿದೆ, ಎಷ್ಟು ಹರಾಜು ಮಾಡಲಾಗಿದೆ ಮತ್ತು ಎಷ್ಟು ಮಂದಿಗೆ ಠೇವಣಿ ಹಣ ಹಿಂತಿರುಗಿಸಲಾಗಿದೆ. ಇನ್ನೂ ಎಷ್ಟು ಮಂದಿಗೆ ಪಾವತಿ ಮಾಡಬೇಕಿದೆ ಎಂಬುದರ ಕುರಿತಂತೆ ಸಮಗ್ರ ಅಂಕಿ ಅಂಶಗಳುಳ್ಳ ವರದಿ ಸಲ್ಲಿಸುವಂತೆ ಹೈಕೋರ್ಟ್‌ ನಿರ್ದೇಶನ ನೀಡಿದೆ.

ಕಷ್ಟಪಟ್ಟು ದುಡಿದ ಹಣವನ್ನು ಕಂಪನಿಗಳಲ್ಲಿ ತೊಡಗಿಸಿ ಸಂಕಷ್ಟಕ್ಕೆ ಸಿಲುಕಿರುವವರಿಗೆ ಆದಷ್ಟು ಶೀಘ್ರ ಹಣ ಮರುಪಾವತಿ ಆಗಬೇಕು. ಯಾವುದೇ ಕಾರಣಕ್ಕೂ ಮರು ಪಾವತಿ ವಿಳಂಬವಾಗಬಾರದು. ಹಣ ಮರುಪಾವತಿ ಪಂಚ ವಾರ್ಷಿಕ ಯೋಜನೆಯಾಗಬಾರದು ಎಂದು ನ್ಯಾಯಾಲಯ ಹೇಳಿದೆ.

ಕೆಲ ಕಾಲ ಸಕ್ಷಮ ಪ್ರಾಧಿಕಾರದ ವಕೀಲರ ವಾದವನ್ನು ಆಲಿಸಿದ ಬಳಿಕ ನ್ಯಾಯಾಲಯ, ಕರ್ನಾಟಕ ಹಣಕಾಸು ಸಂಸ್ಥೆಗಳಲ್ಲಿನ ಠೇವಣಿದಾರರ ಹಿತರಕ್ಷಣಾ ಕಾಯಿದೆ (ಕೆಪಿಎಡಿ) ಕಾಯಿದೆ ಪ್ರಕಾರ ಸಕ್ಷಮ ಪ್ರಾಧಿಕಾರಗಳ ಮೊದಲ ಆದ್ಯತೆ ಠೇವಣಿದಾರರ ಹಿತರಕ್ಷಿಸುವುದಾಗಿದೆ. ಅದಕ್ಕಾಗಿ ಪ್ರಾಧಿಕಾರಗಳು ಎಲ್ಲ ಕ್ರಮಗಳನ್ನು ತುರ್ತಾಗಿ ಕೈಗೊಳ್ಳಬೇಕು ಎಂದು ಹೇಳಿತು.

ಈ ರೀತಿಯ ಪ್ರಕರಣಗಳಲ್ಲಿ ಪ್ರಾಧಿಕಾರಿಗಳು ನಿಯಮಾನುಸಾರ ಆಸ್ತಿಗಳನ್ನು ವಶಪಡಿಸಿಕೊಂಡು, ಅವುಗಳನ್ನು ಹರಾಜಿಗಿಟ್ಟು ಬಂದ ಹಣವನ್ನು ಠೇವಣಿದಾರರಿಗೆ ವಾಪಸ್‌ ನೀಡಬೇಕು. ಅದಕ್ಕೆ ಕಾಲಮಿತಿ ಇರಬೇಕಾಗುತ್ತದೆ. ಇಲ್ಲವಾದರೆ ಆ ಪ್ರಕ್ರಿಯೆ ವರ್ಷಾನುಗಟ್ಟಲೆ ಹಿಡಿಯುತ್ತದೆ. ಮರು ಪಾವತಿ ಪ್ರಕ್ರಿಯೆ ಪಂಚವಾರ್ಷಿಕ ಯೋಜನೆ ಆಗಬಾರದು. ಹಾಗಾಗಿ ಸಕ್ಷಮ ಪ್ರಾಧಿಕಾರಗಳು ಈ ವರೆಗೆ ಆಗಿರುವ ಪ್ರಗತಿ ಬಗ್ಗೆ ಅಂಕಿ ಅಂಶಗಳ ಸಮೇತ ಸಮಗ್ರ ವರದಿಯನ್ನು ಸಲ್ಲಿಸಬೇಕು ಎಂದು ಸೂಚಿಸಿದ ನ್ಯಾಯಪೀಠ ವಿಚಾರಣೆಯನ್ನು ಏ.23ಕ್ಕೆ ಮುಂದೂಡಿತು.

ವಿಚಾರಣೆ ವೇಳೆ ಸಕ್ಷಮ ಪ್ರಾಧಿಕಾರಗಳ ಪರ ವಾದ ಮಂಡಿಸಿದ ವಕೀಲರು, ಐಎಂಎ ಸೇರಿದಂತೆ 20 ವಂಚನೆ ಪ್ರಕರಣಗಳಲ್ಲಿ ರಚಿಸಲಾಗಿರುವ ಸಕ್ಷಮ ಪ್ರಾಧಿಕಾರಗಳು, ಆಸ್ತಿ ಮುಟ್ಟುಗೋಲು, ಹರಾಜು, ಠೇವಣಿದಾರರಿಗೆ ಹಣ ಮರುಪಾವತಿ ಸಂಬಂಧ ಕೈಗೊಂಡಿರುವ ಕ್ರಮಗಳನ್ನು ವಿವರಿಸಿದರು. ಆದಕ್ಕೆ ನ್ಯಾಯಪೀಠ, ಟ್ಯಾಬುಲರ್‌ ಕಾಲಂನಲ್ಲಿ ಪ್ರತಿಯೊಂದು ಪ್ರಕರಣದ ಪ್ರಗತಿ ಏನೇನಾಗಿದೆ ಎಂಬ ವಿವರಗಳನ್ನು ನೀಡಬೇಕೆಂದು ಆ ವಕೀಲರಿಗೆ ಸೂಚನೆ ನೀಡಿತು.

ಅರ್ಜಿದಾರ ನರೇಂದ್ರ ಕುಮಾರ್‌, ಐಎಂಎ ಸೇರಿದಂತೆ 20 ಕಂಪನಿಗಳಿಂದ ಸುಮಾರು 1 ಲಕ್ಷ ಠೇವಣಿದಾರರು ಹಣ ಕಳೆದುಕೊಂಡು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಐಎಂಎ ಪ್ರಕರಣದಲ್ಲಿ ಮಾತ್ರ ಸ್ವಲ್ಪ ಸಂತ್ರಸ್ತರಿಗೆ ಹಣ ಹಿಂತಿರುಗಿಸಲಾಗಿದೆ ಮತ್ತು ಕ್ರಮ ಕೈಗೊಳ್ಳಲಾಗುತ್ತಿದೆ. ಆದರೆ ಉಳಿದ ಕಂಪನಿಗಳ ವಿಚಾರದಲ್ಲಿ ಯಾವುದೇ ಪ್ರಗತಿ ಆಗಿಲ್ಲ, ಆಸ್ತಿಗಳನ್ನು ವಶಪಡಿಸಿಕೊಂಡಿರುವ ಬಗ್ಗೆ, ಕ್ಲೇಮ್‌ಗಳನ್ನು ಸ್ವೀಕರಿಸಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ದೂರಿದರು.

ಇದನ್ನೂ ಓದಿ: ಜಯಲಲಿತಾ ಚಿನ್ನಾಭರಣಗಳ ಹಸ್ತಾಂತರಕ್ಕೆ ತಡೆಯಾಜ್ಞೆ ವಿಸ್ತರಿಸಿದ ಹೈಕೋರ್ಟ್ - Jayalalitha Jewellery

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.