ETV Bharat / state

ಕಾಂಗ್ರೆಸ್ ಜೀವಂತವಾಗಿದ್ದಲ್ಲಿ ಶಾಸಕ ಶಾಮನೂರನ್ನು ಉಚ್ಛಾಟಿಸಲಿ: ಎಂಎಲ್​​​ಸಿ ವಿಶ್ವನಾಥ್ - ಎಂಎಲ್ಸಿ ವಿಶ್ವನಾಥ್

ಶಿವಶಂಕರಪ್ಪ ರಾಜಕೀಯ ಮುತ್ಸದಿಯಲ್ಲ, ಜಾತಿವಾದಿ, ಪಕ್ಷ ಹಾಳಾದರೂ ನೆಂಟಸ್ತಿಕೆ ಉಳಿಸಿಕೊಳ್ಳುವ ರೀತಿ ಮಾತನಾಡಿದ್ದಾರೆ. ಕಾಂಗ್ರೆಸ್​​ನಿಂದ ಗೆದ್ದು ಅವರ ಮಗನನ್ನು ಸಚಿವರನ್ನಾಗಿ ಮಾಡಿದ್ದರೂ, ಬೇರೆ ಪಕ್ಷದ ಪರ ಕ್ಯಾನ್ವಾಸ್ ಮಾಡುವುದು ಎಷ್ಟು ಸರಿ ? ಎಂದು ಎಂಎಲ್​​ಸಿ ಎಚ್.ವಿಶ್ವನಾಥ್ ಕಿಡಿಕಾರಿದರು.

MLC Vishwanath spoke at the press conference.
ಎಂಎಲ್ಸಿ ವಿಶ್ವನಾಥ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
author img

By ETV Bharat Karnataka Team

Published : Jan 27, 2024, 3:43 PM IST

ಎಂಎಲ್ಸಿ ಎಚ್.ವಿಶ್ವನಾಥ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಚಾಮರಾಜನಗರ: ಕಾಂಗ್ರೆಸ್ ಪಕ್ಷ ಜೀವಂತವಾಗಿದ್ದಲ್ಲಿ ಮೊದಲು ಶಾಸಕ ಶಾಮನೂರು ಶಿವಶಂಕರಪ್ಪ ಅವರನ್ನು ಉಚ್ಛಾಟಿಸಲಿ ಎಂದು ಎಂಎಲ್​​​​ಸಿ ಎಚ್.ವಿಶ್ವನಾಥ್ ಆಗ್ರಹಿಸಿದರು. ಶಿವಮೊಗ್ಗದಲ್ಲಿ ನಡೆದಿದ್ದ ಸಮಾರಂಭದಲ್ಲಿ ಸಂಸದ ಬಿ ವೈ‌ ರಾಘವೇಂದ್ರ ಪರ ಬ್ಯಾಟ್ ಬೀಸಿದ್ದ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿಕೆಗೆ ಗುಂಡ್ಲುಪೇಟೆಯಲ್ಲಿ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್​ನಿಂದ ಮೊದಲು ಶಿವಶಂಕರಪ್ಪ ಅವರನ್ನು ಉಚ್ಛಾಟಿಸಬೇಕು. ಶಿವಶಂಕರಪ್ಪ ರಾಜಕೀಯ ಮುತ್ಸದಿಯಲ್ಲ, ಜಾತಿವಾದಿ, ಪಕ್ಷದ ಹಾಳಾದರೂ ನೆಂಟಸ್ತಿಕೆ ಉಳಿಸಿಕೊಳ್ಳುವ ರೀತಿ ಮಾತನಾಡಿದ್ದಾರೆ, ಕಾಂಗ್ರೆಸ್​​ನಿಂದ ಗೆದ್ದು ಅವರ ಮಗನನ್ನು ಸಚಿವರನ್ನಾಗಿ ಮಾಡಿ ಬೇರೆ ಪಕ್ಷದ ಪರ ಕ್ಯಾನ್ವಾಸ್ ಮಾಡುವುದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದರು.

ಶಾಸಕರಿಗೆ ನಿಗಮ ಮಂಡಳಿ ಬೇಡ: ಶಾಸಕರಿಗೆ ನಿಗಮ ಮಂಡಳಿ ಸ್ಥಾನಗಳನ್ನು ಕೊಡಬಾರದು, ಎಂಎಲ್ಎ ಸ್ಥಾನವೂ ಅವರಿಗೆ, ನಿಗಮ ಅಧ್ಯಕ್ಷ ಗಿರಿಯೂ ಅವರಿಗೆ ಎಂದರೆ ಹೇಗೆ..? ಬಾವುಟ ಕಟ್ಟುವ ಕಾರ್ಯಕರ್ತರು ಏನು ಮಾಡಬೇಕು, ಶಾಸಕ ಸೂಚಿಸಿದ ಕಾರ್ಯಕರ್ತರಿಗೆ ಬೇಕಾದರೇ ನಿಗಮ ಮಂಡಲಿ ಕೊಡಲಿ, ಶಾಸಕರಿಗೆ ನಿಗಮ ಮಂಡಲಿ ಅಧ್ಯಕ್ಷ ಸ್ಥಾನ ಕೊಡಬಾರದು ಎಂದು ಅಭಿಪ್ರಾಯಪಟ್ಟರು.

ಮೋದಿ ಕುರಿತು ಜೋಕ್: ಈಗ ಯಾರೋ ನನ್ನ ಮೊಬೈಲ್ ಗೆ ಒಂದು ಸಂದೇಶ ಕಳುಹಿಸಿದ್ದಾರೆ. ಹೆಂಡತಿ ಬಿಟ್ಟ ರಾಮನನ್ನು- ಹೆಂಡತಿ ತೊರೆದ ಪ್ರಧಾನಿ ಪೂಜಿಸುವುದು" ಎಂಬಂತಾಗಿದೆ. ಇದನ್ನು ಹೇಳಿದರೆ ನಾನು ರಾಮನ ವಿರೋಧಿ ಅಂತಾರೆ. ಆ ರೀತಿಯಲ್ಲ, ಜನನಾಯಕರ ನಡೆ-ನುಡಿ ವೈರುಧ್ಯಗಳಿಂದ ಕೂಡಿರುವುದರಿಂದ ಜನರು ಯಾವ ಜನನಾಯಕನಿಗೂ ಗೌರವ ಕೊಡುತ್ತಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಶಾಮನೂರು ಹೇಳಿಕೆ ಸ್ವಾಗತಿಸಿದ ಬಿಎಸ್​ವೈ: ಸಂಸದ ಬಿ ವೈ ರಾಘವೇಂದ್ರ ಪರ ಬ್ಯಾಟ್​ ಬೀಸಿದ ದಾವಣಗೆರೆ ಕಾಂಗ್ರೆಸ್​ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರ ಹೇಳಿಕೆಯನ್ನು ಮಾಜಿ ಸಿಎಂ ಬಿ ಎಸ್​ ಯಡಿಯೂರಪ್ಪ ಅವರು ಸ್ವಾಗತಿಸಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಶಿವಮೊಗ್ಗ ಸಂಸದ ಬಿ. ವೈ. ರಾಘವೇಂದ್ರ ಪುನರಾಯ್ಕೆ ಆಗಬೇಕು ಎಂದು ನಮ್ಮ ಲಿಂಗಾಯತ ಸಮಾಜದ ಮುಖಂಡ ಕಾಂಗ್ರೆಸ್​ನ ದಾವಣಗೆರೆ ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿಕೆ ನೀಡಿರುವುದು ಸಂತಸ ತಂದಿದೆ. ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ'' ಎಂದು ಬಿಜೆಪಿ ಹಿರಿಯ ನಾಯಕ ಬಿ. ಎಸ್. ಯಡಿಯೂರಪ್ಪ ಹೇಳಿದ್ದಾರೆ.

''ಶಾಮನೂರು ಶಿವಶಂಕರಪ್ಪ ಅವರು ನಮ್ಮ ಸಮಾಜದ ಹಿರಿಯ ಮುಖಂಡರು. ಅವರು ಶಿವಮೊಗ್ಗ ಸಂಸದ ಬಿ ವೈ ರಾಘವೇಂದ್ರ ಮಾಡಿರುವ ಕೆಲಸ ಮೆಚ್ಚಿ ಅವರನ್ನು ಪುನರಾಯ್ಕೆ ಮಾಡಬೇಕು ಎಂದು ಹೇಳಿರೋದು ನಮ್ಮ ಸಮಾಜದ ಬಂಧುಗಳಿಗೆ, ಕಾರ್ಯಕರ್ತರಿಗೆ ಸಂತಸವನ್ನುಂಟು ಮಾಡಿದೆ. ಶಾಮನೂರು ಅವರಂತಹ ಹಿರಿಯರು ಆಶೀರ್ವಾದ ಮಾಡಿರೋದು ಖುಷಿಯಾಗಿದೆ. ಅದಕ್ಕಾಗಿ ಅವರಿಗೆ ಅಭಿನಂದನೆ ತಿಳಿಸುತ್ತೇನೆ'' ಎಂದರು.

ಇದನ್ನೂಓದಿ:ಬಿಜೆಪಿ ಕಾರ್ಯಕಾರಿಣಿ, ಎದುರಾಳಿಗಳ ಲಘು ಪರಿಗಣನೆ ಬೇಡ: ಬಿ.ವೈ. ವಿಜಯೇಂದ್ರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.