ETV Bharat / state

ಅಂಬರೀಶ್ ನೆಚ್ಚಿನ ಮಂಡ್ಯದಿಂದಲೇ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ: ಸುಮಲತಾ - ಮಂಡ್ಯ ಕ್ಷೇತ್ರ

ನಾನು ಅಷ್ಟು ಸುಲಭವಾಗಿ ಮಂಡ್ಯವನ್ನು ಕಳೆದುಕೊಳ್ಳಲ್ಲ, ಬಿಟ್ಟುಕೊಡುವುದಿಲ್ಲ. ಈಗ ಬಿಜೆಪಿ ಅಧಿಕೃತ ಮೇಂಬರ್ ಇಲ್ಲದೇ ಇರಬಹುದು, ನಾನೊಬ್ಬಳು ಪಕ್ಷೇತರ ಸಂಸದೆ. ಆದರೆ, ಮುಂದಿನ ದಿನಗಳಲ್ಲಿ ನಾನು ಬಿಜೆಪಿ ಸದಸ್ಯೆಯಾಗುತ್ತೇನೆ ಎಂದು ಸಂಸದೆ ಸುಮಲತಾ ಹೇಳಿದರು.

sumalatha
ಸುಮಲತಾ
author img

By ETV Bharat Karnataka Team

Published : Feb 26, 2024, 6:54 AM IST

ಬೆಂಗಳೂರು: ''ನನಗೆ ಚುನಾವಣೆಯಲ್ಲಿ ಸ್ವಾರ್ಥ ಅಲ್ಲ, ಮಂಡ್ಯ ಅಂಬರೀಶ್ ನಾಡು, ಅಂಬರೀಶ್ ಮಂಡ್ಯದ ಗಂಡು, ಹಾಗಾಗಿ ನಾನು ಅಲ್ಲಿಯೇ ಸ್ಪರ್ಧೆ ಮಾಡುತ್ತೇನೆ. ಅದು ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ. ಬೆಂಗಳೂರು ಉತ್ತರ ಕ್ಷೇತ್ರದ ಟಿಕೆಟ್ ಕ್ಷಣ ಮಾತ್ರದಲ್ಲಿ ಪಡೆದುಕೊಳ್ಳಬಲ್ಲೆ, ಆದರೆ ಮಂಡ್ಯ ಕಳೆದುಕೊಳ್ಳಲು ನನಗೆ ಇಷ್ಟವಿಲ್ಲ'' ಎಂದು ಸಂಸದೆ ಸುಮಲತಾ ಸ್ಪಷ್ಟಪಡಿಸಿದ್ದಾರೆ.

sumalatha
ಸುಮಲತಾ ಸಭೆ

ಜೆಪಿ ನಗರದ ನಿವಾಸದಲ್ಲಿ ಸುಮಲತಾ ತಮ್ಮ ಬೆಂಬಲಿಗರ ಸಭೆ ನಡೆಸಿದರು. ನಟ ದರ್ಶನ್, ನಿರ್ಮಾಪಕ ರಾಕ್​ಲೈನ್ ವೆಂಕಟೇಶ್ ಸೇರಿದಂತೆ ಮಂಡ್ಯ ನಾಯಕರು ಸಭೆಯಲ್ಲಿ ಪಾಲ್ಗೊಂಡು, ಸಿದ್ಧತೆ ಕುರಿತು ಮಾತುಕತೆ ನಡೆಸಿದರು. ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸುಮಲತಾ, ''ಸಂಸದೆಯಾಗಿ ಐದು ವರ್ಷಗಳ ಪ್ರಯಾಣದ ಬಗ್ಗೆ ಬೆಂಬಲಿಗರ ಜೊತೆ ಚರ್ಚೆ ಮಾಡಿದ್ದೇನೆ, ಸಕಾರಾತ್ಮಕ ಚರ್ಚೆ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ನೋಡಿದಾಗ ಸ್ವಲ್ಪ ಗೊಂದಲ ಆಗುವುದು ಸಹಜ'' ಎಂದರು.

sumalatha
ಸುಮಲತಾ ಸಭೆ

ಯಶ್ ಜೊತೆ ಮಾತಾಡಿಲ್ಲ: ''ದರ್ಶನ್ ಐದು ವರ್ಷಗಳ ಹಿಂದೆ ಚುನಾವಣೆಯಲ್ಲಿ ನನ್ನ ಗೆಲುವಿಗೆ ಕಾರಣವಾಗಿದ್ದರು. ಈ ಬಾರಿಯೂ ಕೂಡ ನಾನು ಜೊತೆಯಲ್ಲಿರುತ್ತೇನೆ, ಬೆಂಬಲ ಕೊಡಿ ಎಂದು ಅಭಿಮಾನಿಗಳಿಗೆ, ಮತದಾರರಿಗೆ ಮನವಿ ಮಾಡಿದ್ದಾರೆ. ಚುನಾವಣಾ ಪ್ರಚಾರದ ಬಗ್ಗೆ ನಟ ಯಶ್ ಜೊತೆ ಇನ್ನೂ ನಾನು ಮಾತಾಡಿಲ್ಲ, ಅವರು ಲಂಡನ್​ನಲ್ಲಿ ಶೂಟಿಂಗ್​​​ನಲ್ಲಿ ಬ್ಯುಸಿ ಇದ್ದಾರೆ, ದರ್ಶನ್ ಖಂಡಿತಾ ಬರುತ್ತಾರೆ. ಕಳೆದ ಬಾರಿ ಅವರು ಎಲ್ಲರ ಪರವಾಗಿಯೂ ಪ್ರಚಾರ ಮಾಡಿದ್ದರು'' ಎಂದು ತಿಳಿಸಿದರು.

sumalatha
ಸುಮಲತಾ ಸಭೆ

''ಕಳೆದ ಬಾರಿ ನಾನು ಬಿಜೆಪಿಗೆ ಬೆಂಬಲಿಸಿದ್ದೆ, ಈಗಲೂ ಅವರೆಲ್ಲರೂ ನನ್ನ ಜೊತೆಯಲ್ಲಿದ್ದಾರೆ. ಮಂಡ್ಯದಲ್ಲಿ ಈಗ ಹಿಂದಿಗಿಂತಲೂ ಪೂರಕ ವಾತಾವರಣ ಇದೆ. ಬಿಜೆಪಿ ಬಾವುಟವನ್ನು ಮಂಡ್ಯದಲ್ಲಿ ಹಾರಿಸೋಣ ಎಂದು ತುಂಬಾ ಜನ ಬೆಂಬಲಿಗರು ಹೇಳಿದ್ದಾರೆ. ಟಿಕೆಟ್ ಕೊಡುವುದು ಬಿಡುವುದು ಒಂದು ಸಭೆಯಲ್ಲಿ ನಿರ್ಧಾರ ಆಗಲ್ಲ. ಮೋದಿ ಭೇಟಿ ವೇಳೆ ಆಶೀರ್ವಾದದ ರೀತಿ ಹೇಳಿದ್ದಾರೆ. ಮೈತ್ರಿ ಇರುವಾಗ ಹೊಂದಾಣಿಕೆಯಲ್ಲಿ ಯಾವ ರೀತಿ ಹೋಗಬೇಕು ಎಂದು ಅವರು ತೀರ್ಮಾನ ಮಾಡುತ್ತಾರೆ'' ಎಂದು ಹೇಳಿದರು.

ದರ್ಶನ್ ಪುಟ್ಟಣ್ಯಯ್ಯ ಬೆಂಬಲ ಕೇಳುತ್ತೇನೆ: ''ರಾಜ್ಯಸಭೆ ಕುರಿತಾದ ಯಾವುದೇ ಮಾತುಕತೆ ಆಗಿಲ್ಲ, ಪಕ್ಷೇತರಳಾಗಿ ಸ್ಫರ್ಧಿಸುವ ಯೋಚನೆ ಮಾಡಿಲ್ಲ. ಯಾವುದೇ ಕಾರಣಕ್ಕೂ ಮಂಡ್ಯ ಬಿಡಬಾರದು ಎಂದು ಬೆಂಬಲಿಗರು ಹೇಳಿದ್ದಾರೆ. ಶಾಸಕ ದರ್ಶನ್ ಪುಟ್ಟಣ್ಯಯ್ಯ ಅವರ ಬೆಂಬಲವನ್ನು ಖಂಡಿತಾ ನಾನು ಕೇಳುತ್ತೇನೆ. ಮಂಡ್ಯಕ್ಕೆ ಬಿಜೆಪಿ ಸ್ಫರ್ಧೆ ಮಾಡುವುದಾದರೆ ಮೊದಲ ಆದ್ಯತೆ ನನಗೇ ಕೊಡುತ್ತಾರೆ ಎಂಬ ವಿಶ್ವಾಸವಿದೆ'' ಎಂದರು.

''ನಾನಾಗಲಿ, ನನ್ನ ಮಗನಾಗಲಿ ಸ್ಪರ್ಧೆ ಮಾಡುವುದಿಲ್ಲ ಅಂತಾ ಕುಮಾರಸ್ವಾಮಿ ಸ್ಪಷ್ಟವಾಗಿ ಹೇಳಿದ್ದಾರೆ. ಸ್ಫರ್ಧೆ ಮಾಡುತ್ತೇವೆ ಅಂತಾ ಅವರು ಎಲ್ಲೂ ಹೇಳಿಲ್ಲ. ಈ ಬಗ್ಗೆ ನಿರ್ಧಾರ ಕೈಗೊಳ್ಳಲು ಒಂದು ತಿಂಗಳು ಮಾತ್ರ ಸಮಯ ಇದೆ. ಅದು ಬಿಜೆಪಿ ವರಿಷ್ಠರಿಗೂ ಗೊತ್ತಿದೆ, ಅವರು ಸೂಕ್ತ ಸಮಯದಲ್ಲಿ ಉತ್ತಮ ನಿರ್ಧಾರ ಕೈಗೊಳ್ಳುತ್ತಾರೆ ಎಂಬ ನಂಬಿಕೆ ಇದೆ'' ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಟಿಕೆಟ್ ಬಗ್ಗೆ ಅಂತಿಮವಾಗಿಲ್ಲ: ''ಸಭೆಯಲ್ಲಿ ಎಲ್ಲಾ ಪಕ್ಷದವರೂ ಇದ್ದರು, ಎಲ್ಲರ ಅಭಿಪ್ರಾಯವೂ ಸ್ಪಷ್ಟವಾಗಿ ಗೊತ್ತಾಗಿದೆ. ಇನ್ನು ತಾಲೂಕು ಮಟ್ಟದಲ್ಲಿ ಹೋಗಿ ಅಲ್ಲಿನ ಬಲ ಮತ್ತು ದೌರ್ಬಲ್ಯ ಸ್ಟಡಿ ಮಾಡುತ್ತೇನೆ. ಕುಮಾರಸ್ವಾಮಿ ಮತ್ತು ಬಿಜೆಪಿ ಹೈಕಮಾಂಡ್ ಭೇಟಿ ನಡೆಸಿದೆ. ಮಂಡ್ಯ ಟಿಕೆಟ್ ಜೆಡಿಎಸ್ ಪಾಲಾದರೆ ಮುಂದೇನು ಎಂಬ ಯೋಚನೆಯನ್ನೂ ನಾನು ಮಾಡಲ್ಲ. ನಾನು ಪಕ್ಷ ಅಲ್ಲ, ನಾನು ಸ್ವತಂತ್ರ ವ್ಯಕ್ತಿ, ಜೆಡಿಎಸ್ ಪಕ್ಷ ಅವರದ್ದು, ಅವರು ಮಂಡ್ಯದ ಬಗ್ಗೆ ಮಾತ್ರ ಯೋಚನೆ ಮಾಡುತ್ತಿಲ್ಲ, ಇಡೀ ರಾಜ್ಯದ ಕುರಿತಂತೆ ಯೋಚನೆ ಮಾಡುತ್ತಾರೆ. ಟಿಕೆಟ್ ಬಗ್ಗೆ ಎಲ್ಲಿಯೂ ಕೂಡ ಇನ್ನೂ ಅಂತಿಮ ನಿರ್ಧಾರವಾಗಿಲ್ಲ, ಪ್ರಾಥಮಿಕ ಚರ್ಚೆ ಆಗಿದೆ ಅಷ್ಟೇ'' ಎಂದು ತಿಳಿಸಿದರು.

ಮೋದಿಗೆ ಎಲ್ಲಾ ಕ್ರೆಡಿಟ್: ''ಮಂಡ್ಯಕ್ಕೆ ಸುಮಲತಾರನ್ನು ಬಿಜೆಪಿ ಅಭ್ಯರ್ಥಿ ಮಾಡುತ್ತೇವೆ ಎಂದು ಬಿಜೆಪಿ ನಾಯಕರು ದೇವೇಗೌಡರಿಗೆ ಹೇಳಿದ್ದಾರೆ ಎಂಬ ವಿಚಾರದ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ದೇವೇಗೌಡರು ತಮ್ಮ ಪಕ್ಷದ ಬಗ್ಗೆ ಮಾತಾಡಬಹುದೇ ಹೊರತು ಅವರು ಬಿಜೆಪಿ ವಕ್ತಾರರಾಗಿ ಮಾತಾಡುತ್ತಾರೆ ಅಂತಾ ನನಗೆ ಅನ್ನಿಸುವುದಿಲ್ಲ. ನನ್ನಿಂದಲೇ ಎಲ್ಲಾ ಎಂಬ ನಿಲುವು ನನ್ನದಲ್ಲ, ಬಿಜೆಪಿ 400+ ಗೆಲ್ಲುವ ನಿರೀಕ್ಷೆ ಇದೆ. ಗೆಲ್ಲಲೇಬೇಕು ಅಂದಾಗ ಎಲ್ಲರ ನಿರ್ಧಾರ ಮುಖ್ಯ. ಮೋದಿ ಅವರನ್ನು ಎಲ್ಲರೂ ಈಗ ವಿಶ್ವಮಟ್ಟದಲ್ಲಿ ಗುರುತಿಸುತ್ತಾರೆ. ನಾನು ಎಲ್ಲ ಕ್ರೆಡಿಟ್ ಮೋದಿಗೆ ಕೊಡಲು ಇಚ್ಚಿಸುತ್ತೇನೆ'' ಎಂದರು.

''ಬೆಂಗಳೂರು ಉತ್ತರ ಕ್ಷೇತ್ರ ಪಡೆಯುವುದರಲ್ಲಿ ನನಗೇನೂ ಕಷ್ಟ ಇಲ್ಲ. ಆ ಕ್ಷೇತ್ರ ನಾನು ಪಡೆಯೋದು ತುಂಬಾ ಸುಲಭ. ಆದರೆ, ನಾನು ಮಂಡ್ಯ ಬಿಟ್ಟು ಎಲ್ಲಿಯೂ ಹೋಗಲ್ಲ''' ಎಂದು ಸುಮಲತಾ ಬೆಂಗಳೂರು ಉತ್ತರಕ್ಕೆ ಹೋಗ್ತಾರೆಂಬ ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡರ ಹೇಳಿಕೆಗೆ ಸುಮಲತಾ ತಿರುಗೇಟು ನೀಡಿದರು. ''ಅವರ ಪಕ್ಷದ ಅನುಕೂಲಕ್ಕೆ ತಕ್ಕಂತೆ ಜಿ.ಟಿ.ದೇವೇಗೌಡರು ಹೇಳಿರಬಹುದು. ಆದರೆ ಮಂಡ್ಯ ಜೆಡಿಎಸ್​​ಗೆ ಕನ್ಫರ್ಮ್ ಅನ್ನೋದೆಲ್ಲ ಸುಳ್ಳು'' ಎಂದು ಜಿಟಿಡಿಗೆ ಟಾಂಗ್ ಕೊಟ್ಟರು.

ಇದನ್ನೂ ಓದಿ: ಶೋಭಾ ಕರಂದ್ಲಾಜೆ ಈ ಬಾರಿ ಗೆದ್ದೇ ಗೆಲ್ಲುತ್ತಾರೆ ಎಂದ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.