ETV Bharat / state

ಲಿಮ್ಕಾ ಸಾಧಕ ಸಭಾಪತಿ ಹೊರಟ್ಟಿ: ಪರಿಷತ್‌ನಲ್ಲಿ ಪಕ್ಷಾತೀತ ಅಭಿನಂದನೆ

author img

By ETV Bharat Karnataka Team

Published : Feb 13, 2024, 9:10 PM IST

ಬಸವರಾಜ ಹೊರಟ್ಟಿ ಅವರ ಹೆಸರು ಲಿಮ್ಕಾ ರೆಕಾರ್ಡ್ಸ್ ಬುಕ್​ನಲ್ಲಿ ದಾಖಲಾಗಿದೆ. ಹೀಗಾಗಿ ಪರಿಷತ್ ಸದಸ್ಯರು ಇಂದು ಸದನದಲ್ಲಿ ಒಕ್ಕೊರಲಿನಿಂದ ಪಕ್ಷಾತೀತವಾಗಿ ಅವರನ್ನು ಅಭಿನಂದಿಸಿದರು.

ಸಭಾಪತಿ ಬಸವರಾಜ ಹೊರಟ್ಟಿ
ಸಭಾಪತಿ ಬಸವರಾಜ ಹೊರಟ್ಟಿ

ಬೆಂಗಳೂರು: ಸತತ 8 ಅವಧಿಯಲ್ಲಿ 43 ವರ್ಷಗಳ ಕಾಲ ಶಿಕ್ಷಕ ಕ್ಷೇತ್ರದಿಂದ ವಿಧಾನ ಪರಿಷತ್ ಸದಸ್ಯರಾಗಿರುವ ಹಾಲಿ ಸಭಾಪತಿ ಬಸವರಾಜ ಹೊರಟ್ಟಿ ಅವರ ಹೆಸರು ಲಿಮ್ಕಾ ರೆಕಾರ್ಡ್ಸ್ ಬುಕ್​ನಲ್ಲಿ ದಾಖಲಾಗಿದೆ. ಈ ಬಗ್ಗೆ ಪರಿಷತ್ ಸದಸ್ಯರು ಸದನದಲ್ಲಿಂದು ಒಕ್ಕೊರಲಿನಿಂದ ಪಕ್ಷಾತೀತವಾಗಿ ಅಭಿನಂದನೆ ಸಲ್ಲಿಸಿದರು.

ವಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಮಾತನಾಡಿ, "ಬಸವರಾಜ ಹೊರಟ್ಟಿ ಅವರು ನಾನು ಕಂಡ ಅಪರೂಪದ ಹಾಗೂ ಮುತ್ಸದ್ಧಿತನದ ರಾಜಕಾರಣಿ. ಶಿಕ್ಷಣ ಸಚಿವರಾಗಿ ಶಿಕ್ಷಕರ ವರ್ಗಾವಣೆಯಲ್ಲಿ‌ ನಡೆಯುತ್ತಿದ್ದ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿದವರು" ಎಂದು ಗುಣಗಾನ ಮಾಡಿದರು.

ಒಂದೇ ಕ್ಷೇತ್ರದಿಂದ ಎಂಟು ಬಾರಿ ಹೇಗೆ ಗೆದ್ದಿರಿ ಎಂದು ಪ್ರಶ್ನಿಸಿದ ಕಾಂಗ್ರೆಸ್‌ನ ಸಲೀಂ ಅಹಮದ್ ಅವರು ಈ ಬಗ್ಗೆ ಪುಸ್ತಕ ಬರೆಯುವಂತೆಯೂ ಹೊರಟ್ಟಿ ಅವರಿಗೆ ನಗುಮುಖದಿಂದಲೇ ಸೂಚಿಸಿದರು. ಬಿ.ಕೆ.ಹರಿಪ್ರಸಾದ್, ಸಲೀಂ ಅಹಮದ್, ಉಮಾ ಶ್ರೀ, ಯು.ಬಿ.ವೆಂಕಟೇಶ್ ಹಾಗೂ ಸಚಿವ ಈಶ್ವರ್ ಖಂಡ್ರೆ, ವಿರೋಧ ಪಕ್ಷದ ಸದಸ್ಯರಾದ ಮರಿತಿಬ್ಬೇಗೌಡ, ರವಿಕುಮಾರ್, ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ಹಲವು ಸದಸ್ಯರು ಹೊರಟ್ಟಿಯವರನ್ನು ಪ್ರಶಂಸಿದರು.

ಅಭಿನಂದನೆಯ ಬಳಿಕ ಮಾತನಾಡಿದ ಸಭಾಪತಿ ಬಸವರಾಜ ಹೊರಟ್ಟಿ, "ಇವತ್ತು ನನ್ನ ಜೀವನದಲ್ಲಿ ಶ್ರೇಷ್ಠ ದಿನ. ಎಲ್ಲರಿಗೂ ಹೃದಯಪೂರ್ವಕವಾಗಿ ಕೃತಜ್ಞತೆ ತಿಳಿಸುತ್ತೇನೆ. ನನ್ನ ಬಳಿ ಸಹಾಯ ಕೇಳಿ ಬಂದವರಿಗೆ ನಾನು ಇಂದೇ ಸಹಾಯ ಮಾಡುತ್ತೇನೆ, ಏಕೆಂದರೆ ನಾಳೆ ಬಗ್ಗೆ ಗೊತ್ತಿಲ್ಲ ಎಂಬ ತತ್ವದಲ್ಲಿ ನಾನು ನಡೆದಿದ್ದೇನೆ" ಎಂದರು.

"1998ರಲ್ಲಿ‌ ದೆಹಲಿಗೆ ಹೋದಾಗ ರಾಜ್ಯಸಭೆ ಸದಸ್ಯ ನಾರಾಯಣ್ ಎಂಬ ರಾಜ್ಯಸಭಾ ಸದಸ್ಯರು ಇತಿಹಾಸ ನೆನಪಿಸಿಕೊಂಡು ತಮ್ಮ ಗೆಲುವಿನ ರಹಸ್ಯ ಹೇಳಿದ್ದರು. ಅದರಂತೆ, ನುಡಿದಂತೆ ನಡೆದುಕೊಂಡು ಬಂದಿದ್ದೇನೆ. ನನ್ನ ರಾಜಕೀಯ ಜೀವನದಲ್ಲಿ 18 ಮುಖ್ಯಮಂತ್ರಿಗಳನ್ನು ನೋಡಿದ್ದೇನೆ. ಬೇರೆ ಬೇರೆ ವರ್ಗದ ಜನರನ್ನು ನೋಡಿದ್ದೇನೆ. ರಾಮಕೃಷ್ಣ ಹೆಗಡೆಯವರು ನನಗೆ ಮಾರ್ಗದರ್ಶನ ಮಾಡಿದ್ದರು" ಎಂದರು. ಇದೇ ವೇಳೆ, ಬಂಗಾರಪ್ಪ, ಎಸ್.ಎಂ.ಕೃಷ್ಣ, ದೇವೇಗೌಡ, ರಾಚಯ್ಯ ಅವರನ್ನು ನೆನಪು ಮಾಡಿಕೊಂಡರು.

"ರಾಮಕೃಷ್ಣ ಹೆಗಡೆ ನಿಧನದ ಬಳಿಕ‌ ಮಾಜಿ ಪ್ರಧಾನಿ ದೇವೇಗೌಡರು ನನ್ನನ್ನು ಪಕ್ಷಕ್ಕೆ ಕರೆದು 2004ರಲ್ಲಿ ಮಂತ್ರಿ ಮಾಡಿದರು. ದೇವೇಗೌಡರು ಕೊಟ್ಟ ಅವಕಾಶದಿಂದ ಇಡೀ ದೇಶಕ್ಕೆ ನನ್ನ ಹೆಸರು ಪ್ರಚಾರವಾಯಿತು. ಯಾವ ಒಬ್ಬ ಶಿಕ್ಷಕರಿಂದಲೂ ಒಂದು ರೂಪಾಯಿ ಹಣ ಮುಟ್ಟಿಲ್ಲ. ಯಾರಿಗೂ ನಾನು ಹಣ ಕೊಟ್ಟಿಲ್ಲ. ಯಾರಿಂದಲೂ ಹಣ ಪಡೆದಿಲ್ಲ" ಎಂದರು.

ಮಂತ್ರಿಯಾಗಿ ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದ್ದೇನೆ. ವರ್ಗಾವಣೆಯಲ್ಲಿ‌ ನಡೆಯುತ್ತಿದ್ದ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿದ್ದೇನೆ. 600 ಮಂತ್ರಿಗಳು, 2 ಸಾವಿರ ಶಾಸಕರನ್ನು ನಾನು ನೋಡಿದ್ದೇನೆ. ತಂದೆ-ತಾಯಿಯ ಆಶೀರ್ವಾದ, ಅವರು ಮಾಡಿದ ಪುಣ್ಯದಿಂದ ಇಷ್ಟು ಸಾಧನೆ ಮಾಡಿದ್ದೇನೆ. ಪಕ್ಷ, ಜಾತಿ ಯಾವುದೆಂದು ನೋಡಿಲ್ಲ. ಇವತ್ತಿನ ಸಭಾಪತಿ ಸ್ಥಾನ ಕಲ್ಪಿಸಿದವರು ಯಡಿಯೂರಪ್ಪ ಹಾಗೂ ದೇವೇಗೌಡರು. ನರೇಂದ್ರ ಮೋದಿ ಅವರಿಗೆ ಸಭಾಪತಿ ಮಾಡಲು ದೇವೇಗೌಡರು ಮಾತಾಡಿದ್ದರು ಎಂದು ಹೇಳಿದರು.

ಇದನ್ನೂ ಓದಿ: ಪೆರಿಫರೆಲ್ ರಿಂಗ್ ರೋಡ್ ಯೋಜನೆ ಎಕನಾಮಿಕ್ ಕಾರಿಡಾರ್ ಆಗಿ ಕಾರ್ಯರೂಪಕ್ಕೆ ತರುತ್ತೇವೆ: ಡಿ.ಕೆ. ಶಿವಕುಮಾರ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.