ETV Bharat / state

ಮೋದಿಗೆ, ಸಿ.ಟಿ ರವಿಗೆ ಹೊಡೆಯಿರಿ ಎಂದು ನಾನು ಹೇಳಿಲ್ಲ, ನನ್ನ ಭಾಷಣ ಸರಿಯಾಗಿ ಕೇಳಿ: ಸಚಿವ ಶಿವರಾಜ್ ತಂಗಡಗಿ - Minister shivaraj Tangadagi - MINISTER SHIVARAJ TANGADAGI

ಮೋದಿಗೆ ಹೊಡಿರಿ ಎಂದು ನಾನು ಹೇಳಿಲ್ಲ ಎಂದು ಸಚಿವ ಶಿವರಾಜ್ ತಂಗಡಗಿ ಹೇಳಿದ್ದಾರೆ.

ಸಚಿವ ಶಿವರಾಜ್ ತಂಗಡಗಿ
ಸಚಿವ ಶಿವರಾಜ್ ತಂಗಡಗಿ
author img

By ETV Bharat Karnataka Team

Published : Mar 26, 2024, 3:13 PM IST

ಬೆಂಗಳೂರು : ಬಿಜೆಪಿಯವರ ಕಪಾಳಕ್ಕೆ ಹೊಡೆಯಿರಿ, ಮೋದಿಗೆ ಹೊಡಿಯಿರಿ, ಸಿ.ಟಿ ರವಿಗೆ ಹೊಡೆಯಿರಿ ಎಂದು ನಾನು ಹೇಳಿಲ್ಲ ಎಂದು ಸಚಿವ ಶಿವರಾಜ್ ತಂಗಡಗಿ ಸ್ಪಷ್ಟಪಡಿಸಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಕೊಟ್ಟ ಹೇಳಿಕೆ ಬಗ್ಗೆ ನಾನು ಉಲ್ಲೇಖ ಮಾಡಿದ್ದೇನೆ ಎಂದರು.

’’ಈ ದೇಶದಲ್ಲಿ ಎಷ್ಟೊಂದು ಸುಳ್ಳು ಹೇಳಿಕೊಂಡು ಬಂದಿದ್ದೀರಿ. 2014ರ ನರೇಂದ್ರ ಮೋದಿಯವರ ಚುನಾವಣಾ ಬಾಷಣವನ್ನು ಕೇಳಿದ್ರೆ ಬಿಜೆಪಿಯವರೇ ಮತ ಚಲಾಯಿಸುವುದಿಲ್ಲ. 2 ಕೋಟಿ ಉದ್ಯೋಗ ಕೊಡ್ತೇನೆ ಎಂದು ಭಾಷಣ ಮಾಡಿದ್ರಿ. ಕೊಟ್ಟಿದ್ದೀರಾ?. ಮಳೆಯಿಂದ, ಬರದಿಂದ ರಾಜ್ಯದ ಜನ ತತ್ತರಿಸಿದ್ದಾರೆ. ಚುನಾವಣೆ ವೇಳೆ ಕೆಲಸ ಮಾಡಿದ್ದೀರಿ ಎಂದು ಹೇಳುವ ಧೈರ್ಯ ಇಲ್ಲ. ಅದಕ್ಕಾಗಿ ದಾರಿ ತಪ್ಪಿಸುತ್ತಿದ್ದೀರಿ. ಜನರನ್ನು ಧರ್ಮದ ಹೆಸರಿನಲ್ಲಿ, ಭಾವನೆ ಹೆಸರಿನಲ್ಲಿ ದಾರಿ ತಪ್ಪಿಸಿದ್ದೀರಿ ಎಂದು ಕಳಕಳಿಯ ಮಾತನಾಡಿದ್ದೇನೆ‘‘ ಎಂದರು.

ಚಾಕು ಚೂರಿ ಹಿಡಿದುಕೊಂಡು ಓಡಾಡಿದ್ದೀರಿ. ಆಯುಧ ಹಿಡಿದುಕೊಂಡು ಬರುತ್ತೀರಿ. ಸತ್ಯ ಹೇಳಿದ್ರೆ ಎಲ್ಲಿ ಬೇಕಾದ್ರೆ ಉರಿ ಬೀಳುತ್ತದೆ. ಮೆಣಸಿನ ಕಾಯಿ ಇಟ್ಕೊಂಡ ಹಾಗೆ ಆಗುತ್ತಾ?. ಕಾಂಗ್ರೆಸ್ ಪಕ್ಷದ ನಾಯಕನಾಗಿ ನಾನು ನಿಮ್ಮನ್ನು ಹಾಡಿ ಹೊಗಳಬೇಕಾ?. 2 ಕೋಟಿ ಉದ್ಯೋಗ ನೀಡಿದ್ರೆ ತೋರಿಸಿ. ನಾನೂ ನಿಮಗೆ ಜೈ ಅಂತೀನಿ. ನಾನೂ ಕೇಳಿದ್ರಲ್ಲಿ ತಪ್ಪೇನಿಲ್ಲ. ಪಾಠ ಕಲಿಸುತ್ತೇನೆ. ಸುಳ್ಳು ಮತ್ತು ಸತ್ಯದ ನಡುವಿನ ಯುದ್ದ ಇದು ಎಂದರು.

ಅನುರಾಗ್ ಠಾಕೂರ್ ರೈತರಿಗೆ ಗುಂಡು ಹೊಡೆಯಿರಿ ಎಂದು ಹೇಳಿದ್ರು. ಯಾರಪ್ಪಗೆ ಹುಟ್ಟಿದ್ದು ಎಂದು ಪ್ರಶ್ನಿಸುವ ಇವರು ಸಂಸ್ಕಾರವಂತರಾ?. ಸಿದ್ದರಾಮಯ್ಯ ಬಗ್ಗೆ, ರಾಹುಲ್‌ಗಾಂಧಿ ಬಗ್ಗೆ, ಮಲ್ಲಿಕಾರ್ಜುನ್ ಖರ್ಗೆ ಬಗ್ಗೆ ಏನೇನು ಹೇಳಿಕೆ ಕೊಟ್ಟಿದ್ದೀರಿ?. ಇನ್ಮೊಮ್ಮೆ ನನ್ನ ಭಾಷಣವನ್ನು ಸರಿಯಾಗಿ ಕೇಳಿ. ಉತ್ತರ ಕೊಡಿ ಎಂದು ಶಿವರಾಜ್ ತಂಗಡಗಿ ತಿಳಿಸಿದರು.

ಉತ್ತರ ಕರ್ನಾಟಕದವರಿಗೆ ಪುಸ್ತಕದ ಭಾಷೆ ಮಾತನಾಡಲು ಬರಲ್ಲ. ಒಳ್ಳೆಯದು ಮಾಡಿದ್ರೆ ಕತ್ತು ಹಿಸುಕ್ತಾರೆ. ಐದು ಮಂದಿ ಸಹಾಯ ಮಾಡದಿದ್ರೆ ನೀವು ದಕ್ಷಿಣ ಭಾರತದಲ್ಲಿ ಎಲ್ಲಿ ಅಧಿಕಾರಕ್ಕೆ ಬರುತ್ತಿದ್ರಿ. ನಿಮ್ಮ ಸರ್ಕಾರ ಉಳಿಸಲಿಕ್ಕೆ ನಮ್ಮನ್ನು ಅನರ್ಹ ಮಾಡಿದ್ರಿ. ನಿಮಗೆ ಪೂರ್ಣ ಪ್ರಮಾಣದ ಬಹುಮತ ಎಲ್ಲಿ, ಯಾವಾಗ ಬಂದಿದೆ?. ಈ ರಾಜ್ಯದ ಮಾನ ಹರಾಜು ಹಾಕಿದ್ದೀರಿ ಎಂದು ಆರೋಪಿಸಿದರು.

ಈಶ್ವರಪ್ಪ ಯೋಗ್ಯರು ಇರೋ ಕಾರಣ ಟಿಕೆಟ್ ಕೊಟ್ಟಿಲ್ಲ. ಕಿತ್ತು ಬಿಸಾಡಿದ್ದಕ್ಕೆ ಮನೆಯಲ್ಲಿ ಕುಳಿತುಕೊಂಡಿರೋದು. ಸಿ.ಟಿ ರವಿ ಸೋತ ಮೇಲೆ ಎಂಪಿ ಟಿಕೆಟ್ ಕೊಡಲಿಲ್ಲ. ರಾಜ್ಯಾಧ್ಯಕ್ಷ ಆಗ್ತೀನಿ ಎಂದು ಹೇಳಿದ್ರು‌‌. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ಕೆಳಗಿಳಿಸಿದ್ರು. ಏನೂ ಇಲ್ಲದೇ ಭಾಷಣ ಮಾಡೋಕೆ ಬಿಟ್ಟಿದ್ದಾರೆ ಎಂದು ಸಿ. ಟಿ ರವಿ‌ ವಿರುದ್ದ ಶಿವರಾಜ್ ತಂಗಡಗಿ ವಾಗ್ದಾಳಿ ನಡೆಸಿದರು.

ಸಿ.ಟಿ ರವಿ ಅದೇನೋ ಹೇಳಿದ್ದಾರೆ. ನಾನು ಅವರ ಹಾಗೆ ಕೇಳಲ್ಲ, ಹೇಳಲ್ಲ. ನಿಮಗೆ ಇನ್ನೂ ಅನುಮಾನ ಇದ್ದರೆ ನನ್ನ ತಾಯಿಯನ್ನು ಬಿಜೆಪಿ ಕಚೇರಿಗೆ ಕರ್ಕೊಂಡು ಬರ್ತೇನೆ. ಅಲ್ಲೇ ಪ್ರಶ್ನೆ ಮಾಡ್ತೇನೆ ಎಂದು ಸಿ. ಟಿ ರವಿಗೆ ಕಟು ಶಬ್ದಗಳಲ್ಲಿ ಸವಾಲು ಹಾಕಿದರು.‌

ಇದನ್ನೂ ಓದಿ : 'ಮೋದಿ ಎಂದರೆ ಕಪಾಳಕ್ಕೆ ಹೊಡೆಯಬೇಕು' ಎಂದ ತಂಗಡಗಿ ವಿರುದ್ಧ ಚು.ಆಯೋಗಕ್ಕೆ ಬಿಜೆಪಿ ದೂರು - BJP Complaint

ETV Bharat Logo

Copyright © 2025 Ushodaya Enterprises Pvt. Ltd., All Rights Reserved.