ಹುಬ್ಬಳ್ಳಿ: ನಗರದ ಕಿಮ್ಸ್ ಆಸ್ಪತ್ರೆಯ ಹಿಂಭಾಗದಲ್ಲಿ ಅಪರಿಚಿತ ವ್ಯಕ್ತಿಯೋರ್ವನ ಅಸ್ಥಿಪಂಜರ ಕೊಳೆತ ಸ್ಥಿತಿಯಲ್ಲಿ ದೊರೆತಿದ್ದು, ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಆಸ್ಪತ್ರೆಯ ಮಹಿಳಾ ಹಾಸ್ಟೆಲ್ ಹಿಂಬದಿಯ ಚರಂಡಿ ಸ್ವಚ್ಛತೆ ಮಾಡುತ್ತಿದ್ದಾಗ ಸಿಬ್ಬಂದಿಗೆ ಅಸ್ಥಿಪಂಜರದ ಮೂಳೆ ಹಾಗೂ ತಲೆ ಬುರುಡೆ ಕಂಡುಬಂದಿದೆ.
ಕಳೆದ ಐದಾರು ತಿಂಗಳ ಹಿಂದೆಯೇ ವ್ಯಕ್ತಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ವ್ಯಕ್ತಿ ಧರಿಸಿರುವ ಬಟ್ಟೆಯಲ್ಲಿ ಪಿಒಪಿ ಫೌಡರ್ ಇದ್ದು, ಅದರಳೊಗೆ ಮೂಳೆಗಳಿದ್ದವು. ಸುದ್ದಿ ತಿಳಿದು ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದರು. ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.